ಕೂದಲು ಎಷ್ಟೇ ತೆಳುವಾಗಿದ್ದರೂ ಈ ಎಲೆ ಕೂದಲಿಗೆ ಜೀವ ಕೊಡುತ್ತೆ ಉದುರಿದ ಕೂದಲು ಮತ್ತೆ ಬೆಳೆಯುವಂತೆ ಮಾಡುತ್ತೆ

0

ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯಲು, ಈ ಎಲೆ ತುಂಬಾ ಒಳ್ಳೆಯದು. ಅದಲ್ಲದೆ ಕೂದಲನ್ನು ಕಪ್ಪಾಗಿಯೂ ಮೃದುವಾಗಿಯೂ ರೇಷ್ಮೆಯಂತಾಗಿ ಕೂಡ ಮಾಡುವುದು. ಸಾಧಾರಣವಾಗಿ ಇದು ಎಲ್ಲರ ಮನೆಯಲ್ಲೂ ಇರುತ್ತದೆ. ಯಾರಿಗೆ ಕೂದಲು ತುಂಬಾನೇ ತೆಳುವಾಗುತ್ತಿದೆಯೋ, ಬೊಕ್ಕ ತಲೆಯಾಗುತ್ತಿದೆಯೋ, ವಿಪರೀತ ಕೂದಲು ಉದುರುತ್ತಿದೆಯೋ, ಅವರು ಈ ಎಲೆಯಿಂದ ತಯಾರಿಸಿದ ಎಣ್ಣೆಯನ್ನು ತಲೆಗೆ ಹಚ್ಚಬೇಕು. ಎಷ್ಟೇ ಕೂದಲು ಉದುರಿದರೂ ಕೂಡ ಅದು ದ್ವಿಗುಣ, ತ್ರಿಗುಣವಾಗಿ ಬೆಳೆಯುತ್ತದೆ.

ಪುರುಷರಿಗಾಗಲಿ, ಮಹಿಳೆಯರಿಗಾಗಲಿ ಹಣೆ ಮೇಲಿನ ಕೂದಲು ತುಂಬಾ ಉದುರುತ್ತದೆ. ಬೊಕ್ಕ ತಲೆ ಕಾಣಿಸಲು ಶುರುವಾಗುತ್ತದೆ. ಅಂತವರು ತಕ್ಷಣ ಈ ಮನೆ ಮದ್ದನ್ನು ಮಾಡುವುದರಿಂದ, ಕೂದಲು ಉದುರುವುದನ್ನು ತಕ್ಷಣ ನಿಲ್ಲಿಸಬಹುದು. ಚಿಕ್ಕ ಮಕ್ಕಳಲ್ಲಿ ತುಂಬಾ ಬೇಗ ಬಿಳಿ ಕೂದಲಾಗುತ್ತದೆ, ಗ್ರೇ ಹೇರ್ ಕಾಣಿಸಿಕೊಳ್ಳುತ್ತದೆ. ಅದಕ್ಕೂ ಕೂಡ ಈ ಮನೆಮದ್ದು ರಾಮಬಾಣವಾಗಿ ಕೆಲಸ ಮಾಡುವುದು.

ತುಂಬಾ ಜನಕ್ಕೆ ಏನೇ ಮಾಡಿದರೂ ಕೂದಲು ಉದುರುವಿಕೆ ನಿಯಂತ್ರಣಕ್ಕೆ ಬರುವುದಿಲ್ಲ. ಅಂಥವರು ಈ ಎಲೆಯಿಂದ ತಯಾರಿಸಿದ ಎಣ್ಣೆಯನ್ನು ಹಚ್ಚಿ, ನಿಮ್ಮ ಕೂದಲು ಅದೆಷ್ಟೇ ತೆಳುವಾಗಿದ್ದರೂ ತುಂಬಾ ಚೆನ್ನಾಗಿ ಈ ಎಣ್ಣೆ ಹಚ್ಚಿ, ಜಡೆ ಹಾಕಿಕೊಳ್ಳಬೇಕು. ಹೀಗೆ ಮಾಡುವುದರಿಂದ, ಕೂದಲು ದಟ್ಟವಾಗಿ , ಉದ್ದವಾಗಿ ಬೆಳೆಯುತ್ತದೆ. ಹಾಗಾದರೆ ಬನ್ನಿ ಈ ಎಲೆಯಿಂದ ಎಣ್ಣೆ ಹೇಗೆ ತಯಾರು ಮಾಡುವುದೆಂದು ನೋಡೋಣ. ಪವರ್ ಫುಲ್ ಆದ ಅದ್ಭುತವಾದ ಈ ಎಣ್ಣೆ ತಯಾರು ಮಾಡುವುದು ತುಂಬಾ ಸುಲಭ.

