ದೀಪಾವಳಿ ಹಬ್ಬಕ್ಕಿಂತ ಮುಂಚೆ ಇವುಗಳನ್ನು ಮನೆಯಿಂದ ಹೊರಹಾಕಿ

0

ಸ್ನೇಹಿತರೇ ದೀಪಾವಳಿ ಹಬ್ಬಕ್ಕೆ ಮನೆ ಕ್ಲೀನ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದೀರಾ? ಹಾಗಾದರೇ ಈ ವಸ್ತುಗಳನ್ನು ಮನೆಯಿಂದ ಹೊರಹಾಕಲು ಮರೆಯಬೇಡಿ ಎಂಬ ಮಾಹಿತಿಯನ್ನು ಮತ್ತು ದೀಪಾವಳಿ ಹಬ್ಬದಂದು ಮಹಾಲಕ್ಷ್ಮಿ ದೇವಿಯನ್ನು ಹೇಗೆ ಮನೆಯಲ್ಲೇ ಸ್ಥಿರವಾಗಿ ಇಟ್ಟುಕೊಳ್ಳಬೇಕೆಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ದೀಪಾವಳಿ

ಹಬ್ಬದಂದು ಮನೆಯನ್ನು ಸ್ವಚ್ಛಗೊಳಿಸುವಾಗ ನಾವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ದೀಪಾವಳಿಯ ಉತ್ಸವವು 5 ದಿನಗಳವರೆಗೆ ಇರುತ್ತದೆ. ಧನತ್ರಯೋದಶಿಯಂದು ಚಿನ್ನ, ಬೆಳ್ಳಿ ನಾಣ್ಯಗಳನ್ನು ಖರೀದಿಸಬೇಕು. ಈ ಹಬ್ಬವನ್ನು ಶುಚಿತ್ತ್ವದ ಹಬ್ಬವೆಂದು ಪರಿಗಣಿಸಲಾಗುತ್ತದೆ. ಮನೆಯ ಮೂಲೆ ಮೂಲೆಯನ್ನ ಸ್ವಚ್ಛವಾಗಿ ಶುಚಿಗೊಳಿಸುವುದು.

ಜನರು ಹಬ್ಬದ ಹದಿನೈದು ದಿನಗಳ ಮುಂಚೆಯೇ ಮನೆಯನ್ನ ಸ್ವಚ್ಛಗೊಳಿಸಲು ಪ್ರಾರಂಭಿಸುತ್ತಾರೆ. ಮನೆಗಳಿಗೆ ಬಣ್ಣವನ್ನು ಬಳಿಯಲಾಗುತ್ತದೆ ಮತ್ತು ಅಲಂಕಾರಗಳಿಗೆ ವಿಶೇಷ ಗಮನವನ್ನು ನೀಡಲಾಗುತ್ತದೆ. ಕೆಲವರು ತಮ್ಮ ಮನೆಗೆ ಬಣ್ಣವನ್ನು ಬಳಸುತ್ತಾರೆ. ಇನ್ನು ಕೆಲವರು ಹೊಸ ಹೊಸ ವಸ್ತುಗಳನ್ನು ಖರೀದಿಸುತ್ತಾರೆ. ಕೆಲವರ ಮನೆಯಲ್ಲಿ ದೀಪಾವಳಿ ಹಬ್ಬಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುತ್ತಾರೆ.

ಪ್ರತಿಯೊಂದು ಮನೆಯಲ್ಲೂ ಅವರ ಅನುಕೂಲಕ್ಕೆ ತಕ್ಕಂತೆ ದೀಪಾವಳಿ ಹಬ್ಬವನ್ನು ಸಂಭ್ರಮಿಸುತ್ತಾರೆ. ಎಲ್ಲಿ ಶುಚಿತ್ತ್ವ, ಬೆಳಕು, ಸೌಂದರ್ಯ ಎಲ್ಲಿ ಇರುತ್ತದೆಯೋ ಅಲ್ಲಿ ಲಕ್ಷ್ಮಿದೇವಿಯು ಬಂದು ನೆಲೆಸುತ್ತಾಳೆ. ಯಾವ ಭಕ್ತನ ಮನೆಯು ಹೆಚ್ಚು ಸ್ವಚ್ಛವಾಗಿರುತ್ತದೆಯೋ ಅವನು ಲಕ್ಷ್ಮಿದೇವಿಗೆ ಇಷ್ಟವಾಗುತ್ತಾನೆ ಮತ್ತು ಆ ಮನೆಯಲ್ಲ ಲಕ್ಷ್ಮಿದೇವಿಯು ನೆಲೆಸುತ್ತಾಳೆ.

