ಜೀವನದಲ್ಲಿ ಹೇಳಲೇಬಾರದಂತಹ 3 ಗುಟ್ಟುಗಳು

ಜೀವನದಲ್ಲಿ ನಿಮಗೆ ಯಶಸ್ವಿ ಏನನ್ನು ಕಲಿಸುವುದಿಲ್ಲ ಸೋಲುಗಳಷ್ಟೇ ನಿಮಗೆ ಒಳ್ಳೆಯ ಪಾಠಗಳನ್ನು ಕಲಿಸುತ್ತೆ ಆ ಸೋಲಿನಿಂದ ಕಲಿತ ಪಾಠಗಳಿಂದಲೇ ನಿಮ್ಮ ಗೆಲುವಿನ ಬಾಗಿಲು, ತೆರೆಯುವುದುಜೀವನದಲ್ಲಿ ನಡೆಯುವಂತಹ ಪ್ರತಿಯೊಂದು ಘಟನೆಗಳನ್ನು ಅಭಿನಂದಿಸಲೇಬೇಕು ಎಲ್ಲವೂ ಅನುಭವ ಅಷ್ಟೇ ಅನ್ನೋದನ್ನ ಮರೆಯಬಾರದು ಈ ಬದುಕು ಎಂಬ ಯುದ್ಧದಲ್ಲಿ ನಿಮಗೆ, ಸೋಲುಗಳು, ಎದುರಾಗುತ್ತಲೇ ಇರುತ್ತೆ ಆದರೆ, ಆ ಸೋಲಿಗೆ ಹೆದರಿ ಹಿಂದೆ ಸರಿಯಬಾರದು

ಸ್ವಲ್ಪ ತಾಳ್ಮೆಯಿಂದ ಇರೋದನ್ನ, ಕಲಿಬೇಕು ಈ ಜಗತ್ತಿನ ಅತಿದೊಡ್ಡ ಪ್ರಾರ್ಥನೆ ಎಂದರೆ ಅದು ತಾಳ್ಮೆ ಅದನ್ನು ಎಂದಿಗೂ ಕಳೆದುಕೊಳ್ಳಬೇಡಿ.ನೀವು, ಎಷ್ಟು ಶಕ್ತಿಶಾಲಿಯಾಗಿ ಇರಬೇಕು ಅಂದ್ರೆ ಏಕಾಂಗಿಯಾಗಿ ಇರೋದನ್ನ ಅಭ್ಯಾಸ ಮಾಡಿಕೊಳ್ಳಬೇಕು ಯಾಕೆಂದರೆ ನಿಮ್ಮ ಕಷ್ಟಗಳಿಗೆ ನಿಮ್ಮ ನೋವುಗಳಿಗೆ ಯಾರು ಆಗಲ್ಲ.
ನಿಮ್ಮ ಜೀವನದಲ್ಲಿ ನೀವು ಯಾರಿಗೂ ಹೇಳಲೇಬಾರದಂತಹ 3 ಗುಟ್ಟುಗಳು, ಯಾವುವು ಗೊತ್ತಾ

ನಿಮ್ಮ ದುಃಖ ನಿಮ್ಮ ತಪ್ಪುಗಳನ್ನು ಹಾಗೂ ಭವಿಷ್ಯದಲ್ಲಿ ನೀವು ಮಾಡಬೇಕಿರುವ ಕೆಲಸಗಳನ್ನು ಯಾರೊಂದಿಗೂ ಹಂಚಬೇಡಿ.ನಿಮಗೆ ಅವಮಾನವಾದ ವಿಷಯ ಯಾರಿಗೂ ಹೇಳಬಾರದು. ಜಗತ್ತಿನಲ್ಲಿ ಸಾವಿರಾರು ಸಮಸ್ಯೆಗಳಿವೆ ಆದರೆ ಅದರ ನಿವಾರಣೆಯ ಉಪಾಯವೇ ಎಷ್ಟೋ ಜನರಿಗೆ ಗೊತ್ತೇ ಇಲ್ಲ ನೀವು ಇನ್ನೊಬ್ಬರ ಬಗ್ಗೆ ಹೆಚ್ಚು ಮಾತನಾಡುವುದನ್ನು ಬಿಟ್ಟುಬಿಡಿ.

ಅದರ ಬದಲಿಗೆ ಇನ್ನೊಬ್ಬರೊಂದಿಗೆ, ಮಾತನಾಡುವುದನ್ನು ಕಲಿತುಕೊಳ್ಳಿ ಆಗ ಎಲ್ಲ ಸಮಸ್ಯೆಗಳು ಮಾಯವಾಗುತ್ತದೆ.ಜೀವನದಲ್ಲಿ ಖುಷಿಯಾಗಿ ಇರಬೇಕು, ಬಂದಂತೆ ಬದುಕಬೇಕು, ನುಡಿದಂತೆ ನಡೆಯಬೇಕು ಗೆದ್ದರೂ ಬಾಗಬೇಕು ನಮ್ಮ ವಾದ ಸರಿ ಇದ್ದರೂ ಸುಮ್ಮನಿರಬೇಕು ನಮ್ಮ ತಪ್ಪು ಇಲ್ಲದೆ ಇದ್ರು ಮನಸ್ಸಿನಲ್ಲಿ ನೋವಿದ್ದರೂ ಮುಖದಲ್ಲಿ ಮಂದಹಾಸವಿರಬೇಕು ಸೋತರು, ಮತ್ತೊಮ್ಮೆ ಪ್ರಯತ್ನಿಸಬೇಕು ನಿಮ್ಮ ಪರವಾದ ದಿನ ಬಂದೆ ಬರುತ್ತದೆ.

