ಗುರುವಾರ ಈ ಗಿಡಕ್ಕೆ ಹಸಿಹಾಲು ಹಾಕಿದರೆ ಅದೃಷ್ಟ ಖುಲಾಯಿಸುತ್ತೆ

ನಾವು ಈ ಲೇಖನದಲ್ಲಿ ಗುರುವಾರ ಈ ಗಿಡಕ್ಕೆ ಹಸಿ ಹಾಲು ಹಾಕಿದರೆ ಅದೃಷ್ಟ ಹೇಗೆ ಬರುತ್ತದೆ. ಎಂದು ತಿಳಿಯೋಣ. ಗುರುವಾರ ಈ ಒಂದು ಗಿಡಕ್ಕೆ ಹಸಿ ಹಾಲು ಹಾಕಿದರೆ ನಿಮ್ಮ ಅದೃಷ್ಟ ಪಳ ಪಳ ಎಂದು ಹೊಳೆಯುತ್ತದೆ ಅನ್ನೋ ರಹಸ್ಯ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. ಭಗವಾನ್ ಶ್ರೀ ವಿಷ್ಣುವಿನ ಮತ್ತು ಗುರು ಗ್ರಹದ ಅನುಗ್ರಹ ಪಡೆಯುವುದಕ್ಕೆ ಗುರುವಾರ ಅತ್ಯಂತ ಶುಭದಿನ ಆಗಿರುತ್ತದೆ . ಈ ಗುರುವಾರದ ದಿನವನ್ನು ಬೃಹಸ್ಮತಿ ವಾರ ಎಂದು ಹೇಳಲಾಗುತ್ತದೆ.

ಗುರುವಾರದ ದಿನ ಭಗವಾನ್ ಶ್ರೀ ವಿಷ್ಣುವಿನ ಪೂಜೆ , ಆರಾಧನೆ ವಿಶೇಷವಾಗಿ ಮಾಡಲಾಗುತ್ತದೆ . ಗುರುವಾರದಂದು ತುಳಸಿ ದೇವಿ ಪೂಜೆ ಮಾಡಿ, ಗೋ ಮಾತೆಗೆ ಹಣ್ಣು ತಿನ್ನಿಸಿದರೆ ಧನ ಸಂಪತ್ತಿನ ಲಾಭ ದುಪ್ಪಟ್ಟು ಆಗುತ್ತದೆ . ಲಕ್ಷ್ಮೀದೇವಿಯ ಕೃಪೆ ನಿಮಗೆ ಸಿಗುತ್ತದೆ . ಗುರುವಾರದಂದು ಈ ವಸ್ತುವನ್ನು ಗಿಡಕ್ಕೆ ಕಟ್ಟಿದರೆ , ಮತ್ತು ಹಸಿ ಹಾಲನ್ನು ಹಾಕುವುದರಿಂದ ಮನೆಯ ಸಂಸತ್ತು ಸಾವಿರ ಪಟ್ಟು ಹೆಚ್ಚಾಗುತ್ತದೆ ಎನ್ನುವ ರಹಸ್ಯವನ್ನು ಇಲ್ಲಿ ತಿಳಿಸಲಾಗಿದೆ. ನೀವು ಜೀವನದಲ್ಲಿ ಮನೆ ಕಟ್ಟಬೇಕು.

