ಕುಂಭ ರಾಶಿಯವರಿಗೆ ಕೇತು ಫಲ ಹೇಗಿದೆ ಎಂದು ತಿಳಿಯೋಣ. ಗುರು ಮತ್ತೆ ಕೇತು ಗ್ರಹಗಳು ನಿಮಗೆ ಪ್ರಶ್ನೆ ಪತ್ರಿಕೆಯನ್ನು ಕೊಟ್ಟು ನೀವು ಯಾವ ರೀತಿ ಉತ್ತರ ಕೊಡುತ್ತೀರಾ ಎಂದು ಕಾಯುತ್ತಾ ಇದ್ದಾರೆ. ಚೇತು ನಿಮಗೆ ಯಾವ ರೀತಿ ಋಣಾತ್ಮಕವಾಗಿದ್ದಾನೆ ಎಂದು ತಿಳಿದುಕೊಳ್ಳೋಣ. ಅಕ್ಟೋಬರ್ 30ಕ್ಕೆ ಕೇತು ಪರಿವರ್ತನೆ ಕನ್ಯಾ ರಾಶಿಯಲ್ಲಿ ಆಗುತ್ತದೆ.
ಕುಂಭ ರಾಶಿಯವರಿಗೆ ಇದರಿಂದ ತುಂಬಾ ಅಪಾಯಕಾರಿ ಎಂದು ಹೇಳಬಹುದು. ಎಂಟನೇ ಮನೆ ಆಗಿರುವುದರಿಂದ ಆರೋಗ್ಯದಲ್ಲಿ ಸಮಸ್ಯೆ ಆಗಬಹುದು. ಕೇತು 8ನೇ ಮನೆಯಲ್ಲಿರುವ ತನಕ ಕುಂಭ ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರಬೇಕು. ಬೆಂಕಿಯಿಂದ ಅಪಾಯ ಆಗುವ ಸಾಧ್ಯತೆ ಇರುತ್ತದೆ.ಮತ್ತು ಅಪಾಯಕಾರಿ ಕೀಟಗಳಿಂದಲೂ ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ.
ಅಪಾಯಕಾರಿ ಕೆಲಸದಿಂದ ನಿಮಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹೊಡೆತ ಸಾಧ್ಯತೆ ಇರುತ್ತದೆ. ಅಪಘಾತವಾಗುವ ಸಾಧ್ಯತೆ ಇರುತ್ತದೆಅಥವಾ ಕಾಲು ಜಾರಿ ಬೀಳುವ ಸಾಧ್ಯತೆ ಇರುತ್ತದೆ. ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಮನಸ್ಥಿತಿ ಎಷ್ಟು ಹಾಳಾಗಿರುತ್ತದೆ ಎಂಬುದರ ಮೇಲೆ ಇವುಗಳು ನಿರ್ಧಾರವಾಗುತ್ತದೆ.
ಇವುಗಳು ಎಲ್ಲರಿಗೂ ಆಗುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ ಅವರವರ ಜಾತಕ ಫಲ ಮತ್ತು ಅವರ ಪೂರ್ವ ಪುಣ್ಯದ ಸ್ಥಾನದ ಮೇಲೆ ನಿರ್ಧಾರವಾಗುತ್ತದೆ. ಕೆಲವೊಂದು ಪರಿಹಾರ ಮಾಡಿಕೊಳ್ಳುವ ಮೂಲಕ ಕೇತು ಗ್ರಹವನ್ನು ದೂರವಿಡಿ.”ಕೇತುಂ ಕರಾಲವದನಂ ಚಿತ್ರ ವರ್ಣಂ ಕಿರೀಟಿನಂ ಪ್ರಣ ಮಾಮಿ ಸದಾ ಕೇತುಂ ಧ್ವಜ ಕಾರಂ ಗ್ರಹೇಶ್ವರಂ” ಈ ಮಂತ್ರವನ್ನು ದಿನಾಲು ಸಂಜೆ ಹೇಳಿಕೊಳ್ಳಬೇಕು.
ಈ ಕುಂಭ ರಾಶಿಯವರಿಗೆ ಧೀರ್ಘಕಾಲದ ಕಾಯಿಲೆ ಸಹ ಆರಂಭವಾಗುವುದು ಇದರಿಂದ ಮನಸ್ಸಿಗೆ ಕಿರಿಕಿರಿ ಉಂಟಾಗುತ್ತದೆ. ಮೇ 18 2025 ರ ತನಕ ಕೇತು ವಿಚಾರದಲ್ಲಿ ತುಂಬಾ ಎಚ್ಚರಿಕೆ ವಹಿಸಲೇಬೇಕು. ಇದರ ಜೊತೆಗೆ 2025 ಏಪ್ರಿಲ್ ತನಕ ಶನಿ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ದುಡ್ಡಿನ ವಿಚಾರದಲ್ಲಿ ಖರ್ಚನ್ನ ಕಮ್ಮಿ ಮಾಡುವುದು ಒಳ್ಳೆಯದು. ಕೇತು ಗ್ರಹ ದುಶ್ಚಟಗಳಿಗೆ ದೂಡುವ ಸಂಭವವಿರುತ್ತದೆ ಒಂದು ವೇಳೆ ಈಗಾಗಲೇ ಇದ್ದರೆ ಇನ್ನು ಹೆಚ್ಚಾಗುವ ಸಾಧ್ಯತೆ ಇರುತ್ತದೆ.