ವರಮಹಾಲಕ್ಷ್ಮಿ ಹಬ್ಬದ ದಿನ ಕಳಸಕ್ಕೆ ಈ ವಸ್ತುವನ್ನು ಹಾಕಿದರೆ ಲಕ್ಷ್ಮಿ ಒಲಿದು ಬರುತ್ತಾಳೆ

0

ಮನುಷ್ಯನಿಗೆ ದಾರಿದ್ರ್ಯ ಎನ್ನುವುದು ಕೆಟ್ಟದು. ಯಾರಿಗೆ ಹಣದ ಅನುಗ್ರಹವಾಗಿರುತ್ತದೆಯೋ ಎಲ್ಲದರಿಂದಲೂ ಸುಖವನ್ನು ಪಡೆಯುತ್ತಾರೆ. ಮನುಷ್ಯ ಹಣಕ್ಕೋಸ್ಕರ ಬಹಳ ಕಷ್ಟವನ್ನು ಪಡುತ್ತಾನೆ. ಲಕ್ಷ್ಮಿ ಕೃಪೆಗೋಸ್ಕರ ನಾನಾ ಗ್ರಂಥಗಳಿಂದ ಲಕ್ಷ್ಮಿ ಪೂಜೆಯ ಬಗ್ಗೆ ತಿಳಿದುಕೊಳ್ಳುತ್ತೇವೆ. ಮುಂಬರುವ ವರಮಹಾಲಕ್ಷ್ಮಿ ಹಬ್ಬದ ದಿನ ಪೂಜೆಯನ್ನ ಮಾಡಬೇಕಾದರೇ ಕೆಲವು ವಿಧಾನಗಳಿವೆ.

ಅದೇನೆಂದರೆ ದೇವರ ಮನೆಯಲ್ಲಿ ಕಳಸವನ್ನ ಇಡಬೇಕಾದರೇ ನೀರನ್ನು ಹಾಕುತ್ತೀರಿ, ಆದರೇ ನೀರನ್ನು ಹಾಕದೇ ಅಕ್ಕಿಯನ್ನು ಹಾಕಬೇಕು. ಗೋಡಂಬಿ, ದ್ರಾಕ್ಷಿ, ಕಲ್ಲುಸಕ್ಕರೆ, ದುಡ್ಡು, ಚಿನ್ನ, ಬೆಳ್ಳಿಗಳನ್ನ ಹಾಕಬೇಕು. ನಂತರ ಕಳಸವನ್ನು ಅಲಂಕಾರ ಮಾಡಿಕೊಳ್ಳಿ, ಇದು ಬಹಳ ಮುಖ್ಯವಾಗಿರುವಂತಹ ವಿಷಯ. ಇದರ ಜೊತೆಗೆ ಕುಬೇರ ಲಕ್ಷ್ಮಿಯ ಆರಾಧನೆಯು ಬಹಳ ವಿಶೇಷವಾಗಿರುವಂತದ್ದು,

ಶ್ರಾವಣ ಶುಕ್ರವಾರದ ದಿನಗಳಲ್ಲಿ ಕುಬೇರ ಲಕ್ಷ್ಮಿಯ ಆರಾಧನೆ ಮಾಡುವುದರಿಂದ ಅವರಿಗೆ ಬಹಳ ಬೇಗ ಧನ ಪ್ರಾಪ್ತಿಯಾಗುತ್ತದೆ. ಪಂಚಲೋಹಗಳಿಂದ ಮಾಡಿದ ಕುಬೇರಲಕ್ಷ್ಮಿಯಂತ್ರವನ್ನ ಹಾಲು, ಮೊಸರು, ಜೇನುತುಪ್ಪ, ಕಲ್ಲುಸಕ್ಕರೆ, ಬಾದಾಮಿ, ಪಂಚಾಮೃತ ಅಭಿಷೇಕವನ್ನು ಆ ಯಂತ್ರಕ್ಕೆ ಮಾಡಿ ಮತ್ತು ನೀರಿನಿಂದ ತೊಳೆದು ಗಂಧಪುಷ್ಪ ಅಕ್ಷತೆಗಳಿಂದ

ಅಲಂಕಾರ ಮಾಡಿ ಕುಬೇರ ಲಕ್ಷ್ಮಿಯ ಅಷ್ಟೋತ್ತರವನ್ನ ಹೇಳುತ್ತಾ 9 ಶುಕ್ರವಾರದ ವರೆಗೆ ಆ ಯಂತ್ರದ ಮುಂದೆ ಇಟ್ಟು ಪೂಜೆ ಮಾಡಬೇಕು. ಯಂತ್ರಕ್ಕೆ ಶಂಕರಾಚಾರ್ಯರಿಂದ ಹಿಡಿದು ಎಲ್ಲರೂ ಮಹತ್ತ್ವನ್ನು ಕೊಡುತ್ತಾ ಬಂದಿದ್ದಾರೆ. ಕುಬೇರ ಲಕ್ಷ್ಮಿ ಯಂತ್ರವನ್ನು ಪೂಜೆ ಮಾಡಿದರೇ 9 ಶುಕ್ರವಾರಗಳಲ್ಲಿ ನಿಮ್ಮ ಕಷ್ಟಗಳು ದೂರವಾಗುತ್ತದೆ. ಸಾಲದ ಸಮಸ್ಯೆಗಳಿಂದ ವಿಮುಕ್ತವಾಗಬಹುದು.

Leave A Reply

Your email address will not be published.