ನಾವು ಈ ಲೇಖನದಲ್ಲಿ, ಮಹಿಳೆಯರು ಯಾವ ನಿಯಮಗಳನ್ನು ಆಚರಿಸಿದರೆ, ಮನೆಯು ಲಕ್ಷ್ಮಿ ನಿವಾಸನಾಗುತ್ತದೆ, ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ನಮ್ಮ ಸನಾತನ ಧರ್ಮದಲ್ಲಿ ನಮ್ಮ ಪೂರ್ವಜರು ನಮ್ಮ ಕಿರಿಯರು ಚೆನ್ನಾಗಿರಬೇಕೆಂದು, ಹೇಳಿ ಅಷ್ಟೈಶ್ವರ್ಯಗಳಿಂದ ಸುಖ ಸಂತೋಷಗಳಿಂದ ನೆಮ್ಮದಿಯಾಗಿ ಇರಬೇಕೆಂದು , ಎಷ್ಟೋ ಒಳ್ಳೆಯ ವಿಚಾರಗಳನ್ನು ಪುರಾಣಗಳಲ್ಲಿ, ಶಾಸ್ತ್ರಗಳಲ್ಲಿ ,ನಮಗೆ ತಿಳಿಸಿದ್ದಾರೆ. ಆ ವಿಷಯಗಳನ್ನು ನಾವು ತಿಳಿದುಕೊಂಡು ಆಚರಣೆ ಮಾಡಿದರೆ ಖಂಡಿತವಾಗಲೂ, ಭಗವಂತನ ಅನುಗ್ರಹದಿಂದ,
ನಮ್ಮ ಎಲ್ಲ ಸಮಸ್ಯೆಗಳು ದೂರವಾಗಿ ಆ ಭಗವಂತನ ಕೃಪೆಯಿಂದ ಮನೆಯಲ್ಲಿ ಸುಖ ಶಾಂತಿ ,ನೆಮ್ಮದಿ ,ಖಂಡಿತವಾಗಲೂ ನೆಲೆಸುತ್ತದೆ. ಮುಖ್ಯವಾಗಿ ಮಹಿಳೆಯರು ಯಾವ ಯಾವ ನಿಯಮಗಳನ್ನು ಆಚರಿಸಿದರೆ, ಮನೆಯಲ್ಲಿ ಲಕ್ಷ್ಮಿ ಸ್ಥಿರವಾಗಿ, ಇರುತ್ತಾಳೋ , ಎಂದು ನಾವು ತಿಳಿದುಕೊಳ್ಳೋಣ . ಮುಖ್ಯವಾಗಿ ಎಲ್ಲರೂ ತಿಳಿದುಕೊಳ್ಳಬೇಕಾಗಿರುವ, ಮೊದಲನೇ ವಿಷಯವೆಂದರೆ , ಸೂರ್ಯೋದಯ ಕಾಲ ಮತ್ತು ಸೂರ್ಯಾಸ್ತದ ಕಾಲ ಈ ಎರಡು ವೇಳೆಗಳಲ್ಲಿ, ಯಾವುದೇ ಕಾರಣಕ್ಕೂ ಮನೆಯಲ್ಲಿ, ನಿದ್ದೆ ಮಾಡಬಾರದು .
ಅದು ಮಹಿಳೆಯರೇ ಆಗಿರಲಿ, ಅಥವಾ ಪುರುಷರೇ ಆಗಿರಲಿ, ಸೂರ್ಯೋದಯ ಕಾಲ ಅಂದರೆ ಬೆಳಗ್ಗೆ ಸೂರ್ಯೋದಯ ಕಾಲ ಇರುವಾಗ ,ಯಾವುದೇ ಕಾರಣಕ್ಕೂ ಮನೆಯಲ್ಲಿ ನಿದ್ದೆ, ಮಾಡಬಾರದು. ಸೂರ್ಯೋದಯಕ್ಕಿಂತ ಮುಂಚೆ ನಿದ್ದೆಯಿಂದ ಏಳಬೇಕು . ಸೂರ್ಯೋದಯ ಕಾಲದಲ್ಲಿ ನಿದ್ದೆ ಮಾಡಿದರೆ , ಆ ಮನೆಯಲ್ಲಿ ಲಕ್ಷ್ಮಿ ನಿಲ್ಲುವುದಿಲ್ಲ. ಅದೇ ರೀತಿಯಾಗಿ ಸಂಜೆ ಸೂರ್ಯಾಸ್ತಮಾನ ಕಾಲ ಅಂದರೆ , ಸಂಜೆ 5 ಗಂಟೆಯಿಂದ 7 ಗಂಟೆ ಸಮಯದಲ್ಲಿ ಯಾವುದೇ,