ಮತ್ತು ಜೀವನಕ್ಕೆ ಕೊರತೆ ಆಗದ ರೀತಿ ಹಣ ಗಳಿಸಬೇಕು ಅಂದುಕೊಂಡಿದ್ದರೆ , ಈ ಒಂದು ಸಣ್ಣ ಉಪಾಯವನ್ನು ಮಾಡಿ. ದೊಡ್ಡ ಲಾಭ ಸಿಗುತ್ತದೆ. ಪ್ರತೀ ಗುರುವಾರ ಬಡವರಿಗೆ ಬೆಲ್ಲವನ್ನು ದಾನ ಮಾಡಬೇಕು. ಕೆಂಪು ಹಸುವಿಗೆ ಬೆಲ್ಲ ತಿನ್ನಿಸುವುದರಿಂದ, ಎಲ್ಲಾ ಕೆಲಸಗಳು ಸುಸೂತ್ರವಾಗಿ ಆಗುತ್ತವೆ. ಮದುವೆ ವಿಳಂಬ ಆಗುತ್ತಿದ್ದರೆ, ಹಿಟ್ಟಿನಲ್ಲಿ ಬೆಲ್ಲವನ್ನು ಇಟ್ಟು ಹಸುವಿಗೆ ತಿನ್ನಿಸುವುದರಿಂದ ಮದುವೆ ಬೇಗ ಆಗುತ್ತದೆ. ಹಾಗೂ ಅಡ್ಡಿಗಳು ಇದ್ದರೆ , ಅದು ಕೂಡ ದೂರವಾಗುತ್ತದೆ .

ನೀವು ಈ ರೀತಿ ಮಾಡುವುದರಿಂದ ಗುರುವಿನ ಕೃಪೆ ಸಿಗುತ್ತದೆ. ಗುರುವಾರದಂದು ಹೆಣ್ಣು ಮಕ್ಕಳು ತಲೆ ಸ್ನಾನ ಮಾಡಬಾರದು . ಮತ್ತು ಕೂದಲನ್ನು ಕತ್ತರಿಸಬಾರದು. ಈ ರೀತಿ ಮಾಡುವುದರಿಂದ ಅವರ ಜನ್ಮ ಕುಂಡಲಿಯಲ್ಲಿ ಇರುವ ಗುರು ದುರ್ಬಲನು ಆಗುತ್ತಾನೆ. ಗಂಡ ಹೆಂಡತಿಯಲ್ಲಿ ಪ್ರೀತಿ ವಿಶ್ವಾಸ ಕಡಿಮೆಯಾಗುತ್ತಾ ಹೋಗುತ್ತದೆ . ಮತ್ತು ಮಕ್ಕಳ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ . ಗುರುವಾರದ ದಿನ ಬಾಳೆಹಣ್ಣನ್ನು ತಿನ್ನಬಾರದು .ಈ ದಿನ ಬಾಳೆ ಗಿಡವನ್ನು ಪೂಜೆ ಮಾಡಿ ನೀರು ಹಾಕುತ್ತಾ ,

ನಿಮ್ಮ ಮನಸ್ಸಿನ ಇಚ್ಚೆಯನ್ನು ಹೇಳಿದರೆ , ಆ ಇಚ್ಛೆ ಪೂರ್ಣವಾಗುತ್ತದೆ. ಗುರುವಾರದಂದು ತುಂಬಾ ಭಾರ ಇರುವ ಬಟ್ಟೆಗಳನ್ನು ಹೊಗೆಯಬಾರದು . ಈ ದಿನ ಹಳೆಯ ಸಾಮಾನುಗಳನ್ನು ತೆಗೆಯಬಾರದು . ಮತ್ತು ಮನೆಯನ್ನು ಕೂಡ ಒರೆಸಬಾರದು .ಗುರುವಾರದಂದು ಉಗುರು ಕತ್ತರಿಸಬಾರದು . ಮತ್ತು ಶೇವಿಂಗ್ ಕೂಡ ಮಾಡಬಾರದು . ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ಈ ರೀತಿ ನೀವು ಮಾಡಿದರೆ , ಗುರು ನಿಮಗೆ ಅಶುಭ ಫಲವನ್ನು ನೀಡುತ್ತಾರೆ . ಇದು ವ್ಯಕ್ತಿಯ ಆಯುಷ್ಯದ ಮೇಲು ಕೂಡ ನಕಾರಾತ್ಮಕ ಪ್ರಭಾವ ಬೀರುತ್ತದೆ .

