ಮಕರ ರಾಶಿಯವರ ಗುರು ಗೋಚಾರ ಫಲಗಳ ಬಗ್ಗೆ ತಿಳಿದುಕೊಳ್ಳೋಣ

0

ನಾವು ಈ ಲೇಖನದಲ್ಲಿ ಮಕರ ರಾಶಿಯವರ ಗುರು ಗೋಚಾರ ಫಲಗಳ ಬಗ್ಗೆ ತಿಳಿದುಕೊಳ್ಳೋಣ. 2023ರಲ್ಲಿ ಗುರು ಅಷ್ಟೇನೂ ಒಳ್ಳೆ ಫಲಗಳನ್ನು ನಿಮಗೆ ಕೊಟ್ಟಿರಲಿಲ್ಲ . ನಿಮ್ಮ ಸುಖ ಶಾಂತಿ ನೆಮ್ಮದಿಗೆ ಭಂಗ ಬಂದಿರಬಹುದು. ಬಹಳಷ್ಟು ಜನರಿಗೆ 2024ರಲ್ಲಿ ಬಹಳ ಅದೃಷ್ಟವೂ ಒಲಿಯುವ ವರ್ಷವಾಗಿದೆ. ನೀವು ಅಂದುಕೊಂಡ ಅಂತಹ ಕೆಲಸವನ್ನು ಬಹಳ ಬೇಗನೆ ಕಾರ್ಯರೂಪಕ್ಕೆ ತರುತ್ತೀರಾ. ಅದ್ಭುತ ಪ್ರತಿಭೆ ಮತ್ತು ವಿದ್ಯೆಯಿಂದ ನೀವು ಮಿಂಚುವ ದಿನಗಳು ಹತ್ತಿರ ಬರುತ್ತಿವೆ.

ನಿಮಗೆ ಗುರು ಪರಿವರ್ತನೆ 2024 ಮೇ 1 ರಂದು ಆಗಲಿದೆ. ಅದು ನಿಮ್ಮ ಐದನೇ ಮನೆಯಾದ ವೃಷಭ ರಾಶಿಗೆ ಗುರು ಹೋಗಲಿದ್ದಾನೆ. ಇದರಿಂದ ನಿಮಗೆ ಏನೇನು ಲಾಭಗಳು ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಗುರುವು ಪಂಚಮ ಸ್ಥಾನ ಎನ್ನುವುದು ಪೂರ್ವ ಪುಣ್ಯವಾಗಿದೆ .ಹಿಂದೆ ನಾವು ಯಾವಾಗಲೋ ಮಾಡಿದ ಪುಣ್ಯದ ಫಲಗಳನ್ನು ತಂದುಕೊಡುತ್ತದೆ . ಮಕ್ಕಳು, ಅದೃಷ್ಟ ,ಈ ರೀತಿಯ ಫಲಗಳಿಗೆ ಸಂಬಂಧಿಸಿರುತ್ತದೆ. ಗುರುವಿನ ನೇರ ದೃಷ್ಟಿಯು ಪಂಚಮ ಸ್ಥಾನದಲ್ಲಿ ಇರುವುದರಿಂದ ಮಕ್ಕಳ ಬಗ್ಗೆ ಇರುವ ತೊಂದರೆಗಳನ್ನು ಪರಿಹಾರ ಮಾಡುತ್ತದೆ.

ಮಕ್ಕಳಾಗಿಲ್ಲ ಎನ್ನುವ ತೊಂದರೆ ಇದ್ದರೆ ಮತ್ತು ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರೆ ,ಇದು ಪೂರ್ಣವಾಗುತ್ತದೆ. ಗುರುಪುತ್ರ ಕಾರಕನಾಗಿದ್ದಾನೆ . ಮಕ್ಕಳು ಸರಿಯಾದ ದಾರಿಯಲ್ಲಿ ನಡೆಯುತ್ತಿಲ್ಲವಾದರೆ. ಮತ್ತು ಆರೋಗ್ಯದಲ್ಲಿ ಹೆಚ್ಚಿನ ಸಮಸ್ಯೆಗಳಿದ್ದರೆ ಅದು ಈ ಅವಧಿಯಲ್ಲಿ ನಿಮಗೆ ಪರಿಹಾರವಾಗುತ್ತದೆ. ಗುರುವನ್ನು ಪುಷ್ಟಿ ಕಾರಕ ಎಂದು ಸಹ ಕರೆಯುತ್ತಾರೆ . ಪಂಚಮದಲ್ಲಿ ಇದ್ದುಕೊಂಡು ಗುರುವು ಮಕ್ಕಳ ದೈಹಿಕ ಅಭಿವೃದ್ಧಿಯಾಗುತ್ತದೆ. ಮತ್ತು ಪೌಷ್ಟಿಕಾಂಶಗಳು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸಿಗುವಂತೆ ಆಗುತ್ತದೆ. ಮಕ್ಕಳಿಗೆ ಆಲಸಿತನವಿದ್ದರೆ ಮಕ್ಕಳು ಸರಿಯಾದ ಸಮಯಕ್ಕೆ ಮನೆಗೆ ಬರದೇ ಇದ್ದರೆ ಗುರು ಐದನೇ ಸ್ಥಾನದಲ್ಲಿರುವುದರಿಂದ

