ಮನೆಯಲ್ಲಿ ಈ ವಾಸ್ತು ಸಲಹೆಗಳನ್ನು ಪಾಲಿಸಿದರೆ ಮನೆಯೇ ಸ್ವರ್ಗ

0

ನಾವು ಈ ಲೇಖನದಲ್ಲಿ ಮನೆಯಲ್ಲಿ ಈ ವಾಸ್ತು ಸಲಹೆಗಳನ್ನು ಪಾಲಿಸಿದರೆ ಮನೆ ಸ್ವರ್ಗವಾಗುತ್ತದೆ . ಎಂಬುವುದನ್ನು ಈ ಲೇಖನದಲ್ಲಿ ನೋಡೋಣ . ಅಂತಹ ವಾಸ್ತು ಸಲಹೆಗಳು ಯಾವುವು ಅಂದರೆ , 1 . ಮಳೆ ನೀರು ನಿವೇಶನ ಅಥವಾ ಕಟ್ಟಡದ ನೀರು ಈಶಾನ್ಯ ಮೂಲೆಯಿಂದ ಅರಿಯಬೇಕು . ಹಾಗೂ ಉತ್ತರದಿಂದ ಹೊರಗೆ ಹೋಗಬೇಕು .

2 . ದೇವರ ಕೋಣೆಯಲ್ಲಿ ದೇವರ ಮೂರ್ತಿ ಇಡುವಾಗ ಎರಡು ಫೋಟೋಗಳ ನಡುವೆ ಅಂತರ ಇರುವಂತೆ ನೋಡಿಕೊಳ್ಳಿ . ಜೊತೆಗೆ ದೇವರ ಕೋಣೆ ಸ್ವಚ್ಛವಾಗಿರಲಿ . 3 . ಲಕ್ಷ್ಮೀದೇವಿಯ ಮೂರ್ತಿ ಕಮಲದ ಹೂವಿನ ಮೇಲೆ ವಿರಾಜಮಾನವಾಗಿದ್ದರೆ ಉತ್ತಮ .

4 . ಒಡೆದ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡುವುದು , ಜಗಳ , ಮನಸ್ತಾಪ ಗಳು ಆಗುವ ಸಾಧ್ಯತೆ ಇರುತ್ತದೆ . 5 . ಬೆಡ್ರೂಮ್ ದೇವರ ಕೋಣೆ ಅಥವಾ ಅಡುಗೆ ಮನೆಯೊಂದಿಗೆ ಟಾಯ್ಲೆಟ್ ಒಂದೇ ಗೋಡೆ ಅಂಟಿಕೊಂಡಿರಬಾರದು .ಇದರಿಂದ ಮನೆಯಲ್ಲಿ ನಕಾರಾತ್ಮಕ ಭಾವನೆಗಳು ಹೆಚ್ಚುತ್ತದೆ. ಮತ್ತು ಬೆಡ್ರೂಮ್ ಮತ್ತು ಟಾಯ್ಲೆಟ್ ಒಂದೇ ಗೋಡೆಯನ್ನು ಅಂಟಿಕೊಂಡಿದ್ದರೆ , ಮನೆ ಸದಸ್ಯರಿಗೆ ಕೆಟ್ಟ ಕನಸುಗಳು ಕಾಡುತ್ತದೆ .

6 . ಮನೆಯ ಬಾತ್ರೂಮ್ ಅನ್ನು ವಾಯುವ್ಯ ದಿಕ್ಕಿನಲ್ಲಿ ನಿರ್ಮಿಸುವುದು ಉತ್ತಮ . ವಾಸ್ತು ಪ್ರಕಾರ ತ್ಯಾಜ್ಯವನ್ನು ಹೊರಹಾಕಲು ಸೂಕ್ತವಾದ ದಿಕ್ಕು . 7 . ಗಡಿಯಾರ ಯಾವಾಗಲೂ ಪೂರ್ವ ದಿಕ್ಕಿಗೆ ಮುಖ ಮಾಡಿರುವಂತೆ ತೂಗು ಹಾಕುವುದು ಶುಭ ಸೂಚಕ .

8 . ಮನೆಯಲ್ಲಿರುವ ಎಲ್ಲಾ ಗಡಿಯಾರಗಳು ಸರಿಯಾದ ಸಮಯವನ್ನೇ ತೋರಿಸಬೇಕು . ಒಂದೊಂದು ಗಡಿಯಾರ ಒಂದೊಂದು ಸಮಯವನ್ನು ತೋರಿಸುವುದು ಶುಭ ಸೂಚಕವಲ್ಲ . ಆದ ಕಾರಣ ಮನೆಯಲ್ಲಿರುವ ಎಲ್ಲಾ ಗಡಿಯಾರಗಳು ಸರಿಯಾದ ಹಾಗೂ ಒಂದೇ ಸಮಯವನ್ನು ಸೂಚಿಸುವಂತೆ ನೋಡಿಕೊಳ್ಳಬೇಕು .

