ಜೀವನದಲ್ಲಿ ಯಾವುದು ಮುಖ್ಯ?

0

ಜೀವನದಲ್ಲಿ ಯಾವುದು ಮುಖ್ಯ? ಒಬ್ಬ ವ್ಯಕ್ತಿ ಪ್ರತಿನಿತ್ಯ ಕೆಲಸ ಕೆಲಸ ಎಂದು ಹೆಂಡತಿ ಮಕ್ಕಳಿಗೆ ಸಮಯವನ್ನು ಕೊಡದೆ ದುಡಿದು ವ್ಯಕ್ತಿ ಸಾಕಷ್ಟು ಹಣವನ್ನು ಗಳಿಸುತ್ತಾನೆ. ಪ್ರತಿಷ್ಠಿತ ಜಾಗದಲ್ಲಿ ಮನೆಗಳನ್ನು ಕಟ್ಟಿಸಿದ ಮೂರು ಪೀಳಿಗೆಯಾದರೂ ಕೂತು ತಿನ್ನುವಷ್ಟು ಸಂಪತ್ತನ್ನು ಗಳಿಸಿದ. ವಯಸ್ಸು ಕೂಡ 60 ದಾಟುತ್ತಾ ಬಂದಿತು ಕೊನೆಗೊಂದು ದಿನ ಯೋಚಿಸಿದ ಸಾಕು ದುಡಿದದ್ದು ಇನ್ನೂ ದುಡಿಯಬಾರದು ನಾಳೆಯಿಂದಲೇ ಹೆಂಡತಿ ಮಕ್ಕಳಿಗೆ ಸಮಯ ಕೊಡಬೇಕು

ಅವರೊಂದಿಗೆ ಖುಷಿಯಾಗಿ ಕಾಲ ಕಳೆಯಬೇಕು ಎಂದು ಕೊಂಡು ರಾತ್ರಿ ಹಾಸಿಗೆಯಲ್ಲಿ ಮಲಗಿದ. ಮಲಗಿದಾಗ ಯಾರೋ ಬಂದು ಬಾಗಿಲು ತಟ್ಟಿದಂತಾಯಿತು ಎದ್ದು ಬಾಗಿಲು ತೆರೆಯುತ್ತಿದ್ದಂತೆ ಒಳಕ್ಕೆ ನುಗ್ಗಿ ಬಂದ ಒಬ್ಬ ದೊಡ್ಡ ವ್ಯಕ್ತಿ. ಯಾರಪ್ಪಾ ನೀನು? ಇಲ್ಲಿಗೆ ಯಾಕೆ ಬಂದೆ ಎಂದು ಪ್ರಶ್ನಿಸಿದ ಆಗ ನಾನು ಯಮರಾಜ!! ನಿನ್ನ ಆಯಸ್ಸು ಮುಗಿದಿದೆ ನಿನ್ನನ್ನು ಕರೆದೊಯ್ಯಲು

ಬಂದಿದ್ದೇನೆ ಎಂದ ಆಗ ಆ ವ್ಯಕ್ತಿ ಯಮರಾಜನಿಗೆ ಹೇಳಿದ ನಾನು ಈಗಷ್ಟೇ ದುಡಿಯುವುದನ್ನು ನಿಲ್ಲಿಸಿದ್ದೇನೆ. ಇನ್ನು ಮುಂದೆ ಕುಟುಂಬದ ಜೊತೆ ಹಾಯಾಗಿ ಕಾಲ ಕಳೆಯಬೇಕು, ಅವರನ್ನು ಸಂತೋಷವಾಗಿಡಬೇಕು ಎಂದು ತೀರ್ಮಾನಿಸಿದ್ದೇನೆ. ಇಲ್ಲ ನಾನು ಈಗಲೇ ಬರುವುದಿಲ್ಲ ಎಂದ. ಯಮರಾಜ ಹೇಳಿದ ಹಾಗೆಲ್ಲ ಬರುವುದಿಲ್ಲ ಹೇಳಿದರೆ ಆಗುವುದಿಲ್ಲ ಬರಲೇಬೇಕು,

ನಿನ್ನ ಸಮಯ ಮುಗಿದಿದೆ ಆ ವ್ಯಕ್ತಿ ಹಠಕ್ಕೆ ಬಿದ್ದ, ನನ್ನ ದುಡಿಮೆಯ ಸಂಪತ್ತಿನಲ್ಲಿ ಅರ್ಧವನ್ನು ಬೇಕಾದರೆ ತೆಗೆದುಕೋ ನನ್ನನ್ನು ಇನ್ನಷ್ಟು ವರ್ಷಗಳ ಕಾಲ ಇಲ್ಲಿಯೇ ಇರಲು ಬಿಟ್ಟುಬಿಡು ನಾನು ನನ್ನ ಕುಟುಂಬದವರಿಗೆ ಆಸ್ತಿ ಮಾಡಿಟ್ಟಿದ್ದೇನೆ ಹೊರತು ಅವರಿಗೆ ಸಂತೋಷವನ್ನು ಕೊಟ್ಟಿಲ್ಲ ಅವರಿಗಾಗಿ ನನ್ನ ಸಮಯವನ್ನು ಸಹ ಕೊಟ್ಟಿಲ್ಲ ಎಂದು ಹೇಳಿದ.

