ಕೆಟ್ಟ ಸ್ತ್ರೀಯರ ಲಕ್ಷಣಗಳು

ನಾವು ಈ ಲೇಖನದಲ್ಲಿ ಕೆಟ್ಟ ಸ್ತ್ರೀಯರ ಲಕ್ಷಣಗಳು ಯಾವುವು ಎಂಬುದು ಈ ಕೆಳಕಂಡಂತಿವೆ : – ಪ್ರತಿಯೊಬ್ಬ ಸ್ತ್ರೀಯು ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುತ್ತಾಳೆ , ಎಂದು ಹೇಳಲು ಸಾಧ್ಯವಿಲ್ಲ . ಹೌದು ಅವರವರ ಮನಸ್ಸಿನ ಆಧಾರದ ಮೇಲೆ ಅವರ ಗುಣ ಸ್ವಭಾವ ಅವರವರ ವೈಯಕ್ತಿಕತ್ವ ಪ್ರತಿಯೊಂದು ಕೂಡ ನಿಂತಿರುತ್ತದೆ .

ಹಾಗೆಂದ ಮಾತ್ರಕ್ಕೆ ಎಲ್ಲರೂ ಕೂಡ ಕೆಟ್ಟವರು ಎಂದು ಹೇಳಲು ಸಾಧ್ಯವಿಲ್ಲ . ಹಾಗಾದರೆ ಯಾವ ಕೆಲವು ಗುಣಲಕ್ಷಣಗಳು ಇದ್ದರೆ , ಅದು ಸ್ತ್ರೀಯರ ಕೆಟ್ಟ ಗುಣಲಕ್ಷಣಗಳು ಅಂದರೆ , ಅದು ಒಳ್ಳೆಯದಲ್ಲ ಎಂದು , ಹೇಗೆ ಹೇಳಬಹುದು . ಆ ಲಕ್ಷಣಗಳು ಯಾವುವು ಎನ್ನುವುದನ್ನು ತಿಳಿಯೋಣ .

ಅದಕ್ಕೂ ಮೊದಲು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಷಯ ಏನೆಂದರೆ , ಪ್ರತಿಯೊಬ್ಬ ಹೆಣ್ಣು ಕೂಡ ಮನೆಯ ಕನ್ನಡಿ ಎಂದು ಹೇಳಿದರೆ ತಪ್ಪಾಗುವುದಿಲ್ಲ . ಮನೆಯಲ್ಲಿ ಯಾವುದೇ ರೀತಿಯ ಕಷ್ಟ , ಸುಖ , ದುಃಖ ಏನೇ ಇರಲಿ , ಅವೆಲ್ಲವನ್ನು ಸಹ ಸರಿಯಾಗಿ ಸಮ ಪ್ರಮಾಣದಲ್ಲಿ ತೆಗೆದುಕೊಂಡು ಎಲ್ಲವನ್ನು ಕೂಡ ನಿಭಾಯಿಸಿಕೊಂಡು ಹೋಗುವವಳಿಗೆ ಹೆಣ್ಣು ಎಂದು ಕರೆದರೆ ತಪ್ಪಲ್ಲ .

ತ್ಯಾಗಮಯಿ ಕರುಣಾಮಯಿ ಎಂಬ ಅರ್ಥವೂ ಕೂಡ ಹೆಣ್ಣಿಗೆ ಇದೆ . ಇಷ್ಟೆಲ್ಲ ಗುಣಗಳನ್ನು ಹೊಂದಿರುವಂತಹ ಹೆಣ್ಣು ಒಂದಷ್ಟು ಸಂದರ್ಭದಲ್ಲಿ ಕೆಲವೊಂದಷ್ಟು ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ . ಹಾಗೇನಾದರೂ ಅವಳು ಪ್ರತಿಯೊಂದು ಸಮಯದಲ್ಲಿಯೂ ಕೂಡ ಹಠ ಮಾಡಿದರೆ , ಈ ಕೆಲಸ ಹೀಗೆ ಆಗಬೇಕು . ನನಗೆ ಈ ವಸ್ತು ಬೇಕೇ ಬೇಕು . ಎಲ್ಲವನ್ನು ಕೂಡ ಹಠ ಮಾಡಿ ಪಡೆದುಕೊಳ್ಳಬಾರದು .

ಹಾಗೇನಾದರೂ ನೀವು ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಹಠವನ್ನು ಮಾಡಿದರೆ , ಆ ಮನೆಯಲ್ಲಿ ಅಭಿವೃದ್ಧಿ , ಯಶಸ್ಸು ಎನ್ನುವುದು ಆಗುವುದಿಲ್ಲ . ಬದಲಿಗೆ ನಿಮ್ಮ ಮನೆಯಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ . ಅದೇ ರೀತಿಯಲ್ಲಿ ಯಾವ ಕೆಲವು ಕೆಟ್ಟ ಗುಣಲಕ್ಷಣಗಳನ್ನು ಹೊಂದಿರುವ ಸ್ತ್ರೀಯರನ್ನು ಕೆಟ್ಟ ಸ್ತ್ರೀ ಎಂದು ಹೇಳಬಹುದು ಎಂಬುದರ ಬಗ್ಗೆ ನೋಡೋಣ ….!

