ವೃಶ್ಚಿಕ ರಾಶಿಯವರಿಗೆ ಯಾಕೆ ಹೀಗೆ?

0

ನಾವು ಈ ಲೇಖನದಲ್ಲಿ ವೃಶ್ಚಿಕ ರಾಶಿ ಅವರ ಶನಿ ಗೋಚಾರ ಫಲಗಳನ್ನು , ಮತ್ತು ಅಷ್ಟಮ ಶನಿಯ ಬಗ್ಗೆ, ತಿಳಿದುಕೊಳ್ಳೋಣ . ಅರ್ಧ ಅಷ್ಟಮ ಶನಿಯು ನಡೆಯುತ್ತಿದೆ . ನಿಮಗೆ ಈ ಸಮಯದಲ್ಲಿ, ಶನಿಯೂ ತಟಸ್ಥ ಆಗಿರುತ್ತಾನೆ. ಅಷ್ಟೇನೂ , ಲಾಭ ಕೊಡುವುದಿಲ್ಲ. ಆದರೆ 2024 ರಲ್ಲಿ ನಾಲ್ಕೂವರೆ, ತಿಂಗಳು ಯೋಚನೆ ಮರೆತುಬಿಡಿ. ಮತ್ತು ಆರಾಮಾಗಿ ಸುಖ, ಶಾಂತಿ, ನೆಮ್ಮದಿಯ ಜೊತೆಗೆ ಹಣಕಾಸಿನ ಲಾಭ ಮಾಡಿಕೊಡುವುದಕ್ಕೆ, ಶನಿ ತಯಾರಾಗುತ್ತಿದ್ದಾನೆ.

ಆಸ್ತಿಪಾಸ್ತಿ ವಿಚಾರದಲ್ಲೂ ಒಳ್ಳೆಯ ವಿಷಯ ಇದೆ. ಸಕಾರಾತ್ಮಕ ವಾತಾವರಣ ಬೆಳೆಯುತ್ತದೆ. ಯಾವ ನಾಲ್ಕು ತಿಂಗಳಲ್ಲಿ ಶನಿ ನಿಮಗೆ ಶುಭ ತರುತ್ತಾನೆ.ಯಾವಾಗ ನೀವು ಆರಾಮಾಗಿರಬಹುದು , ಎಂದು ತಿಳಿಸಲಾಗಿದೆ. ಅದಕ್ಕಿಂತ ಮುಂಚೆ ಉಳಿದ ಎಂಟು ತಿಂಗಳು ನಿಮ್ಮ ಮಟ್ಟಿಗೆ ಹೇಗಿರುತ್ತದೆ , ಎಂದು ತಿಳಿದುಕೊಳ್ಳೋಣ . ನಿಮಗೆ ಅರ್ಧ ಅಷ್ಟಮ ಶನಿ ಇರುವುದು , ನಿಮ್ಮ ಚತುರ್ಥ ಭಾವದಲ್ಲಿ . ನಿಮಗೆ 2023 ರ ಜನವರಿಯಲ್ಲಿ , ಶನಿ ಕುಂಭ ರಾಶಿಯಲ್ಲಿ ಪ್ರವೇಶ ಮಾಡಿದಾಗಿನಿಂದ, ಇಲ್ಲಿಯ ತನಕ ಸುಮಾರು ವಿಚಾರಗಳಿಗೆ ಹಿನ್ನಡೆ ಆಗಿದ್ದು, ಕೆಲವರಿಗೆ ಮೋಸ , ವಂಚನೆ ಆಗಿರಬಹುದು.

