ಮನೆಗೆ ಕೆಟ್ಟದೃಷ್ಟಿ ಬಿದ್ದಾಗ

ಮನೆಗೆ ಕೆಟ್ಟ ದೃಷ್ಟಿ ಬಿದ್ದಾಗ? ಒಂದು ಮನೆಯಲ್ಲಿ ಸದಾ ನೆಮ್ಮದಿ ಸುಖ ಶಾಂತಿ ಇದ್ದರೆ, ಆ ಮನೆಯಲ್ಲಿ ಸಕಾರಾತ್ಮಕತೆ ತುಂಬಿ ತುಳುಕುತ್ತಿದೆ ಎಂದರ್ಥ. ಅದೇ ಒಂದು ಮನೆಯಲ್ಲಿ ಕಾರಣವಿಲ್ಲದೇ ಪದೇ ಪದೇ ಜಗಳ ಅಶಾಂತಿ ದುಃಖವಿದೆ ಎಂದರೆ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿದೆ ಎಂದರ್ಥ ಹಾಗಾದ್ರೆ ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಎಂಥ ಸೂಚನೆ ಸಿಗುತ್ತದೆ ಎಂಬುದನ್ನ

ಈ ಲೇಖನದಲ್ಲಿ ತಿಳಿಸಲಾಗಿದೆ. ಯಾವ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆಯೋ ಅಲ್ಲಿ, ಪದೇ ಪದೇ ಜಗಳವಾಗುತ್ತದೆ. ಆ ಮನೆ ಜನರ ಆರೋಗ್ಯ ಪದೇ ಪದೇ ಹದಗೆಡುತ್ತದೆ. ಮನೆಯೊಡೆಯ ಯಾವಾಗಲೂ ಕೋಪದಿಂದಲೇ ಇರುತ್ತಾನೆ. ಆ ಮನೆಯಲ್ಲಿ ಇರಲು ಇಷ್ಟವೇ ಆಗುವುದಿಲ್ಲ. ಎಲ್ಲಾದರೂ ಹೊರಗಡೆ ಹೋದರೆ ಮತ್ತೆ ಮನೆಗೆ ಹೋಗುವುದೇ ಬೇಡ ಹೊರಗೇ ಇದ್ದು ಬಿಡೋಣ ಎನ್ನಿಸುತ್ತದೆ.

ಮನೆಯಲ್ಲಿ ಪದೇ ಪದೇ ಜಗಳವಾಗುತ್ತದೆ ಯಾವ ರೀತಿಯ ಜಗಳವೆಂದರೆ ಸಣ್ಣ ಪುಟ್ಟ ವಿಚಾರಕ್ಕೂ ಹೊಡೆದಾಡಿಕೊಳ್ಳುವಂಥ ಜಗಳವಾಗುತ್ತದೆ. ಆ ಮನೆಯಲ್ಲಿ ಎಲ್ಲರೂ ಸದಾ ಸಿಟ್ಟಿನಿಂದ ಬೇಸರದಿಂದಲೇ ಇರುತ್ತಾರೆ. ಪ್ರತಿದಿನ ಕಲಹ ಕಣ್ಣೀರಿಡುವ ಪರಿಸ್ಥಿತಿ ಬರುತ್ತದೆ. ಇದೆಲ್ಲ ನಕಾರಾತ್ಮಕ ಶಕ್ತಿ ನಿಮ್ಮ ಮನೆಯಲ್ಲಿ ಇದೆ ಎನ್ನುವ ಸೂಚನೆಯಾಗಿದೆ ಏಕೆಂದರೆ ಪ್ರೇತಗಳಿಗೆ, ಕಲಹವೆಂದರೆ ಬಹು ಪ್ರೀತಿಯಂತೆ.

ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಹಣ ನೀರಿನಂತೆ ಹರಿಯುತ್ತದೆ. ಖರ್ಚು ಹೆಚ್ಚಾಗುತ್ತದೆ ಆದಾಯ ಬರುವುದು ನಿಲ್ಲುತ್ತದೆ. ಮನೆ ಜನರ ಆರೋಗ್ಯ ಹಾಳಾಗುತ್ತದೆ. ಅನಾರೋಗ್ಯದ ಚಿಕಿತ್ಸೆಗಾಗಿಯೇ ಹಣ ಖರ್ಚಾಗುತ್ತದೆ. ಮನೆ ಜನರಲ್ಲಿ ಕೆಟ್ಟ ಯೋಚನೆಗಳು ಬರುತ್ತದೆ. ಕಾರಣವಿಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ಅಥವಾ ಹತ್ಯೆ ಮಾಡುವ ವಿಚಾರಗಳೆಲ್ಲ ಬರುತ್ತದೆ. ಇವೆಲ್ಲ ನಕಾರಾತ್ಮಕ ಶಕ್ತಿ ಮನೆಯಲ್ಲಿರುವ ಸೂಚನೆಯಾಗಿದೆ ಮತ್ತು ಇದು ಗಂಭೀರ ವಿಷಯವಾಗಿದೆ.

