ಮಧುಮೇಹ / ಶುಗರ್ ವಾಸಿಯಾಗೋದಿಲ್ಲಾ

ನಾವು ಈ ಲೇಖನದಲ್ಲಿ ಮಧುಮೇಹ ಅಥವಾ ಶುಗರ್ ವಾಸಿಯಾಗೋದಿಲ್ಲಾ ಎಂದು ಹೇಳುವುದು ಬರೀ ಸುಳ್ಳು ಎಂಬ ವಿಷಯದ ಬಗ್ಗೆ ಇಲ್ಲಿ ಹೇಳಲಾಗಿದೆ. ಒಂದು ಸಲ ಮಧುಮೇಹ ಬಂದರೆ , ಜೀವನವಿಡೀ ಔಷಧಿ ತೆಗೆದುಕೊಳ್ಳಬೇಕು ಎನ್ನುವುದು ಸುಳ್ಳು . ಟೈಪ್ ಒನ್ ಮಧುಮೇಹಕ್ಕೆ ಮಾತ್ರ ಯಾವುದೇ ಕಾರಣಕ್ಕೂ ವಾಸಿಯಾಗುವುದಿಲ್ಲ . ಇದು ನಿಮ್ಮ ಜೀವನ ಶೈಲಿಯ ಆಧಾರದ ಮೇಲೆ ಪ್ರಚೋದಿಸುವ ಖಾಯಿಲೆ ಆಗಿದೆ. 98% ಮಧುಮೇಹ ಇರುವ ಜನರಲ್ಲಿ ಟೈಪ್ ಟು ಮಧುಮೇಹ ಖಾಯಿಲೆ ಆಗಿರುತ್ತದೆ .

ಒಂದು ಖಾರದ ಪುಡಿ ತಿಂದರೂ ಕೂಡ , ಅದು ಶುಗರ್ ಆಗಿ ಪರಿವರ್ತನೆ ಆಗುತ್ತದೆ. ಇನ್ಸುಲಿನ್ ಇಲ್ಲ ಎಂದರೆ , ಅದು ಎನರ್ಜಿ ಆಗಿ ಪರಿವರ್ತನೆ ಆಗುವುದಿಲ್ಲ . ಶುಗರ್ ಆಗಿ ರಕ್ತದಲ್ಲಿ ಓಡಾಡುತ್ತಿರುತ್ತದೆ . ಆದ್ದರಿಂದ ಶುಗರ್ ಹೆಚ್ಚು ಕಡಿಮೆಯಾಗಿ ಓಡಾಡುತ್ತಿರುತ್ತದೆ .ಟೈಪ್ ಒನ್ ಮಧುಮೇಹದಲ್ಲಿ ಪ್ಯಾಂಕ್ರಿಯಾಸಿಸ್‌ಲ್ಲಿ ಇನ್ಸುಲಿನ್ ಉತ್ಪತ್ತಿಯಾಗುವುದಿಲ್ಲ . ಅಥವಾ ಉತ್ಪತ್ತಿಯಾಗುತ್ತಿದ್ದರು ಒಳ್ಳೆಯ ಗುಣಮಟ್ಟ ಇರುವುದಿಲ್ಲ .ಒಳ್ಳೆಯ ಗುಣಮಟ್ಟ ಇದ್ದರೂ ದೇಹ ಗಮನ ಹರಿಸುವುದಿಲ್ಲ .

ಮಧುಮೇಹಕ್ಕೆ ಔಷಧಿ ಇದೆ . ಒಂದು ಸಲ ಮಧುಮೇಹ ಬಂದಿದೆ ಎಂದರೆ , ನಾವು ಜೀವನವಿಡಿ ಔಷಧಿ ತೆಗೆದುಕೊಳ್ಳಬೇಕು ಎಂಬ ಕಲ್ಪನೆ ಜನರಲ್ಲಿ ಇರುತ್ತದೆ . ಅದರಲ್ಲೂ ಟೈಪ್ ಟು ಮಧುಮೇಹ ಇದೆ ಎಂದರೆ , ಅದು ಸಂಪೂರ್ಣವಾಗಿ ಗುಣವಾಗುತ್ತದೆ .ಇದನ್ನು ಕೇಳಿದರೆ ಆಶ್ಚರ್ಯವಾಗಬಹುದು . ಆದರೆ ಖಂಡಿತವಾಗಿಯೂ ಗುಣವಾಗುತ್ತದೆ . ಟೈಪ್ ಒನ್ ಮಧುಮೇಹ ಮಾತ್ರ ಯಾವುದೇ ಕಾರಣಕ್ಕೂ ವಾಸಿಯಾಗುವುದಿಲ್ಲ ಅದಕ್ಕೆ ಪ್ರಯತ್ನ ಕೂಡ ಮಾಡಬೇಡಿ .