ಅಂದರೆ ಬಹಳಷ್ಟು ಜನಕ್ಕೆ ಸ್ವಲ್ಪ ಮಟ್ಟಿಗೆ ಅದು ಲಾಭ ಆಗಿರುತ್ತದೆ . ಯಾಕೆಂದರೆ ಶನಿ ಈ ಚತುರ್ಥ ಭಾವದಲ್ಲಿದ್ದಾಗ ಹೆಚ್ಚಾಗಿ ಮಿಶ್ರ ಫಲಗಳನ್ನು ತರುತ್ತಾನೆ. ಅದೇ ರೀತಿಯ ಮಿಶ್ರ ಫಲಗಳು ಈ 2024 ರಲ್ಲಿ ಮುಂದುವರೆಯುತ್ತದೆ . ಅದರಲ್ಲೂ ಫೆಬ್ರವರಿ ಹನ್ನೊಂದಕ್ಕೆ , ಶನಿ ಹಸ್ತನಾಗುತ್ತಾನೆ. ಅಂದರೆ ಸೂರ್ಯನಿಗೆ ಹತ್ತಿರ ಆಗುವುದರಿಂದ , ನಿಮಗೆ ಶನಿ ಗೋಚಾರ ಇರುವುದಿಲ್ಲ. ಆಗ ನಕಾರಾತ್ಮಕ ಫಲಗಳು ಸ್ವಲ್ಪ ಜಾಸ್ತಿ ಆಗುವ ಸೂಚನೆ ಇದೆ ಅಂತ ಹೇಳಬಹುದು .

ಮಿಶ್ರ ಫಲ ಅಂತ ಅಂದರೆ ಇಷ್ಟು ದಿನ 50 ರಷ್ಟು ಫಲಗಳು ಇತ್ತು. ಆದರೆ ಫೆಬ್ರವರಿ ಹನ್ನೊಂದರ ನಂತರ 30 ರಷ್ಟು ಲಾಭ , 70 ರಷ್ಟು ನಷ್ಟವೇ ಆಗಬಹುದು. ಹಾಗಾಗಿ ಒಂದಷ್ಟು ವಿಚಾರದಲ್ಲಿ ನೀವು, ಎಚ್ಚರವಾಗಿರಬೇಕು. ಅದು ಯಾವ ವಿಚಾರಗಳು ಎಂದು ತಿಳಿಯೋಣ. ಪ್ರಮುಖವಾಗಿ ಆರೋಗ್ಯದ ವಿಚಾರದಲ್ಲಿ ಹುಷಾರಾಗಿರಿ . ಕಾಲು ನೋವು ಅಥವಾ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಳ್ಳುವುದು. ಅಥವಾ ಕಾಲಿಗೆ ಯಾವುದಾದರೂ, ಹರಿತವಾಗಿರುವ ವಸ್ತು ತಾಗಿ ಗಾಯ ಆಗುವುದು.

ಅದು ಇಲ್ಲ ಅಂದರೆ ನಡೆದುಕೊಂಡು, ಹೋಗುತ್ತಿರುವಾಗ ಕಾಲು ಉಳುಕುವುದು, ರಕ್ತ ಹೆಪ್ಪುಗಟ್ಟುವುದು. ಹೀಗೆ, ಒಂದಲ್ಲಾ ಒಂದು ತೊಂದರೆಗಳು ಕಾಡುವ ಸಾಧ್ಯತೆ ಇದೆ. ಇನ್ನು ಕೆಲವರಿಗೆ ಬೆನ್ನುನೋವು, ಕಾಡಬಹುದು. ಒಂದರ್ಧ ಗಂಟೆ ಕೂತು ಸರಿಯಾಗಿ ಕೆಲಸ ಮಾಡುವುದಕ್ಕೆ ಆಗುವುದಿಲ್ಲ . ನೋವಲ್ಲಿ ಯಾವುದೇ ಕೆಲಸ ಮಾಡುವುದಕ್ಕೆ , ಆಸಕ್ತಿ ಇಲ್ಲದೆ ಇರಬಹುದು. ಅಥವಾ ಗಮನ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳಬಹುದು. ಅದೇ ರೀತಿಯಲ್ಲಿ ಬಹಳಷ್ಟು ಜನರ ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಅವಕಾಶ ಕೂಡ ಇರುತ್ತದೆ. ಅಂದರೆ ಕೆಲವರಿಗೆ ವಯೋಸಹಜವಾಗಿ ಒಂದಿಷ್ಟು ಆರೋಗ್ಯ ಸಮಸ್ಯೆ ಬಂದರೆ ,

