ನಾವು ಲೇಖನದಲ್ಲಿ ಸಿಂಹ ರಾಶಿಯವರ ಮೇ ಮಾಸ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ . ಮೇ ತಿಂಗಳಿನಲ್ಲಿ 14ನೇ ತಾರೀಖಿನ ತನಕ ಇರುವುದೇ ಒಂದು ಆ ನಂತರ ಆಗೋದೇ ಬೇರೆ. 14ರ ನಂತರ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಗುರು ಪರಿವರ್ತನೆಯಾಗುತ್ತದೆ . ಮೇಷ ರಾಶಿಯಿಂದ ವೃಷಭ ರಾಶಿಗೆ ಗುರು ಪರಿವರ್ತನೆಯಾಗುತ್ತದೆ. ವೃಷಭ ರಾಶಿಗೆ ಗುರು ಬರುವುದರಿಂದ ಗುರು ಗ್ರಹವು ಸಿಂಹ ರಾಶಿಯಲ್ಲಿ ತಟಸ್ಥ ನಾಗುತ್ತಾನೆ.
ಪೂರ್ತಿ ಗಮನವನ್ನು ನೀವು ಕೆಲಸದ ಮೇಲೆ ಕೊಡಬೇಕಾಗುತ್ತದೆ. ಕೆಲವೊಂದು ವಿಚಾರಗಳಲ್ಲಿ ಅಸಡ್ಡೆ ತೋರಿಸಿದರೆ , ಮರೆತು ಹೋಗಿದ್ದರೆ ಈ ರೀತಿಯ ಕೆಲಸ ಕಾರ್ಯಗಳು ನಡೆಯುವುದಿಲ್ಲ. ನೀವು ತುಂಬಾ ಶ್ರಮಪಟ್ಟು ಕೆಲಸವನ್ನು ಮಾಡಬೇಕಾಗುತ್ತದೆ. ನೀವು ಯಾವುದಾದರೊಂದು ಕೆಲಸ ಕಾರ್ಯಗಳನ್ನು ಮಾಡಬೇಕು ಎಂದುಕೊಂಡಿದ್ದರೆ, ಅದಕ್ಕೆ 108 ಅಡ್ಡಿ ಆತಂಕಗಳು ಎದುರಾಗುತ್ತದೆ. ಯಾವ ಕೆಲಸವನ್ನು ಮಾಡಬೇಕಾದರೂ ನೀವು ತಪಸ್ಸಿನ ರೀತಿಯಲ್ಲಿ ಮಾಡಿದರೆ ಮಾತ್ರ ಅದಕ್ಕೆ
ಇಂದಲ್ಲ ನಾಳೆ ಯಶಸ್ಸು ಖಂಡಿತ ನಿಮಗೆ ಕಟ್ಟಿಟ್ಟ ಬುತ್ತಿ. ಆದರೆ ನಿಮಗೆ ಕೆಲಸದ ಮೇಲೆ ಅಷ್ಟು ಶ್ರದ್ಧೆ ವಹಿಸಲು ಸಾಧ್ಯವಾಗುವುದಿಲ್ಲ .ಸಾಕಷ್ಟು ಒತ್ತಡ ಕಿರಿಕಿರಿಗಳು ಉಂಟಾಗುತ್ತದೆ. ಅಸಡ್ಡೆ , ಅದಕ್ಷತೆ ಇಂಥ ವಿಚಾರಗಳನ್ನು ದೂರವಿಡಬೇಕಾಗುತ್ತದೆ. ಅಸಹನೆಯನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ. ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ನಕರಾತ್ಮಕ ಚಿಂತನೆಗಳು ನಿಮ್ಮನ್ನು ಕಾಡುತ್ತವೆ. ವಿದ್ಯಾರ್ಥಿಗಳು ಗಮನವಹಿಸಿ ಓದಿನ ಕಡೆ ಜಾಗರುಕತೆ ವಹಿಸಬೇಕಾಗುತ್ತದೆ. ಆದರೆ ಮನಸ್ಸು.
