ಮಕರ ರಾಶಿಗೆ ಮಾರ್ಚ್ ಬೆಸ್ಟ್ ಯಾಕೆ?

ನಾವು ಈ ಲೇಖನದಲ್ಲಿ ಮಾರ್ಚ್ ತಿಂಗಳ ಮಕರ ರಾಶಿಯ ಮಾಸ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ.
ಮಾರ್ಚ್ ತಿಂಗಳಲ್ಲಿ ತಾಪಮಾನ ವಾತಾವರಣದ ವೈಪರಿತ್ಯಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತದೆ. ನಿಮ್ಮ ರಾಶಿಯಲ್ಲಿ ಕುಜ ಬಂದು ಕೂರುತ್ತಾನೆ. ಮಾನಸಿಕವಾಗಿ ಒತ್ತಡ ಮತ್ತು ಉದ್ವೇಗ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ . ವಿಶೇಷವಾಗಿ ಕೆಲಸದಲ್ಲಿ ಇರುವವರಿಗೆ ಆ ಕೆಲಸವನ್ನು ಉಳಿಸಿಕೊಳ್ಳುವ ಉದ್ವೇಗ ಜಾಸ್ತಿ ಇರುತ್ತದೆ. ಉಳಿಸಿಕೊಳ್ಳುವುದರ ಜೊತೆಗೆ ಅದರಲ್ಲಿ ಸಾಧನೆ ಮಾಡಿ ಬೆಳೆಸುವ ಸಾಧ್ಯತೆ ಇರುತ್ತದೆ .

ಇದರಿಂದ ಉಪಯೋಗ ಪಡೆದುಕೊಳ್ಳುವ ಆಸೆ ಆಕಾಂಕ್ಷೆಗಳು ಜಾಸ್ತಿ ಆಗುತ್ತದೆ. ಕೆಲಸ ಇಲ್ಲದವರಿಗೆ ಗಳಿಸಿಕೊಳ್ಳಬೇಕು ಮತ್ತು ಕಷ್ಟ ಪಡಬೇಕಾಗುತ್ತದೆ. ಹಾಗೆಯೇ ವ್ಯಾಪಾರ ವ್ಯವಹಾರ ಮಾಡುವ ವ್ಯಕ್ತಿಗಳಿಗೆ ಮಾನಸಿಕ ಒತ್ತಡ ಸರ್ವೇ ಸಾಮಾನ್ಯವಾಗಿರುತ್ತದೆ. ಜೀವನದಲ್ಲಿ ಇದ್ದರೂ ಕಷ್ಟ . ಇಲ್ಲದಿದ್ದರೂ ಕಷ್ಟ . ಇವುಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ನಿಮಗೆ ಈ ತಿಂಗಳಲ್ಲಿ ಯಾವುದೇ ಗ್ರಹ ಸಹಾಯಕ್ಕೆ ಬರುವುದಿಲ್ಲ . ಆಕಸ್ಮಿಕವಾಗಿ ಬರುವ ಕಷ್ಟಗಳಿಂದ ನೀವು ತಪ್ಪಿಸಿಕೊಳ್ಳುತ್ತೀರಿ .

ಯಾವುದೇ ಒಂದು ವಿಷಯ ನಿಮ್ಮ ಸಹಾಯಕ್ಕೆ ಬರುತ್ತದೆ. ಈ ತಿಂಗಳಲ್ಲಿ ಅಷ್ಟೇನೂ ತಲೆ ನೋವು ತರುವ ಸಮಸ್ಯೆ ಇರುವುದಿಲ್ಲ. ಹೀಗೆ ಮಾರ್ಚ್ ತಿಂಗಳಲ್ಲಿ ರಕ್ಷಣೆ ನೀಡುವ ಗ್ರಹಗಳು ಯಾವುದು , ಯಾವ ರೀತಿ ಕಾಪಾಡುತ್ತವೆ . ಯಾವ ವಿಚಾರಗಳು ನಿಮಗೆ ಸಿಗೋದಿದೆ, ಅದರಿಂದ ನಿಮ್ಮ ಪ್ರಗತಿ ಹೇಗೆ, ಅದರಿಂದ ನಿರಾಂತಕವಾಗಿ ಸಾಗುವಂತಹ ಸಾಧ್ಯತೆಗಳು ಹೆಚ್ಚು ಇವೆ, ಈ ಮಾರ್ಚ್ ತಿಂಗಳಲ್ಲಿ ಮತ್ತು ನಿಮ್ಮ ಮಟ್ಟಿಗೆ ಮಾರ್ಚ್ ಒಳ್ಳೆಯ ತಿಂಗಳು ಆಗೋದಿದೆ.
ಜೀವನದಲ್ಲಿ ಉದ್ವೇಗ ಕೊಡುವುದಕ್ಕೆ ಅಥವಾ ಕಾಲು ಎಳೆಯುವುದಕ್ಕೆ , ನಮ್ಮನ್ನು ನೋಯಿಸುವುದಕ್ಕೆ ತುಂಬಾ ಜನರು ಇರುತ್ತಾರೆ .

