ಹಣ ನಿಲ್ಲದಿರಲು ಕಾರಣಗಳು

ನಾವು ಈ ಲೇಖನದಲ್ಲಿ ಕೈಯಲ್ಲಿ ಹಣ ನಿಲ್ಲದೇ ಇರಲು ಕಾರಣಗಳು ಯಾವುದು ಎಂದು ತಿಳಿದುಕೊಳ್ಳೋಣ . ಎಷ್ಟೇ ದುಡಿದು ಸಂಪಾದನೆ ಮಾಡಿದರು ಕೈಯಲ್ಲಿ ಹಣ ನಿಲ್ಲದೇ ಇರಲು ಈ 40 ಅಂಶಗಳೇ ಕಾರಣ ..? ಪ್ರತಿಯೊಬ್ಬರೂ ಕೂಡ ಕಷ್ಟ ಪಟ್ಟು ಎಷ್ಟೇ ಹಣವನ್ನು ಸಂಪಾದನೆ ಮಾಡಿದರೂ, ಕೆಲವೊಮ್ಮೆ ಅವರು ಸಂಪಾದನೆ ಮಾಡಿದಂತಹ ಹಣ ಅವರ ಕೈಯಲ್ಲಿಯೇ ಉಳಿಯುವುದಿಲ್ಲ. ಒಂದು ರೀತಿಯಾಗಿ ಹಣ ಖರ್ಚಾಗುತ್ತಿರುತ್ತದೆ . ಆದರೆ ಯಾವ ಒಂದು ಕಾರಣಕ್ಕಾಗಿ ಈ ರೀತಿಯಾಗಿ ಹಣ ಖರ್ಚಾಗುತ್ತಿದೆ ಎನ್ನುವಂತಹ ವಿಷಯ ಪ್ರತಿಯೊಬ್ಬರಿಗೂ ಕೂಡ ತಿಳಿಯುವುದಿಲ್ಲ.

ಅದರಲ್ಲೂ ತಿಳಿದೋ , ತಿಳಿಯದೆಯೋ , ಮಾಡಿರುವಂತಹ ಕೆಲವೊಂದು ತಪ್ಪುಗಳಿಂದ ನಾವು ಈ ರೀತಿಯಾದಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತೇವೆ ಎಂದು ಹೇಳಿದರೆ ಅದು ನಿಜ. ಹೌದು ನಾವು ನಮ್ಮ ಜೀವನದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ಈ ರೀತಿಯಾದ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತೇವೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈಗ ನಾವು ಹೇಳುವಂತಹ ಇಂತಹ ಕೆಲವೊಂದು ತಪ್ಪುಗಳನ್ನು ನೀವು ಮಾಡಿದ್ದರೆ ಹಾಗೂ ಮಾಡುತ್ತಿದ್ದರೆ ಅದನ್ನು ಸರಿಪಡಿಸಿಕೊಳ್ಳುವುದು ಮುಖ್ಯ.

ಇಲ್ಲವಾದರೆ ಮೇಲೆ ಹೇಳಿದಂತೆ ನೀವು ಸಂಪಾದಿಸಿದಂತಹ ಹಣ ಎಲ್ಲವೂ ಕೂಡ ಖರ್ಚಾಗುತ್ತಿರುತ್ತದೆ ಎಂದೇ ಹೇಳಬಹುದು . ಹಾಗಾದರೆ ಆ ಒಂದು ಕಾರಣಗಳು ಯಾವುದು ಎಂದು ತಿಳಿಯೋಣ. ಮನೆಗಳಲ್ಲಿ ನಮ್ಮನ್ನು ಅಗಲಿದ ಪಿತೃಗಳ ಕಾರ್ಯಗಳನ್ನು ಮಾಡದೇ ಇರುವುದು.

ಹೆಣ್ಣು ಮಕ್ಕಳು ಮಲಗಿ ಎದ್ದಾಗ ಮಾಂಗಲ್ಯ ಸರ ಬೆನ್ನಿಗೆ ಇದ್ದರೂ , ಗಮನಿಸದೆ ಹಾಗೆ ಇರುವುದು. ನಾಗರ ಪೂಜೆ ಮಾಡುವಂತಹ ಪದ್ಧತಿ ಇದ್ದರೂ , ಅದನ್ನು ಮಾಡದೇ ಇರುವುದು . ದೇವರ ಪೂಜಾ ಸಾಮಗ್ರಿಗಳು ಸವೆದಿದ್ದರೂ, ಅಥವಾ ಹೊಡೆದಿದ್ದರೂ , ಅದನ್ನು ಸರಿಪಡಿಸದೆ . ದೇವರ ಮನೆಯಲ್ಲಿ ಹಾಗೆ ಪೂಜೆ ಮಾಡುವುದು ಕೂಡ ಇದಕ್ಕೆ ಬಹಳ ಪ್ರಮುಖವಾದ ಕಾರಣ .

