ಕುಂಭ ರಾಶಿಯ ನಂಬರ್ ಮಾಸ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ. ಬುಧ ಗುರು ರವಿ ಈ ಮೂರು ಗ್ರಹಗಳು ನಿಮಗೆ ತುಂಬಾ ಧನಾತ್ಮಕವಾಗಿದೆ ಎಂದು ಹೇಳಬಹುದು. ಬುಧ ಗ್ರಹ ಪರಿವರ್ತನೆಯಾಗಿ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತದೆ. ಇದರಿಂದ ಕುಂಭ ರಾಶಿಯ ರಾಶಿಯವರು ಹೆಚ್ಚು ಲವಲವಿಕೆಯಿಂದ ಇರುತ್ತೀರ. ನವಂಬರ್ 16ಕ್ಕೆ
ನಿಮ್ಮ ದಶಮ ಸ್ಥಾನಕ್ಕೆ ರವಿ ಮತ್ತು ಕುಜ ಬರುತ್ತಾರೆ. ಕೆಲಸದ ವಿಚಾರದಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತೀರಾ. ಅವರ ಕೆಲಸದ ಭಾವಕ್ಕೆ ತಕ್ಕಂತೆ ಉತ್ತಮ ಯಶಸ್ಸನ್ನು ಪಡೆದುಕೊಳ್ಳುತ್ತೀರಾ. ಕೆಲಸ ಇಲ್ಲದವರಿಗೆ ಕೆಲಸ ಸಿಗುವ ಸಾಧ್ಯತೆ ಇರುತ್ತದೆ. ಕುಜ ನಿಂದಾಗಿ ಸ್ವಲ್ಪಮಟ್ಟಿಗೆ ತೊಂದರೆ ಕೊಡಬೇಕಾಗುತ್ತದೆ.
ಶ್ರಮ ಸ್ವಲ್ಪ ಜಾಸ್ತಿ ಬೇಕಾಗುತ್ತದೆ. ಸರ್ಕಾರಿ ಕೆಲಸದಲ್ಲಿರುವವರಿಗೆ ಈ 16ರ ನಂತರತುಂಬಾ ಉತ್ತಮವಾಗಿದೆ ಎಂದು ಹೇಳಬಹುದು. ನೀವು ಅಂದುಕೊಂಡ ಕೆಲಸದ ವಿಷಯದಲ್ಲಿ ಸಾಧಿಸುತ್ತೀರಾ ದೇವರ ಅನುಗ್ರಹ ಸಿಗುತ್ತದೆ ಅದೃಷ್ಟ ನಿಮ್ಮ ಕಡೆ ಇರುತ್ತದೆ. ಶುಕ್ರನ ಚಲನೆ ನಿಮಗೆ ತುಂಬಾ ಧನಾತ್ಮಕವಾಗಿದೆ. ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಲಾಭ ಪಡೆದುಕೊಳ್ಳುತ್ತೀರಾ.