ಹೆಣ್ಣು ಮಕ್ಕಳು ಹುಟ್ಟುವುದು ಶಾಪವೇ ಅಥವಾ ವರವೇ ಗರುಡ ಪುರಾಣದ ಪ್ರಕಾರ

ಹೆಣ್ಣು ಮಕ್ಕಳು ಹುಟ್ಟುವುದು ಶಾಪವೇ ಅಥವಾ ವರವೇ ಗರುಡ ಪುರಾಣದ ಪ್ರಕಾರ ಈ ವಿಷಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ. ಭೂಮಿತಾಯಿ ಹೆಣ್ಣು ಜನ್ಮ ಕೊಟ್ಟ ತಾಯಿಯು ಹೆಣ್ಣು ಹೆಂಡತಿಯಾಗಿ ಬರುವವಳು ಕೂಡ ಹೆಣ್ಣು ಮಗಳಾಗಿ ಹುಟ್ಟುವಳು ಕೂಡ ಹೆಣ್ಣು ನಮ್ಮ ಜೀವನದಲ್ಲಿ ಇವರೆಲ್ಲರ ಪಾತ್ರ ತುಂಬಾ ಮುಖ್ಯ. ಹೀಗಿರುವಾಗ ಹೆಣ್ಣು ಮಗು ಹುಟ್ಟುವುದು ಯಾವತ್ತಿಗೂ ಶಾಪವಲ್ಲ ಬದಲಾಗಿ ದೇವರು ಕೊಟ್ಟ ವರವಾಗಿರುತ್ತದೆ .

ಹೆಣ್ಣು ಮಕ್ಕಳು ನಮಗೆ ಪುಣ್ಯದ ಫಲ ತಾಯಿ ತೊಟ್ಟಿಲನ್ನು ತೂಗುವ ಕೈ ಇಡಿ ದೇಶವನ್ನೇ ಆಳುತ್ತದೆ ಹೆಣ್ಣು ಮಗು ಬಾಲ್ಯದಲ್ಲಿ ತಂದೆಯ ಅದೀನದಲ್ಲಿ. ಮದುವೆಯ ನಂತರ ಗಂಡನ ಆಧೀನದಲ್ಲಿ. ಮುಪ್ಪಿನಲ್ಲಿ ಮಗನ ಅಧೀನದಲ್ಲಿ. ಹೀಗೆ ಎಲ್ಲರ ಬೇಡಿಕೆ ಈಡೇರಿಸುತ್ತಾ ತನ್ನ ಆಸೆಗಳನ್ನೆಲ್ಲ ಮರೆತು ಅವರಿಗಾಗಿ ತನ್ನ ಜೀವನವನ್ನೇ ಮುಡಿಪಾಗಿ ಇಟ್ಟಿರುತ್ತಾಳೆ.

ಅವರ ಅಭಿವೃದ್ಧಿಯಲ್ಲಿ ತನ್ನ ಖುಷಿಯನ್ನು ಕಾಣುತ್ತಿರುತ್ತಾಳೆ ಇನ್ನು ಕರುಣಾಮಯಿ ತ್ಯಾಗಮಯಿ. ದೊಡ್ಡವಳಾಗುವವರೆಗೂ ತನ್ನ ಓದಿನ ಜೊತೆ ಮನೆಯವರ ಸಹಾಯಕ್ಕಾಗಿ ನಿಂತಿರುತ್ತಾಳೆ. ಮದುವೆಯಾದ ಮೇಲೆ ಗಂಡನ ಮನೆಗೆ ಹೋದಾಗ ಅಲ್ಲಿ ಹೊಸ ವಾತಾವರಣ ಇರುತ್ತದೆ ಆದರೂ ಅವಳು ಎಲ್ಲರೊಂದಿಗೆ ಎಲ್ಲವನ್ನು ಸಹಿಸಿಕೊಂಡು ನಗುನಗುತ್ತಾ

ಆ ಮನೆಯ ಶ್ರೇಯಾಭಿವೃದ್ಧಿಗಾಗಿ ದುಡಿಯುತ್ತಾ ಎಲ್ಲರೊಂದಿಗೆ ಆ ವಾತಾವರಣಕ್ಕೆ ಹೊಂದುಕೊಂಡಿರುತ್ತಾಳೆ. ದಿನವಿಡೀ ದುಡಿಯುವ ಅವಳಿಗೆ ಆಯಾಸವಾಗಿದೆ ಎಂದು ಯಾರ ಹತ್ತಿರವೂ ಹೇಳಿಕೊಳ್ಳುವುದಿಲ್ಲ ಏಕೆಂದರೆ ಇದು ನಮ್ಮ ಮನೆ ಇವರೆಲ್ಲರೂ ನಮ್ಮವರು ಎಂದು ಅಂದುಕೊಂಡಿರುತ್ತಾಳೆ. ಪೈಲೆಟ್ ಹೆಣ್ಣು ಟೀಚರ್ ಹೆಣ್ಣು ಡಾ. ಹೆಣ್ಣು ಕಂಡಕ್ಟರ್ ಹೆಣ್ಣು ಸೈಂಟಿಸ್ಟ್ ಹೆಣ್ಣು ಟೈಲರ್ ಹೆಣ್ಣು ರಾಷ್ಟ್ರಪತಿ ಆದವರು ಕೂಡ ಹೆಣ್ಣು ಹೀಗೆ ಪ್ರತಿಯೊಂದು

ಕ್ಷೇತ್ರದಲ್ಲಿ ಪುರುಷನಿಗೆ ಸರಿ ಸಮಾನಾಗಿ ಕೆಲಸ ಮಾಡುವವಳು ಹೆಣ್ಣು ಇಷ್ಟೆಲ್ಲ ಮಾಡಿ ತನ್ನವರನ್ನು ನೋಡಿಕೊಳ್ಳುವವಳು ಹೆಣ್ಣು ತನ್ನ ಸ್ವಾರ್ಥ ಬಯಸದೆ ಜೀವನವಿಡಿ ಇನ್ನೊಬ್ಬರಿಗಾಗಿಯೇ ದುಡಿಯುವವಳು ಹೆಣ್ಣು ಆಗಿರುತ್ತಾಳೆ ಅವಳು ಹೇಗೆ ಶಾಪವಾಗುತ್ತಾಳೆ? ಹೇಳಿ ಹೆಣ್ಣು ದೇವರ ಕೊಟ್ಟ ವರ ನಮ್ಮ ಮಾತೃಭೂಮಿಯನ್ನು ಹೇಗೆ ಪೂಜಿಸುತ್ತೇವೆ ಅದೇ ತರಹ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ನಾವು ಪೂಜಿಸಬೇಕು ಮತ್ತು ಆರಾಧಿಸಬೇಕು ಪ್ರತಿಯೊಂದು ಹೆಣ್ಣನ್ನು ಗೌರವಿಸಿ.

Leave a Comment