ಈ ವಸ್ತುಗಳನ್ನ ಮನೆಯಿಂದ ದೀಪಾವಳಿಯ ಹಬ್ಬಕ್ಕೆ ಮುಂಚೆಯೇ ತೆಗೆದು ಹಾಕಿರಿ. ಮೊದಲನೆಯದಾಗಿ ಒಡೆದ ಕನ್ನಡಿಯನ್ನ ಮನೆಯಿಂದ ಹೊರಹಾಕಬೇಕು. ವಾಸ್ತುಪ್ರಕಾರ ಇದನ್ನು ದೊಡ್ಡ ದೋಷ ಎಂದು ಪರಿಗಣಿಸಲಾಗುತ್ತದೆ. ಈ ದೋಷದಿಂದಾಗಿ ನಕಾರಾತ್ಮಕ ಶಕ್ತಿಯು ಮನೆಯಲ್ಲಿ ಸಕ್ರಿಯವಾಗಿರುತ್ತದೆ. ಕುಟುಂಬದ ಸದಸ್ಯರಲ್ಲಿ ಮಾನಸಿಕ ಒತ್ತಡವಿರುತ್ತದೆ.

ಇದೇ ಕಾರಣಕ್ಕಾಗಿ ಜಗಳಗಳು, ಘರ್ಷಣೆಗಳು ನಡೆಯುತ್ತಿರುತ್ತದೆ. ಆದ್ದರಿಂದ ನಿಮ್ಮ ಮನೆಯಲ್ಲಿ ಕನ್ನಡಿಯ ಸಣ್ಣ ಮೂಲೆಯೂ ಮುರಿದಿದ್ದರೇ ಅದನ್ನ ಮನೆಯಿಂದ ಹೊರಗಡೆ ಎಸೆಯಿರಿ. ಎರಡನೇಯದಾಗಿ ವೈವಾಹಿಕ ಜೀವನದಲ್ಲಿ ಸಂತೋಷ, ಶಾಂತಿ ಬಹಳ ಮುಖ್ಯ. ಮಲಗುವ ಮಂಚ ಮುರಿದಿದ್ದರೇ ಗಂಡ ಹೆಂಡತಿಯ ನಡುವೆ ಗಲಾಟೆ ಶುರುವಾಗುತ್ತದೆ.

ಕೆಲವರು ಮಂಚ ಸದ್ದು ಮಾಡುತ್ತಿದ್ದರೂ ಗಮನ ಅರಿಸುವುದಿಲ್ಲ. ಪತಿ ಪತ್ನಿ ಮಲಗುವ ಮಂಚ ಸರಿಯಿಲ್ಲದಿದ್ದರೇ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮತ್ತು ವೈಮನಸ್ಸುಗಳು ಉಂಟಾಗುತ್ತದೆ. ಕ್ರಮೇಣ ಅವರ ಸಂಬಂಧವು ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಚಿಕ್ಕ ಚಿಕ್ಕ ವಿಷಯಗಳಿಗೆ ಜಗಳ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಅಂತಹ ವಾತಾವರಣ ಸೃಷ್ಠಿಯಾದರೇ ನೀವು ನಿಮ್ಮ ಮಂಚವನ್ನು ಬದಲಾಯಿಸಿ ಇಲ್ಲವೇ ಅದನ್ನು ರಿಪೇರಿ ಮಾಡಿಸಿ ಬಳಸಿರಿ.

ಮೂರನೇಯ ವಿಷಯ ಗಡಿಯಾರವು ಬಹಳ ಮುಖ್ಯ. ನಿಂತ ಗಡಿಯಾರವು ನಮಗೆ ಕೆಟ್ಟ ಸಮಯವನ್ನು ತರುತ್ತದೆ. ಗಡಿಯಾರವು ನಮ್ಮ ಕುಟುಂಬದ ಪ್ರಗತಿಯನ್ನು ನಿರ್ಧರಿಸುತ್ತದೆ. ನಿಮ್ಮ ಮನೆಯಲ್ಲಿ ಗಡಿಯಾರ ಸರಿಯಾಗಿ ಕೆಲಸ ಮಾಡದೇ ಇದ್ದರೇ ಅಥವಾ ನಿಂತು ಹೋಗಿದ್ದರೇ ನಿಮ್ಮ ಕುಟುಂಬ ಸದಸ್ಯರು ಕೆಲಸ ಕಾರ್ಯಗಳ ವಿಷಯದಲ್ಲಿ ಅಡಚಣೆಯನ್ನು ಅನುಭವಿಸುತ್ತಾರೆ