ಗರುಡ ಪುರಾಣದಲ್ಲಿ ಹೇಳಿರುವ ಪ್ರಕಾರ ಗುರುವಾರದಂದು ಭಗವಾನ್ ವಿಷ್ಣುವಿನ ಮುಂದೆ ದೀಪ ಹಚ್ಚುವುದರಿಂದ, ಬಹಳ ಒಳ್ಳೆಯ ಫಲ ಸಿಗುತ್ತದೆ . ವಿಷ್ಣುವಿನ ಎದುರು ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬಾರದು . ಈ ಎಣ್ಣೆಯನ್ನು ಉಗ್ರ ಗ್ರಹಗಳ ಪೂಜೆಗೆ ಉಪಯೋಗ ಮಾಡುತ್ತಾರೆ . ಗುರುವಾರದಂದು ನೀವು ತುಪ್ಪದ ದೀಪವನ್ನು ಹಚ್ಚಬೇಕು .

ಶ್ರೀ ಕೃಷ್ಣ ಹೇಳಿರುವ ಪ್ರಕಾರ ಗುರುವಾರ ವಿಷ್ಣುವಿಗೆ ಪ್ರಿಯವಾದ ದಿನ ಆಗಿರುವುದರಿಂದ ಶ್ರೀಹರಿಯನ್ನು ಮೆಚ್ಚಿಸಲು ತುಳಸಿಯನ್ನು ಪೂಜೆ ಮಾಡುತ್ತಾರೆ . ಗುರುವಾರ ಹೆಣ್ಣು ಮಕ್ಕಳು ಸ್ನಾನ ಮಾಡಿದ ನಂತರ , ತುಳಸಿ ಗಿಡಕ್ಕೆ ಹಸುವಿನ ಹಸಿ ಹಾಲನ್ನು ಹಾಕಿ ಪೂಜೆ ಮಾಡಬೇಕು . ತುಳಸಿ ಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಬೇಕು . ಈ ರೀತಿ ಮಾಡುವುದರಿಂದ , ಮನೆಯಲ್ಲಿರುವ ದರಿದ್ರತನ ಹೋಗುತ್ತದೆ. ಲಕ್ಷ್ಮಿ ದೇವಿಯು ಪ್ರಸನ್ನ ಳು ಆಗಿ ಧನ ಸಂಪತ್ತನ್ನು ಕೊಡುತ್ತಾಳೆ .

ವಿಷ್ಣು ಪುರಾಣದಲ್ಲಿ ತುಳಸಿಯನ್ನು ವಿಷ್ಣುವಿನ ಪತ್ನಿ ಅಂತ ಹೇಳುತ್ತಾರೆ. ತುಳಸಿ ದೇವಿಗೆ ಎಲ್ಲಾ ದೇವಾನುದೇವತೆಗಳ ಆಶೀರ್ವಾದ ಇರುತ್ತದೆ . ಆದ್ದರಿಂದ ತುಳಸಿ ಎಲೆಯನ್ನು ಅಮೃತಕ್ಕೆ ಹೋಲಿಸುತ್ತಾರೆ . ನಿಮ್ಮ ಮನೆಯಲ್ಲಿ ತುಳಸಿ ಗಿಡ ಇದ್ದರೆ, ಅಲ್ಲಿ ಬ್ರಹ್ಮ ವಿಷ್ಣು ಮತ್ತು ಮಹೇಶ್ವರರು ವಾಸ ಮಾಡುತ್ತಾರೆ . ತುಳಸಿ ಗಿಡವನ್ನು ಪೂಜೆ ಮಾಡುವುದರಿಂದ ನಿಮ್ಮ ಎಲ್ಲಾ ಪಾಪಗಳು ನಶಿಸಿ ಹೋಗುತ್ತದೆ . ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ನಿಮ್ಮ ಮನೆಯಲ್ಲಿ ತುಳಸಿ ಗಿಡ ಯಾವಾಗಲೂ ಹಸಿರಾಗಿ ಇದ್ದರೆ ,