ಒಳ್ಳೆಯ ಸ್ನೇಹಿತರು ವಿರಳ . ಆದರೆ ವಿರಳವಾಗಿರುವ ಒಳ್ಳೆಯ ವ್ಯಕ್ತಿಗಳು ನಮ್ಮನ್ನು ದಡದವರೆಗೆ ಕರೆದುಕೊಂಡು ಹೋಗಿ ನಮ್ಮನ್ನು ಕಾಪಾಡುತ್ತಾರೆ . ಬೇರೆಯವರು ನಮ್ಮ ಬಗ್ಗೆ ಕೆಟ್ಟ ಮಾತುಗಳನ್ನು ಆಡಿದಾಗ ನಮ್ಮನ್ನು ವಹಿಸಿಕೊಂಡು ಮಾತನಾಡುತ್ತಾರೆ . ನಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುತ್ತದೆ .ಈ ರೀತಿಯ ರಕ್ಷಣೆ ನೀಡುವ ಎರಡು ಗ್ರಹಗಳು ಇದ್ದಾವೆ . ಈ ಹಿಂದೆ ಕೂಡ ಮಕರ ರಾಶಿಗೆ ಅವೆರಡು ಗ್ರಹಗಳು ಸಹಕಾರಿಯಾಗಿದ್ದವು . ದ್ವಿತೀಯದಲ್ಲಿ ಶನಿ ಇರುವುದರಿಂದ ನಿಮ್ಮ ಗಮನ ಹಣದ ಕಡೆ ಹೆಚ್ಚಾಗಿ ಹೋಗುತ್ತದೆ . ನಿಮಗೆ ಒಂದು ರೀತಿ ಆತುರ , ಉದ್ವೇಗ , ಬಿಕ್ಕಟ್ಟು , ಚಡಪಡಿಕೆ ,

ಇದೆಲ್ಲಾ ತುಂಬಾ ಜಾಸ್ತಿ ಆಗುತ್ತಾ ಹೋಗುತ್ತದೆ . ಎರಡೂ ಗ್ರಹಗಳ ರಕ್ಷಣೆ ಮಾಡುತ್ತವೆ . ನಿಮ್ಮ ಜೀವನದಲ್ಲಿ ಯಶಸ್ಸು ಆಗುತ್ತದೆ . ಮಾರ್ಚ್ ತಿಂಗಳಲ್ಲಿ ಶುಕ್ರ ಗ್ರಹ ದ್ವಿತೀಯ ಭಾವದಲ್ಲಿ ಅಥವಾ ತೃತೀಯ ಭಾವದಲ್ಲಿರುತ್ತದೆ . ಈ ಎರಡೂ ಗ್ರಹಗಳ ಕಾಂಬಿನೇಷನ್ ಮಕರ ರಾಶಿ ಅವರಿಗೆ ಬಹಳ ಒಳ್ಳೆಯ ಪರಿಣಾಮವನ್ನು ತರುತ್ತವೆ . ಧನಾಗಮನ ಹೆಚ್ಚಾಗುವ ಸಾಧ್ಯತೆ ಇದೆ . ಹಣ ಬರುವ ಸಾವಿರಾರು ದಾರಿಗಳು ಇರುತ್ತವೆ. ಒಂದಲ್ಲಾ ಒಂದು ಮೂಲದಿಂದ ಹಣವನ್ನು ನಿರೀಕ್ಷೆ ಮಾಡುತ್ತೇವೆ.

