ನೀವು ಸೋಮವಾರ ಹುಟ್ಟಿದಲ್ಲಿ ಈ ವಿಡಿಯೋ ನಿಮಗಾಗಿ ತಪ್ಪದೇ ನೋಡಿ.. 

0

ಸ್ನೇಹಿತರೇ ಪ್ರತಿಯೊಬ್ಬರಿಗೂ ನಾವು ಯಾವ ದಿನ ಹುಟ್ಟಿದ್ದೀವಿ? ಜಾತಕದಲ್ಲಿ ನಾವು ಹುಟ್ಟಿದ ದಿನದ ಬಗ್ಗೆ ಯಾವ ರೀತಿಯಾಗಿ ವಿಶೇಷಗಳಿವೆ ಎಂದು ತಿಳಿಯಲು ಬಹಳಷ್ಟು ಕುತೂಹಲವಿರುತ್ತದೆ. ನಾವು ಹುಟ್ಟಿದಂತಹ ದಿನ, ಸಮಯ ನಮ್ಮ ಭವಿಷ್ಯವನ್ನು ತಿಳಿಸುತ್ತದೆ. ನಮ್ಮ ಜಾತಕದಲ್ಲಿ ಮುಂದೆ ಏನಾಗುತ್ತೀವಿ ಎಂದು ತಿಳಿಯಬೇಕಾದರೇ ನಾವು ಯಾವ ದಿನ, ಯಾವ ಸಮಯದಲ್ಲಿ ಹುಟ್ಟೀದ್ದೀವಿ ಎಂಬುದನ್ನ ತಿಳಿದುಕೊಳ್ಳುವುದು ಬಹಳಷ್ಟು ಮುಖ್ಯ.

ಈ ಲೇಖನದಲ್ಲಿ ಸೋಮವಾರ ಹುಟ್ಟಿದವರ ಭವಿಷ್ಯ ಹೇಗಿದೆ ಎಂದು ತಿಳಿಸಿಕೊಡುತ್ತೇವೆ.
ಸೋಮವಾರ ಹುಟ್ಟಿದವರ ವ್ಯಕ್ತಿಗಳ ಲಕ್ಕಿ ನಂಬರ್ 7 ಆಗಿದೆ. ಇವರು ಚಿತ್ತ ಪ್ರಶಾಂತವಾಗಿ ಇರುತ್ತಾರೆ. ಏಕೆಂದರೆ ಇವರಿಗೆ ಚಂದ್ರನ ಪ್ರಭಾವ ಅಧಿಕವಾಗಿ ಇರುತ್ತದೆ. ಚಂದ್ರನ ರೀತಿಯಂತೆ ಶಾಂತ ರೀತಿಯಲ್ಲಿ ಇರುವಂತಹ ಇವರು ಬಹಳಷ್ಟು ನಿಧಾನವಾಗಿ ಯೋಚಿಸಿ, ಆಲೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.

ಅದೇ ರೀತಿ ನೋಡಲು ಸ್ವಲ್ಪ ತಾಳ್ಮೆ ಎನಿಸಿದರೂ ಮನಸ್ಸಿನ ಒಳಗಡೆ ತುಂಬ ಕೋಪವಿರುತ್ತದೆ. ಇವರು ಹೆಚ್ಚಾಗಿ ಕೋಪ ಮಾಡಿಕೊಳ್ಳುವುದಿಲ್ಲ, ಒಂದು ವೇಳೆ ಕೋಪ ಮಾಡಿಕೊಂಡರೇ ಅವರನ್ನು ಸಮಾಧಾನ ಮಾಡುವುದು ಬಹಳ ಕಷ್ಟ. ಸೋಮವಾರ ಹುಟ್ಟಿದವರು ಅಧಿಕ ಪರಿಶ್ರಮದಿಂದ ಮುಂದೆ ಬರುತ್ತಾರೆ ಹಾಗೂ ಇವರ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆದುಕೊಳ್ಳುತ್ತಾರೆ.

ವ್ಯಾವಹಾರಿಕವಾಗಿ ಎಲ್ಲರ ಜೊತೆ ಮಾತನಾಡುತ್ತಾರೆ ಆದರೇ ಇವರು ಇಷ್ಟಪಟ್ಟಂತಹ ವ್ಯಕ್ತಿಗಳೊಂದಿಗೆ ಬಹಳಷ್ಟು ತುಂಟತನದಿಂದ ವರ್ತನೆ ಮಾಡುತ್ತಾರೆ. ಇವರು ಸದಾ ನಗುತ್ತಿರುವ ಸ್ವಭಾವದವರಾಗಿರುವ ಇವರು ತಮ್ಮ ಸುತ್ತಮುತ್ತ ಇರುವ ವ್ಯಕ್ತಿಗಳನ್ನು ಸದಾ ಕಾಲ ಸಂತೋಷವಾಗಿರುವಂತೆ ನೋಡಿಕೊಳ್ಳುತ್ತಾರೆ. ಕೆಲಸದ ವಿಷಯಕ್ಕೆ ಬಂದರೇ ಬಹಳಷ್ಟು ಕಟ್ಟುನಿಟ್ಟು ಎಂದು ಹೇಳಬಹುದು.