9 . ಬಾಗಿಲುಗಳು ಯಾವಾಗಲೂ ಸಮ ಸಂಖ್ಯೆಯಲ್ಲಿ ಇರಬೇಕು . 10 . ನಾಲ್ಕು ದಿಕ್ಕಿನಲ್ಲಿ ರಸ್ತೆಗಳಿರುವ ನಿವೇಶನ ಅತ್ಯುತ್ತಮ ಆಯ್ಕೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ . 11 . ನಲ್ಲಿ ಯಲ್ಲಿ ನೀರು ಸೋರಬಾರದು . ಅದು ಹಣ ವ್ಯರ್ಥವಾಗಲು ದಾರಿ ಮಾಡಿಕೊಡುತ್ತದೆ .

12 . ಆಗ್ನೇಯ ದಿಕ್ಕಿನಲ್ಲಿ ಬಾಲ್ಕನಿ ಇರುವುದು ಯಾವ ಕಾರಣಕ್ಕೂ ಶ್ರೇಯಸ್ಸು ಆಗುವುದಿಲ್ಲ . 13 . ಉತ್ತರ ಮತ್ತು ಪೂರ್ವ ಭಾಗದಲ್ಲಿ ಬಾಲ್ಕನಿ ಇರುವುದು ಅತಿ ಹೆಚ್ಚು ಶ್ರೇಯಸ್ಸು ಆಗುತ್ತದೆ ಎಂದು ನಂಬಲಾಗಿದೆ. 14 . ಯಾವಾಗಲೂ ಪೂರ್ವ ದಿಕ್ಕಿಗೆ ನಿಂತುಕೊಂಡು ಅಡುಗೆ ಮಾಡಬೇಕು .

15 . ಮಲಗುವ ಕೋಣೆಯಲ್ಲಿ ಕನ್ನಡಿ ಇರಬಾರದು . ಯಾಕೆಂದರೆ ಬೆಳಿಗ್ಗೆ ನಿದ್ರೆಯಿಂದ ಎದ್ದ ನಂತರ ನಮ್ಮ ಮುಖವನ್ನು ನಾವೇ ನೋಡಿಕೊಳ್ಳಬಾರದು . ಹಾಗೇನಾದರೂ ಕನ್ನಡಿ ಇದ್ದರೆ ಅದನ್ನು ಬಟ್ಟೆಯಿಂದ ಮುಚ್ಚಿಬಿಡಿ . 16 . ಪೂಜಾ ಗೃಹದಲ್ಲಿ ಯಾವತ್ತು ಕಪ್ಪು ಅಥವಾ ಹಸಿರು ಬಣ್ಣ ಹಾಕಬೇಡಿ . ಬದಲಾಗಿ ಕಲರ್ ಮಾರ್ಬಲ್ ಬಳಸಿ .

17 . ಊಟದ ಕೋಣೆಯಲ್ಲಿ ಕನ್ನಡಿ ಇದ್ದರೆ ಒಳ್ಳೆಯದು ಆರೋಗ್ಯ ವೃದ್ಧಿಸುತ್ತದೆ . 18 . ಊಟ ಮಾಡುವಾಗ ಪೂರ್ವ ದಿಕ್ಕಿಗೆ ಕುಳಿತು ಊಟ ಮಾಡಬೇಕು ಅಂದರೆ ಸೂರ್ಯ ಉದಯಿಸುವ ದಿಕ್ಕು . 19 . ಅನ್ನ ಮಾಡಿದ ಪಾತ್ರೆ ಮತ್ತು ಅಡಿಗೆಯನ್ನು ಮಾಡಲು ಬಳಸಿದ ಪಾತ್ರೆಗಳನ್ನು ತೊಳೆದ ನಂತರ ಮಗುಚಿ ಇಡಬಾರದು. ಅದೇ ರೀತಿ ಊಟ ಮಾಡಲು ಬಳಸುವ ತಟ್ಟೆ ಲೋಟವನ್ನು ಮಗುಚಿ ಇಡಬಾರದು . ಹೀಗೆ ಮಾಡಿದರೆ ಮನೆಗೆ ದರಿದ್ರ ಆವರಿಸುತ್ತದೆ . ಅನ್ನಕ್ಕೆ ಕೊರತೆ ಉಂಟಾಗುತ್ತದೆ .