ನಾನಾ ವಿಧಾನಗಳಲ್ಲಿ ನಮಗೆ ಹಣ ಕೈ ಸೇರಬೇಕಾಗಿರುತ್ತದೆ. ದ್ವಿತೀಯ ಭಾವದಲ್ಲಿ ಶುಕ್ರ ಇರುವುದರಿಂದ ಖುಷಿ ಕೂಡ ಇರುತ್ತದೆ . ನಿಮಗೆ ಶಕ್ತಿ ಉತ್ಸಾಹ ಹೆಚ್ಚಿಗೆ ಆಗುತ್ತದೆ . ಹಾಗೆಯೇ ಗೆಳೆಯರು ಮತ್ತು ಇಷ್ಟಪಡುವ ವ್ಯಕ್ತಿಗಳ ಜೊತೆ ಸಮಯವನ್ನು ಕಳೆಯಬಹುದು . ವಿರಾಮಕ್ಕೆ ಮತ್ತು ಸುಖಕ್ಕೆ ಹೆಚ್ಚಿನ ಸಮಯ ಸಿಗುತ್ತದೆ .ವಿದ್ಯಾರ್ಥಿಗಳ ಮಟ್ಟಿಗೆ ಬಹಳ ಒಳ್ಳೆಯದಾಗುತ್ತದೆ . ಬುಧ ಕೂಡ ಒಳ್ಳೆಯ ಸ್ಥಾನದಲ್ಲಿ ಇರುತ್ತಾನೆ. ಮಕರ ರಾಶಿಯ ವಿದ್ಯಾರ್ಥಿಗಳ ಮಟ್ಟಿಗೆ ಈ ಒಂದು ತಿಂಗಳು ಬಹಳ ಚೆನ್ನಾಗಿರುತ್ತದೆ . ಶ್ರಮ ಪಟ್ಟು ಓದುವ ವಿದ್ಯಾರ್ಥಿಗಳಿಗೆ ಮರೆತು ಹೋಗುವುದು,

ಬಿಟ್ಟು ಹೋಗುವುದು, ಯಾವುದೇ ರೀತಿಯ ಗೊಂದಲ ಇರುವುದಿಲ್ಲ . ಹಾಗೆಯೇ ಮರೆತಿರುವ ವಿಚಾರದಲ್ಲಿ ಕೆಲವೊಂದು ತಪ್ಪುಗಳು ಆಗುವ ಸಾಧ್ಯತೆ ಇರುತ್ತದೆ . ಯಾವುದೋ ಒಂದು ವಿಚಾರಕ್ಕೆ ಉದ್ರೇಕವಾಗಿ ಅಥವಾ ಸಿಟ್ಟಿನಿಂದ ಮಾತಾಡಬಹುದು. ಇಂತಹ ವಿಚಾರದಲ್ಲಿ ಸುಧಾರಣೆಯನ್ನು ನೀವೇ ಕಂಡುಕೊಳ್ಳುತ್ತೀರಾ .ಮತ್ತೆ ಸಮಾಧಾನದಿಂದ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಕೊಳ್ಳಬಹುದು. ಜಗಳ ಆದರೂ ಕೂಡ ರಾಜಿ ಆಗುವ ಪರಿಸ್ಥಿತಿ ಇದಾಗಿದೆ.