ಬದುಕೆಂಬುದು ಗಾಳಿಪಟ ಇದ್ದಂತೆ ಸೂತ್ರವೆಂಬುವುದು ನಮ್ಮವರೆಂಬ ಅತೀ ನಂಬಿಕೆಯಲ್ಲಿ ಮತ್ತೊಬ್ಬರ ಕೈಯಲ್ಲಿ ಇಟ್ಟಾಗ ಅವರಿಗೆ ಬೇಕಾದಂತೆ ಕುಣಿಸಿ, ಕಡೆಗೆ ಸಂಬಂಧ ಎನ್ನುವ ದಾರವನ್ನೇ ತುಂಡರಿಸಿಬಿಡುತ್ತಾರೆ.ದುಃಖದ ಬಗ್ಗೆ ಯೋಚಿಸುತ್ತಿದ್ದರೆ ಸದಾ ದುಃಖಿಯಾಗಿಯೇ ಉಳಿಯುತ್ತೀರಾ ಸುಖ ಸಂತೋಷಗಳನ್ನು ಧ್ಯಾನಿಸುತ್ತಿದ್ದರೆ ಮುಂದೆ ಸುಖವಾಗಿ ಬಾಳುತ್ತೀರಾ ಯಾಕಂದ್ರೆ ಮನಸ್ಸು ಸದಾ ಯಾವುದರ ಬಗ್ಗೆ ಧ್ಯಾನಗೊಳ್ಳುವುದೊ ಅದೇ ಸಕ್ರಿಯವಾಗುವುದು.

ಪ್ರೇಮ ತುಂಬಿರುವ ಕಣ್ಣುಗಳು ಶ್ರದ್ಧೆಯಿಂದ ಬಾಗಿರುವ ಶಿರ ಸಹಾಯಕ್ಕೆ ಸದಾ ಸಿದ್ಧವಿರುವ ಕೈಗಳು ಸನ್ಮಾರ್ಗದಲ್ಲಿ ನಡೆಯುವ ಕಾಲುಗಳು ಇವುಗಳು ಪರಮಾತ್ಮನಿಗೆ ಅತಿ ಪ್ರಿಯವಾದ ಅಂಶಗಳು ಅನ್ನೋದನ್ನ ನಾವು ಮರೆಯಬಾರದು.ನೀವು ಎಲ್ಲಾ ವಿಷಯದಲ್ಲೂ ಸೋತಾಗ ದಿಕ್ಕೆ ಕಾಣದಾಗ ಪರಮಾತ್ಮ ನಿಮಗೆ ಮತ್ತೊಂದು ಬಾಗಿಲು ತೆರೆಯುವವರೆಗೆ ಅವನ ಮೇಲೆ ನಂಬಿಕೆ ಇರಲಿ ಯಾಕಂದ್ರೆ ಭಗವಂತನನ್ನು ನಂಬಿ ಕೆಟ್ಟವರಿಲ್ಲ.ನಾವು ಮತ್ತೊಬ್ಬರ ಭಾಗ್ಯವನ್ನು ಬದಲಿಸಲು ಆಗದೆ ಇರಬಹುದು.

ಆದರೆ ಅವರಿಗೆ ಒಳ್ಳೆಯ ಮಾರ್ಗದರ್ಶನವನ್ನಾದರೂ ಮಾಡಬಹುದು. ಅವಕಾಶ ಸಿಕ್ಕಾಗ ಸ್ವಾರ್ಥಿಗಳಾಗಬೇಡಿ ಸಾರಥಿಗಳಾಗಿ ಅಹಂಕಾರದ ಕುದುರೆಯೇರಿ ಬಂದವರಿಗೆ ಪರಿಚಿತರು ಕೂಡ ಅಪರಿಚಿತರಂತೆಯೇ ಕಾಣುತ್ತಾರೆ. ಕುದುರೆಯಿಂದ ಕೆಳಗೆ ಬಿದ್ದ ಮೇಲೆ ಅವರ ಮುಂದೆ ಸಹಾಯಕ್ಕಾಗಿ ಕೈ ಚಾಚುತ್ತಾರೆ.ವ್ಯಕ್ತಿಯ ನಾಲಿಗೆಯಿಂದ ಹೊರಡುವ

ಮಾತುಗಳು ಆಕಾಶಕ್ಕೆ ರಂಗು ಚೆಲ್ಲುವ ಕಾಮನಬಿಲ್ಲಿನಂತೆ ಇರಬೇಕೇ ಹೊರತು ಕ್ಷಣ ಕ್ಷಣಕ್ಕೆ ಬಣ್ಣ ಬದಲಿಸುವ ಊಸರವಳ್ಳಿಯ ತರಹ ಇರಬಾರದು. ಹಣದ ಅಪೇಕ್ಷೆ ಪಡದೆ ನಿಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ಮಾಡಿ ಹಣ ಹುಡುಕಿಕೊಂಡು, ನಿಮ್ಮಲ್ಲಿಯೇ ಬರುತ್ತದೆ. ಇಡೀ ವಿಶ್ವವೇ ನಿಮ್ಮ ವಿರುದ್ಧ ನಿಂತರು ನೀವು ಒಬ್ಬರೇ ನಿಲ್ಲುವ ಧೈರ್ಯ ನಿಮಗೆ ಇರಲಿ.

Leave a Comment