ಕಾರಣಕ್ಕೂ ನಿದ್ದೆ ಮಾಡಬಾರದು. ಎಷ್ಟೇ ಕೆಲಸಗಳಲ್ಲಿ ನೀವು ಸುಸ್ತಾಗಿ ಮನೆಗೆ ಬಂದಿದ್ದರು ಸಹ ಸಂಜೆ ವೇಳೆಯಲ್ಲಿ , ನಿದ್ದೆ ಮಾಡಬಾರದು . ಅದೇ ರೀತಿಯಾಗಿ, ಬೆಳಿಗ್ಗೆ ಐದುವರೆ ಇಂದ ಏಳುವರೆ ಒಳಗಡೆ ನಿದ್ದೆ ಮಾಡಬಾರದು . ಅದೇ ರೀತಿಯಾಗಿ ನೀವು ನೆನಪಿಟ್ಟುಕೊಳ್ಳಬೇಕಾಗಿರುವ ಎರಡನೇ ವಿಷಯ ಎಂದರೆ, ಬೆಳಗ್ಗೆ ನಿದ್ದೆಯಿಂದ, ಎದ್ದ ತಕ್ಷಣ ಕಣ್ಣು ಬಿಟ್ಟ ತಕ್ಷಣ ,ನಮ್ಮ ಬಲಗೈಯನ್ನು ನೋಡಿಕೊಳ್ಳಬೇ.ಕು. ಮಹಿಳೆಯರೇ ಅಲ್ಲ ಪುರುಷರು ಸಹ ಬಲಗೈಯನ್ನು ನೋಡಿಕೊಂಡು , ಒಂದು ಶ್ಲೋಕ ಹೇಳಿಕೊಳ್ಳಬೇಕು . ಕರಾಗ್ರೇ ವಸತೇ ಲಕ್ಷ್ಮಿ , ಕರ ಮಧ್ಯೆ ಸರಸ್ವತಿ, ಕರಮೂಲೆ ಸ್ಥಿತಿ ಗೌರಿ ಪ್ರಭಾತಕರ ದರ್ಶನಂ .
ನಮ್ಮ ಬಲಗೈಯಲ್ಲಿ ಮೇಲ್ಭಾಗದಲ್ಲಿ , ಲಕ್ಷ್ಮೀದೇವಿ ವಾಸವಾಗಿ ಇರುತ್ತಾಳಂತೆ. ಅದೇ ರೀತಿಯಾಗಿ ಮಧ್ಯಭಾಗದಲ್ಲಿ, ಸರಸ್ವತಿ ದೇವಿ ವಾಸವಾಗಿ ಇರುತ್ತಾಳೆ. ಕೆಳಭಾಗದಲ್ಲಿ ಗೌರಿ ದೇವಿ ವಾಸವಾಗಿ ಇರುತ್ತಾಳೆ. ನಮಗೆ ಬೇಕಾಗಿರುವ, ಇಚ್ಛಾಶಕ್ತಿ ಕ್ರಿಯಾಶಕ್ತಿ , ಜ್ಞಾನಶಕ್ತಿ, ಪ್ರತಿರೂಪವಾಗಿರುವಂತಹ ಅಮ್ಮನವರು, ದರ್ಶನ ಕೊಡುತ್ತಾರೆ . ನಮಗೆ ವಿದ್ಯಾ , ಬುದ್ಧಿ, ಐಶ್ವರ್ಯ, ಶಕ್ತಿಯನ್ನು ಕೊಡುವ ಮೂರು ದೇವತೆಗಳನ್ನು, ನಾವು ಕೈಯಲ್ಲೇ ನೋಡಿಕೊಂಡು, ಅವರನ್ನು ನೆನೆಸಿಕೊಂಡು, ತದನಂತರ , ಹೊರಗಡೆ ಬಂದ ತಕ್ಷಣ.
ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಫೋಟೋವನ್ನು , ನೋಡಿ ನಮಸ್ಕಾರ ಮಾಡಿಕೊಳ್ಳಬೇಕು. ಮುಖ್ಯವಾಗಿ ನಿದ್ದೆಯಿಂದ ಎದ್ದ ತಕ್ಷಣ , ಹೊದಿಕೆಯನ್ನು ಸ್ವಚ್ಛವಾಗಿ, ಆಗಿ ಮಡಚಿ ಇಡಬೇಕು . ಸ್ನಾನ ಮಾಡದೆ, ಅಂದರೆ ಶುಚಿಯಾಗದೆ , ನೇರವಾಗಿ ಅಡುಗೆ ಮನೆಗೆ ಹೋಗಬಾರದು. ಕಾಫಿ ಕುಡಿಯಬಾರದು . ಅಥವಾ ಈ ರೀತಿ ಮಾಡಿದರೆ, ಆ ಮನೆಯಲ್ಲಿ, ಲಕ್ಷ್ಮಿ ನಿಲ್ಲುವುದಿಲ್ಲ . ಮನೆಯನ್ನು ಗುಡಿಸಿ ಒರೆಸಿ ಸ್ವಚ್ಛವಾಗಿ, ಇಟ್ಟುಕೊಳ್ಳಬೇಕು . ಮನೆ ಮುಂದುಗಡೆ ನೀರು ಚಿಮುಕಿಸಿ, ಒಂದು ರಂಗೋಲಿಯನ್ನು, ಪ್ರತಿನಿತ್ಯ ಹಾಕಿರಬೇಕು .