ಸ್ವಲ್ಪ ಶತ್ರುಗಳ ಕಾಟ ಇದೆ. ಈ ತರಹದ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಬರುತ್ತಿರುತ್ತವೆ. 2ನೇ ತಾರೀಖಿನ ನಂತರ ಬುಧ ಚತುರ್ಥ ಭಾವಕ್ಕೆ ಪರಿವರ್ತನೆ ಆಗುತ್ತದೆ. ಆಗ ನಿಮಗೆ ಜಗಳ , ಶತ್ರು ಭಯ ದೂರವಾಗುತ್ತದೆ. 7 ನೇ ತಾರೀಖಿನ ನಂತರ ವಿದ್ಯಾರ್ಥಿಗಳಿಗೆ ಇನ್ನೂ ವಿಶೇಷವಾಗಿ ಚೆನ್ನಾಗಿ ಇರುತ್ತದೆ. ಬುಧ ಗ್ರಹ ಶಕ್ತಿಯುತ ಪರಿಸ್ಥಿತಿಗೆ ಬರುತ್ತದೆ. ಬುಧ ಗ್ರಹಕ್ಕೆ ನೀಚತ್ವ ಕೂಡ ದೂರವಾಗುತ್ತದೆ. ಚತುರ್ಥ ಭಾವಕ್ಕೆ ಬಂದಾಗ, ವಿದ್ಯಾರ್ಥಿಗಳಿಗೆ ಸಾಹಸ ಪ್ರವೃತ್ತಿ , ಉತ್ಸಾಹ , ಓದು , ಇವುಗಳೆಲ್ಲವನ್ನೂ ಬುಧ ನಿಮಗೆ ಕೊಡುತ್ತಾನೆ. ಹೆಚ್ಚಾಗಿ ಗಮನ ಕೊಡಿ . ವಿದ್ಯಾರ್ಥಿಗಳು ಗಡಿ ಬಿಡಿ ಆಗಬಾರದು .

ಉದ್ರೇಕಕ್ಕೆ ಒಳಗಾಗಬಾರದು . ಮನಸ್ಸಿನಲ್ಲಿ ಒಂದು ಸಲ “ಓಂ” ಎಂದು ಹೇಳಿಕೊಳ್ಳಿ . ಓಂಕಾರ ಎನ್ನುವುದು ಮನಸ್ಸನ್ನು ಹತೋಟಿಯಲ್ಲಿ ಅಥವಾ ಶಾಂತವಾಗಿ ಇಡುವುದಕ್ಕೆ ಮತ್ತು ನೆನಪುಗಳು ಮಾಸದಂತೆ ತಡೆಯುವುದಕ್ಕೆ . ಈ ಒಂದು ಕ್ರಮ ಕೈಗೊಳ್ಳಬೇಕು . ಏಕಾಗ್ರತೆಯನ್ನು ಜಾಸ್ತಿ ಮಾಡಿಕೊಳ್ಳುವುದಕ್ಕೆ ಈ ಸಮಯವನ್ನು ಪ್ರಾಣಾಯಾಮ ಮಾಡಲು ಬಳಸಿಕೊಳ್ಳಬೇಕು. 14ನೇ ತಾರೀಖಿಗೆ ರವಿ ಕುಂಭ ರಾಶಿಯಿಂದ ಮೀನ ರಾಶಿಗೆ ಹೋದಾಗ ಒಳ್ಳೆಯ ಪರಿವರ್ತನೆ ಆಗುತ್ತದೆ. ರವಿ ದೂರ ಹೋದಾಗ ತಾಪಮಾನ ಅನ್ನೋದು ಕಡಿಮೆಯಾಗುತ್ತದೆ . ರಾಶಿಯಿಂದ ದೂರ ಹೋದಾಗ .

ಹತ್ತಿರ ಇದ್ದಾಗ ಬೆಂಕಿಯ ರೀತಿ ಸುಡುತ್ತಿರುತ್ತದೆ . ದೂರ ಹೋದರೆ ವಿಶೇಷವಾಗಿ ಒಳ್ಳೆಯ ಪರಿಣಾಮ ಉಂಟಾಗುತ್ತದೆ . ತೃತೀಯ ಭಾವವನ್ನು ವಿಕ್ರಮ ಸ್ಥಾನ ಎಂದು ಕರೆಯುತ್ತೇವೆ . ಸಾಹಸ ಪ್ರಜ್ಞೆ ಹೆಚ್ಚಾಗುತ್ತದೆ . ರವಿ ಗ್ರಹಕ್ಕೆ ಬಹುಮಾನಗಳನ್ನು ಕೊಡುವ ಶಕ್ತಿ ಇರುತ್ತದೆ. ಮಾರ್ಚ್ ತಿಂಗಳ ಕೊನೆಯಲ್ಲಿ ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುತ್ತದೆ . ಇದು ಎಷ್ಟೋ ವರ್ಷದ ಹೋರಾಟ ಆಗಿರುತ್ತದೆ . ಇಂತಹ ಪರಿವರ್ತನೆಗಳಿಗೆ ದಾರಿ ಮಾಡಿಕೊಡುತ್ತದೆ . ನೀವು ಒಂದು ಕಡೆ ಹೂಡಿಕೆ ಮಾಡಿದ್ದರೆ ಆ ಸ್ವತ್ತಿನ ಮೌಲ್ಯ ಹೆಚ್ಚಾಗುತ್ತದೆ .ಇದು ಹಲವಾರು ರೀತಿಯಲ್ಲಿ ನಿಮ್ಮ ಅನುಭವಕ್ಕೆ ಬರುತ್ತವೆ .