ಮಧುಮೇಹ ಎನ್ನುವುದು ಒಂದು ಖಾಯಿಲೆ ಅಲ್ಲ .ನಮ್ಮ ದೇಹದಲ್ಲಿ ಆಗುವ ಛಾಯಾ ಪಚಯಕ್ರಿಯೆ ಜೀರ್ಣ ಅಜೀರ್ಣ ಏನು ಆಗುತ್ತದೆಯೋ, ಇಂತಹ ಒಂದು ಕ್ರಿಯೆ ನಡೆದು ಆಚೆ ಬರುವ ಒಂದು ಖಾಯಿಲೆಗೆ ಮಧುಮೇಹ ಎಂದು ಕರೆಯಲಾಗುತ್ತದೆ .ಅದರಲ್ಲೂ ಟೈಪ್ ಟು ಮಧುಮೇಹ ನಮ್ಮ ಜೀವನ ಶೈಲಿಯಲ್ಲಿ ಸರಿಯಾದ ಆಹಾರ , ವಿಹಾರ ಮಾಡದೇ ಬರುವಂತಹ ಖಾಯಿಲೆಗೆ ಟೈಪ್ ಟು ಮಧುಮೇಹ ಎಂದು ಕರೆಯಲಾಗುತ್ತದೆ . ಆಯುರ್ವೇದದಲ್ಲಿ ಹೇಳುವುದಾದರೆ 20 ವಿಧಗಳ ಮಧುಮೇಹ ಇರುತ್ತದೆ .

ಅದರಲ್ಲಿ ಒಂದು ತರಹದ ಮಧುಮೇಹವನ್ನು ವಾಸಿ ಮಾಡಲು ಸಾಧ್ಯವಾಗುವುದಿಲ್ಲ . ಉಳಿದ 19 ಮಧುಮೇಹವನ್ನು ವಾಸಿ ಮಾಡಬಹುದು . ವಿಶ್ವ ಆರೋಗ್ಯ ಸಂಸ್ಥೆ ಕೂಡ 98 ಪರ್ಸೆಂಟ್ ಮಧುಮೇಹವನ್ನು ವಾಸಿ ಮಾಡಬಹುದು ಎಂದು ಹೇಳುತ್ತದೆ . ಮಧುಮೇಹ ಇರುವ ಜನರಲ್ಲಿ ಹೆಚ್ಚಾಗಿ ಟೈಪ್ ಟು ಮಧುಮೇಹ ಇರುತ್ತದೆ . ನಿಮ್ಮ ಜೀವನ ಶೈಲಿಯಲ್ಲಿ ಆಹಾರ ವಿಹಾರ ಈ ಎರಡನ್ನು ಪರಿವರ್ತನೆ ಮಾಡಿಕೊಂಡರೆ, ಟೈಪ್ ಟು ಮಧುಮೇಹವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ನೀವು ಮನೆಯಲ್ಲಿ ಸಿಗುವಂತಹ ಆಹಾರ ಪದಾರ್ಥಗಳನ್ನೇ ಬಳಸಿಕೊಂಡು ಮಧುಮೇಹವನ್ನು ನಿಯಂತ್ರಣಕ್ಕೆ ತರಬಹುದು . ಶುಗರ್ ಎನರ್ಜಿಯಾಗಿ ಪರಿವರ್ತನೆ ಆಗಬೇಕು ಎಂದರೆ , ಇನ್ಸುಲಿನ್ ಬೇಕು .ಇನ್ಸುಲಿನ್ ಇಲ್ಲ ಎಂದರೆ , ಎನರ್ಜಿಯಾಗಿ ಪರಿವರ್ತನೆ ಆಗುವುದಿಲ್ಲ .ಇದು ಶುಗರ್ ಆಗಿ ನಿಮ್ಮ ರಕ್ತದಲ್ಲೇ ಓಡಾಡುತ್ತಿರುತ್ತದೆ .ಆಗ ನಿಮ್ಮ ಶುಗರ್ ಮಟ್ಟ ಹೆಚ್ಚು ಕಮ್ಮಿ ಆಗುತ್ತಿರುತ್ತದೆ . ನಿಮಗೆ ಸರಿಯಾದ ಇನ್ಸುಲಿನ್ ಯಾವಾಗ ದೊರೆಯುತ್ತದೆ ಆಗ ನಿಮ್ಮ ಶುಗರ್ ಮಟ್ಟ ಕಡಿಮೆ ಆಗುತ್ತದೆ .