ಹಾಗಾದರೆ ಇದಕ್ಕೆ ಪರಿಹಾರ ಏನು? ನಮ್ಮ ಭಾರತ ಸಂಸ್ಕೃತಿಯಲ್ಲಿ ನಮ್ಮ ಪೂರ್ವಜರು ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿದ್ದರು. ಯಾವುದೇ ಕೆಟ್ಟ ದೃಷ್ಠಿ ತಾಗದೇ ಇರುವ ಹಾಗೆ ನೋಡಿಕೊಳ್ಳುತ್ತಿದ್ದರು ಅದರಿಂದ ಅವರ ಜೀವನ ನೆಮ್ಮದಿ ಇಂದ ಕೂಡಿತ್ತು. ಅವರು ಆರೋಗ್ಯವಾಗಿರುತ್ತಿದ್ದರು. ಹಾಗಾದರೆ ನಮ್ಮ ಪೂರ್ವಜರು ಅಜ್ಜಿ ಹೇಳುವ ಪ್ರಕಾರ ಮನೆಗೆ ಕೆಟ್ಟ ದೃಷ್ಠಿ ಬಿದ್ದಿದ್ದರೆ ಈ ವಿಧಾನ ಮಾಡಿ ನೋಡಿ

ಎರಡು ಒಣಮೆಣಸು ಸ್ವಲ್ಪ ಕಲ್ಲುಪ್ಪು ಮತ್ತು ಸ್ವಲ್ಪ ಸಾಸಿವೆ ಬೀಜ ಹಿಡಿದುಕೊಂಡು ಮನೆಯ ಎಲ್ಲಾ ಕೋಣೆಯಲ್ಲಿ ಮೂರು ಸಲ ನಿವಾಳಿಸಿ ನಂತರ ಅವೆಲ್ಲವನ್ನು ಮನೆಯ ಆಚೆ ಸುಟ್ಟು ಬಿಡಿ ದೃಷ್ಠಿ ನಿವಾರಣೆಯಾಗುತ್ತದೆ.

ಒಂದು ಹತ್ತಿ ಬತ್ತಿ ತೆಗೆದುಕೊಳ್ಳಿ ಅದನ್ನು ಸಾಸಿವೆ ಎಣ್ಣೆಯಲ್ಲಿ ಚೆನ್ನಾಗಿ ಅದ್ದಿ ಅದ್ದಿದ ಬತ್ತಿಯನ್ನು ಮನೆಯ ಎಲ್ಲ ಸದಸ್ಯರ ಮೇಲೆ ಮೂರು ಸಲ ನಿವಾಳಿಸಿ ಆಮೇಲೆ ಅದನ್ನು ಸುಟ್ಟು ಬಿಡಿ ನಂತರ ಒಂದು ನಿಂಬೆ ಕಾಯಿ ತಂದು ಮನೆಯ ಮುಂದೆ ನಿಂತು, ನಿವಾಳಿಸಿ ನಂತರ, ಅದನ್ನು ನಾಲ್ಕು ಕಟ್ ಮಾಡಿ ನಾಲ್ಕೂ ದಿಕ್ಕಿಗೂ ಎಸೆಯಿರಿ.

ಅಶೋಕ ಮರದ ಎಲೆಗಳನ್ನು ಉರುಟುರುಟಾಗಿ ಸುತ್ತಿ ಹಾರ ಮಾಡಿ ಮನೆಯ ಮುಖ್ಯದ್ವಾರಕ್ಕೆ ನೇತು ಹಾಕಿ ಇದರಿಂದ ಮನೆಯೊಳಗೆ ಪಾಸಿಟಿವ್ ಎನರ್ಜಿ ಬರುತ್ತದೆ ಜೊತೆಗೆ ಕೆಟ್ಟ ದೃಷ್ಟಿಯ ಪ್ರಭಾವ ಸಮಾಪ್ತವಾಗುತ್ತದೆ.

ನಿಮ್ಮ ಮನೆಯ ವಾಸ್ತು ಪರಿಶೀಲಿಸಿ
ಕೊನೆಯದಾಗಿ ದೇವರ ಮೇಲೆ ನಂಬಿಕೆ ಇರಲಿ ಅವನು ಯಾವತ್ತೂ ನಿಮ್ಮ ಕೈ ಬಿಡುವುದಿಲ್ಲ ವರ್ಷಕ್ಕೆ ಒಮ್ಮೆ ಆದರೂ, ನಿಮ್ಮ ಮನೆ ದೇವರು ಅಥವಾ ಯಾವುದಾದರೂ ಪುಣ್ಯ ಕ್ಷೇತ್ರಕ್ಕೇ ಹೋಗಿ, ಆಶೀರ್ವಾದ ಪಡೆಯಿರಿ ನಿಮ್ಮ ಮೇಲಿರುವ ಎಲ್ಲಾ ನೆಗೆಟಿವ್ ಎನರ್ಜಿ ಮಾಯವಾಗುತ್ತವೆ ಮನಸ್ಸಿಗೆ ಶಾಂತಿ ಸಮಾಧಾನ ಸಿಗುತ್ತದೆ. ಈ ವಿಧಾನಗಳು ಖಂಡಿತವಾಗಿಯೂ ನಂಬಿಕೆಗೆ ಸಂಬಂಧ ಪಟ್ಟ ವಿಚಾರ.

Leave a Comment