ನಮ್ಮ ಜೀವನದಲ್ಲಿ ಹೂಡಿಕೆ ಅನ್ನುವುದು ಬೇರೆ ಬೇರೆ ರೀತಿಯಲ್ಲಿ ಇರುತ್ತದೆ . ನೀವು ಕೆಲವು ವ್ಯಕ್ತಿಗಳಿಂದ ವಿಶ್ವಾಸ ಅಥವಾ ಭರವಸೆಯನ್ನು ಪಡೆದುಕೊಳ್ಳಬಹುದು. ದಯೆ , ಕರುಣೆ , ನ್ಯಾಯ ಪಾಲನೆ ಮಾಡುವುದು, ಬೇರೆಯವರಿಗೆ ಸಹಾಯ ಮಾಡುವುದು , ಈ ತರಹದ ಗುಣ ಒಂದು ರೀತಿಯ ಸ್ವತ್ತು ಆಗಿರುತ್ತದೆ . ಈ ಸ್ವತ್ತಿಗೆ ಬೆಲೆ ಜಾಸ್ತಿ ಇರುತ್ತದೆ .ಯಾವಾಗ ಎಂದರೆ ಇದು ಜನರಿಂದ ಗುರುತಿಸಲ್ಪಟ್ಟಾಗ ಬೆಲೆ ಹೆಚ್ಚಿಗೆ ಆಗುತ್ತದೆ . ಎಷ್ಟು ಜನ ಸಮಾಜ ಸೇವಕರು ಸಾಧಕರು ಇರುತ್ತಾರೆ. ಇವರಿಗೆ ಹಣ ಗಳಿಸಲು ಸಾಧ್ಯವಿರುವುದಿಲ್ಲ . ಆದರೆ ರವಿ ಗ್ರಹ ಇಂತಹ ಹೆಸರು, ಖ್ಯಾತಿಯನ್ನು ,

ಅವರು ಮಾಡುವ ಕೆಲಸಕ್ಕೆ ಒಂದು ರೀತಿಯ ಪ್ರಕಾಶವನ್ನು ತಂದು ಕೊಡುತ್ತಾನೆ . ಇಷ್ಟೆಲ್ಲಾ ಇದೆ ಎಂದರೆ ಒಂದು ದಿನ ಹಣ ಅವರನ್ನು ಹಿಂಬಾಲಿಸುತ್ತಾ ಬರುತ್ತದೆ . ಭರವಸೆ ಇಟ್ಟುಕೊಳ್ಳಿ ಸೂರ್ಯ ದೇವರು ಯಾವಾಗಲೂ ಯಶಸ್ಸನ್ನೇ ತಂದು ಕೊಡುತ್ತಾರೆ . ಸೂರ್ಯ ಗ್ರಹ ತೃತೀಯ ಭಾವದಲ್ಲಿ ಇರುವಾಗ . ಒಂದಷ್ಟು ರಾಶಿಗಳು ನಿಮ್ಮ ರಾಶಿಯಲ್ಲಿ ಕೂತಿರುತ್ತದೆ. ನಿಮಗೆ ಸಾಡೇಸಾತಿ ನಡೆಯುತ್ತಿರುತ್ತದೆ . ದ್ವಿತೀಯ ಭಾವದಲ್ಲಿ ಶನಿ . ಹಣದ ಕಡೆ ಹೆಚ್ಚಿನ ಗಮನ ಇರುತ್ತದೆ .