ಇದನ್ನೇ ಮಧುಮೇಹ ಎಂದು ಕರೆಯುವುದು . ಹಾಗಾದರೆ ಇನ್ಸುಲಿನ್ ಎಲ್ಲಿ ಉತ್ಪತ್ತಿಯಾಗುತ್ತದೆ . ಪ್ಯಾಂಕ್ರಿಯಾಸಿಸ್ ನಲ್ಲಿ ಉತ್ಪತ್ತಿಯಾಗುತ್ತದೆ . ಉತ್ಪತ್ತಿಯಾದರೆ ಮಧುಮೇಹ ಬರುವುದಿಲ್ಲ . ಪ್ಯಾಂಕ್ರಿಯಾಸಿಸ್ ಉತ್ಪತ್ತಿಯಾಗದೇ ಇದ್ದರೆ , ಅಂತಹವರಲ್ಲಿ ಬರುತ್ತದೆ . ಟೈಪ್ ಒನ್ ಮಧುಮೇಹದಲ್ಲಿ ಪ್ಯಾಂಕ್ರಿಯಾಸಿಸ್ ನಲ್ಲಿ ಇನ್ಸುಲಿನ್ ಉತ್ಪತ್ತಿಯಾಗುವುದೇ ಇಲ್ಲ .ಈ ಮಧುಮೇಹಕ್ಕೆ ಅವರ ಜೀವನದಲ್ಲಿ ಚಿಕಿತ್ಸೆ ಫಲಿಸುವುದಿಲ್ಲ . ಟೈಪ್ ಟು ಮಧುಮೇಹದಲ್ಲಿ ಸರಿಯಾಗಿ ಉತ್ಪತ್ತಿಯಾಗುವುದಿಲ್ಲ .

ಉತ್ಪತ್ತಿಯಾಗುವುದು ಒಳ್ಳೆಯ ಗುಣಮಟ್ಟದಲ್ಲಿ ಇರುವುದಿಲ್ಲ .ಒಳ್ಳೆಯ ಗುಣಮಟ್ಟದಲ್ಲಿ ಇರುವುದು ದೇಹ ಗಮನಿಸುವುದಿಲ್ಲ . ನಾವು ಇದನ್ನು ಆಹಾರ ವಿಹಾರದ ಮೂಲಕ ಸರಿ ಮಾಡಿಕೊಳ್ಳಬಹುದು. ಈ ಮೂರು ಕಾರಣಗಳು ಟೈಪ್ ಟು ಮಧುಮೇಹಕ್ಕೆ ಮುಖ್ಯವಾಗಿರುತ್ತದೆ . ಮೊದಲನೆಯದಾಗಿ ಮಧುಮೇಹದ ಮಟ್ಟ ಹೆಚ್ಚಾಗದೆ ಇರುವುದಕ್ಕೆ ಯಾವುದೇ ರೀತಿಯ ಸಿಹಿ ತಿನಿಸುಗಳನ್ನು ತಿನ್ನಬಾರದು . ಎರಡನೆಯದಾಗಿ ಶುಗರ್ ಮಟ್ಟವನ್ನು ಬೇಗ ಹೆಚ್ಚಿಸುವ ವಸ್ತು ಮೈದಾ ಹಿಟ್ಟು .