ನಾವು ಒಂದು ಚಿಕ್ಕ ದಪ್ಪ ತಳದ ಬಾಣಲೆ ತೆಗೆದುಕೊಂಡು, ಇದಕ್ಕೆ ಒಂದು ಬೌಲ್ ಕೊಬ್ಬರಿ ಎಣ್ಣೆ ಹಾಕಿಕೊಳ್ಳಬೇಕು. ಮಳೆ ಹಾಗೂ ಚಳಿಗಾಲದಲ್ಲಿ ಶೀತ ವಾಗುವವರು, ಎಳ್ಳೆಣ್ಣೆ ಬಳಸಿ. ಅಲರ್ಜಿ, ನೆಗಡಿ, ಶೀತದ ತೊಂದರೆ ಇರುವವರಿಗೆ ಎಳ್ಳೆಣ್ಣೆ ಒಳ್ಳೆಯದು. ಗಾಣದಿಂದ ತಯಾರಿಸಿದ ಪರಿಶುದ್ಧವಾದ ಎಳ್ಳೆಣ್ಣೆ ಬಳಸಿದರೆ, ಕೂದಲ ಬೆಳವಣಿಗೆಗೆ ಒಳ್ಳೆಯದು.

ಕೊಬ್ಬರಿ ಎಣ್ಣೆಯನ್ನು ಸಿಮ್ಮನಲ್ಲಿ ಕಾಯಿಸಿ, ಅದಕ್ಕೆ ಒಂದು ಚಮಚ ಮೆಂತ್ಯ ಕಾಳು ಹಾಕೋಣ. ಮೆಂತ್ಯ ಕೂದಲು ಬೆಳವಣಿಗೆಗೆ ತುಂಬಾ ಒಳ್ಳೆಯದು. ಇದರಲ್ಲಿರುವ ಅಮೈನೋ ಆಮ್ಲ ಮತ್ತು ಪ್ರೋಟೀನ್, ಕೂದಲು ಹಾಳಾಗುವಿಕೆ ತಡೆದು ಕವಲೋಡೆಯುವುದನ್ನು ಕಡಿಮೆ ಮಾಡುವುದು. ರಫ್ ಹೇರ್ ಮೃದುವಾಗಲು ಸಹಾಯಕಾರಿ. ಹೊಟ್ಟನ್ನೂ ಸಹ ನಿವಾರಿಸುತ್ತದೆ. ಮೆಂತ್ಯ ದೇಹಕ್ಕೆ ತಂಪು ಕೊಡುವುದರಿಂದ, ತಲೆಯಲ್ಲಿ ಹೀಟ್ ಆಗಿರುವವರು, ಕಣ್ಣು ಉಷ್ಣದಿಂದ ಕೆಂಪಾಗಿರುವವರು ಇದನ್ನು ಬಳಸಿದರೆ ತುಂಬಾ ಒಳ್ಳೆಯದು.

ತುಂಬಾ ಕೂದಲು ಉದುರುತ್ತಿರುವವರು, ರಾತ್ರಿ ಒಂದು ಚಮಚ ಮೆಂತ್ಯವನ್ನು ನೀರಿನಲ್ಲಿ ನೆನೆಸಿ, ಬೆಳಗ್ಗೆ ಮೆಂತ್ಯ ಮತ್ತು ಆ ನೀರನ್ನು ಕುಡಿಯುವುದರಿಂದ, ಹೇರ್ ಫಾಲ್ ನಿಯಂತ್ರಣ ಮಾಡಬಹುದು. ಒಂದು ತಿಂಗಳು ಇದನ್ನು ಮಾಡಬೇಕು. ಮೆಂತ್ಯ ಕಲರ್ ಚೇಂಜ್ ಆಗುವವರೆಗೂ ಸಿಮ್ಮನಲ್ಲಿ ಬಿಸಿ ಮಾಡಿ, ಈ ಮೆಂತ್ಯ ಕೂದಲ ಬೆಳವಣಿಗೆಗೆ ಬೇಕಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ.

