ಮಕರ ರಾಶಿಗೆ ಇನ್ನೆಷ್ಟು ದಿನ?

ನಾವು ಈ ಲೇಖನದಲ್ಲಿ ಮಕರ ರಾಶಿಯವರ ಒಳ್ಳೆಯ ಕಾಲದ ಬಗ್ಗೆ ಮತ್ತು ಗೋಚಾರ ಫಲಗಳ ಬಗ್ಗೆ , ತಿಳಿದುಕೊಳ್ಳೋಣ. ನೀವು ಸಾಡೆ ಸಾತಿ ಕೊನೆಯ ಹಂತದಲ್ಲಿ, ಇದ್ದೀರಾ. ಅಂದರೆ ಮುಂದಿನ ಶನಿ ಪರಿವರ್ತನೆ , ಕಾಲಕ್ಕೆ ಸಂಪೂರ್ಣ ಸಾಡೇ ಸಾತಿ ಮುಗಿದು ಹೋಗುತ್ತದೆ. ಅದಕ್ಕೆ ಇನ್ನು ಒಂದು ವರ್ಷ ಸಮಯವಿದೆ, ಅಷ್ಟರೊಳಗೆ ಶನಿ ಒಂದು ಆಘಾತ ಕೊಡುತ್ತಾನೆ. ಬಹಳಷ್ಟು ಜನರ ಜೀವನ ಅಲ್ಲೋಲ ಕಲ್ಲೋಲ, ಆಗಬಹುದು. ಹೀಗೆ ನಷ್ಟವಾಗುತ್ತಾ, ಈ ರೀತಿಯಲ್ಲಿ ಹಣ ಕಳೆದುಕೊಳ್ಳಬಹುದು ,

ಅನಿಸುವ ಹಾಗೆ ಕೆಲವು ಘಟನೆಗಳು ನಡೆಯುತ್ತವೆ. ಇಡೀ ವರ್ಷದಲ್ಲಿ ಒಂದು ಆರು ತಿಂಗಳು ಜಾಸ್ತಿ ಬಳಲುತ್ತೀರಾ. ಯಾವ ತಿಂಗಳಿನಲ್ಲಿ ಜಾಸ್ತಿ ಹುಷಾರಾಗಿರಬೇಕು . ಹಾಗೂ ಶನಿ ಕೃಪೆಗೆ ಹೇಗೆ ಪಾತ್ರರಾಗಬೇಕು ಅಂತ ಈ ಲೇಖನದಲ್ಲಿ, ತಿಳಿದುಕೊಳ್ಳೋಣ. ಒಂದು ವರ್ಷದಿಂದ ಶನಿ ಕುಂಭ ರಾಶಿಯಲ್ಲಿದ್ದಾನೆ, ಅದು ನಿಮ್ಮ ದ್ವಿತೀಯ ಸ್ಥಾನ ಆಗುತ್ತದೆ . ಅಂದರೆ, ಧನ ಸ್ಥಾನ ಅಂತ ನಾವು ಕರೆಯುತ್ತೇವೆ. ಈ ಸ್ಥಾನದಲ್ಲಿ ಯಾವಾಗಲೂ ಶನಿ ತಟಸ್ಥ ನಾಗಿರುತ್ತಾನೆ, ಅಂದರೆ ಶನಿಯು ಈ ಕಡೆ ನಷ್ಟ ಆಗಲಿ,