ಈ ಎಲ್ಲ ಸಮಸ್ಯೆಗಳನ್ನು ದೂರ ಮಾಡುತ್ತಾನೆ. ಮಕ್ಕಳ ನಿಧಾನವಾಗಿ ನಿಮ್ಮ ಮಾತನ್ನು ಕೇಳಲು ಶುರು ಮಾಡುತ್ತಾರೆ. ಮಕ್ಕಳಿಗೆ ಸರಿ ತಪ್ಪುಗಳ ನಿರ್ಧಾರದ ಬಗ್ಗೆ ಅರಿವಾಗುತ್ತದೆ. ಹೆಚ್ಚಿನ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಏಳಿಗೆಯಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿಮ್ಮ ಮಕ್ಕಳಿಗೆ ಜಯ ಸಿಗಲಿದೆ .ಮತ್ತು ಕಲೆ, ಸಾಹಿತ್ಯ ,ವಿಜ್ಞಾನ ,ಇಂತಹ ಕ್ಷೇತ್ರದಲ್ಲಿ ಒಳ್ಳೆಯ ಪ್ರಶಂಸೆಯನ್ನು ಸಹ ಪಡೆಯುತ್ತಾರೆ. ಬಹಳಷ್ಟು ಜನ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯದಿಂದ ಗೆಲುವನ್ನು ಸಾಧಿಸುತ್ತಾರೆ.

ಕೆಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರೆ ಅದರಲ್ಲಿ ನೀವು ಜಯಗಳಿಸುವಿರಿ. ಕಳೆದ ವರ್ಷ ನೀವು ಧಾರ್ಮಿಕ ಆಚರಣೆಗಳಲ್ಲಿ ನಕರಾತ್ಮಕ ನಿಲುವನ್ನು ಬೆಳೆಸಿಕೊಂಡಿದ್ದರೆ ಅದು ಈ ವರ್ಷದಲ್ಲಿ ಕಡಿಮೆಯಾಗಲಿದೆ. ದೇವರಲ್ಲಿ ನಂಬಿಕೆ ಹೆಚ್ಚಾಗುತ್ತದೆ. ಆಚರಣೆಗಳನ್ನು ನೀವು ಅನುಸರಿಸುತ್ತೀರಾ. ಮಾರ್ಗದರ್ಶನ ಮತ್ತು ಗುರುಗಳ ಆಶೀರ್ವಾದವು ಸಹ ನಿಮಗೆ ದೊರೆಯುತ್ತದೆ. ಗುರುವು ಪಂಚಮ ಸ್ಥಾನದಲ್ಲಿ ಇರುವುದರಿಂದ ಮದುವೆಗೆ ಒಳ್ಳೆಯ ಸಕಾಲವಾಗಿರುತ್ತದೆ ಮತ್ತು ನಿಂತು ಹೋದ ಮದುವೆಗಳು ಸಹ ನಡೆಯುತ್ತದೆ. ಪ್ರೀತಿ ಪ್ರೇಮದ ವಿಷಯದಲ್ಲೂ ಸಹ ನೀವು ಜಯಗಳಿಸುವಿರಿ. ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.

ದೀರ್ಘಾವಧಿಯ ಪ್ರಯಾಣದ ಸಾಧ್ಯತೆಯೂ ಕಂಡುಬರುತ್ತದೆ. ಸಾಮಾಜಿಕವಾಗಿ ನಿಮಗೆ ಗೌರವ ಸನ್ಮಾನಗಳು ದೊರೆಯುತ್ತದೆ. ಸಕಾರಾತ್ಮಕ ಬೆಳವಣಿಗೆ ಹೆಚ್ಚಿಗೆ ಆಗುತ್ತದೆ. ಮೇ ಒಂದು 2024ಕ್ಕೆ ಗುರು ಬಲವು ಶುರುವಾಗಿ ಮೇ 14, 2025 ರ ತನಕ ಇರುತ್ತದೆ. ಅಲ್ಲಿಯ ತನಕ ನೀವು ಒಳ್ಳೆಯ ಫಲಗಳನ್ನೇ ಕಾಣುತ್ತೀರ. ಗುರು ಒಳ್ಳೆಯ ಸ್ಥಾನದಲ್ಲಿದ್ದಾಗ ನಿಮಗೆ ಇರುವ ಆಲಸಿತನವು ದೂರವಾಗುತ್ತದೆ .ಬಹಳಷ್ಟು ಜನರ ಮನಸ್ಥಿತಿಯಲ್ಲಿ ಬದಲಾವಣೆ ಉಂಟಾಗುತ್ತದೆ. ನಿಮ್ಮಲ್ಲಿ ನಕಾರಾತ್ಮಕ ಬದಲಾವಣೆಗಳು ದೂರವಾಗಿ ಸಕಾರಾತ್ಮಕತೆಯು ಬೆಳೆಯುತ್ತದೆ.

