ಇಂತಹ 4 ಮನೆಗಳಿಗೆ ಲಕ್ಷ್ಮೀದೇವಿ ಬರುವುದಿಲ್ಲ

ನಾವು ಈ ಲೇಖನದಲ್ಲಿ ಇಂತಹ 4 ಮನೆಗಳಿಗೆ ಲಕ್ಷ್ಮಿದೇವಿ ಏಕೆ ಬರುವುದಿಲ್ಲ ಎಂಬುದನ್ನು ತಿಳಿದುಕೊಳ್ಳೋಣ . ಇವರು ಯಾವಾಗಲೂ ಬಡತನ ಅನುಭವವಿಸುತ್ತಾರೆ ಎಂದು ಶಾಸ್ತ್ರಗಳು ಹೇಳುತ್ತವೆ. ಲಕ್ಷ್ಮಿ ದೇವಿ ಎಂದರೆ ಸಾಕ್ಷಾತ್ ಧನಕ್ಕೆ ಅಧಿಪತಿ . ಯಾರಿಗೇ ಐಶ್ವರ್ಯ ಸಿದ್ದಿಸಬೇಕಾದರೂ ಕೂಡ ಆ ತಾಯಿಯ ಅನುಗ್ರಹದಿಂದಲೇ ನಡೆಯುತ್ತದೆ ಎಂಬ ನಂಬಿಕೆ . ಆದ್ದರಿಂದ ಎಲ್ಲರೂ ವಿವಿಧ ರೂಪದಲ್ಲಿ ಇರುವ ಲಕ್ಷ್ಮಿಯ ಚಿತ್ರಪಟಗಳನ್ನು ಮತ್ತು ಲಕ್ಷ್ಮಿ ದೇಶಿಯ ವಿಗ್ರಹವನ್ನು ಪೂಜಿಸುತ್ತಾರೆ. ಲಕ್ಷ್ಮಿ ದೇವಿ ಸಕಲ ಸಿರಿ ಸಂಪತ್ತುಗಳ ಅಧಿದೇವತೆ . ಆ ತಾಯಿಯ ಅನುಗ್ರಹ ಇದ್ದರೆ, ಸಕಲವೂ ಸಿದ್ಧಿಸುತ್ತದೆ ಎಂದು ಹೇಳುತ್ತಾರೆ.

ತಾಯಿಯನ್ನು ಚಂಚಲ ಸ್ವಭಾವದವಳು ಎಂದೂ ಕೂಡ ಕರೆಯುತ್ತಾರೆ . ಅಮ್ಮನವರ ಸ್ತೋತ್ರದಲ್ಲಿ “ಚಂಚಲಾಯ ನಮಃ” ಎಂಬ ನಾಮವೂ ಕೂಡ ಇದೆ. ಇದಕ್ಕೆ ಕಾರಣ ಯಾರು ದೇವರ ಉಪಾಸನೆ ಮಾಡುತ್ತಾರೋ , ಆ ದೇವನ ತತ್ವವು ಉಪಾಸಕನ ಬಳಿಗೆ ಬರುತ್ತದೆ. ಇದರ ಅನುಸಾರವೇ ಲಕ್ಷಣಗಳು ಕಾಣಿಸುತ್ತವೆ. ಆ ಲಕ್ಷ್ಮಿ ದೇವಿಯ ಉಪಾಸನೆ ಮಾಡಿದರೆ, ಧನ ಪ್ರಾಪ್ತಿಯಾಗುತ್ತದೆ. ಈ ಉಪಾಸನೆ ಮಾಡದೆ ಅಹಂಕಾರದಿಂದ ವರ್ತಿಸಿದರೆ, ಆ ದೈವ ತತ್ವವೂ ಉಪಾಸಕನಿಗೆ ಸಿದ್ದಿಸುವುದಿಲ್ಲ . ಆಗ ತನ್ನ ಸ್ವಂತ ತಪ್ಪನ್ನು ಒಪ್ಪಿಕೊಳ್ಳದೇ ಈ ಮನುಷ್ಯರು ಲಕ್ಷ್ಮಿ ದೇವಿಯನ್ನು ಚಂಚಲೆ ಎಂದು ಹೇಳುತ್ತಾರೆ.