ಬಿಳಿ ಅನ್ನದಿಂದಲೂ ಕೂಡ ಶುಗರ್ ಮಟ್ಟ ಹೆಚ್ಚಾಗುತ್ತದೆ .ಅನ್ನ ಮತ್ತು ಮೈದಾ ಸಕ್ಕರೆಯನ್ನು ಕಡಿಮೆ ಮಾಡಿದರೆ , ಶುಗರ್ ತುಂಬಾ ಕಡಿಮೆ ಆಗುತ್ತದೆ . ನಿಮ್ಮಲ್ಲಿ ಹೆಚ್ಚಿನ ಚಟುವಟಿಕೆ ಇಲ್ಲದೆ ಸೋಮಾರಿತನದಿಂದ ಇದ್ದರೆ ಶುಗರ್ ಹೆಚ್ಚಿಗೆ ಆಗುತ್ತದೆ .ನಿಮ್ಮ ದೇಹವನ್ನು ದಿನವಿಡಿ ಹೆಚ್ಚಿನ ಚಟುವಟಿಕೆಯಿಂದ ಇಟ್ಟುಕೊಳ್ಳಬೇಕು . ನಂತರ ಹೆಚ್ಚಿನ ಫೈಬರ್ ಇರುವ ಆಹಾರವನ್ನು ಸೇವಿಸಬೇಕು. ಮತ್ತು ನಾರಿನ ಅಂಶ ಇರುವ ಪದಾರ್ಥಗಳನ್ನು ಸೇವಿಸಬೇಕು . ಎಲ್ಲ ಜಾತಿಯ ಸೊಪ್ಪಿನ ಪಲ್ಯಗಳು , ಮೂಲಂಗಿ ,

ಮೊಳಕೆ ಕಾಳುಗಳು ,ಇಂತಹ ಆಹಾರ ಪದಾರ್ಥಗಳು ನಿಮ್ಮ ದೇಹದಲ್ಲಿ ಮೆಟಬಾಲಿಸಂ ಅನ್ನು ಸಮತೋಲನ ಮಾಡುತ್ತಾ ಬರುತ್ತದೆ . ಯಾವಾಗಲೂ ಶುಗರ್ ಅನ್ನು ಬಿಡುಗಡೆ ಮಾಡದೆ ಇರುವ ಇನ್ಸುಲಿನನ್ನು ಶೇಖರಣೆ ಮಾಡಿ ಇಡುತ್ತದೆ . ಈ ನಾರಿನ ಪದಾರ್ಥಗಳು ದೇಹದಲ್ಲಿರುವ ವಿಷಗಳನ್ನು ಸ್ವಚ್ಛ ಮಾಡಿ ಹೊರ ಹಾಕುವುದಕ್ಕೆ ಸಾಧ್ಯವಾಗುತ್ತದೆ .ನೀರನ್ನು ಚೆನ್ನಾಗಿ ಕುಡಿಯಬೇಕು .ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು . ಮತ್ತು ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಬೇಕು .

ಆದಷ್ಟು ಬೇಗ ಮಲಗಿ ಏಳರಿಂದ ಎಂಟು ಗಂಟೆ ನಿದ್ರೆ ಮಾಡಬೇಕಾಗುತ್ತದೆ .ರಾತ್ರಿಯ ಹೊತ್ತು ಸರಿಯಾದ ನಿದ್ರೆ ಮಾಡಬೇಕು . ಶುಗರ್ ಇರುವ ರೋಗಿಗಳು ದಿನನಿತ್ಯ ಒಂದು ಚಮಚ ಮೆಂತ್ಯ ನೆನೆಸಿ ಅದನ್ನು ಬೆಳಿಗ್ಗೆ ಕುಡಿಯಬೇಕು. ಇದನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು .ಮತ್ತು ನೇರಳೆ ಹಣ್ಣಿನ ಬೀಜದ ಪುಡಿಯನ್ನು ಒಂದು ಗ್ಲಾಸ್ ನೀರಿಗೆ ಒಂದು ಚಮಚದಷ್ಟು ಸೇರಿಸಿ ಖಾಲಿ ಹೊಟ್ಟೆಯಲ್ಲಿ ದಿನನಿತ್ಯ ತೆಗೆದುಕೊಳ್ಳುವುದು .ಶುಗರ್ ಇರುವ ವ್ಯಕ್ತಿಗಳು ತೆಗೆದುಕೊಳ್ಳುವ ಮಾತ್ರೆಯಲ್ಲಿ ಅಮೃತಬಳ್ಳಿ ,