ಇನ್ನು ಕೆಲವು ಸಲ ವಾತಾವರಣದ ಪ್ರಭಾವದಿಂದ ಆರೋಗ್ಯ ಕೆಡಬಹುದು. ಒಟ್ಟಿನಲ್ಲಿ ಆರೋಗ್ಯ ಅಷ್ಟು ಚೆನ್ನಾಗಿರುವುದಿಲ್ಲ. ದುಃಖ ಪಡುವ ಹಾಗೆ ಆಗುತ್ತದೆ, ಅಂತ ಹೇಳಬಹುದು. ಇದರಿಂದ ಚಿಕಿತ್ಸೆ ಅದು ಇದು ಅಂತ ಒಂದಷ್ಟು ಖರ್ಚು ಬಂದರೂ, ಆಶ್ಚರ್ಯ ಇಲ್ಲ. ಇನ್ನು ಕೆಲವೊಂದು ಸಲ ಏನಾಗುತ್ತದೆ ಅಂದರೆ ಎಲ್ಲೋ ದೂರದ ಜಾಗಕ್ಕೆ ಹೋಗಬೇಕಾಗುತ್ತದೆ . ಓಡಾಟಕ್ಕೆ ಅಂತ ಬಾಡಿಗೆ ಕಾರು , ಬೈಕ್, ಜೀಪು ಇದನ್ನು ಮಾಡಿಕೊಂಡು ತಿರುಗುವ ಹಾಗೆ ಆಗಬಹುದು. ಅದರಿಂದ ಕೂಡ ಒಂದಿಷ್ಟು ಮತ್ತಷ್ಟು ಖರ್ಚು ಬರಲಿದೆ. ಮತ್ತು ಕೆಲವರಿಗೆ ಸಾಲ ಮಾಡುವ ಪರಿಸ್ಥಿತಿಯನ್ನು , ಶನಿ ತಂದು ಕೊಡುವ ಹಾಗೆ ಮಾಡುತ್ತಾನೆ.

ಈಗ ಶನಿ ಇರುವುದು ಸೂಕ್ತ ಸ್ಥಾನ ದಲ್ಲಿ , ಹಾಗಾಗಿ ನಿಮಗೆ ಸುಖವಾಗಿರಬೇಕು. ಯಾವುದೇ ರೀತಿ ಕಷ್ಟ ಪಡಬಾರದು . ಜೀವನವನ್ನು ಖುಷಿಯಾಗಿ ಮಾಡಬೇಕು , ಅನ್ನೋ ಬುದ್ಧಿ ಸ್ವಲ್ಪ ಜಾಸ್ತಿನೇ ಬಂದಿರುತ್ತದೆ. ಹಾಗೇನಾದರೂ ನೀವು ಖುಷಿಗಾಗಿ ಸಾಲ ಮಾಡಿದ್ದರೆ, ಸಾಲ ಕೊಟ್ಟವರ ಕಾಟ ಶುರುವಾಗಬಹುದು . ಅದನ್ನು ತೀರಿಸಲಾಗದೆ, ಅವಮಾನ ಕೂಡ ಆಗಬಹುದು. ಅದು ಇಲ್ಲ ಅಂತ ಅಂದರೆ ಸಾಲ ಮಾಡಿದ ಹಣ ನೀವೆಲ್ಲಾದರೂ ಕಳೆದುಕೊಂಡರೆ , ಅದು ಇನ್ನೊಂದು ತರ ಕಷ್ಟ.