ಈಗ 10 ರಿಂದ 15 ಕರಿಬೇವಿನ ಸೊಪ್ಪನ್ನು ಸೇರಿಸೋಣ. ಇದರಲ್ಲಿ ಹೆಚ್ಚಾದ ಆಂಟಿ ಆಕ್ಸಿಡೆಂಟ್ ಇದೆ. ಇದು ಕೂದಲನ್ನು ತೇವದಿಂದ ಇಡುತ್ತದೆ. ಅಂದರೆ ಕೂದಲ ಬುಡದಲ್ಲಿ ಡೆಡ್ ಸೆಲ್ಸ್ಗಳಿದ್ದಾಗಲೂ ಕೂದಲು ಬೆಳೆಯುವುದಿಲ್ಲ. ಇದು ಡೆಡ್ ಸೆಲ್ಸ್ ಗಳನ್ನು ರಿಮೂವ್ ಮಾಡುತ್ತದೆ. ಇದರಿಂದ ಕೂದಲು ಬೆಳೆಯಲು ತುಂಬಾ ಒಳ್ಳೆಯದು. ಈಗ ತುಂಬಾ ಇಂಪಾರ್ಟೆಂಟ್ ಆಗಿರುವ ಎಲೆಗಳನ್ನು ತೆಗೆದುಕೊಳ್ಳಬೇಕು.

ಅದೇ ದಾಸವಾಳದ ಎಲೆ. ಇದು ಕೂದಲ ಬೆಳವಣಿಗೆಗೆ ತುಂಬಾ ಒಳ್ಳೆಯದು. ಇದರಲ್ಲಿ ತುಂಬಾ ಹೆಚ್ಚಾದ ಅಮೈನೋ ಆಮ್ಲ ಇದೆ. ಕೆರೋಟಿನ್ ಎಂಬ ಪ್ರೋಟಿನ್ ಇದೆ. ಇದು ಕೂದಲನ್ನು ನರೇಶ್ ಮಾಡಲು, ಬಲಶಾಲಿಯಾಗಿಸಲು ಸಹಾಯಕಾರಿ. ಜೊತೆಗೆ ಕೂದಲ ಬುಡವನ್ನು ಗಟ್ಟಿ ಮಾಡಲು ಕೆರೋಟಿನ್ ಒಳ್ಳೆಯದು. ಕೂದಲು ಉದುರಿದ ಜಾಗದಲ್ಲಿ ವೇಗವಾಗಿ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.

ಕೂದಲು ಬೆಳೆಯಲು ಬೇಕಾದ ನ್ಯಾಚುರಲ್ ಕೊಲೊಜಿನ್ನನ್ನು ಉತ್ಪತ್ತಿ ಮಾಡುತ್ತದೆ. ಈಗ ಒಂದು ಕಪ್ ಎಣ್ಣೆಗೆ ಐದರಿಂದ ಆರು ನಾಟಿ ದಾಸವಾಳದ ಎಲೆ ಕಟ್ ಮಾಡಿ ಹಾಕಿಕೊಳ್ಳಬೇಕು. ಎಲೆ ಬಾಡುವವರೆಗೂ ತಿರುಗಿಸಬೇಕು. ಸ್ಟವ್ ಆಫ್ ಮಾಡಿ. ಬಿಸಿ ಎಣ್ಣೆಯಲ್ಲಿ ಎಲೆ ಸತ್ವವನ್ನು ಬಿಡುತ್ತದೆ. ಒಂದು ವೇಳೆ ಎಣ್ಣೆ ಕಾದಿದ್ದರೆ ಸ್ಟವ್ ಆಫ್ ಮಾಡಿಕೊಂಡು ಸಹ ಎಲೆ ಹಾಕಬಹುದು.