ಇದು ಮುಂದುವರಿಯುತ್ತದೆ. ಕೆಲವು ಪಾಲು ಹಣ ನಿಮಗೆ ಸಿಗುತ್ತಲೇ ಇರುತ್ತದೆ . ರಾಶಿಯಾಧಿಪತಿಯಾಗಿ ದ್ವಿತೀಯ ಸ್ಥಾನ ಅಂದರೆ ಧನ ಸ್ಥಾನ ದುಡ್ಡಿಗೆ ವಿಶೇಷವಾದ ತೊಂದರೆ ಮಾಡುವುದಿಲ್ಲ . ಹಣಕ್ಕೆ ಅವಶ್ಯಕತೆ , ಬೇಡಿಕೆ , ಅಪೇಕ್ಷೆ , ತುಂಬಾ ಇರುತ್ತವೆ . ದಿನಗಳು ಕಳೆದ ಆಗ ಪ್ರತಿಕ್ಷಣ ಪರಿವರ್ತನೆ ನಡೆಯುತ್ತಲೇ ಇರುತ್ತದೆ. ಪ್ರಕೃತಿ ನಿಮ್ಮನ್ನು ಧನಾತ್ಮಕತೆಯ ಕಡೆ ತೆಗೆದುಕೊಂಡು ಹೋಗುತ್ತದೆ . ಇದನ್ನು ನೀವು ಉಪಯೋಗಿಸಿಕೊಳ್ಳಬೇಕು. ಮಕರ ರಾಶಿ ವ್ಯಕ್ತಿಗಳು ಯಾವತ್ತಿಗೂ ಸಾಹಸ ಪ್ರಿಯರು ಆಗಿರುತ್ತಾರೆ . ಸದ್ಯದ ಪರಿಸ್ಥಿತಿಗಳು ನಿಮ್ಮನ್ನು ಇನ್ನಷ್ಟು ಸಾಹಸಕ್ಕೆ ಪ್ರೇರೇಪಿಸುತ್ತವೆ .

ತೃತೀಯದಲ್ಲಿ ಇರುವ ರಾಹು ಸತತವಾಗಿ ಪರಾಕ್ರಮವನ್ನು ಜಾಸ್ತಿ ಮಾಡುತ್ತದೆ . ಇದು ಸಾಕಷ್ಟು ಧೈರ್ಯವನ್ನು ಕೂಡ ಕೊಡುತ್ತದೆ . ಕೆಲವರು ವ್ಯಕ್ತಿಗಳಲ್ಲಿ ಬಹಳ ಅದ್ಭುತ ಮತ್ತು ವಿಶೇಷವಾದ ಬದಲಾವಣೆಗಳು ಹಟಾತ್ತಾಗಿ ಸಂಭವಿಸುವ ಸಾಧ್ಯತೆ ಇದೆ .ತೃತೀಯದಲ್ಲಿ ರಾಹು ತರುವ ಪರಿವರ್ತನೆ ಇದಾಗಿರುತ್ತದೆ .ನಿಮ್ಮ ಪ್ರಯತ್ನ ಒಂದು ಮಟ್ಟಕ್ಕೆ ಒಳ್ಳೆಯ ಅಂಶಗಳಿಂದ ಕೇಂದ್ರೀಕರಣಗೊಂಡು
ನಿಮ್ಮ ಅನುಭವ ಕೂಡ ಬಹಳ ಪಕ್ವವಾಗಿ ಇದೆ ಎಂದು ಅನುಭವಕ್ಕೆ ಬರುತ್ತದೆ. ರಾಹು ತೃತೀಯದಲ್ಲಿ ಇರುವ ಸಂದರ್ಭ ಬಹಳ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸುತ್ತದೆ. ನೀವು ಗಮನಿಸಿ ಅಥವಾ ಗಮನಿಸದೇ ಇದ್ದರೂ ,ನಿಮ್ಮ ಜೀವನ ಧನಾತ್ಮಕವಾಗಿ ವಾಲುತ್ತಾ ಇರುತ್ತದೆ .

Leave a Comment