ಆದರೆ ಲಕ್ಷ್ಮಿದೇವಿ ಚಂಚಲೆಯಾಗಿದ್ದರೆ, ಆ ತಾಯಿ ಯು ಶ್ರೀ ಮಹಾ ವಿಷ್ಣುವಿನ ಚರಣಗಳನ್ನು ಯಾವಾಗಲೋ ಹಗಲುತ್ತಿದ್ದಳು. ಆದ್ದರಿಂದ ತಾಯಿ ಚಂಚಲೆ ಅಲ್ಲಾ . ನಮ್ಮ ಭಕ್ತಿ ಚಂಚಲ ಎಂದು ಎಲ್ಲರೂ ಅರ್ಥೈಸಿಕೊಳ್ಳಬೇಕು. ಇಂದಿನ ಈ ದಿನಗಳಲ್ಲಿ ಹಣವಿಲ್ಲದೇ ಯಾವುದೇ ಕೆಲಸ ನಡೆಯುವುದಿಲ್ಲ . ಕೆಲವು ಮಂದಿಯ ಬಳಿ ಯಥೇಚ್ಚವಾಗಿ ಹಣ ಇರುತ್ತದೆ. ಇನ್ನೂ ಕೆಲವರ ಬಳಿ ಅಸಲು ಹಣವೇ ನಿಲ್ಲುವುದಿಲ್ಲ. ಯಾರ ಮೇಲೆ ಲಕ್ಷ್ಮಿ ಕಟಾಕ್ಷ ಇರುತ್ತದೆ. ಅವರ ಬಳಿ ಹಣ ಇರುತ್ತದೆ. ಹಾಗಾದರೆ ಲಕ್ಷ್ಮಿ ದೇವಿಯ ಕಟಾಕ್ಷ ಪಡೆಯಬೇಕಾದರೆ, ಏನೂ ಮಾಡಬೇಕು. ಎಂಬ ವಿಷಯಕ್ಕೆ ಬಂದರೆ, ಆ ದೇವಿಯ ಕಟಾಕ್ಷಕ್ಕೋಸ್ಕರ ಈ ರೀತಿಯಾಗಿ ಮಾಡಿ .

ಹೆಣ್ಣು ಲಕ್ಷ್ಮಿಯ ಸ್ವರೂಪ . ಮನೆಗೆ ಮಹಾಲಕ್ಷ್ಮಿ ಮನೆಯಲ್ಲಿ ಇರುವ ಮಹಿಳೆಯರು . ಹೆಂಡತಿ ಆಗಬಹುದು, ಅಕ್ಕ , ತಂಗಿ , ಅಮ್ಮ ಅಥವಾ ಅಜ್ಜಿ ಯಾರಾದರೂ ಆಗಲಿ , ಮನೆಗೆ ಅವರೇ ಮಹಾ ಲಕ್ಷ್ಮಿಯರು . ಅವರೇ ಅಲ್ಲದೇ ಮನೆಯನ್ನು ಬೆಳಗುವುದು ಮತ್ತು ಬೆಳೆಸುವುದು . ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡಿ ಬುದ್ಧಿವಂತಿಕೆಯಿಂದ ಜಾಣ್ಮೆಯಿಂದ ಸಂಸಾರ ಸರಿ ದೂಗಿಸುವವರು ಮಹಿಳೆಯರು . ಇವರಿಂದಲೇ ಮನೆಯಲ್ಲಿ ನಿತ್ಯವೂ ಸಂತೋಷ ಇರುತ್ತದೆ . ಆದ್ದರಿಂದ ಮನೆಯ ಮಹಿಳೆಯರನ್ನು ಲಕ್ಷ್ಮಿ ದೇವಿಗೆ ಹೋಲಿಸುತ್ತಾರೆ . ಆದರೆ ಎಲ್ಲಾ ಮಹಿಳೆಯರು ಒಂದೇ ರೀತಿ ಇರುವುದಿಲ್ಲ . ಕೆಲವು ಮಂದಿ ವಿಭಿನ್ನವಾಗಿ ಇರುತ್ತಾರೆ .