ಗಂಡನ ಮಾತಿಗೆ ಎದುರುತ್ತರ ಕೊಡುವ ಸ್ತ್ರೀ , ಅತಿಯಾಗಿ ಆವೇಶ ಪಡುವ ಸ್ತ್ರೀಯರು , ಅವರಿಗೆ ಸಂತೋಷ ಇರುವುದಿಲ್ಲ . ಅವರ ಜೊತೆಯಲ್ಲಿ ಸುತ್ತಮುತ್ತ ಇರುವವರೆಗೂ ಕೂಡ , ಸಂತೋಷವಾಗಿ ಇರುವುದಕ್ಕೆ ಬಿಡುವುದಿಲ್ಲ . ಪದೇ ಪದೇ ಬಾಯಿಯಲ್ಲಿ ಬೈಗುಳ , ಸ್ನಾನ ಮಾಡದೆ ಕೊಳಕಾಗಿ ಇರುವುದು , ಸೀರೆಯ ಸೆರಗನ್ನು ಸರಿ ಮಾಡಿಕೊಳ್ಳದೆ , ಅಂಗಾಂಗಗಳನ್ನು ತೋರಿಸುವುದು , ಹೀಗೆ ಮಾಡಬಾರದು .

ಮದುವೆಯಾದ ನಂತರ ಗಂಡನನ್ನು ಬಿಟ್ಟು , ಪರ ಪುರುಷರನ್ನು ತಲೆಯೆತ್ತಿ ನೋಡುವ ಸ್ತ್ರೀಯರು , ಪರ ಪುರುಷರ ಜೊತೆ ಸಂಬಂಧವಿರುವ ಸ್ತ್ರೀಯನ್ನು , ಕೆಟ್ಟ ಸ್ತ್ರೀ ಎಂದು ಹೇಳಿದರೆ ತಪ್ಪಲ್ಲ . ಅಲ್ಲಿಯ ಮಾತು ಇಲ್ಲಿ ಇಲ್ಲಿಯ ಮಾತು , ಅಲ್ಲಿ ಹೀಗೆ ಎಲ್ಲ ಕಡೆಯಲ್ಲಿಯೂ ಬೆಂಕಿ ಹಚ್ಚುವ ಸ್ತ್ರೀ , ಸಮಾಜದಲ್ಲಿ ಸಂಸಾರ ಹಾಳು ಮಾಡುವ ಕೆಲಸದಲ್ಲಿ ಮುಂದೆ ಇರುತ್ತಾರೆ .

ಬೇರೆಯವರ ಖುಷಿ ನೆಮ್ಮದಿ ಕಂಡು ಅಸೂಯೆ ಪಡುವ ಸ್ತ್ರೀ , ಯಾವಾಗಲೂ ಹೋಲಿಕೆ ಮಾಡುವ ಸ್ತ್ರೀ , ಯಾವತ್ತಿಗೂ ಖುಷಿಯಾಗಿರಲು ಸಾಧ್ಯವಿಲ್ಲ . ಸ್ತ್ರೀಯು ಅತಿಯಾಗಿ ಅಲಂಕಾರ ಮಾಡಿಕೊಳ್ಳಬಾರದು . ಅತಿಯಾದ ಆವೇಶ ಹಾಗೂ ಅತಿಯಾದ ಕೋಪ ಖಂಡಿತವಾಗಿಯೂ ಕಷ್ಟದ ಪಾಲು ಮಾಡುತ್ತದೆ .

ಸ್ತ್ರೀಗೆ ತಿನ್ನುವ ಯೋಗ ಇದ್ದರೆ , ಮಾತ್ರ ಪುರುಷನು ಸಂಪಾದಿಸುತ್ತಾನೆ . ಸ್ತ್ರೀಯು ಮಾಡಿದ ಪಾಪ ಖಂಡಿತವಾಗಿಯೂ ಪುರುಷನನ್ನು ಹಿಂಬಾಲಿಸುತ್ತದೆ .ಹೀಗೆ ಇಷ್ಟೆಲ್ಲಾ ಕೆಟ್ಟ ಗುಣ ಹೊಂದಿರುವಂತಹ ಸ್ತ್ರೀಯನ್ನು ಕೆಟ್ಟ ಸ್ತ್ರೀ ಅಂತ ಹೇಳಬಹುದು . ಆದ್ದರಿಂದ ಇವೆಲ್ಲವನ್ನೂ ಈಗಲೇ ಸರಿಪಡಿಸಿಕೊಳ್ಳುವುದು ಉತ್ತಮ .

ದಯವಿಟ್ಟು ಗಮನಿಸಿ ಈ ಲೇಖನದಲ್ಲಿ ಕೆಲವು ಕೆಟ್ಟ ಗುಣಲಕ್ಷಣಗಳನ್ನು ಹೊಂದಿರುವ ಸ್ತ್ರೀಯರಿಗೆ ಮಾತ್ರ ಅನ್ವಯಿಸುತ್ತದೆ . ಎಲ್ಲರಿಗೂ ಅಲ್ಲ . ಈ ಲೇಖನದಲ್ಲಿ ಅವರಿಗೆ ಒಂದು ಒಳ್ಳೆಯ ಮಾರ್ಗದಲ್ಲಿ ನಡೆಯುವ ಒಂದು ಒಳ್ಳೆಯ ಮಾರ್ಗ ತೋರಿಸುವ ಉದ್ದೇಶವಾಗಿದೆ .

Leave a Comment