ಅಥವಾ ಲಾಭವನ್ನಾಗಲಿ, ಹಾಗಾಗಿ ಇಷ್ಟು ದಿನ ಶನಿಯಿಂದ ಯಾವುದೇ, ನಿರೀಕ್ಷೆ ಇಟ್ಟುಕೊಂಡಿರಲಿಲ್ಲ ಬಹಳಷ್ಟು ಜನ. ಆದರೆ ಈ 2024 ರ ಫೆಬ್ರವರಿ 11ಕ್ಕೆ ಶನಿಗೆ ಸಂಬಂಧ ಪಟ್ಟ ಹಾಗೆ ಒಂದು ತುಂಬಾ ಮುಖ್ಯವಾಗಿರುವ ಘಟನೆ ನಡೆಯಲಿದೆ. ಅದಕ್ಕೆ ನಾವು ಶನಿ ಹಸ್ತನಾಗುವುದು, ಅಂತ ಕರೆಯುತ್ತೇವೆ. ಹಸ್ತ ಎಂದರೆ ಶನಿಯ ಗೋಚರವಿರುವುದಿಲ್ಲ. ಶನಿಯು ಸೂರ್ಯನಿಗೆ ಹತ್ತಿರವಾಗುತ್ತಾ ಹೋಗುತ್ತಾನೆ ಎಂದರ್ಥ. ನಾವು ತಿಳಿಸಿರುವ ದಿನಾಂಕ ನಂತರ ಶನಿ ಆಗ ನಷ್ಟವನ್ನು ಹೆಚ್ಚು ಮಾಡಬಹುದು.

ಅದರ ಬಗ್ಗೆ ಒಂದಿಷ್ಟು ಉದಾಹರಣೆಗಳನ್ನು ತಿಳಿಸುತ್ತೇವೆ. ಹಾಗಂತ ನಾವು ತಿಳಿಸುವುದು ನೂರಕ್ಕೆ ನೂರು ಆಗುತ್ತದೆ ಅಂತಲ್ಲ, ಈ ರೀತಿ ಆಗಬಹುದು ಹುಷಾರಾಗಿರಿ, ಅನ್ನೋ ಎಚ್ಚರಿಕೆ ಅಷ್ಟೇ. ಬಹಳಷ್ಟು ಜನ ಜಾಸ್ತಿ ಖರ್ಚು ಮಾಡುವುದು ಅಂದರೆ ಬರುವ ಲಾಭಕ್ಕಿಂತ, ಅಧಿಕವಾಗಿರುತ್ತದೆ. ಅಂದರೆ ಸಾಲ ಮಾಡಿಕೊಂಡಾದರೂ ಸರಿ ಬೇಕಾಗಿರುವುದನ್ನು , ಖರೀದಿ ಮಾಡೋಣ ಅನ್ನುತ್ತಾರೆ. ಈಗ ಈಚೆ ಹೋದರೆ , ಕೈಯಲ್ಲಿ ದುಡ್ಡು ಇದೆಯೋ , ಇಲ್ಲವೋ ,ಎಂದು ನೋಡುವುದಿಲ್ಲ .

ಕಂಡಿದ್ದೆಲ್ಲಾ ಕೊಂಡುಕೊಳ್ಳಬೇಕು .ಆಮೇಲೆ ಹಣ ಕೊಡುವ ಸಂದರ್ಭದಲ್ಲಿ, ಮುಖ ಮುಖ ನೋಡಿಕೊಳ್ಳುತ್ತಾರೆ. ಇನ್ನು ಕೆಲವರು ಸ್ನೇಹಿತರ ಹತ್ತಿರ ಖರ್ಚು ಮಾಡಿಸಬಹುದು . ಅಥವಾ ತಮ್ಮ ಜೊತೆಗೆ ಯಾರಾದರೂ ಇದ್ದರೆ , ಅವರ ಹತ್ತಿರ ದುಡ್ಡು ತೆಗೆದುಕೊಂಡು ಆಮೇಲೆ ಕೊಡುತ್ತೇನೆ. ಮನೇಲಿ ಇಟ್ಟಿದ್ದೇನೆ. ಅಂತ ಅಥವಾ ಆನ್ಲೈನ್ ಪೇಮೆಂಟ್ ಮಾಡುವುದಕ್ಕೆ ಆಗುತ್ತಿಲ್ಲ. ಏನೋ ಸಮಸ್ಯೆ ಇದೆ . ಅಂತ ಜಾರಬಹುದು. ಹೀಗೆಲ್ಲಾ ಆದಾಗ ಕೆಲವರು ಅವಮಾನ, ಅನುಭವಿಸುವ ಸಾಧ್ಯತೆ ಕೂಡ ಇರುತ್ತದೆ .

