ಇಂಥ ಒಂದು ಅದ್ಭುತ

0

ನಾವು ಈ ಲೇಖನದಲ್ಲಿ ಕನ್ಯಾ ರಾಶಿಯವರ ಮಾಸ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ. ರಾಶಿಯಲ್ಲಿ ಕೇತು ಗ್ರಹವಿದೆ ಸಪ್ತಮಭಾವದಲ್ಲಿ ರಾಹು ಗ್ರಹಕ್ಕೆ ಕುಜ ಗ್ರಹ ಸೇರಿಕೊಂಡಿದೆ. ಕುಜ ರಾಹು ಉಂಟಾಗಿದೆ. ವಿಶೇಷವಾಗಿ ಸಪ್ತಮ ಭಾವ ಎಂದರೆ ಕಳತ್ರ ಭಾವ ಎಂದು ಕರೆಯುತ್ತೇವೆ. ದಾಂಪತ್ಯ ಜೀವನದ ಬಗ್ಗೆ ಬಹಳಷ್ಟು ಗಮನ ವಹಿಸಬೇಕಾಗುತ್ತದೆ. ಒಂದು ಕಡೆ ಗಮನ ಕೊಟ್ಟರೆ ಸರಿದೂಗಿಸಲು ಪರಿಶ್ರಮವನ್ನು ಪಡಬೇಕಾಗುತ್ತದೆ. ಅವಿಭಕ್ತ ಕುಟುಂಬಗಳಲ್ಲಿ ಹೆಚ್ಚಿನ ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ.

ಕುಜ ಗ್ರಹವು ಸೇರಿಕೊಂಡಾಗ ಹೆಚ್ಚಿನ ಭಿನ್ನಾಭಿಪ್ರಾಯಗಳು ಶುರುವಾಗುತ್ತದೆ . ವಿಶೇಷವಾಗಿ ಗೃಹಿಣಿಯರಿಗೆ ಮತ್ತು ಮನೆಯ ವಾತಾವರಣಕ್ಕೆ ಸ್ಪಂದಿಸುವಂತಹ ಪುರುಷರಿಗೆ ಬಹಳ ಕಿರಿಕಿರಿಯ ವಾತಾವರಣ ಉಂಟಾಗುತ್ತದೆ. ಕಡಿಮೆ ಅವಧಿಯ ಅಂದರೆ ತಿಂಗಳಿನ ಮಾಸ ಭವಿಷ್ಯದಲ್ಲಿ ಸ್ವಲ್ಪ ಏರುಪೇರು ಉಂಟಾದರೂ ದೀರ್ಘಕಾಲಿನ ರಾಶಿ ಫಲವು ನಿಮಗೆ ಒಳ್ಳೆಯದನ್ನೇ ಮಾಡುತ್ತದೆ. ಗುರು ಫಲವು ಬಹಳ ಗಟ್ಟಿಯಾಗಿದೆ. ಪಂಚಮ ಸ್ಥಾನ ಮತ್ತು ಭಾಗ್ಯಸ್ಥಾನವನ್ನು ನಾವು ತ್ರಿಕೋನಗಳು ಎಂದು ಕರೆಯುತ್ತೇವೆ.

ಈ ತ್ರಿಕೋನದ ಭಾಗ್ಯವು ನಿಮಗೆ ಬಹಳಷ್ಟು ಸಕಾರಾತ್ಮಕ ಬದಲಾವಣೆಯನ್ನು ಕೊಡುತ್ತದೆ . ಗುರು ಗ್ರಹದ ಅನುಗ್ರಹವು ತಾಯಿಯ ಆರೈಕೆ ಅಂತೆ ಇರುತ್ತದೆ. ಒಬ್ಬ ಆದರ್ಶಮಯ ಗುರು ನಮಗೆ ಬುದ್ಧಿಯನ್ನು ಹೇಳಿಕೊಡುವ ರೀತಿಯಂತೆ ಪ್ರೇರಣೆಯನ್ನು ನೀಡುತ್ತಾರೆ . ಈ ರೀತಿಯ ಅನುಗ್ರಹವು ನಿಮಗೆ ಗುರುವಿನಿಂದ ಲಭಿಸುತ್ತದೆ. ಗುರುವಿನ ಅನುಗ್ರಹದಿಂದ ಭಾಗ್ಯಗಳು ಹೆಚ್ಚಿಗೆ ಆಗುತ್ತಾ ಹೋಗುತ್ತದೆ. ನಿಮ್ಮ ಮತ್ತು ನಿಮ್ಮ ಮನೆಯವರ ಆರೋಗ್ಯದಲ್ಲಿ ತುಂಬಾ ಕಿರಿಕಿರಿ ಇರುತ್ತದೆ. ಹಾಗೂ ಅಸ್ಥಿರತೆ ಇರುತ್ತದೆ.