ಅದ್ಭುತವಾದ ಪದಾರ್ಥಗಳನ್ನು ಈ ಎಣ್ಣೆಗೆ ಹಾಕಿರುವುದರಿಂದ, ಕೂದಲು ದಟ್ಟವಾಗಿ ಬೆಳೆಯಲು, ಕಪ್ಪಾಗಲು, ಹೊಳಪಾಗಲು ತುಂಬಾ ಸಹಾಯ ಮಾಡುತ್ತವೆ. ಸ್ವಾಭಾವಿಕವಾಗಿ ಮನೆಯಲ್ಲಿರುವ ಪದಾರ್ಥಗಳಿಂದ ಸರಳ ಮತ್ತು ಸುಲಭವಾಗಿ, ಕೆಲವೇ ನಿಮಿಷಗಳಲ್ಲಿ ತಯಾರಿಸಿಕೊಳ್ಳಬಹುದು. ಎಣ್ಣೆ ಆರುವರೆಗೂ ಹಾಗೆ ಬಿಡಿ. ಈ ಎಣ್ಣೆಯನ್ನು ಮಕ್ಕಳು ಸಹ ತಲೆಗೆ ಹಚ್ಚಬಹುದು.

ಮಕ್ಕಳಲ್ಲೂ ಸಹ ಹೇರ್ ಫಾಲ್ ಸಮಸ್ಯೆ ಇರುತ್ತದೆ, ಹೊಟ್ಟು ಇರುತ್ತದೆ, ಒರಟಾಗಿರುತ್ತದೆ. ಅಂತ ಮಕ್ಕಳಿಗೆ ತುಂಬಾನೇ ಒಳ್ಳೆಯದು. ಬೊಕ್ಕ ತಲೆ ಆಗುತ್ತಿರುವ ಪುರುಷರು ಸಹ ಆರಾಮವಾಗಿ ಇದನ್ನು ಹಚ್ಚಬಹುದು. ಒಂದು ದಿನ ಹಾಗೆ ಇದನ್ನ ಸೋಸದೆ ಬಿಡಬೇಕು. ಆಗ ಮೆಂತೆ ಮತ್ತು ದಾಸವಾಳ ಎಲ್ಲ ಸತ್ವವನ್ನು ಬಿಟ್ಟಿರುತ್ತದೆ. ನಂತರ ಒಂದು ಬಾಟಲ್ ಗೆ ಸೋಸಿ ಇಟ್ಟುಕೊಳ್ಳಬಹುದು. ತಯಾರಿಸಿದ ದಿನ ಸಹ ತಲೆಗೆ ಹಚ್ಚಬಹುದು. ಒಂದು ದಿನ ಬಿಟ್ಟರೆ ಒಳ್ಳೆಯದು.

ತುಂಬಾ ಸ್ವಾಭಾವಿಕ, ಪೌಷ್ಟಿಕಾಂಶಯುಕ್ತ ಎಣ್ಣೆ ಇದಾಗಿದೆ. ಇದನ್ನು ವಾರಕ್ಕೆ ಮೂರು ಸಲ ಅಥವಾ ಒಂದು ಸಲ ಹಚ್ಚಿದರೆ ಸಾಕು. ಇಡೀ ದಿನ ಹಾಗೆ ಬಿಟ್ಟು ತಲೆ ಸ್ನಾನ ಮಾಡುವುದರಿಂದ ಕೂದಲು ಉದುರುವಿಕೆ ಬೇಗ ಕಡಿಮೆಯಾಗುತ್ತದೆ. ಹೇಗೆ ಹಚ್ಚುವುದು? ಬೇಕಷ್ಟು ಎಣ್ಣೆಯನ್ನು ಒಂದು ಬೌಲ್ ನಲ್ಲಿ ಉಗುರು ಬೆಚ್ಚಗೆ ಮಾಡಿಕೊಳ್ಳಬೇಕು. ಕೈ ಇಟ್ಟರೆ ಸುಡಬಾರದು. ತಲೆಗೆ ನೀಟಾಗಿ ಹಚ್ಚಿಕೊಳ್ಳಬೇಕು. ಇದರಿಂದ ಕೂದಲ ಬುಡ ತುಂಬಾ ಚೆನ್ನಾಗಿ ಎಣ್ಣೆ ಹೀರಿಕೊಳ್ಳುತ್ತದೆ. ಇದರಿಂದ ಕೂದಲು ವೇಗವಾಗಿ ಬೆಳೆಯುತ್ತದೆ. ಉದುರಿದ ಕೂದಲು ಚಿಗುರಿ ಬೆಳೆಯಲು ಸಹಾಯವಾಗುತ್ತದೆ.

Leave A Reply

Your email address will not be published.