ಇನ್ನು ಜೂಜು ಅಥವಾ ಟೆಂಡರ್ ಯೋಜನೆಯಲ್ಲಿ ಸೋಲಬಹುದು . ಅಂದುಕೊಂಡ ಯೋಜನೆ ,ಅಥವಾ ಕೆಲಸಗಳು, ನಿಮ್ಮ ಕೈ ತಪ್ಪಿ ಹೋಗಬಹುದು. ಇಲ್ಲ ಯಾವಾಗಲೂ , ನಿಮಗೆ ಯೋಜನೆಗಳು ಕೊಡುವವರು ನಿಮ್ಮನ್ನು ನಂಬದೇ ಇರಬಹುದು, ಮಾಡುವ ಕೆಲಸ ನಿಧಾನವಾಗುವುದರಿಂದ , ನೀವು ನಂಬಿಕೆ ಉಳಿಸಿಕೊಳ್ಳಲು, ಆಗದೆ ಇರಬಹುದು. ಒಟ್ಟಿನಲ್ಲಿ ನಿಮಗೆ ಸೋಲು ಕೊಡುತ್ತಾನೆ ಶನಿ. ಇನ್ನು ನೀವು ಉದ್ಯೋಗ ಮಾಡುತ್ತಿರುವ ಜಾಗದಲ್ಲಿ ಅಪವಾದ ಹೊರಿಸುವ ಸಾಧ್ಯತೆ ಕೂಡ ಇರುತ್ತದೆ . ಅಥವಾ ಎಲ್ಲರ ಮುಂದೆ ಬೈಗುಳವನ್ನು ಕೇಳಬಹುದು. ಇದರಿಂದ ಕೆಲವರು ಮಾನಸಿಕವಾಗಿ, ಖಿನ್ನತೆಗೆ ಒಳಗಾಗುತ್ತಾರೆ.

ಯೋಚನೆಗಳು ಹೆಚ್ಚಾಗಬಹುದು ಅಥವಾ ತಲೆಬಿಸಿಯಲ್ಲಿ ಮನೆಯವರ ಮುಂದೆ ಕೂಗಾಡಿ , ಅವರಿಗೆ ಇಂತದ್ದೆಲ್ಲಾ ಮಾಡಿ ಮನೆಯಲ್ಲಿ ಅಶಾಂತಿಯನ್ನು , ಸೃಷ್ಟಿಸುವ ಹಾಗೆ ಆಗುತ್ತದೆ. ಇದರಿಂದ ಬರಿ ಮನಸ್ತಾಪಗಳು ನೀವು ಯಾವುದೇ ರೀತಿಯಲ್ಲಿ ಕೂಗಾಡಿಬಿಟ್ಟು ಮನೆಯವರು, ಇದನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡು, ನಿಮ್ಮ ಜೊತೆ ತಿಂಗಳುಗಟ್ಟಲೆ ಮಾತನ್ನು ಬಿಡಬಹುದು. ಅದಕ್ಕೆ ತುಂಬಾ ಹುಷಾರಾಗಿ ಮಾತನಾಡುವ ಮುಂಚೆ ಯೋಚನೆ ಮಾಡಿ ಮಾತಾಡಿ. ಇನ್ನು ಆರೋಗ್ಯ ವಿಷಯದಲ್ಲೂ ಅಷ್ಟೇ, ಹುಷಾರಾಗಿರಬೇಕು. ಜಾಸ್ತಿ ಹೊರಗಿನ ಊಟ, ತಿಂಡಿ ಅಥವಾ ಇದರಿಂದ ಆಹಾರ ವಿಷವಾದರೂ ಆಗಬಹುದು .