ಚಂಚಲತೆ ಇವರಲ್ಲಿ ಇಲ್ಲ. ದೃಢವಾಗಿ ನಿಂತು ಕೆಲಸವನ್ನು ಮಾಡುತ್ತಾರೆ. ತಮ್ಮ ಸಹೋದ್ಯೋಗಿಗಳಲ್ಲೂ ಅವರು ಕೂಡ ಅದನ್ನೇ ಬಯಸುತ್ತಾರೆ. ತಮಗೆ ತಿಳಿದಿಲ್ಲವೆಂಬುದನ್ನು ಬೇರೆಯವರಿಂದ ಕಲಿಯುತ್ತಾರೆ, ಅದೇ ರೀತಿ ತಮಗೆ ಗೊತ್ತಿರುವುದನ್ನ ಬೇರೆಯವರಿಗೆ ತಿಳಿಸುವುದಕ್ಕೆ ಯಾವ ರೀತಿಯ ಅನಿಸಿಕೆಯನ್ನ ವ್ಯಕ್ತಿಪಡಿಸುವುದಿಲ್ಲ. ಯಾರೇ ಒಬ್ಬ ವ್ಯಕ್ತಿಯನ್ನು ಒಂದು ಬಾರಿ ನೋಡಿದರೇ ಸಾಕು,

ಅವರನ್ನು ಬಹಳಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಇವರು ಯೋಚಿಸುವುದು ಬಹಳಷ್ಟು ವಿಭಿನ್ನ. ಎಲ್ಲರಿಗಿಂತ ಭಿನ್ನವಾಗಿ ಯೋಚಿಸಿ, ಬಹಳಷ್ಟು ಮುಂದೆ ನಿಲ್ಲುತ್ತಾರೆ. ಇನ್ನು ಪ್ರೀತಿಯ ವಿಚಾರಕ್ಕೆ ಬಂದರೇ ಇವರು ಬಹಳಷ್ಟು ಅದೃಷ್ಠವಂತರು ಏಕೆಂದರೆ ನೀವು ಯಾರನ್ನು ಇಷ್ಟಪಡುತ್ತೀರ ಅವರನ್ನು ಆದಷ್ಟು ಬೇಗ ಸುಖದ ಜೀವನವನ್ನು ಸಾಗಿಸುತ್ತೀರಿ.

ನಿಮ್ಮ ಸಂಗಾತಿಯು ನಿಮ್ಮನ್ನು ಪ್ರತಿ ಹೆಜ್ಜೆಯಲ್ಲೂ ಹಿಂಬಾಲಿಸುತ್ತಾರೆ. ನೀವು ಅಂದುಕೊಂಡ ರೀತಿಯಲ್ಲಿ ನಿಮ್ಮ ಜೊತೆ ನಿಂತು ನಿಮಗೆ ಸಹಾಯವನ್ನು ಮಾಡುತ್ತಾರೆ ಮತ್ತು ನಿಮಗೆ ಬೆಂಬಲವಾಗಿ ನಿಲ್ಲುತ್ತಾರೆ. ವ್ಯಾಪಾರ ವ್ಯವಹಾರದಲ್ಲೂ ನಿಮಗೆ ಸಹಾಯವನ್ನು ಮಾಡುತ್ತಾರೆ. ನಿಮ್ಮ ಎಲ್ಲಾ ನಿರ್ಧಾರಗಳಿಗೂ ನಿಮಗೆ ಬೆನ್ನೆಲುಬಾಗಿರುತ್ತಾರೆ.

ಶಿಕ್ಷಣದ ವಿಚಾರಕ್ಕೆ ಬಂದರೆ ಉತ್ತಮ ಶಿಕ್ಷಣ ನಿಮ್ಮದಾಗಲಿದೆ. ವಿದೇಶ ಪ್ರಯಾಣ, ವಿದೇಶದಲ್ಲಿ ಓದುವ ಅವಕಾಶ ನಿಮ್ಮದಾಗಲಿದೆ. ಇನ್ನು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬಹಳಷ್ಟು ಉಚಿತ. ಚೆನ್ನಾಗಿ ಓದಿ ಎಲ್ಲರ ಮೆಚ್ಚುಗೆಯನ್ನು ಗಳಿಸುತ್ತೀರಿ. ಕೆಲಸದಲ್ಲಿ ಇರುವ ವ್ಯಕ್ತಿಗಳಿಗೆ ಬಹಳಷ್ಟು ಒಳ್ಳೆಯ ಕೆಲಸಗಳು ದೊರೆಯುತ್ತದೆ. ನಿಮ್ಮ ಸಹೋದ್ಯೋಗಿಗಳೊಂದಿಗೆ

ಉತ್ತಮ ಬಾಂಧವ್ಯವನ್ನು ಹೊಂದಿದ್ದೀರಿ ಹಾಗೆಯೇ ಅವರೊಂದಿಗೆ ಬಹಳಷ್ಟು ಮೆಚ್ಚುಗೆಯನ್ನು ಪಡೆಯಲಿದ್ದೀರಿ. ನಿಮ್ಮಲ್ಲಿ ಇರುವಂತಹ ಸಹಾಯ ಮನೋಭಾವನೆಯಿಂದ ಎಲ್ಲರೂ ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ. ಕೆಲಸದ ವಿಚಾರದಲ್ಲಿ ಕಟ್ಟುನಿಟ್ಟು ಆಗಿರುವುದರಿಂದ ಎಲ್ಲರೂ ನಿಮ್ಮನ್ನು ಕಾಡಿಸುತ್ತಾರೆ. ಆದರೇ ಎಂದಿಗೂ ಕೆಲಸದ ವಿಚಾರದಲ್ಲಿ ನಿಮ್ಮನ್ನು ಕಡಿಮೆ ಮಾಡುವುದಿಲ್ಲ. ಎಲ್ಲರೂ ಮೆಚ್ಚಿ ಉನ್ನತ ಸ್ಥಾನದ ಬಡ್ತಿಯನ್ನು ಪಡೆಯಲಿದ್ದೀರಿ. ಹಲವಾರು ವ್ಯಕ್ತಿಗಳಿಗೆ ಸರ್ಕಾರಿ ಕೆಲಸಗಳು ಸಿಗುತ್ತದೆ.

Leave A Reply

Your email address will not be published.