ದೇವರಲ್ಲಿ ನಾವು ಹರಕೆಯನ್ನು ಮಾಡಿ, ಅದು ನೆನಪಿದ್ದರೂ ಕೂಡ ಅದನ್ನು ನಾವು ಸರಿಯಾದ ಸಮಯದಲ್ಲಿ ತೀರಿಸದೇ ಇರುವುದು ಕೂಡ ಬಹಳ ಪ್ರಮುಖವಾದ ಕಾರಣವಾಗಿದೆ. ಮಂಗಳಾರತಿ ಮಾಡುವಂತಹ ಸಮಯದಲ್ಲಿ ಮಂಗಳಾರತಿ ತಟ್ಟೆಯ ಜೊತೆಗೆ ಒಂದು ಹೂವನ್ನು ಹಿಡಿದು ಆರತಿ ಮಾಡದೇ ಇರುವುದು .

ಮನೆಯ ಮುಂದೆ ಹೂವು ಬಂದರೆ, ಬೇಡ ಎನ್ನುವುದು. ಬೇಡ ಎನ್ನುವುದರ ಬದಲು, ಬದಲಿಗೆ ನಾಳೆ ಕೊಂಡುಕೊಳ್ಳುತ್ತೇವೆ ಎಂದು ಹೇಳುವುದು ಉತ್ತಮ. ವರ್ಷಕ್ಕೊಮ್ಮೆಯಾದರೂ ನೀವು ಬೇರೆಯವರಿಗೆ ಅನ್ನದಾನ ಬಟ್ಟೆಯನ್ನು ಕೊಡದೇ ಇರುವುದು .

9.ದೇವರ ಮನೆಯ ಒಳಗಡೆ ಹಳೆಯ ಪೂರ್ವಜರ ಫೋಟೋ ಅಥವಾ ಸತ್ತವರ ಫೋಟೋ ಇಡುವುದು ಕೂಡ ಇದಕ್ಕೆ ಬಹಳ ಪ್ರಮುಖವಾದ ಕಾರಣ . ನಿತ್ಯ ಸರಿಯಾದ ಸಮಯದಲ್ಲಿ ಸ್ನಾನ ಮಾಡದೇ ಇರುವುದು. ನಿತ್ಯ ದೇವರ ಮುಂದೆ ದೀಪಗಳನ್ನು ಬೆಳಗಿಸದಿರುವುದು ಮತ್ತು ಪೂಜೆ ಮಾಡದೇ ಇರುವುದು .

12.ರೊಟ್ಟಿ ಹೆಂಚನ್ನು ಹಾಗೂ ಹಾಲು ಕಾಯಿಸುವಂತಹ ಪಾತ್ರೆಯನ್ನು ಬೋರಲು ಹಾಕಿರುವುದು . 13.ಹೆಣ್ಣು ಮಕ್ಕಳನ್ನು ಕೀಳಾಗಿ ನಡೆಸಿಕೊಳ್ಳುವ ಮನೆಗಳಲ್ಲಿ ಏಳಿಗೆ ಇರಲು ಸಾಧ್ಯವಿಲ್ಲ . ಇದ್ದರೂ ಸಹ ಖಂಡಿತವಾಗಿಯೂ ನೆಮ್ಮದಿ ಇರುವುದಿಲ್ಲ.ಮೊಂಡು ಅಥವಾ ಹಾಳಾದ ಪೊರಕೆಯನ್ನು ಬಳಸುವುದು .

15.ಹಾಸಿಗೆಯನ್ನು ಪೊರಕೆಯಿಂದ ಸ್ವಚ್ಛ ಮಾಡುವುದು. ತುದಿ ಮುರಿಯದೆ ಹಣ್ಣುಗಳನ್ನು ನೈವೇದ್ಯ ಮಾಡುವುದು .17.ಅಂತ್ಯಕ್ರಿಯೆ ಮೆರವಣಿಗೆಯ ಮುಂದೆ ನಡೆಯುವುದು .ನೆಲದ ಮೇಲೆ ಯಾವುದೇ ಚಾಪೆಯನ್ನು ಹಾಕದೆ ಹಾಗೆಯೇ ಕುಳಿತು ದೇವರ ಪೂಜೆ ಮಾಡುವುದು .

19.ದೇವರ ದರ್ಶನ ಪಡೆದು ಮನೆಗೆ ಬಂದ ತಕ್ಷಣ ಪಾದಗಳನ್ನು ತೊಳೆಯುವುದು .ಮುರಿದ ಅಥವಾ ಕೊಳೆಯಾದ ಬಾಚಣಿಗೆಯಿಂದ ತಲೆ ಚಾಚುವುದು . ಇದು ರಾಹುವಿನ ತತ್ವ ಹೊಂದಿರುತ್ತದೆ ಅದು ಬಡತನ ತರುತ್ತದೆ.21.ದೇವಸ್ಥಾನದಲ್ಲಿ ದಾನ ಮಾಡದೇ ಊಟ ಮಾಡಿಕೊಂಡು ಬರುವುದು .