ಮನೆಯಲ್ಲಿ ಸುಖ , ಶಾಂತಿ ಮತ್ತು ಸಂಪತ್ತು ಹೆಚ್ಚಾಗಿ ಇರುತ್ತದೆ. ಮತ್ತು ಅವರಿಗೆ ಇಡುವ ಪ್ರಸಾದದಲ್ಲಿ ತುಳಸಿ ಎಲೆ ಇರಲೇಬೇಕು . ತುಳಸಿ ಗಿಡದಲ್ಲಿ ಶಿವಲಿಂಗ ಮತ್ತು ಗಣೇಶನ ವಿಗ್ರಹ ಇಡಬಾರದು . ತುಳಸಿ ಗಿಡದ ಜೊತೆ ಬೇರೆ ತರಹದ ಗಿಡ ಇರುವುದು ಅಶುಭ ಫಲಗಳನ್ನು ಕೊಡುತ್ತದೆ . ಎಲ್ಲಿ ವಿಷ್ಣು ವಾಸ ಮಾಡುತ್ತಾರೆ ಅಲ್ಲಿಗೆ ಲಕ್ಷ್ಮೀದೇವಿ ತಾನಾಗೆ ಬರುತ್ತಾಳೆ . ಗುರುವಾರದಂದು ತುಳಸಿ ಮತ್ತು ಬಾಳೆ ಗಿಡದ ಪೂಜೆ ಮಾಡುವುದರಿಂದ ನಿಮ್ಮ ಎಲ್ಲಾ ದರಿದ್ರ ತನ ದೂರವಾಗುತ್ತದೆ .

ಗುರುವಾರದಂದು ತುಳಸಿ ಗಿಡಕ್ಕೆ ಹಳದಿ ಬಣ್ಣದ ದಾರವನ್ನು ಕಟ್ಟಿ ನಿಮ್ಮ ಮನಸ್ಸಿನ ಇಚ್ಚೆಯನ್ನು ಹೇಳಿ ಪೂಜೆ ಮಾಡುವುದರಿಂದ , ನಿಮ್ಮ ಇಚ್ಛೆ ಪೂರ್ಣವಾಗುತ್ತದೆ . ನೀವು ತುಳಸಿ ಗಿಡದಲ್ಲಿ ಸಾಲಿಗ್ರಾಮವನ್ನು ಇಡುವುದರಿಂದ ತುಳಸಿ ದೇವಿಯು ಹೆಚ್ಚು ಪ್ರಸನ್ನಳು ಆಗುತ್ತಾಳೆ. ಸಾಲಿಗ್ರಾಮವು ವಿಷ್ಣುವಿನ ರೂಪ ಆಗಿರುವುದರಿಂದ , ತುಳಸಿ ಗಿಡದಲ್ಲಿ ಇಟ್ಟು ಪೂಜೆ ಮಾಡುವುದರಿಂದ , ನಿಮ್ಮ ಮನೆಯಲ್ಲಿರುವ ನಕಾರಾತ್ಮಕತೆ ಸಂಪೂರ್ಣವಾಗಿ ನಾಶವಾಗುತ್ತದೆ .

ತುಳಸಿ ಗಿಡಕ್ಕೆ ಹೆಣ್ಣು ಮಕ್ಕಳು ತಲೆ ಕಟ್ಟಿ ಮತ್ತು ಕುಂಕುಮ ಇಟ್ಟುಕೊಂಡು ನೀರನ್ನು ಹಾಕಬೇಕು . ಇದರಿಂದ ತುಳಸಿ ದೇವಿಯ ಆಶೀರ್ವಾದ ಸಿಗುತ್ತದೆ . ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ತುಳಸಿ ಗಿಡದ ಹತ್ತಿರ ಬಾಳೆ ಗಿಡವನ್ನು ನೆಟ್ಟರೆ ನಿಮಗೆ ಹೆಚ್ಚಿನ ಲಾಭ ಸಿಗುತ್ತದೆ . ಬಾಳೆ ಗಿಡದಲ್ಲಿ ಭಗವಾನ್ ವಿಷ್ಣು ವಾಸ ಮಾಡುತ್ತಾರೆ .ಹಾಗಾಗಿ ಎರಡು ಗಿಡಗಳು ಒಟ್ಟಿಗೆ ಇದ್ದರೆ , ನಿಮ್ಮ ಮನೆಗೆ ಸುಖ ಶಾಂತಿ ನೆಮ್ಮದಿ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

Leave a Comment