ಅಥವಾ ಹಲ್ಲು ನೋವು, ವಾಂತಿ , ಇಂತಹದೊಂದು ಕೂಡ ಆಗುವ ಅವಕಾಶವಿರುತ್ತದೆ. ಆದಷ್ಟು ನೀವು ಕಣ್ಣಿನ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬೇಕು. ಹೆಚ್ಚಾಗಿ ಫೆಬ್ರವರಿ 11 ರಿಂದ ಮಾರ್ಚ್ 18ರ ತನಕ ಹುಷಾರಾಗಿ ನೋಡಿಕೊಳ್ಳಬೇಕು .ನೀವು ಇದನ್ನು ನಿರ್ಲಕ್ಷಿಸುವಂತಿಲ್ಲ. ಇನ್ನು ಮಾರ್ಚ್ 18ಕ್ಕೆ ಶನಿ ಉದಯವಾಗುತ್ತಾನೆ. ಅದರ ನಂತರ ನಿಮಗೆ ಪರಿಹಾರ ಸಿಗುತ್ತದೆ . ಸ್ವಲ್ಪ ಖುಷಿ ನಿಮ್ಮೊಂದಿಗೆ ಇರಬಹುದಾ, ಎಂದು ಕೇಳಿದರೆ, ಮೊದಲೇ ಹೇಳಿದ ಹಾಗೆ 50 -50 ಫಲಗಳು ಸ್ವಲ್ಪ ಸಮಾಧಾನ ಇದೆ.

ಅಂತ ಅನಿಸಬಹುದು. ಮಾರ್ಚ್, ಹದಿನೆಂಟರ ನಂತರ ಆದರೆ ಆ ಸಮಾಧಾನ ಜಾಸ್ತಿ ದಿನ ಇರುವುದಿಲ್ಲ. ಶನಿ ಮತ್ತೊಂದು, ದೀರ್ಘಾವಧಿ ಕಾಟ ಕೊಡುವುದಕ್ಕೆ, ತಯಾರಿ ಮಾಡಿಕೊಳ್ಳುತ್ತಾನೆ. ಸುಮಾರು ನಾಲ್ಕುವರೆ ತಿಂಗಳು ಕಾಲ ಆ ದುರದೃಷ್ಟ ಅನ್ನೋದು ಬೆನ್ನಿಗೆ, ಬೀಳುತ್ತದೆ, ಆ ದೀರ್ಘಾವಧಿ ಯಾವುದೆಂದರೆ , ಆ ಸಾಡೆ ಸಾತಿ ಮುಗಿದು ಹೊಸ ಜೀವನ ಶುರುವಾಗುವುದು . ಶನಿಯ ಮಂತ್ರಗಳನ್ನು ಪಠಿಸಿದರೆ , ಮನಸ್ಸಿಗೆ ಸ್ವಲ್ಪ ಶಾಂತಿ ನೆಮ್ಮದಿ ಸಿಗುತ್ತದೆ. ಜೂನ್ 29 2024 ಈ ದಿನಾಂಕ, ನಿಮ್ಮ ಮಟ್ಟಿಗೆ ತುಂಬಾ ಮುಖ್ಯವಾಗಿರುತ್ತದೆ . ಯಾಕೆಂದರೆ ನೇರವಾಗಿ ಚಲಿಸುತ್ತಿದ್ದ ಶನಿ ಈ ದಿನದಿಂದ ವಕ್ರವಾಗಿ ಚಲಿಸಲು, ಆರಂಭಿಸುತ್ತಾನೆ.