ವಿಚಲಿತವಾಗುತ್ತದೆ. ಗಮನವಿಟ್ಟು ಕೆಲಸ ಮಾಡಿದರೆ ನಿಮ್ಮ ಮನಸ್ಸನ್ನು ನಿರಾಳ ಮಾಡಿಕೊಳ್ಳಬಹುದು. ರವಿ ಗ್ರಹವು ದಶಮಭಾಗಕ್ಕೆ ಬರುತ್ತಾನೆ. 14ನೇ ತಾರೀಕಿನ ನಂತರ ರವಿಯು ದಶಮಭಾಗಕ್ಕೆ ಬರುವುದರಿಂದ ನಿಮಗೆ ಆತ್ಮಸ್ಥೈರ್ಯ ಹೆಚ್ಚಿಗೆ ಯಾಗುತ್ತದೆ. ನಿಮ್ಮ ಬದುಕಿಗೆ ಚೈತನ್ಯ ಬೆಳಕನ್ನು ತಂದುಕೊಡುತ್ತದೆ . ನಿಮ್ಮ ಬದುಕಿಗೆ ಸರಿಯಾದ ದಾರಿಯನ್ನು ತಂದುಕೊಡುತ್ತದೆ. ಈ ಎಲ್ಲಾ ಕೆಲಸವನ್ನು ರವಿಗ್ರಹವು ರಾಶಿ ಅಧಿಪತಿಯಾಗಿದ್ದುಕೊಂಡು ಮಾಡುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತವಾಗಿ ಯಶಸ್ಸು ಖಂಡಿತ ನಿಮಗೆ ಸಿಕ್ಕುತ್ತದೆ . ಹಣಕಾಸಿನ ವಿಚಾರದಲ್ಲಿ ಲಾಭ ಉಂಟಾಗುತ್ತದೆ .
ಆದರೆ ಆರೋಗ್ಯದ ವಿಚಾರದಲ್ಲಿ ಕುಜ ಮತ್ತು ಶನಿ ಗ್ರಹಗಳು ಅಷ್ಟೊಂದು ಅನುಕೂಲಕರವಾದಂತಹ ವಾತಾವರಣವನ್ನು ಕೊಡುವುದಿಲ್ಲ. ಕೆಲಸದ ಬಗ್ಗೆ ತುಂಬಾ ಗಮನವನ್ನು ವಹಿಸಬೇಕಾದಂತಹ ಪರಿಸ್ಥಿತಿ ಬಂದರು ಆರೋಗ್ಯದ ಕಡೆಗೆ ಹೆಚ್ಚಿನ ನಿಗ ಕೊಡಬೇಕಾಗುತ್ತದೆ. ಬಿಸಿಲಿಗೆ ಪ್ರಯಾಣದ ಅವಶ್ಯಕತೆ ನಿಮ್ಮ ಜೀವನದಲ್ಲಿ ಹೆಚ್ಚಿಗೆ ಬರಬಹುದು. ತುಂಬಾ. ಹೊತ್ತು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿ ಬರಬಹುದು. ಮಾರ್ಗ ಮಧ್ಯ ವಾಹನ ನಿಮಗೆ ಕೈ ಕೊಡಬಹುದು .
ಸಣ್ಣ ಪುಟ್ಟ ಅಡೆತಡೆಗಳು ಉಂಟಾಗಿ ಬಿಸಿಲಿನ ತಾಪಮಾನ ನಿಮ್ಮ ಮೇಲೆ ಹೆಚ್ಚಾಗಬಹುದು. ಇದರಿಂದ ನಿಮ್ಮ ದೇಹದಲ್ಲಿ ಉಷ್ಣ ಹೆಚ್ಚಿಗೆ ಆಗಬಹುದು. ಇಂತಹ ಬೆಳವಣಿಗೆಗಳು ಹೆಚ್ಚಿಗೆ ನಡೆಯಬಹುದು. . ಆದಷ್ಟು ನೀವು ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಬೇಕು . ನೀರನ್ನು ಹೆಚ್ಚಾಗಿ ಕೊಡುವುದು ತಾಪದ ಪರಿಣಾಮದಿಂದ ನಿಮ್ಮ ದೇಹವನ್ನು ರಕ್ಷಣೆ ಮಾಡಿಕೊಳ್ಳುವುದು ಒಳಿತು. ಮೇ 15ನೇ ತಾರೀಖು ನಂತರ ಒಂದಷ್ಟು ವಿಚಾರಗಳಲ್ಲಿ ನಿಮಗೆ ಒಳಿತಾಗುತ್ತದೆ . ಜೂನ್ ಶುರುವಾಗಿ ಒಳ್ಳೆಯ ಬೆಳವಣಿಗೆಗಳು ಶುರುವಾಗುತ್ತದೆ. ನಿಮ್ಮ ಜೀವನ ಸುಖಮಯವಾಗಿರುತ್ತದೆ.