ಇವೆಲ್ಲವೂ ತಾತ್ಕಾಲಿಕವಾಗಿ ಇರುತ್ತದೆ . ಹಾಗೆ ಒಂದೆರಡು ಗ್ರಹಗಳು ನಿಮ್ಮ ಭಾಗ್ಯಸ್ಥಾನದಲ್ಲಿರುತ್ತದೆ. ರವಿ ಶುಕ್ರ ಮತ್ತು ಬುಧ ಗ್ರಹಗಳು ನಿಮಗೆ ಮಿಶ್ರಫಲವನ್ನು ತಂದೊಡುತ್ತದೆ. ಆರೋಗ್ಯದಲ್ಲಿ ಅಸ್ಥಿರತೆ ಇರುತ್ತದೆ . ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಸ್ವಲ್ಪ ಡೋಲಾಯಮಾನ ಪರಿಸ್ಥಿತಿ ಇರುತ್ತದೆ. ರವಿ ಗ್ರಹದ ಜೊತೆ ಶುಕ್ರ ಗ್ರಹವು ಸೇರುವುದರಿಂದ ಅಸ್ತ ದೋಷವಿರುತ್ತದೆ . ವ್ಯಾಪಾರ ವ್ಯವಹಾರಗಳಲ್ಲಿ ಬಹಳಷ್ಟು ಏರುಪೇರುಗಳು ಉಂಟಾಗುತ್ತದೆ. ವಿಶೇಷವಾಗಿ ವ್ಯಾಪಾರಸ್ಥರು ಬಹಳ ಹುಷಾರಾಗಿ ಕಾರ್ಯನಿರ್ವಹಿಸಿಕೊಂಡು ಹೋಗಬೇಕಾಗುತ್ತದೆ .

ಬೆಲೆಗಳ ವಿಪರೀತ ಹೆಚ್ಚಳ ಇವು ನಿಮಗೆ ಬಹಳ ತಲೆನಾವಾಗಿ ಪರಿಣಮಿಸುತ್ತದೆ. ಆಭರಣವನ್ನು ತಯಾರಿಸುವಂತಹ ವ್ಯಕ್ತಿಗಳು ಕಬ್ಬಿಣ ಮತ್ತು ಪಾತ್ರೆಗಳ ಲೋಹಗಳ ತಯಾರಿಕೆಯಲ್ಲಿ ವೈಪರಿತ್ಯಗಳು ಉಂಟಾಗುತ್ತದೆ. ಉದ್ಯೋಗದಲ್ಲಿರುವವರಿಗೆ ಅವರ ಮೇಲಾಧಿಕಾರಿಗಳಿಂದ ತಲೆನೋವಿನ ವಾತಾವರಣ ಉಂಟಾಗುತ್ತದೆ. ಜಟಿಲತೆ ಉಂಟಾಗುತ್ತದೆ.

ಆದರೆ ವಿದ್ಯಾರ್ಥಿಗಳಿಗೆ ಉತ್ತಮ ಅನುಕೂಲವಿದೆ. ಅದೃಷ್ಟಾವಕಾಶವಿದೆ. ಶುಕ್ರ ಗ್ರಹವು ವ್ಯವಹಾರ ಜ್ಞಾನ ಮತ್ತು ಜೀವನದ ಸೌಂದರ್ಯ ಈ ರೀತಿಯ ಬಗ್ಗೆ ಅನುಕೂಲ ಮಾಡಿಕೊಡುತ್ತದೆ . ಬುಧ ಗ್ರಹವು ಹಣಕಾಸಿನ ಜ್ಞಾನ ಒಳ್ಳೆಯ ಬುದ್ಧಿವಂತಿಕೆಯನ್ನು ಕೊಡುತ್ತದೆ. ಗುರು ಗ್ರಹವು ಧಾರ್ಮಿಕ ಜ್ಞಾನ ಮತ್ತು ಒಳ್ಳೆಯ ಬುದ್ದಿವಂತಿಕೆಯಲ್ಲಿ ಈ ಮೂರು ಗ್ರಹಗಳು ನಿಮ್ಮ ಭಾಗ್ಯದ ರಾಶಿಯಲ್ಲಿ ಜೊತೆಯಾಗುತ್ತವೆ. ಶುಭಕರವಾದಂತಹ ವಿಚಾರಗಳು ವಿದ್ಯಾರ್ಥಿಗಳ ಮಟ್ಟಿಗೆ ಉಂಟಾಗುತ್ತದೆ.

Leave A Reply

Your email address will not be published.