ಈ ದಿನದಿಂದ ಅನುಮಾನ, ಸಿಟ್ಟು , ಒತ್ತಡಗಳು, ಶುರುವಾಗುತ್ತದೆ , ಎಂದು ಹೇಳಬಹುದು. ಈಗ ಸರಿಯಾಗಿ ಯೋಚನೆ ಮಾಡುತ್ತಿರುವ ,ನಿಮ್ಮ ಬುದ್ಧಿಗೆ ಗ್ರಹಣ ಹಿಡಿಯುವ, ಸಂಭವವಿದೆ. ಅಂದರೆ ಹೇಳಿದ್ದಕ್ಕೆಲ್ಲ ವಕ್ರವಾಗಿ ವಕ್ರಶನಿಯ ಹಾಗೆ ಉತ್ತರ ಕೊಡಲು ,ಶುರು ಮಾಡಬಹುದು . ಸಣ್ಣ ಸಣ್ಣ ಮಾತಿಗೂ ಕೂಗಾಡಲು ,ಶುರು ಮಾಡಬಹುದು. ಹಾಗೆಯೇ ಶನಿಯು 2ನೇ ಮನೆಯಲ್ಲಿ ವಕ್ರನಾಗಿರುವುದರಿಂದ ಕುಟುಂಬದಲ್ಲಿ , ಅನಗತ್ಯವಾಗಿ ಮಾತಾಡಿ, ಅವರಿಗೆ ಬೇಜಾರಾಗುವ ರೀತಿ ನಡೆದುಕೊಳ್ಳುತ್ತೀರಾ. ಕೆಲವರಂತೂ ಕುಟುಂಬದ ಸದಸ್ಯರ ಮೇಲೆ ಆಪಾದನೆ ಮಾಡುವ ಸಾಧ್ಯತೆ ಹೆಚ್ಚಿದೆ.

ನಿಮ್ಮದು ಅವಿಭಕ್ತ ಕುಟುಂಬವಾದರೆ ಮಾಡುವ ತಿಂಡಿಯಿಂದ ಹಿಡಿದು, ಕೆಲಸದವರೆಗೆ ತಗಾದೆ ತೆಗೆಯುವ ಸಾಧ್ಯತೆ ಹೆಚ್ಚು. ವಿಭಕ್ತ ಕುಟುಂಬಗಳಾದರು, ಶನಿಯ ಕಾಟ ನಿಮಗೆ ತಪ್ಪಿದ್ದಲ್ಲ. ಬಹಳಷ್ಟು ಜನ ನೀವು ಕೊಟ್ಟಂತಹ ಮಾತನ್ನು ಉಳಿಸಿಕೊಳ್ಳಲು , ಶ್ರಮ ಪಡಬೇಕಾಗುತ್ತದೆ. ಮತ್ತು ಮನಸ್ತಾಪಗಳು ಉಂಟಾಗಬಹುದು. ಒಬ್ಬರನ್ನೊಬ್ಬರು , ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಕೆಲವರಂತೂ ,ಕೆಲಸದ ಒತ್ತಡದಿಂದ ಮನೆಯವರ ಮೇಲೆ ಕೋಪ ತೋರಿಸುವುದು ಸಾಮಾನ್ಯವಾಗಿರುತ್ತದೆ.

ಕೆಲವರಂತೂ ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಇನ್ಯಾವ ವಿಚಾರದಲ್ಲಿ ಶನಿ ಕೆಡಕು ತರಬಹುದು ಎಂದು ಯೋಚನೆ ಮಾಡಿದರೆ, ಓದಿನ ವಿಚಾರದಲ್ಲಿ ಓದಿದ್ದು ಚೆನ್ನಾಗಿ ಅರ್ಥ ಆಗಲ್ಲ. ಮತ್ತು ನೆನಪಿನಲ್ಲಿಟ್ಟುಕೊಳ್ಳಲು, ಸಾಧ್ಯವಾಗುವುದಿಲ್ಲ. ಬಹಳಷ್ಟು ಜನ ನಿಧಾನವಾಗಿ ,ಅರ್ಥ ಮಾಡಿಕೊಳ್ಳುವುದು, ನಿಧಾನವಾಗಿ ಕಲಿತುಕೊಳ್ಳುತ್ತೀರಾ. ಇದರಿಂದ ಪರೀಕ್ಷಾ ಸಮಯದಲ್ಲಿ, ತೊಂದರೆಯಾಗುತ್ತದೆ. ಈ ಶನಿಯನ್ನು ನಾವು ಮಂದ ಎಂದು ಕರೆಯುತ್ತೇವೆ .ಮಂದ ಎಂದರೆ ನಿಧಾನ ಮಾಡುವವನು ಎಂದರ್ಥ. ಇದರ ಜೊತೆಗೆ ಬರುವ ಹಣವು ಕೂಡ ನಿಧಾನವಾಗಿ ಬರುತ್ತದೆ.