ಕೆಲಸವನ್ನು ಬಹಳ ಶ್ರದ್ಧೆ ಮತ್ತು ನಂಬಿಕೆಯಿಂದ ಕೆಲಸವನ್ನು ಸಕ್ರಿಯವಾಗಿ ಪೂರೈಸುವಿರಿ. ನಾನು ಮಾಡಿದ ಕೆಲಸವೇ ಸರಿ ಎನ್ನುವ ಬುದ್ಧಿ ಮಕರ ರಾಶಿಯವರಿಗೆ ಹೆಚ್ಚಿಗೆ ಇರುತ್ತದೆ. ಗುರುವು ಪಂಚಮ ಸ್ಥಾನದಲ್ಲಿದ್ದಾಗ ಆಧ್ಯಾತ್ಮಿಕತೆ ಕಡೆಗೆ ಒಲವು ಹೆಚ್ಚಾಗಿ ನಾನೇ ಸರಿ ಎನ್ನುವ ಬುದ್ಧಿಯು ದೂರವಾಗುತ್ತದೆ. ಗುರು ಹಿರಿಯರಿಗೆ ಹೆಚ್ಚಿಗೆ ಗೌರವ ನೀಡಿ ಅವರ ಮಾರ್ಗದರ್ಶನದಂತೆ ನಡೆಯುತ್ತಾರೆ. ಸಾಲ ಸೌಲಭ್ಯಗಳನ್ನು ತೆಗೆದುಕೊಂಡಿರುವವರಿಗೆ ಅವರ ಪರಿಸ್ಥಿತಿಯು ನಿದಾನವಾಗಿ ಸುಧಾರಿಸುತ್ತದೆ.

ಹಣಕಾಸಿನ ಮೂಲಗಳು ಹೆಚ್ಚಾಗುತ್ತದೆ. ಅರ್ಧಕ್ಕೆ ನಿಂತು ಹೋಗಿರುವ ಕೆಲಸಗಳು ಮತ್ತೆ ಶುರುವಾಗುತ್ತದೆ. ಹೂಡಿಕೆ ಮಾಡಿದರೆ ಅದರಲ್ಲಿ ಲಾಭವು ಸಹ ಬರುತ್ತದೆ. ಶೇರು ಭೂಮಿ ಆಭರಣ ಇವುಗಳಲ್ಲಿ ನೀವು ಹೂಡಿಕೆ ಮಾಡಿದರೆ ಅದರ ಫಲ ನಿಮ್ಮ ಕಷ್ಟಕಾಲದಲ್ಲಿ ಸಿಗುತ್ತದೆ. ಖರ್ಚನ್ನು ನಿಯಂತ್ರಣದಲ್ಲಿಡಿ. ನಿಮ್ಮ ಕೆಲಸದಲ್ಲಿ ಹೆಚ್ಚು ಯೋಜನೆಗಳನ್ನು ಪಡೆದುಕೊಳ್ಳಬಹುದು. ಮತ್ತು ಗ್ರಾಹಕರ ಸಂಖ್ಯೆಯು ಸಹ ಹೆಚ್ಚಿಗೆ ಆಗಬಹುದು.‌ ನಿಮಗೆ ಕೆಲಸದಲ್ಲಿ ಬಡ್ತಿಯೂ ಸಹ ದೊರೆಯುತ್ತದೆ .

ಮತ್ತು ಹೆಚ್ಚಿನ ವೇತನವೂ ಸಹ ದೊರೆಯುತ್ತದೆ. ನಿಮಗೆ ಆತ್ಮವಿಶ್ವಾಸವು ಹೆಚ್ಚಿಗೆ ಹೆಚ್ಚಿಗೆಯಾಗುವುದರಿಂದ ಧೈರ್ಯವಾಗಿ ಸವಾಲುಗಳನ್ನು ಎದುರಿಸುತ್ತೀರಾ. ಗುರುವು ಪಂಚಮದಲ್ಲಿ ಇರುವುದರಿಂದ ಅವುಗಳಲ್ಲಿ ನೀವು ಸವಾಲುಗಳನ್ನು ಹಾಕಿ ಅದರಲ್ಲಿ ಗೆಲ್ಲಲುಬಹುದು. ಗುರು ಪಂಚಮದಲ್ಲಿ ಇರುವುದರಿಂದ ಕಡುಬಡವರನ್ನು ಸಹ ಶ್ರೀಮಂತರನ್ನಾಗಿ ಮಾಡುವಂತಹ ಸಾಮರ್ಥ್ಯ ಪಂಚಮ ಗುರುವಿಗೆ ಇದೆ. ನಿಮಗೆ ಗುರುಬಲವು 80 ರಿಂದ 85ರಷ್ಟು ಇರಲಿದೆ.

Leave A Reply

Your email address will not be published.