ಮತ್ತು ನಿಗಧಿತ ಸಮಯದಲ್ಲಿ ಕೆಲಸ ಕಾರ್ಯಗಳು ಪೂರ್ಣಗೊಳ್ಳುವುದಿಲ್ಲ. ನಾಲ್ಕನೇಯದಾಗಿ ನಿಮ್ಮ ಮನೆಯಲ್ಲಿ ಒಡೆದ ಚಿತ್ರ ಅಥವಾ ಫೋಟೋವಿದ್ದರೇ ಅದನ್ನು ಕೂಡ ತಕ್ಷಣ ತೆಗೆದು ಹಾಕಬೇಕು. ಚಿತ್ರಗಳು ನಮ್ಮ ಜೀವನದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ ವಾಸ್ತುವಿನ ಪ್ರಕಾರ ಮುರಿದ ಚಿತ್ರಗಳು ವಾಸ್ತುದೋಷಗಳನ್ನ ಉಂಟುಮಾಡುತ್ತದೆ.

ಹಾಗೆಯೇ ಮನೆಯಲ್ಲಿ ಮುರಿದ ಎಲೆಕ್ಟ್ರಾನಿಕ್ಸ್ ವಸ್ತುಗಳಿದ್ದರೇ ಅಥವಾ ಒಡೆದ ವಸ್ತುಗಳು ಯಾವುದೇ ಇದ್ದರೂ ಕೂಡ ಮನೆಯಿಂದ ಹೊರಗಡೆ ಹಾಕಬೇಕು. ಜೊತೆಗೆ ಯಾವುದೇ ಚಿತ್ರಕಲೆ ಯಲ್ಲಿ ಒಡೆದಾಡುವ ಚಿತ್ರ ಅಥವಾ ಹಾನಿಕಾರಕ ಚಿತ್ರವಿದ್ದರೇ ಮನೆಯಲ್ಲಿ ಇಡಬಾರದು. ಇದು ನಮ್ಮ ಜೀವನದ ಮೇಲೆ ಬಹಳ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಮನೆಯ ಮುಖ್ಯ ಬಾಗಿಲು ಮುರಿದಿದ್ದರೇ ಅಥವಾ ಸದ್ದು ಮಾಡುತ್ತಿದ್ದರೆ, ಬಿರುಕುಗಳಿದ್ದರೇ ತಕ್ಷಣ ಅದನ್ನು ಸರಿಮಾಡಿಕೊಳ್ಳಿರಿ. ಮನೆಯ ಬಾಗಿಲು ಮುರಿದಿದ್ದರೇ ಅಥವಾ ಸವೆದಿದ್ದರೇ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಮನೆಯ ಪೀಠೋಪಕರಣಗಳು ಉತ್ತಮ ಸ್ಥಿತಿಯಲ್ಲಿರಬೇಕು. ಕೆಟ್ಟಂತಹ ಮಕ್ಕಳ ಆಟದ ಸಾಮಾನುಗಳನ್ನು ಎಸೆಯಬೇಕು.

ಹರಿದ ಬಟ್ಟೆಗಳನ್ನು ಮನೆಯಲ್ಲಿಡಬೇಡಿ. ಹಳೇ ಬೆಡ್ಶೀಟ್ ಗಳು, ಕಿತ್ತುಹೋದ ಚಪ್ಪಲಿಗಳು ಆದಷ್ಟು ಬೇಗ ಹೊರಗೆ ಎಸೆಯಿರಿ. ಮನೆಗೆ ಹೋದ ವರ್ಷ ತಂದ ದೀಪಗಳನ್ನ ತಂದು ಹಚ್ಚ ಬಾರದು. ಹೊಸ ದೀಪಗಳನ್ನು ತಂದು ಹಚ್ಚಬೇಕು. ಅದಷ್ಟು ವಾಸ್ತುದೋಷಗಳನ್ನು ನಿಮ್ಮ ಮನೆಯಿಂದ ಹೋಗಲಾಡಿಸಿ ಮತ್ತು ತುಳಸಿ ಗಿಡವನ್ನು ಮನೆಯಲ್ಲಿ ಇಟ್ಟರೇ ವಾಸ್ತುದೋಷ ನಿವಾರಣೆಯಾಗುತ್ತದೆ.

Leave A Reply

Your email address will not be published.