ಮೊದಲನೆಯದು ಹಣವನ್ನು ದುಂದು ವೆಚ್ಚ ಮಾಡುತ್ತಾ , ಅವರಿವರ ಬಗ್ಗೆ ಅಗತ್ಯವಿಲ್ಲದ ಮಾತುಗಳನ್ನು ಆಡುತ್ತಾ , ಕಾಲ ಕಳೆಯುತ್ತಿರುತ್ತಾರೆ . ಅವರ ಬಳಿಗೆ ಲಕ್ಷ್ಮಿ ದೇವಿಯು ಅಸಲು ಬರುವುದಿಲ್ಲ . ದುರ್ಬುದ್ದಿ ಇರುವಂತಹ , ಕೆಟ್ಟ ಆಲೋಚನೆ ಇರುವಂತಹ , ಅವಾಚ್ಯ ಶಬ್ದಗಳನ್ನು ಉಪಯೋಗಿಸುವಂತಹ , ಮತ್ತು ಹಿರಿಯರನ್ನು ಗೌರವದಿಂದ ಕಾಣದೆ ಇರುವಂತಹ ಮಹಿಳೆಯರು ಇರುವ ಮನೆಗಳಿಗೆ ಲಕ್ಷ್ಮಿ ದೇವಿಯ ಅನುಗ್ರಹ ಇರುವುದಿಲ್ಲ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

ಎರಡನೆಯದಾಗಿ ಯಾವ ಮಹಿಳೆ ಕಸದ ಪೊರಕೆಯನ್ನು ಕಾಲಿನಿಂದ ಒದೆಯುತ್ತಾಳೆ , ಅಂತಹ ಮನೆಗೂ ಕೂಡ ಲಕ್ಷ್ಮಿ ದೇವಿ ಬರುವುದಿಲ್ಲ . ಪೊರಕೆ ಯು ಶನಿ ಮಹಾತ್ಮನ ಆಯುಧ . ಅಂತಹ ಪೊರಕೆಯನ್ನು ಕಾಲಿನಿಂದ ಹೊದ್ದರೆ, ದರಿದ್ರ ದೇವಿ ಮನೆಗೆ ಬರುತ್ತಾಳೆ. ನಮ್ಮ ಶಾಸ್ತ್ರ ಪುರಾಣದಲ್ಲಿ ಪ್ರತಿಯೊಂದಕ್ಕೂ ಪ್ರತ್ಯೇಕವಾದ ಸ್ಥಾನವನ್ನು ಕೊಟ್ಟಿದ್ದಾರೆ. ಅದೇ ರೀತಿ ಪೊರಕೆಗೂ ಪ್ರತ್ಯೇಕ ಸ್ಥಾನ ಇದೆ. ಆದ್ದರಿಂದ ಪೊರಕೆಗೆ ಗೌರವವನ್ನು ಕೂಡಲೇ ಬೇಕು. ಇಲ್ಲವಾದರೆ ಕೋರಿ ಕಷ್ಟಗಳನ್ನು ಕರೆ ತಂದಂತೆ ಆಗುತ್ತದೆ. ಆದ್ದರಿಂದ ಮನೆಯ ಮಹಿಳೆಯರು ಪೊರಕೆಯನ್ನು ಹೊದೆಯ ಬೇಡಿ.

ಮೂರನೇ ವಿಷಯ ಮನೆಯಲ್ಲಿ ಯಾರೂ ಸ್ವಚ್ಚತೆಯನ್ನು ಕಾಪಾಡುವುದಿಲ್ಲವೋ , ಅವರ ಮನೆಗೆ ಎಂದಿಗೂ ಸಹ ಲಕ್ಷ್ಮಿ ದೇವಿ ಹೆಜ್ಜೆ ಇಡುವುದಿಲ್ಲ ಎಂದು ನಮ್ಮ ಹಿರಿಯರು ಮತ್ತು ಪುರಾಣಗಳಲ್ಲೂ ಹೇಳಲಾಗಿದೆ. ಮನೆಯನ್ನು ಯಾವಾಗಲೂ ಸ್ವಚ್ಚವಾಗಿ ಇಟ್ಟುಕೊಳ್ಳಬೇಕು . ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಲಕ್ಷ್ಮಿ ದೇವಿ ವಾಸ ಮಾಡುತ್ತಾಳೆ.

ನಾಲ್ಕನೆಯ ವಿಷಯ ಕೆಲವು ಮಂದಿ ಸ್ತೀಯರು ಕೈಗಳಿಗೆ ಧರಿಸಿದಂತಹ ಬಳೆಗಳು ಹೊಡೆದು ಹೋದರೆ, ಆ ಮುರಿದ ಬಳೆಯ ಚೂರುಗಳನ್ನು ಕಸದ ಬುಟ್ಟಿಗೆ ಹಾಕುತ್ತಾರೆ. ಶಾಸ್ತ್ರದ ಪ್ರಕಾರ ಹಾಗೇ ಮಾಡಿದರೆ ಬಡತನವನ್ನು ಅನುಭವಿಸಬೇಕಾಗುತ್ತದೆ. ಹಾಗೆಯೇ ಹೊಡೆದು ಹೋದ ಬಳೆಯ ಚೂರುಗಳನ್ನು ಎಲ್ಲಿ ಆದರೂ ಸರಿ ಮರದ ಬುಡದ ಅಡಿ ಮುಚ್ಚಬೇಕು . ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುವುದಿಲ್ಲ . ನಮ್ಮ ಮನೆಯಲ್ಲಿ ಇರುವ ಪ್ರತಿ ವಸ್ತುಗಳು ಕೂಡ ಮುಖ್ಯವಾಗಿರುತ್ತದೆ .