ಯಮರಾಜ ಹೇಳಿದ, ನೀನು ಅರ್ಧ ಅಲ್ಲ ಪೂರ್ತಿ ಕೊಡುತ್ತೇನೆಂದರೂ ಬಿಡುವುದಿಲ್ಲ ನೀನು ಬರಲೇಬೇಕು ನಾನು ಕರೆದೊಯ್ಯಲೇಬೇಕು. ಹತಾಶನಾದ ಆ ವ್ಯಕ್ತಿ ಕೊನೆಗೆ ಮೂರು ದಿನಗಳಾದರೂ ನನಗೆ ಕೊಡು ನನ್ನ ಪರಿವಾರವನ್ನು ಒಂದು ಕೊನೆಯ ಸಾರಿ ಖುಷಿಯಿಂದ ನೋಡುವ ಆಸೆ ಮತ್ತೊಮ್ಮೆ ಬೇಡಿಕೊಂಡ. ಯಮರಾಜ ಹೇಳಿದ ಇಲ್ಲ ಸಾಧ್ಯವೇ ಇಲ್ಲ ಎನ್ನುವಷ್ಟುವರಲ್ಲಿ

ಆ ವ್ಯಕ್ತಿ ಹೋಗಲಿ ಒಂದು ನಿಮಿಷವಾದರೂ ಕೊಡು ಎದು ಯಮನ ಉತ್ತರಕ್ಕೆ ಕಾಯದೆ ತುಂಬಾ ಹತ್ತಿರದಲ್ಲಿದ್ದ ಮೇಜಿನ ಮೇಲಿದ್ದ ನೋಟುಪುಸ್ತಕವನ್ನು ತೆರೆದು” ಮುಂದಿನ ಕ್ಷಣ ನಮ್ಮದಲ್ಲ ಈಗ ನಿಮಗೆ ಸಿಕ್ಕಿರುವ ಸಮಯವೇ ನಿಮ್ಮದು ಅದನ್ನು ಅದ್ಭುತವಾಗಿ ಕಳೆಯಿರಿ, ಪ್ರತಿಕ್ಷಣವನ್ನು ಜೀವಿಸಿ ನಿಮ್ಮ ಪರಿವಾರ ಸೇರಿದಂತೆ ಸುತ್ತಮುತ್ತಲಿರುವವರನ್ನು ಸಂತೋಷವಾಗಿಟ್ಟು ನೀವು ಸಂತೋಷದಿಂದ ಜೀವಿಸಿ”

ಸಂಪತ್ತೊಂದು ಸಂತೋಷವಲ್ಲ ಈ ಬದುಕಿನಲ್ಲಿ ಪ್ರೀತಿ ಒಂದೇ ಜೀವಂತ ಮತ್ತು ಮುಖ್ಯವಾದದ್ದು. ಎಂದು ಪುಸ್ತಕದಲ್ಲಿ ಬರೆದು ಯಮರಾಜನ ಕರೆಗೆ ಆ ವ್ಯಕ್ತಿ ಶರಣಾಗುವ ಪರಿಸ್ಥಿತಿ ಬಂತು. ಇರುವಷ್ಟು ದಿನ ಜೀವನ ಇದೆ ಅಷ್ಟೇ. ವ್ಯಾಯಾಮ ವಾಕಿಂಗ್ ಡಯೆಟ್ ಮಾಡಿದ್ದರೂ ಉಳಿಯಲ್ಲ, ಪೌಷ್ಠಿಕಾಂಶ ಇರುವ ಶುದ್ಧ ರುಚಿ ಆಹಾರ ತಿಂದರೂ ಬದುಕಲ್ಲ.

ಹೆಸರು ಕೀರ್ತಿಯಲ್ಲಿ ರಾರಾಜಿಸುತ್ತಿದ್ದರು ಬಿಡಲ್ಲ ಅಭಿಮಾನಿಗಳ ಹೃದಯದಲ್ಲಿದ್ದರೂ ಕರುಣೆ ಇಲ್ಲ ಹಣ ಸಿರಿವಂತಿಕೆ ಕಾವಲಾಗಿ ನಿಂತರೂ ಪ್ರಯೋಜನವಿಲ್ಲ ಅಪಾರ ಬಂಧು ಬಳಗ ಸ್ನೇಹಿತರ ಹಾರೈಕೆ ಇದ್ದರೂ ಸಮಯದ ವಿಧಿ ಬೆನ್ನತ್ತಿದಾಗ ಎಲ್ಲವೂ ವ್ಯರ್ಥ. ಪಡೆದಷ್ಟೇ ಆಯುಷ್ಯ ನಡೆದಷ್ಟೇ ಜೀವನ ಜೀವ ಆ ಜೀವದ ಮಧ್ಯೆ ಅಜೀವತೆಯನ್ನು ಎದುರಿಸಲು ಸಿದ್ಧರಾಗಬೇಕು. ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು.

Leave A Reply

Your email address will not be published.