22.ವಯಸ್ಸಾದ ವ್ಯಕ್ತಿ ಅಥವಾ ಮಗುವಿನಿಂದ ಖರೀದಿಸುವಾಗ ಅತಿಯಾದ ಬೆಲೆ ಕಡಿಮೆ ಮಾಡುವುದು.ಬಾಗಿಲುಗಳ ಮೇಲೆ ಸಿಕ್ಕ ಸಿಕ್ಕ ಫೋಟೋ ಹಾಗೂ ಸ್ಟಿಕ್ಕರ್ ಳನ್ನು ಅಂಟಿಸುವುದು.24 .ಮನೆಯೊಳಗೆ ರಾತ್ರಿಯಿಡೀ ಕಸ ಅಥವಾ ಮುಸುರೆ ಇಡುವುದು .

25 . ಆಫೀಸ್ ಬ್ಯಾಗ್‌ ಅಥವಾ ಪರ್ಸ್ ಇಡಲು ಮನೆಯಲ್ಲಿ ನಿಗದಿತ ಸ್ಥಳ ಇಲ್ಲದೇ ಇರುವುದು.26 . ಮುಸ್ಸಂಜೆ ಹೊತ್ತು ಮಲಗುವುದು ಮತ್ತು ಹಲ್ಲನ್ನು ಕಡಿಯುವುದು. ಮನೆಗೆ ಅತಿಥಿಗಳು ಬಂದರೆ ಕಿರಿ ಕಿರಿಯಾಗುವುದು.ಊಟ ಇರುವ ತಟ್ಟೆಯನ್ನು ದಾಟುವುದು.

ಊಟಕ್ಕೆ ಗೌರವ ಕೊಡದೇ ತಿನ್ನುವುದು . ಊಟವನ್ನು ಕಾಯಿಸಿ, ನಂತರ ಊಟ ಮಾಡುವುದು.31 . ಹಾಲು ನೀರನ್ನು ಒಟ್ಟಿಗೆ ತರುವುದು.ಕಾಲು ಹೊರಿಸುವ ಮ್ಯಾಟ್ ಕೊಳಕಾಗಿ ಇದ್ದರು ಅದನ್ನೇ ಬಳಸುವುದು. ದುಂದುವೆಚ್ಚ ಮಾಡಬಾರದು ಈ ರೀತಿ ಮಾಡುವವರ ಬಳಿ ಹಣ ಎಂದಿಗೂ ನಿಲ್ಲುವುದಿಲ್ಲ .

34.ಶಾರೀರಿಕ ಕೊಳಕು ಇರುವವರು ಶಾರೀರಿಕ ಸ್ವಚ್ಛತೆ ಇಲ್ಲದವರ ಜೊತೆ ನಾವೇ ನಿಲ್ಲುವುದಿಲ್ಲ, ಇನ್ನು ಸಂಪತ್ತಿನ ಅಧಿದೇವತೆ ಹೇಗೆ ನಿಲ್ಲುತ್ತಾಳೆ. 35 . ಸೂರ್ಯೋದಯದ ನಂತರವೂ ಹಾಸಿಗೆಯನ್ನು ಬಿಡದ ವ್ಯಕ್ತಿಯ ಬಳಿ ಹಣ ನಿಲ್ಲಲ್ಲು ಸಾಧ್ಯವೇ ಇಲ್ಲ

36 .ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಾಸ್ತದ ನಂತರ ಬಟ್ಟೆಗಳನ್ನು ತೊಳೆಯುವುದು. ಉದ್ದ ಉಗುರು ಬೆಳೆಸುವುದಾಗಲಿ ಅಥವಾ ಉಗುರು ಕಚ್ಚುವುದಾಗಲಿ ಮಾಡುವುದು. 38.ದೇವರ ಮನೆಯನ್ನು ತಿಂಗಳುಗಳ ವರೆಗೂ ಸ್ವಚ್ಛ ಮಾಡದೆ ಇರುವುದು .

ಸೂರ್ಯಾಸ್ತ ಆಗುತ್ತಿದ್ದಂತೆ ಮನೆಯ ಮುಖ್ಯ ಬಾಗಿಲು ಮುಚ್ಚುವುದು.ಹಬ್ಬ ಹರಿದಿನಗಳಲ್ಲಿ ಬಾಗಿಲಿಗೆ ಮಾವಿನ ಎಲೆಯ ತೋರಣ, ಹೂಗಳು ಬದಲಾಯಿಸದೆ ಇರುವುದು. ಹೀಗೆ ಬಹಳಷ್ಟು ತಪ್ಪುಗಳನ್ನು ಮಾಡುವುದರಿಂದ ನಾವು ಆರ್ಥಿಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ .

Leave a Comment