ಬಹಳಷ್ಟು ಜನ ಕುಟುಂಬದವರ ಆಸೆಯನ್ನು ಈಡೇರಿಸಲು ಖರ್ಚು ಮಾಡುವ, ಸಾಧ್ಯತೆ ಹೆಚ್ಚು. ವ್ಯವಹಾರ ಮಾಡಲು ಮುಂದಾದರೆ ಆ ವ್ಯಕ್ತಿಯು ಪ್ರಾಮಾಣಿಕನೋ ಇಲ್ಲವೋ ಎಂದು ಯೋಚಿಸಿ. ಮೋಸ ಹೋಗುವ ಸಾಧ್ಯತೆ ಹೆಚ್ಚು . ಆದ್ದರಿಂದ ಈ ವೇಳೆಯಲ್ಲಿ ಹೂಡಿಕೆ ಒಳ್ಳೆಯದಲ್ಲ. ಸ್ವಲ್ಪ ದಿನಗಳು ಕಾಯುವುದು ಒಳ್ಳೆಯದು. ಇಲ್ಲವಾದರೆ ಹೆಚ್ಚಿನ ಏರಿಳಿತಗಳು , ಬರುವ ಸಾಧ್ಯತೆ . ಲಾಭಕ್ಕಿಂತ ನಷ್ಟವೇ ಅಧಿಕವಾಗಿರುತ್ತದೆ. ಇನ್ನು ಕೆಲವರಿಗೆ ತಿಳುವಳಿಕೆಯ ಕೊರತೆಯಿಂದ ,ಒಂದಷ್ಟು ನಷ್ಟಗಳನ್ನು ಅನುಭವಿಸಬಹುದು. ಕುಟುಂಬವರನ್ನು ದೂರ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.

ಇಲ್ಲವಾದರೆ ಅವರ ಜೊತೆ ವಿವಾದಗಳನ್ನು, ಸೃಷ್ಟಿ ಮಾಡಿಕೊಳ್ಳುತ್ತೀರಾ ಹುಷಾರಾಗಿರಿ. ಇನ್ನು ಆರೋಗ್ಯದ ವಿಚಾರಕ್ಕೆ ಬಂದರೆ ಶನಿ ಹಸ್ತನಾಗಿರುವುದರಿಂದ ಕಣ್ಣಿನ ವಿಚಾರದಲ್ಲಿ ಎಚ್ಚರವಾಗಿರಿ. ಅಂದರೆ ಕಣ್ಣಿನಲ್ಲಿ ನೋವು , ಹಲ್ಲು ನೋವು ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ನೀವು ಯಾರನ್ನು ತುಂಬಾ ನಂಬಲು ಹೋಗಬೇಡಿ . ಜೂನ್ 29 ರಿಂದ, ನವೆಂಬರ್ 15 ರ ತನಕ ನಾಲ್ಕುವರೆ ತಿಂಗಳ ಅವಧಿಯಲ್ಲಿ ಹಣಕಾಸಿನ ವ್ಯವಹಾರದಲ್ಲಿ ತುಂಬಾ ಹುಷಾರಾಗಿ ಇರುವುದು, ಅವಶ್ಯಕವಾಗಿದೆ. ಸಾಡೇ ಸಾತಿ ಕಳೆದು , ಒಳ್ಳೆಯ ದಿನಗಳು ಬರುವ ತನಕ ಹುಷಾರಾಗಿರಿ . ಆ ದಿನಾಂಕ ಯಾವುದೆಂದರೆ ಮಾರ್ಚ್ 29. 2025 ಒಂದು ವರ್ಷದ ಅವಧಿ ಇದೆ. ಅಲ್ಲಿಯ ತನಕ ಶನಿಯ ಪರಿಹಾರಕ್ಕಾಗಿ ಮಂತ್ರಗಳನ್ನು, ಪಠಿಸಿ ಪರಿಹಾರ ಮಾಡಿಕೊಳ್ಳಿ ಎಂದು ಹೇಳಲಾಗಿದೆ.

Leave a Comment