ಆದರೆ ಮನೆಯ ಮುಖ್ಯ ದ್ವಾರಕ್ಕೆ ವಿಶೇಷವಾದ ಸ್ಥಾನವಿದೆ . ಮನೆಯ ಬಾಗಿಲನ್ನು ಜೋರಾಗಿ ಮುಚ್ಚಬಾರದು . ಅಂತಹ ಮನೆಗಳಲ್ಲಿ ಲಕ್ಷ್ಮಿ ದೇವಿಯು ನಿಲ್ಲುವುದಿಲ್ಲ . ಅಂತ ಮನೆಗಳಿಗೆ ಲಕ್ಷ್ಮೀದೇವಿ ಪ್ರವೇಶ ಮಾಡುವುದಿಲ್ಲ . ಆದ್ದರಿಂದ ಬಾಗಿಲುಗಳನ್ನು ಶಬ್ದ ಬರದ ಹಾಗೆ ನಿಧಾನವಾಗಿ ಹಾಕಬೇಕೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ . ಯಾರು ಮನೆಯಲ್ಲಿರುವ ವಸ್ತುಗಳನ್ನು ಜಾಗೃತೆಯಿಂದ ಕಾಪಾಡುತ್ತಾರೋ , ಅಂತವರ ಮನೆಗೆ ಸದಾ ಕಾಲ ಲಕ್ಷ್ಮೀದೇವಿಯ ಕಟಾಕ್ಷ ಇರುತ್ತದೆ . ಮಹಿಳೆಯರು ಮನೆಯ ಹೊಸ್ತಿಲ ಬಳಿ ಕುಳಿತು ಊಟ ಮಾಡಬಾರದು . ಅಂತಹ ಮನೆಗಳಲ್ಲಿ ಕೂಡ ಲಕ್ಷ್ಮಿ ದೇವಿ ಇರುವುದಿಲ್ಲ .

ಹೊಸ್ತಿಲ ಮೇಲೆ ಕುಳಿತು ಊಟ ಮಾಡುವುದು ಅಶುಭ ಎಂದು ಹಿಂದೂ ಪುರಾಣಗಳಲ್ಲಿ ಉಲ್ಲೇಖವಿದೆ . ಅವಶ್ಯಕತೆ ಇಲ್ಲದೇ ಇದ್ದರೂ ಅನಾವಶ್ಯಕವಾಗಿ ಖರ್ಚು ಮಾಡುವುದು ಕೂಡ ಲಕ್ಷ್ಮಿ ದೇವಿ ನಿಲ್ಲದೆ ಇರಲು ಪ್ರಮುಖ ಕಾರಣ . ಇಂತಹ ಯಾವುದೇ ಮನೆಗಳಲ್ಲಿ ದಾರಿದ್ರ್ಯ ತಾಂಡವವಾಡುತ್ತದೆ . ಇನ್ನು ಲಕ್ಷ್ಮೀ ದೇವಿಯು ಯಾವಾಗಲೂ ನಿಮ್ಮ ಮನೆಯಲ್ಲಿ ನೆಲೆಸಬೇಕು ಎಂದರೆ , ವಾರಕ್ಕೆ ಒಂದು ದಿನ ಆದರೂ ಉಪ್ಪು ನೀರಿನಿಂದ ಮನೆಯನ್ನು ಹೊರಿಸಬೇಕು . ಹೀಗೇ ಮಾಡಿದರೆ ಲಕ್ಷ್ಮಿ ಕಟಾಕ್ಷ ಕೂಡಿ ಬರುತ್ತದೆ ಎಂದು ಪುರಾಣಗಳಲ್ಲಿ ತಿಳಿಸಿದ್ದಾರೆ . ಇದರ ಹಿಂದೆ ಒಂದು ವೈಜ್ಞಾನಿಕ ಕಾರಣವೂ ಕೂಡ ಇದೆ .

