ಹಿಮ್ಮಡಿ ನೋವನ್ನು ನಿವಾರಣೆ ಮಾಡಿಕೊಳ್ಳುವಂತಹ ಅದ್ಭುತವಾದಂತಹ ಮನೆ ಮದ್ದು, ಮತ್ತು ಚಿಕಿತ್ಸೆಯ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ತುಂಬಾ ಜನರಲ್ಲಿ ಕಾಡುತ್ತಿದೆ. ಹೆಣ್ಣು ಮಕ್ಕಳು ಹೆಚ್ಚು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಿಮ್ಮಡಿ ನೋವಿಗೆ ಪರಿಹಾರ ತಿಳಿದುಕೊಳ್ಳಬೇಕಾದರೆ ಅದರ ಕಾರಣವನ್ನು ತಿಳಿದುಕೊಳ್ಳಬೇಕು.
ಅದೇನೆಂದರೆ ಅಡಿಗೆ ಮನೆಯಲ್ಲಿ ಹೆಚ್ಚು ಸಮಯ ನಿಲ್ಲುತ್ತಾರೆ. ಆದಷ್ಟು ನಿಂತು ಅಡಿಗೆ ಮಾಡುವುದನ್ನು ನಿಲ್ಲಿಸಿ ಕೂತುಕೊಂಡು ಅಡಿಗೆ ಮಾಡಿ, ಹೆಚ್ಚು ನಿಲ್ಲುವುದರಿಂದ ಈ ಸಮಸ್ಯೆ ಬರುತ್ತದೆ. ಜೀವನ ಆನಂದಮಯವಾಗಿ ಇರಬೇಕು ನಡಿಬೇಕು ನಿಲ್ಲಬಾರದು. ಅದೇ ರೀತಿ ನಿಂತು ಅಡಿಗೆ ಮಾಡುವುದನ್ನು ನಿಲ್ಲಿಸಬೇಕು. ನಿಂತು ಊಟ ಮಾಡುವುದನ್ನು ನಿಲ್ಲಿಸಬೇಕು.
ಕಮೋರ್ಡ್ ಅನ್ನು ಕೂಡ ನಿಲ್ಲಿಸಬೇಕು ಇದರಿಂದಲೂ ಕೂಡ ಮಂಡಿ ನೋವು ಬರುತ್ತದೆ. ಆಫೀಸ್ನಲ್ಲಿ ಕೂತು ಕಾಲು ಜೋತು ಬಿಟ್ಟು ಕೆಲಸ ಮಾಡುತ್ತಿರುತ್ತಾರೆ ಅವರಿಗೂ ಕೂಡ ಹಿಮ್ಮಡಿ ನೋವು ಹೆಚ್ಚು ಬರುತ್ತದೆ. ಆಗಾಗಿ ಆಫೀಸ್ನಲ್ಲಿ ಕೆಲಸ ಮಾಡುವವರು ಒಂದು ಕಾಲ್ ಅನ್ನು ಮೇಲೆ ಇಟ್ಟುಕೊಳ್ಳಿ ಒಂದು ಕಾಲನ್ನು ಕೆಳಗೆ ಇಟ್ಟುಕೊಳ್ಳಿ ಹಾಗೇ ಮೇಲೆ ಕೆಳಗೆ ಮೇಲೆ ಕೆಳಗೆ ಕಾಲನ್ನು ಬದಲಾಯಿಸಿಕೊಂಡರೆ
ಹಿಮ್ಮಡಿ ನೋವು ಕಡಿಮೆಯಾಗುತ್ತದೆ. ಈ ರೀತಿ ಬದಲಾಯಿಸಿಕೊಳ್ಳುವುದರಿಂದ ಹಿಮ್ಮಡಿ ನೋವು ಕಡಿಮೆಯಾಗುತ್ತದೆ. ನಿಲ್ಲುವುದನ್ನು ಕಡಿಮೆ ಮಾಡಿ ಹಿಮ್ಮಡಿ ನೋವು ಕಡಿಮೆಯಾಗುತ್ತದೆ. ಇದಕ್ಕೆ ಪರಿಹಾರವೇನೆಂದರೆ ಬಿಸಿ ಬಿಸಿ ನೀರು ಸೈಂದವ ಲವಣವನ್ನು ಬೆರೆಸಿ ಅದನ್ನು ರಾತ್ರಿ ಕಾಲನ್ನು ಇಟ್ಟು ಕುಳಿತುಕೊಳ್ಳಬೇಕು.
ಕಾಲಿಗೆ ಹರಳೆಣ್ಣೆಯಿಂದ ಮಸಾಜ್ ಮಾಡಿ ಆ ನಂತರ ಬಿಸಿ ನೀರಿಗೆ ಕಾಲನ್ನು ಇಟ್ಟುಕೊಂಡರೇ ಇನ್ನು ಉತ್ತಮ. ಹೀಗೆ ಮಾಡಿದರೇ 10 ದಿನಗಳಲ್ಲಿ ನಿಮ್ಮ ಹಿಮ್ಮಡಿ ನೋವು ಕಡಿಮೆಯಾಗುತ್ತದೆ. ಯಾವುದೇ ಕಾರಣಕ್ಕೂ ಪೈನ್ ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ ಇದರಿಂದ ಕಿಡ್ನಿ ಮತ್ತು ಲಿವರ್ ವೈಫಲ್ಯಕ್ಕೆ ಕಾರಣವಾಗುತ್ತದೆ. ಆದಷ್ಟು ಮನೆಮದ್ದನ್ನು ಮಾಡಿಕೊಳ್ಳಿ.