ತಾಯಿ ಲಕ್ಷ್ಮೀದೇವಿಗೆ ರಂಗೋಲಿ ಎಂದರೆ, ತುಂಬಾ ಇಷ್ಟ .ಯಾವ ಮನೆಯ ಮುಂದೆ ರಂಗೋಲಿ ಇರೋದಿಲ್ಲವೋ , ಸ್ವಚ್ಛತೆ ಇರುವುದಿಲ್ಲವೋ ,ಆ ಮನೆಯಲ್ಲಿ, ಲಕ್ಷ್ಮಿ ದೇವಿ ಪ್ರವೇಶ ಮಾಡುವುದಿಲ್ಲ . ಯಾರಾದರೂ ಮನೆಯಲ್ಲಿ ತೀರಿಕೊಂಡಾಗ 11 ದಿನ ಮನೆ ಮುಂದೆ ರಂಗೋಲಿ ಹಾಕುವುದಿಲ್ಲ . ಮತ್ತು ಮನೆಗೆ ತೋರಣ , ಸಹ ಕಟ್ಟುವುದಿಲ್ಲ. ಯಾವ ಮನೆಯಲ್ಲಿ ಸೂತಕದ ಛಾಯೆ ಇರುವುದಿಲ್ಲವೋ , ಅಲ್ಲಿ ರಂಗೋಲಿ ತೋರಣಗಳು, ಇರುತ್ತದೆ. ಅದರಲ್ಲೂ ವೈಜ್ಞಾನಿಕವಾಗಿ ಹೇಳುವುದಾದರೆ, ಮನೆಯ ಹೊಸ್ತಿಲಿಗೆ,
ಅರಿಶಿಣವನ್ನು ಹಚ್ಚುವುದರಿಂದ, ಯಾವುದೇ ತರಹ ವಿಷಕಾರಿ ಅಂಶಗಳು ಮನೆಯ ಒಳಗೆ ಪ್ರವೇಶಿಸುವುದಿಲ್ಲ . ಅದೇ ರೀತಿಯಾಗಿ ,ಲಕ್ಷ್ಮಿದೇವಿಗೆ ಅರಿಶಿಣ ಕುಂಕುಮ ಎಂದರೆ ತುಂಬಾ ಇಷ್ಟ. ಲಕ್ಷ್ಮಿ ದೇವಿಯು ಸಹ ಮನೆ ಒಳಗಡೆ ಪ್ರವೇಶ ಮಾಡುತ್ತಾಳೆ . ಮುಖ್ಯವಾಗಿ , ಮುಖ್ಯದ್ವಾರದ ಮೇಲೆ ಓಂಕಾರ ಬರೆದಿರಬೇಕು. ಎಲ್ಲ ಹಿಂದುಗಳು ಮುಖ್ಯದ್ವಾರದ ಮೇಲೆ ಓಂಕಾರ ಆಗಲಿ ಅಥವಾ ಸ್ವಸ್ತಿಕ ಚಿಹ್ನೆ ಇರುವುದು , ತುಂಬಾ ಉತ್ತಮ . ಇದರಿಂದ ಲಕ್ಷ್ಮಿ ದೇವಿಯ ಪ್ರಸನ್ನಳಾಗುತ್ತಾಳೆ.
ಮುಖ್ಯವಾಗಿ ಅಡುಗೆ ಮನೆಯಲ್ಲಿ, ಬಳಸುವ ಬಟ್ಟೆಯು ಕಪ್ಪಾಗಿರಬಾರದು . ವಾಸನೆಯಿಂದ ಕೂಡಿರಬಾರದು . ಅಂತಹ ಮನೆಯಲ್ಲಿ , ಲಕ್ಷ್ಮಿ ದೇವಿ ನಿಲ್ಲುವುದಿಲ್ಲ . ಆ ಮನೆಯಲ್ಲಿ, ದರಿದ್ರ ದೇವತೆ ಆಹ್ವಾನ ಆಗುತ್ತದೆ. ಇದನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು. ಮಹಿಳೆಯರು ಮುಖ್ಯವಾಗಿ ದಿನ ನಿತ್ಯ ಮನೆಯಲ್ಲಿ ,ದೇವರ ಪೂಜೆಯನ್ನು ಮಾಡಬೇಕು. ನಿತ್ಯ ದೀಪರಾದನೆ ಮಾಡಬೇಕು. ಯಾವ ಮನೆಯಲ್ಲಿ , ನಿತ್ಯ ಗಂಟೆ ಬಾರಿಸುತ್ತಾರೆ ಆ ಮನೆಯಲ್ಲಿ, ನಕರಾತ್ಮಕ ಶಕ್ತಿಗಳು ಇರುವುದಿಲ್ಲ. ದುಷ್ಟ ಶಕ್ತಿಗಳು ಯಾವುದೇ ಕಾರಣಕ್ಕೂ, ಪ್ರವೇಶ ಮಾಡುವುದಿಲ್ಲ . ನಮ್ಮ ಧರ್ಮಶಾಸ್ತ್ರದಲ್ಲಿ ಹೇಳಿರುವಂತೆ , ” ಆಗರ್ಮ ತಂತು ದೇವಾನಾಂ, ಗಮನಾರ್…