ಮೆಂತ್ಯ , ಕರಿಬೇವಿನ ಸೊಪ್ಪು, ಬೇವಿನ ಸೊಪ್ಪು , ನೇರಳೆ ಹಣ್ಣು , ಬೆಟ್ಟದ ನೆಲ್ಲಿಕಾಯಿ , ಇವೆಲ್ಲದರ ಮಿಶ್ರಣದಿಂದ ಶುಗರ್ ಪೌಡರ್ ಅನ್ನು ತಯಾರಿಸಿರುತ್ತಾರೆ . ಇವೆಲ್ಲಾ ವಸ್ತುಗಳು ಮನೆಯಲ್ಲೇ ದೊರೆಯುವುದರಿಂದ ನೀವು ಬಳಸಬಹುದು .ಮಧುಮೇಹದಲ್ಲಿ ಮೆಟಬಾಲಿಸಂ ಕಡಿಮೆ ಆಗಿರುತ್ತದೆ .ನಾವು ಹೊರಗಡೆ ಸಿಗುವ ಮಧುಮೇಹದ ಜ್ಯೂಸ್ ಗಳನ್ನು ಹೆಚ್ಚಾಗಿ ತೆಗೆದುಕೊಂಡರೆ ಜೀರ್ಣ ಕ್ರಿಯೆಗೆ ತೊಂದರೆಯಾಗುತ್ತದೆ . ಹಾಗಾಗಿ ಗ್ಲಾಸ್ ಗಟ್ಟಲೆ ಕುಡಿಯುವುದು ಒಳ್ಳೆಯದಲ್ಲ .ನೀವು 50 ರಿಂದ 60 ಎಂ ಎಲ್ ತೆಗೆದುಕೊಂಡರೆ ಸಾಕು .ಈ ರೀತಿ ಮಾಡುವುದು ಬಹಳ ಉತ್ತಮ.

ಇದರ ಬಗ್ಗೆ ಗಮನ ಕೊಟ್ಟು ಈ ರೀತಿ ಅನುಸರಿಸುತ್ತಾ ಹೋದರೆ, ನಿಮ್ಮ ಟೈಪ್ ಟು ಮಧುಮೇಹ ನೀವು ಮನೆಯಲ್ಲಿಯೇ ಕಡಿಮೆ ಮಾಡಿಕೊಳ್ಳಬಹುದು. ಶುಗರ್ ಇರುವ ವ್ಯಕ್ತಿಗಳು ಆರು ತಿಂಗಳಿಗೆ ಒಮ್ಮೆ ಎಚ್‌ ಬಿಎ ಒನ್ ಸಿ ಪರೀಕ್ಷೆಯನ್ನು ಮಾಡಿಕೊಳ್ಳಬೇಕು .ಇದನ್ನು ಮಾಡುವುದರಿಂದ ನಿಮ್ಮ ಮೂರು ತಿಂಗಳ ಮಧುಮೇಹ ಮಟ್ಟ ಹೇಗೆ ಇರುತ್ತದೆ ಎಂಬುದನ್ನು ಸೂಚಿಸುತ್ತದೆ . ನಿಮ್ಮ ಎಚ್ ಬಿ ಎ ಒನ್ ಸಿ ಯಲ್ಲಿ ನಿಮ್ಮ ಶುಗರ್ ಮಟ್ಟ 6ರ ಒಳಗೆ ಇದ್ದರೆ ,