ಮತ್ತು ಕೆಲವರಿಗೆ ತುಂಬಾ ಅವಶ್ಯಕತೆಯ ಸಮಯ ಇದ್ದಾಗ ಸಾಲ ಸಿಗದೇ ಕೂಡ ಹೋಗಬಹುದು. ಇನ್ನು ಕೆಲವರಿಗೆ ಅಭದ್ರತೆಯ ಜೀವನ ಕಾಡಬಹುದು. ಕೆಲಸದ ವೇಳೆಯಲ್ಲಿ ಬೇರೆಯವರಿಗೆ ,ತುಂಬಾ ಪ್ರಾಧ್ಯಾನತೆ ಕೊಟ್ಟರೆ , ಅಥವಾ ಮನೆಯಲ್ಲೇ ಸಹೋದರ ಸಹೋದರಿಯರಿಗೆ, ಹೆಚ್ಚು ಪ್ರಾಧಾನ್ಯತೆ ಕೊಟ್ಟರೆ, ಒಟ್ಟಾರೆಯಾಗಿ ಬೇರೆಯವರಿಗೆ ಪ್ರಾಧಾನ್ಯತೆ ನೀಡಿದರೆ , ಹೊಟ್ಟೆ ಕಿಚ್ಚಿನ ಅನುಭವವಾಗುತ್ತದೆ. ನೋಡಿದರೆ , ಇದೆಲ್ಲವೂ ಸಣ್ಣ ವಿಚಾರವಾಗಿ ಅನಿಸುತ್ತದೆ. ಆದರೆ ಕೆಲವರ ಮಾನಸಿಕ ನೆಮ್ಮದಿ ಹಾಳಾಗುವ ಸಾಧ್ಯತೆ ಹೆಚ್ಚು. ಒಟ್ಟಿನಲ್ಲಿ ಶನಿ ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳು, ಮಾಡುವವನಿದ್ದಾನೆ.

ಬಹಳಷ್ಟು ಜನಕ್ಕೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಅತಿಯಾದ ಯೋಚನೆ ಮಾಡುತ್ತಾರೆ. ಈ ಎಲ್ಲಾ ರೀತಿಯ ಘಟನೆಗಳು ,ಫೆಬ್ರವರಿ 11ಕ್ಕೆ ಶುರುವಾಗಿ ,ಮಾರ್ಚ್ 18ರ ತನಕ ಹೆಚ್ಚಾಗಿ ಕಾಡುತ್ತದೆ. 18ರ ನಂತರ ನಕಾರಾತ್ಮಕ ಫಲಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗುವ, ಸೂಚನೆ ಇದೆ. 2024 ರ ಯಾವ ನಾಲ್ಕು ತಿಂಗಳಲ್ಲಿ ಶನಿ ನಿಮಗೆ ಶುಭ ತರುತ್ತಾನೆ. ಯಾವಾಗ ನೀವು ಆರಾಮಾಗಿರಬಹುದು . ಎಂದು ತಿಳಿಸಲಾಗಿದೆ. . ಜನವರಿಯಿಂದ ಜೂನ್ ತನಕ, ಸ್ವಲ್ಪ ನಕಾರಾತ್ಮಕ ಫಲಗಳು ದೊರೆಯುತ್ತವೆ. ಜೂನ್ 29 ರಿಂದ ಶನಿಯು ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸುತ್ತಾನೆ. ಇದಕ್ಕೆ ವಕ್ರ ಶನಿ ,ಎಂದು ಹೇಳುತ್ತೇವೆ .

