84 ಲಕ್ಷ ಜೀವರಾಶಿಯ ರಹಸ್ಯ | ಮನುಷ್ಯ ಜನ್ಮ ಹೇಗೆ ಸಿಗುತ್ತದೆ | ಎಂಬತ್ತುನಾಲ್ಕು ಲಕ್ಷ ಜನ್ಮ

ನಾವು ಈ ಲೇಖನದಲ್ಲಿ 84 ಲಕ್ಷ ಜೀವರಾಶಿಯ ರಹಸ್ಯ ಮತ್ತು ಮನುಷ್ಯ ಜನ್ಮ ಹೇಗೆ ಸಿಗುತ್ತದೆ. ಎಂದು ತಿಳಿದುಕೊಳ್ಳೋಣ. ನಮ್ಮ ಹಿಂದೂ ಧರ್ಮದ ಗ್ರಂಥಗಳಾದ ವೇದ ಪುರಾಣಗಳಲ್ಲಿ ಆ 84 ಲಕ್ಷ ಜೀವರಾಶಿಗಳ ಬಗ್ಗೆ ತಿಳಿಸಿದ್ದಾರೆ. 84 ಲಕ್ಷ ಜೀವ ರಾಶಿಗಳು, ಈ ಮಾತಿನ ಅರ್ಥ ಸೃಷ್ಟಿಯಲ್ಲಿ ಕಂಡುಬರುವಂತಹ ಭಿನ್ನ-ಭಿನ್ನ ಪ್ರಕಾರದ ಜೀವ – ಜಂತುಗಳು ಇವುಗಳನ್ನು ಎರಡು ಭಾಗಗಳಾಗಿ ವಿಂಗಡಿಸಬೇಕು .ಇವುಗಳಲ್ಲಿ ಮೊದಲನೆಯದು ಯೋನಿಜ ಮತ್ತು

ಎರಡನೆಯದು ಆಯೋಜಿತ ಆಗಿದೆ. ಇವುಗಳು ಅಷ್ಟೇ ಅಲ್ಲದೇ ಪ್ರಾಣಿಗಳನ್ನು ಸ್ಥೂಲ ರೂಪದಲ್ಲಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಜಲಚರ, ತಲಚರ , ನಭಂಚರ ಪ್ರಾಣಿಗಳು ಇರುತ್ತವೆ . ಪದ್ಮ ಪುರಾಣದ ಒಂದು ಶ್ಲೋಕದಲ್ಲಿ ಇವುಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದ್ದಾರೆ . ಒಂದು ವೇಳೆ ನೀವು ಸಹ 84 ಲಕ್ಷ ಜೀವ ರಾಶಿಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇದ್ದರೆ, ಇಲ್ಲಿ ಹೇಳುವುದನ್ನು ಗಮನವಿಟ್ಟು ಕೇಳಿ .

ಹಿಂದೂ ಧರ್ಮದ ನಂಬಿಕೆಯ ಅನುಸಾರವಾಗಿ ನಮ್ಮ ಜೀವಾತ್ಮವು 84 ಲಕ್ಷ ಜೀವ ರಾಶಿಗಳಲ್ಲಿ ಅಲೆದಾಡಿದ ನಂತರ , ಮನುಷ್ಯ ಜನ್ಮವನ್ನು ಪಡೆದುಕೊಳ್ಳುತ್ತದೆ . ಮೊದಲಿಗೆ ಜೀವರಾಶಿಯ ಬಗ್ಗೆ ತಿಳಿಯಬಹುದು . ಎರಡನೆಯದಾಗಿ ಮಾವಿನ ಮರದ ಬೀಜ ಇದ್ದರೆ, ಅದು ಸತ್ತು ಹೋದ ನಂತರ ಮಾವಿನಹಣ್ಣಿನ ಬೀಜವೇ ಆಗುತ್ತದೆ . ಇಲ್ಲಿ ಮನುಷ್ಯರು ಕೂಡ ಮೃತ್ಯು ಹೊಂದಿದ ನಂತರ , ಮನುಷ್ಯರೇ ಆಗಬೇಕು . ಪಶುಗಳು ಮೃತ್ಯು ಆದ ನಂತರ ಅವುಗಳು ಪಶುಗಳೇ ಆಗಬೇಕು. ಇಲ್ಲಿ ಮನುಷ್ಯನ ಆತ್ಮವು ಪ್ರಾಣಿ ಜಾತಿಗಳಲ್ಲಿ ಹುಟ್ಟುವುದಿಲ್ಲವೇ ಅಥವಾ