ಉಪ್ಪು ನೀರಿನಿಂದ ಮನೆಯನ್ನು ಹೊರಿಸುವುದರಿಂದ ಮೈಕೋ ಬ್ಯಾಕ್ಟೀರಿಯಾ ಗಳು ಹೋಗಿ , ಯಾವುದೇ ರೀತಿಯ ಕಾಯಿಲೆಗಳು ಬರದ ಹಾಗೆ ತಡೆಗಟ್ಟುತ್ತದೆ . ಆರೋಗ್ಯ ಕೂಡ ಸಂಪತ್ತು ಹಾಗಿರುತ್ತದೆ .ಆರೋಗ್ಯ ಇದ್ದರೆ ಲಕ್ಷ್ಮೀದೇವಿಯ ಅನುಗ್ರಹ ನಿಮ್ಮ ಮೇಲೆ ಇದ್ದಂತೆ . ಈ ರೀತಿಯಾಗಿ ಕೆಲವು ನಿಯಮಗಳನ್ನು ಪಾಲಿಸಿದರೆ ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬರುತ್ತಾಳೆ . ಇದಲ್ಲದೆ ಇವುಗಳಿಗೆ ವಿರುದ್ಧವಾಗಿ ಮಾಡಿದರೆ ದರಿದ್ರ ದೇವಿಯು ಆಹ್ವಾನ ಆಗುತ್ತಾಳೆ .

ಹಾಲಿನ ಸಮುದ್ರದಿಂದ ಲಕ್ಷ್ಮೀ ದೇವಿಯು ಉದ್ಭವಿಸಿದಾಗ , ಇಂದ್ರ ದೇವನಿಗೆ ನಾನು ಎಲ್ಲಿ ಇರುತ್ತೇನೆ, ಎಂದು ಬಹಳ ವಿವರವಾಗಿ ಮತ್ತು ಸ್ಪಷ್ಟವಾಗಿ ಹೇಳುತ್ತಾಳೆ .ಧರ್ಮ ಕರ್ಮಗಳನ್ನು ನಿರ್ಲಕ್ಷ್ಯ ಮಾಡಿ , ನೀತಿ ನಿಯಮಗಳನ್ನು ಪಾಲಿಸದೆ , ಅತಿಯಾಗಿ ಕಾಮ ಕ್ರೋಧಗಳಿಂದ ಇರುವವರ ಬಳಿ ಲಕ್ಷ್ಮಿ ಇರಲಾರಳು .ಯಾವುದೇ ವ್ಯಕ್ತಿಯಾಗಲಿ ಅಥವಾ ಕುಟುಂಬವಾಗಲಿ ಅಹಂಕಾರ ಮತ್ತು ಅಜ್ಞಾನದಿಂದ ವ್ಯವಹರಿಸಿ ಮನಸ್ಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೋ , ಅಂತಹ ಮನೆಗಳಿಗೂ ಕೂಡ ಲಕ್ಷ್ಮಿ ದೇವಿ ಬರುವುದಿಲ್ಲ . ದುರಾಸೆ ಪಡುವವರ ಬಳಿ ಕೂಡ ಧನಲಕ್ಷ್ಮಿ ವಾಸಿಸುವುದಿಲ್ಲ .

ಎಲ್ಲಾ ಪಾಪ ಕಾರ್ಮಗಳಿಗೂ ಮೂಲ ಕಾರಣ ದುರಾಸೆಯೇ ಎಂದು ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ . ಆದ್ದರಿಂದ ದುರಾಸೆ ಪಡುವವರ ಬಳಿ ನಾನು ಇರಲಾರೆ ನೂ ಎಂದು ಇಂದ್ರನ ಬಳಿ ಹೇಳುತ್ತಾಳೆ . ಹಾಗೆಯೇ ಹಿಂಸಾತ್ಮಕ ಪ್ರದೇಶಗಳಲ್ಲಿ ಮತ್ತು ಹಿಂಸೆಯನ್ನು ಪ್ರೇರೇಪಿಸುವ ಸ್ಥಳಗಳಲ್ಲಿಯೂ ಕೂಡ ಲಕ್ಷ್ಮೀದೇವಿ ಇರುವುದಕ್ಕೆ ಅಂಗೀಕರಿಸುವುದಿಲ್ಲ . ಮಹಿಳೆಯರ ಮೇಲೆ ಮತ್ತು ಮೂಕ ಪ್ರಾಣಿಗಳ ಮೇಲೆ ಹಿಂಸಾತ್ಮಕ ಕೃತ್ಯಗಳನ್ನು ನಡೆಸುವವರ ಬಳಿ ಕೂಡ ಲಕ್ಷ್ಮೀದೇವಿ ಇರುವುದಿಲ್ಲ .