ಹಾಗಾಗಿ ಜೂನ್ 29ರ ನಂತರ ಅರ್ಧ ಶನಿಯ ಕಾಟಕ್ಕೆ, ವಿರಾಮ ದೊರಕುತ್ತದೆ. ಇಷ್ಟು ದಿನ ನಿಂತು ಹೋಗಿರುವ ಎಲ್ಲಾ ರೀತಿಯ ಲಾಭ ಅದೃಷ್ಟ ಮತ್ತು ಶುಭ ಸೂಚನೆಗಳು, ಜೂನ್ 29 ರ ನಂತರ ಸಿಗುತ್ತಾ ಹೋಗುತ್ತದೆ . ಹಣ ಕಾಸಿನ ವಿಚಾರದಲ್ಲಿ , ಸಂಬಂಧದ ವಿಚಾರದಲ್ಲಿ ,ಮನೆಯಲ್ಲಿ ಸೌಲಭ್ಯಗಳನ್ನು ಮಾಡಿಕೊಳ್ಳುವ, ವಿಚಾರದಲ್ಲಿ, ಸಿಗುತ್ತಾ ಹೋಗುತ್ತದೆ ನೀವು ಅಂದುಕೊಂಡಂತಹ ಕೆಲಸವನ್ನು ,ಪೂರ್ಣ ಮಾಡುತ್ತೀರಾ. ಸಾಲ ಮಾಡಿದ್ದರೆ ತೀರಿಸುವುದು , ಅಥವಾ ಕಂತನ್ನು ಕಟ್ಟುವುದಾಗಿ ಇರಬಹುದು, ಶನಿ ಈ ರೀತಿಯಲ್ಲಿ ನಿಮಗೆ ಒಳ್ಳೆಯದು ಮಾಡುತ್ತಾನೆ. ವಾಹನ ಖರೀದಿ ಮಾಡಬಹುದು,

ಆಸ್ತಿಯನ್ನು ಸಹ ಖರೀದಿ ಮಾಡಬಹುದು . ಇಲ್ಲವಾದರೆ ,ಕಟ್ಟಿದ ಮನೆಯನ್ನು ಸಹ ತೆಗೆದುಕೊಳ್ಳಬಹುದು. ಸುಖ ಸ್ಥಾನದಲ್ಲಿ ಕುಳಿತಿರುವಂತಹ , ಶನಿ ಸುಖವಾಗಿರಲು ಏನೆಲ್ಲಾ ಬೇಕು ಅದೆಲ್ಲವನ್ನು ಈ ವರ್ಷದಲ್ಲಿ ಮಾಡಿಕೊಡುತ್ತಾನೆ. ಸಂಬಂಧದಲ್ಲಿ ಬಿರುಕಿದ್ದರೆ ,ಅಂದರೆ ಮನೆಯಲ್ಲಿ, ಅಶಾಂತಿ ಇದ್ದರೆ , ಅದೆಲ್ಲವನ್ನು ಬಿಟ್ಟು ಹೊಂದಿಕೊಂಡು ,ಹೋಗುವ ಸಾಧ್ಯತೆ ಹೆಚ್ಚು . ಇನ್ನು ಉದ್ಯೋಗದ ವಿಚಾರಕ್ಕೆ ಬಂದರೆ ನೀವು ಮಾಡುವ ಕೆಲಸಕ್ಕೆ ಮನೆಯವರ ಸಂಪೂರ್ಣ, ಸಹಕಾರವಿರುತ್ತದೆ. ಅದರಲ್ಲೂ ನಿಮ್ಮ ತಾಯಿ ನಿಮ್ಮ ಸಂಪೂರ್ಣ ಬೆಂಬಲಕ್ಕೆ, ನಿಂತಿರುತ್ತಾರೆ. ಶನಿಯು ಅದೃಷ್ಟ ತಂದು ಕೊಡುತ್ತಾನೆ .