ಈ 84 ಲಕ್ಷ ಪುರಾಣವು ಕೇವಲ ಕಲ್ಪನೆ . ಮೂರನೆಯದು ನಿಜವಾಗಿಯೂ ಅದು ಜೀವಾತ್ಮಕ್ಕೆ 84 ಲಕ್ಷ ಜೀವ ರಾಶಿಗಳಲ್ಲಿ ಅಲೆದಾಡಿದ ನಂತರವೇ ಮನುಷ್ಯ ಜನ್ಮ ಸಿಗುತ್ತದೆಯೇ ಅನ್ನೋದನ್ನ ತಿಳಿದುಕೊಳ್ಳೋಣ. ನಮ್ಮ ಪದ್ಮ ಪುರಾಣದ ಅನುಸಾರವಾಗಿ 9 ಲಕ್ಷ ಜಲಚರಗಳು, 2೦ ಲಕ್ಷ ಸಸ್ಯ, ಮತ್ತು ಪ್ರಾಣಿಗಳು , 11 ಲಕ್ಷ ಕೀಟಗಳು, 10 ಲಕ್ಷ ಪಕ್ಷಿಗಳು, 30 ಲಕ್ಷ ಭೂ ಪ್ರಾಣಿಗಳು , ಉಳಿದ ನಾಲ್ಕು ಲಕ್ಷ ಮಾನವ ಜನಾಂಗ ಎಂದು ಶ್ಲೋಕದ ಅರ್ಥ . ಯಾವಾಗ ಮನುಷ್ಯನ ಜನ್ಮ ಸಿಗುತ್ತದೆ ,

ಪುರಾಣಗಳಲ್ಲಿ ಪೂರ್ತಿಯಾಗಿ 84 ಲಕ್ಷ ಜೀವ ರಾಶಿಗಳಲ್ಲಿ ಮನುಷ್ಯನ ಜನ್ಮವನ್ನು ಸರ್ವ ಶ್ರೇಷ್ಠ ಎಂದು ತಿಳಿಸಿದ್ದಾರೆ . ಒಂದು ಆತ್ಮದ ಕರ್ಮ ಕಥೆಯ ಅನುಸಾರವಾಗಿ , 30 ಲಕ್ಷ ಭಾರಿ ಮರವಾಗಿ ಜನ್ಮ ಎತ್ತುತ್ತದೆ .ಇದಾದ ನಂತರ 9 ಲಕ್ಷ ಭಾರಿ ಜಲಚರ ಪ್ರಾಣಿಯಾಗಿ ಹುಟ್ಟುತ್ತದೆ .10 ಲಕ್ಷ ಭಾರಿ ಕ್ರಿಮಿಯಾಗಿ , ಒಂದು ಲಕ್ಷ ಭಾರಿ ಪಕ್ಷಿಯಾಗಿ ಜನಿಸುತ್ತದೆ .ಮತ್ತು 20 ಲಕ್ಷ ಭಾರಿ ಪಶುವಿನ ರೂಪ ಜನ್ಮ ಪಡೆಯುತ್ತದೆ .

ಅಂತ್ಯದಲ್ಲಿ ಕರ್ಮಗಳಿಗೆ ಅನುಸಾರವಾಗಿ , ಹಸುವಾಗಿ ಹುಟ್ಟಿ , ಆನಂತರ ಆತ್ಮಕ್ಕೆ ಮನುಷ್ಯನ ಜೀವ ಸಿಗುತ್ತದೆ .ಇದಾದ ನಂತರ ನಾಲ್ಕು ಲಕ್ಷ ಭಾರಿ ಮನುಷ್ಯನಾಗಿಯೇ ಹುಟ್ಟುತ್ತದೆ. ಇದಾದ ನಂತರ ಇವರು ಪಿತ್ರರು ಅಥವಾ ದೇವ ಮಾನವರಾಗಿ ಹೋಗುತ್ತಾರೆ . ಇವೆಲ್ಲವೂ ಕರ್ಮದ ಅನುಸಾರವಾಗಿ ನಡೆಯುತ್ತವೆ .ಯಾವಾಗ ಆತ್ಮವು ಮನುಷ್ಯನಾಗಿ ಹುಟ್ಟಿ, ನೀಚ ಕರ್ಮಗಳನ್ನು ಮಾಡುತ್ತದೆಯೋ ,ಅಂತವರಿಗೆ ಮರಳಿ ಕೆಳಗಿನ ಜೀವ ರಾಶಿಯಲ್ಲಿ ಜನ್ಮ ಸಿಗುತ್ತದೆ .ಇದನ್ನು ವೇದ ಪುರಾಣಗಳಲ್ಲಿ ದುರ್ಗತಿ ಎಂದು ತಿಳಿಸಿದ್ದಾರೆ .

Leave a Comment