ನಿಮ್ಮ ಮಧುಮೇಹ ಒಳ್ಳೆಯ ಮಟ್ಟದಲ್ಲಿದೆ ಎಂದರ್ಥ .ಅದರಲ್ಲೂ 5.5 ಮಟ್ಟದಲ್ಲಿ ಇದ್ದರೆ ನಿಮ್ಮ ಶುಗರ್ ಮಟ್ಟ ಪೂರ್ತಿಯಾಗಿ ಕಡಿಮೆಯಾಗಿದೆ ಎಂದರ್ಥ . ಶುಗರ್ ಮಟ್ಟ ಕಡಿಮೆ ಇದ್ದು ಎಚ್‌ ಬಿಎ1 ಸಿ ಹೆಚ್ಚಾಗಿದ್ದರೆ , ನಿಮ್ಮ ಕಿಡ್ನಿ , ನರ , ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ .ಅದಕ್ಕಾಗಿ ಎಚ್‌ ಬಿ ಎ 1 ಸಿ ಯನ್ನು ನಿಯಂತ್ರಣದಲ್ಲಿ ಇಡುವುದು ಬಹಳ ಪ್ರಮುಖವಾಗಿ ಇರುತ್ತದೆ. ನೀವು ಪ್ರತಿದಿನ ಒಂದು ಗಂಟೆಗಳ ಕಾಲ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ .ಮತ್ತು ಅರ್ಧ ಗಂಟೆ ಯೋಗ ಮಾಡಬೇಕು .

ಇಲ್ಲಿ ತಿಳಿಸಿರುವ ಪೌಷ್ಟಿಕ ಆಹಾರ ತೆಗೆದುಕೊಳ್ಳಬೇಕು .ಇಲ್ಲಿ ತಿಳಿಸಿರುವ ಪೌಷ್ಟಿಕ ಅಂಶದ ಜೊತೆಗೆ ದಿನನಿತ್ಯದ ಜೀವನ ಶೈಲಿಯನ್ನು ನೀವು ಒಳ್ಳೆಯ ರೀತಿಯಲ್ಲಿ ಬದಲಾಯಿಸಿಕೊಳ್ಳಬೇಕು .ನೀವು ಇವುಗಳನ್ನು ಮೂರು ತಿಂಗಳುಗಳ ಕಾಲ ಚಾಚು ತಪ್ಪದೆ ಪಾಲಿಸಿದರೆ ನಿಮ್ಮ ಎಚ್ ಬಿ ಎ ಒನ್ ಸಿ ಮಟ್ಟ 9 ಇರುವುದು 5 ಅಥವಾ 6ರಕ್ಕೆ ಬರುವ ಸಾಧ್ಯತೆ ಇರುತ್ತದೆ .

ಈ ರೀತಿ ಅಭ್ಯಾಸ ರೂಢಿಸಿಕೊಳ್ಳುವುದರಿಂದ ನಿಮ್ಮ ಮಾತ್ರೆಯ ಪ್ರಮಾಣವನ್ನು ಕಡಿಮೆ ಮಾಡಬಹುದು . ನೀವು ಮೆಟಬಾಲಿಸಂ ಸಿಂಡ್ರೋಮ್ ಅನ್ನು ಚೆನ್ನಾಗಿ ಇಟ್ಟುಕೊಂಡಾಗ , ನಿಮ್ಮ ಹತ್ತಿರ ಮಧುಮೇಹ ಸುಳಿದು ನೋಡುವುದಿಲ್ಲ .ನಿಮ್ಮಲ್ಲಿ ಟೈಪ್ 1 ಮಧುಮೇಹ ಇದ್ದರೆ , ಯಾವುದೇ ಕೆಲಸ ಮಾಡುವುದಿಲ್ಲ ಅವರು ಔಷಧಿ ಮತ್ತು ಇನ್ಸುಲಿನ್ ತೆಗೆದು ಕೊಳ್ಳಲೇಬೇಕಾಗುತ್ತದೆ .ಈ ರೀತಿಯಾಗಿ ನಿಮ್ಮ ಜೀವನ ಶೈಲಿಯನ್ನು ನಡೆಸಿಕೊಂಡು ಬಂದರೆ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು ಎಂದು ತಿಳಿಸಲಾಗಿದೆ ಎಂದು ತಿಳಿಸಲಾಗಿದೆ .

Leave a Comment