ಎಂದು ಕಣ್ಣು ಮುಚ್ಚಿ ಕುಳಿತುಕೊಳ್ಳಬೇಡಿ . ಶನಿಯು ವಕ್ರನಾಗಿರುವ, ಸಮಯದಲ್ಲಿ ದಿನ ಪರಿಶ್ರಮ ಪಟ್ಟರೆ, ಇನ್ನು ಹೆಚ್ಚಿನ ,ಲಾಭವನ್ನು ಗಳಿಸಬಹುದು. ಬೇಗನೆ ಯಶಸ್ಸು ಸಿಗುತ್ತದೆ .ವೃತ್ತಿ ಜೀವನದಲ್ಲಿ ಯಶಸ್ಸು ಸಿಗುತ್ತದೆ . ಇನ್ನು ಆರೋಗ್ಯದ ವಿಚಾರಕ್ಕೆ ಬಂದರೆ, ಜೂನ್ 29ರ ನಂತರ ನಿಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇನ್ನು ಕೆಲವರಿಗೆ ಶ್ವಾಸಕೋಶದ ತೊಂದರೆ , ಉಸಿರಾಟದ ತೊಂದರೆ, ಇದ್ದವರಿಗೆ ಪರಿಹಾರ ಸಿಗುತ್ತದೆ. ಇನ್ನು ಮಕ್ಕಳ ವಿಚಾರಕ್ಕೆ ಬಂದರೆ ತುಂಬಾ ಚೆನ್ನಾಗಿ ಓದುತ್ತಾರೆ. ಹಿರಿಯರು ಹೇಳಿದ ಮಾತನ್ನು ಗೌರವಿಸುತ್ತಾರೆ. ಮತ್ತು ಅವರ ನಗುವಿನಿಂದ ಮನೆಯಲ್ಲಿ ನೆಮ್ಮದಿ ತುಂಬಿರುತ್ತದೆ.

ಇನ್ನು ಕೆಲವರಿಗೆ ಜಮೀನಿನಲ್ಲಿ, ಒಳ್ಳೆಯ ಪಸಲು ಬರಬಹುದು. ಮತ್ತು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭಾಂಶ ದೊರೆಯಬಹುದು. ಮತ್ತು ಗಣಿಗಾರಿಕೆ ಮಾಡುವವರಿಗೆ, ಬಾವಿ ಕೊರೆಸುವವರಿಗೆ ಅದೃಷ್ಟ ಕೈ ಹಿಡಿಯಲಿದೆ. ದೊಡ್ಡಮಟ್ಟದಲ್ಲಿ ಲಾಭವಾಗಬಹುದು . ಅಥವಾ ನೀರು ಸಿಗಬಹುದು. ಆದರೆ ಇದೆಲ್ಲಾ ಜೂನ್ 29ರ ನಂತರ ನಾಲ್ಕುವರೆ ತಿಂಗಳುಗಳ ಕಾಲ ಹೆಚ್ಚು ನಡೆಯಲಿದೆ . ಅಂದರೆ 2024ರ ನವೆಂಬರ್ 15ಕ್ಕೆ ಶನಿಯು ವಕ್ರ ಚಲನೆಯನ್ನು ಬಿಟ್ಟು ,ನೇರ ಚಲನೆ ಶುರು ಮಾಡುತ್ತಾನೆ. ಕೆಲವರ ಬದುಕಿನಲ್ಲಿ ಹೆಚ್ಚು ಫಲಗಳು ಸಿಕ್ಕರೆ, ಕೆಲವರ ಬದುಕಿನಲ್ಲಿ , ಕಡಿಮೆ ಫಲಗಳು ಸಿಗುತ್ತದೆ. ಕೆಲವೊಂದು ಸಾರಿ ಅವರ ಜಾತಕದ ಮೇಲು ಅನ್ವಯವಾಗುತ್ತದೆ. ಪ್ರಮುಖವಾಗಿ, ನಿಮ್ಮ ಜೀವನದಲ್ಲಿ ಜೂನ್ 29 ರಿಂದ ,ನವಂಬರ್ 15ರ ಅವಧಿಯಲ್ಲಿ, ಅಸಾಧ್ಯ ,ಎಂಬುದನ್ನು ಸಾಧಿಸಿ ತೋರಿಸುತ್ತದೆ.

Leave A Reply

Your email address will not be published.