ಅಲ್ಲದೆ ಅಂತ ಹ ವ್ಯಕ್ತಿಗಳಿಗೆ ತೀರದ ಕಷ್ಟಗಳನ್ನು ಕೊಡುತ್ತಾಳೆ . ಎಲ್ಲಿ ಸ್ತ್ರೀಯರನ್ನು ಗೌರವದಿಂದ ಕಾಣುತ್ತಾರೋ ,ಅಲ್ಲಿ ಲಕ್ಷ್ಮಿ ದೇವಿ ಆನಂದದಿಂದ ನೆಲೆಸುತ್ತಾಳೆ . ತಮ್ಮಲ್ಲಿರುವ ಲೋಪದೋಷಗಳನ್ನು ಸರಿ ದೂಗಿಸುತ್ತಾ , ಒಬ್ಬರಿಗೊಬ್ಬರು ಗೌರವ ತೋರಿಸುವ ಕುಟುಂಬ ಸದಸ್ಯರ ಮೇಲೆ ಲಕ್ಷ್ಮಿ ದೇವಿಯ ಕಟಾಕ್ಷವು ಸದಾ ಕಾಲ ಇರುತ್ತದೆ . ಮನೆಗೆ ಬರುವ ಅತಿಥಿಗಳನ್ನು ಗೌರವಿಸುತ್ತಾ , ಅವರನ್ನು ಬರಿಗೈಯಲ್ಲಿ ಆಗಲಿ ಅಥವಾ ಖಾಲಿ ಹೊಟ್ಟೆಯಲ್ಲಿ ಕಳುಹಿಸದ ಮನೆಯೂ ಪುಣ್ಯ ಕ್ಷೇತ್ರಗಳಿಗೆ ಸಮಾನ .

ಅಂತಹ ಮನೆಯು ಲಕ್ಷ್ಮೀ ನಿವಾಸ ಆಗುವುದಲ್ಲದೆ , ಆ ಕುಟುಂಬಗಳು ಸಿರಿ ಸಂಪತ್ತುಗಳಿಂದ ತುಂಬಿ ತುಳುಕುತ್ತಿರುತ್ತದೆ . ಅನ್ಯೂನ್ಯವಾಗಿ ಸಂಸಾರ ನಡೆಸುವ ದಂಪತಿಗಳು ಇರುವ ಮನೆಗೆ ಲಕ್ಷ್ಮಿ ದೇವಿ ಆಶೀರ್ವಾದ ಸದಾ ಕಾಲ ಇರುತ್ತದೆ . ಹಾಗೆ ಮಾಡದೆ ನಿರಂತರವಾಗಿ ಜಗಳವಾಡುತ್ತಾ ಮನೆಗೆ ಬಂದ ಅತಿಥಿಗಳನ್ನು ಗೌರವಿಸದೆ ಮತ್ತು ಕುಟುಂಬ ಸದಸ್ಯರನ್ನು ಕೂಡ ಗೌರವಿಸದಂತಹ ಮನೆಗಳಿಗೆ ಲಕ್ಷ್ಮಿ ದೇವಿ ಬರುವುದಿಲ್ಲ. ಎಲ್ಲಿ ಅಹಂಕಾರ ಇರುತ್ತದೆಯೋ , ಎಲ್ಲಿ ಸ್ವಚ್ಛತೆ ಮತ್ತು ಭಕ್ತಿ ಇರುವುದಿಲ್ಲ ಅಲ್ಲಿ ನಾನು ನೆಲೆಸುವುದಿಲ್ಲ ಎಂದು ಇಂದ್ರನಿಗೆ ಹೇಳುತ್ತಾಳೆ. ಆದ್ದರಿಂದ ತಾಯಿ ಮನೆಗೆ ಆಹ್ವಾನ ಆಗಬೇಕು ಎಂದರೆ, ಲಕ್ಷ್ಮಿ ದೇವಿಗೆ ಇಷ್ಟವಾಗದ ಕೆಲಸ ಕಾರ್ಯಗಳನ್ನು ಮಾಡಬಾರದು .

Leave a Comment