20 . ಬಾಗಿಲಿನ ಮೇಲೆ ಓಂ , ಶ್ರೀ , ಸ್ವಸ್ತಿಕ್ ಹಾಗೆಯೇ ಮಂಗಳ ಕಳಶ ಇತ್ಯಾದಿ ಶುಭ ಚಿಹ್ನೆಗಳನ್ನು ಬಿಡಿಸಬೇಕು. ಅರಿಶಿಣ ಕುಂಕುಮ ಆಕಳಿನ ಸಗಣಿ ಮತ್ತು ಗೋಮೂತ್ರವನ್ನು ಮಿಶ್ರಿತ ಮಾಡಿ ಆ ಚಿಹ್ನೆಗಳನ್ನು ಬಿಡಿಸಬೇಕು . ಹೀಗೆ ಮಾಡುವುದರಿಂದ ದುಷ್ಟ ಶಕ್ತಿಗಳು ಬಾಗಿಲಿನಿಂದ ಒಳಗೆ ಪ್ರವೇಶಿಸುವುದಿಲ್ಲ . 21 .ಓಡುತ್ತಿರುವ ಕುದುರೆಯ ಚಿತ್ರವನ್ನು ದಕ್ಷಿಣದಲ್ಲಿ ಹಾಕಿದರೆ ಹಣದ ಹರಿವು ಸ್ಥಿರವಾಗಿರುತ್ತದೆ . ಮತ್ತು ಮನೆಯಲ್ಲಿ ಸಾಮರಸ್ಯ ಇರುತ್ತದೆ .

22 . ಉತ್ತಮ ದೃಷ್ಟಿಕೋನ ಮತ್ತು ಯೋಜನೆ ರೂಪಿಸಲು ನೆರವಾಗುವಂತೆ ಈಶಾನ್ಯ ದಿಕ್ಕಿನಲ್ಲಿ ಹಸಿರು ತುಂಬಿದ ಚಿತ್ರವಿರಬೇಕು . 23 . ಮನೆಯಲ್ಲಿರುವ ಸಮಸ್ತ ವಾಸ್ತು ದೋಷ ನಿವಾರಣೆಗೆ ಪಿರಾಮಿಡ್ ಗಳನ್ನು ಇಡುವುದು ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗಿದೆ. 24 . ಈಶಾನ್ಯ ದಿಕ್ಕಿನಲ್ಲಿ ಚಿಕ್ಕ ನೀರಿನ ಕಾರಂಜಿ ಇಟ್ಟರೆ ಮನೆಯಲ್ಲಿ ಸಾಮರಸ್ಯ ಒಡಮೂಡುತ್ತದೆ.

25 . ಮನೆಯು ದಕ್ಷಿಣಕ್ಕೆ ಮುಖ ಮಾಡಿದ್ದರೆ. ದಕ್ಷಿಣದ ಗೋಡೆ ಮತ್ತು ಗೇಟು ಯಾವಾಗಲೂ ಮುಚ್ಚಿರಬೇಕು . 26 . ಆಗ್ನೇಯ ದಿಕ್ಕಿನಲ್ಲಿ ಶುಕ್ರ ದೇವನ ಅಧಿಪತ್ಯವಿದೆ. ಶುಕ್ರ ಗ್ರಹದ ಜಾಗದಲ್ಲಿ ಮನಿ ಪ್ಲಾಂಟ್ ಗಿಡ ನೆಟ್ಟರೆ ಶುಭ . 27 . ಡ್ರ್ಯಾಗನ್‌ ಮೇಲೆ ಕೂತಿರುವ ಕುಬೇರನನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಇರಿಸಬೇಕು . ಇದು ಔದ್ಯೋಗಿಕ ಜೀವನವನ್ನು ಉತ್ತಮಗೊಳಿಸುತ್ತದೆ .

28 . ಅಕ್ವೇರಿಯಂ ನಲ್ಲಿ ಒಂದು , ಮೂರು , ಐದು , ಏಳು , ಒಂಬತ್ತು ಸಂಖ್ಯೆಯಲ್ಲಿ ಮೀನುಗಳನ್ನು ಇಡಬೇಕು . 29 . ಮನೆಯ ಅಂಗಳದಲ್ಲಿ ಮುಖ್ಯ ಬಾಗಿಲಿನ ಎದುರು ತುಳಸಿ ಗಿಡ ಇದ್ದರೆ ಮನೆಗೆ ನಕಾರಾತ್ಮಕ ಶಕ್ತಿಯ ಪ್ರವೇಶ ಆಗುವುದಿಲ್ಲ .

30 .ಮನಿ ಪ್ಲಾಂಟ್ ಎಷ್ಟು ಹಸಿರಾಗಿ ಇರುತ್ತದೆಯೋ ಅಷ್ಟು ಶುಭ ಎಂದು ಹೇಳುತ್ತಾರೆ . ಇದರ ಎಲೆಗಳು ಒಣಗಿ ಹೋಗುವುದು , ಹಳದಿ , ಬಿಳಿಯಾಗಿ ಇರುವುದು ಅಶುಭ . ಆದುದರಿಂದ ಎಲೆ ಹಾಳಾದ ಕೂಡಲೇ ಅದನ್ನು ಕಿತ್ತು ಬಿಡಿ . 31 . ಹೂವಿನ ಗಿಡ ಮತ್ತು ಅಕ್ವೇರಿಯಂ ಗಳನ್ನು ಮಲಗುವ ಕೋಣೆಯಲ್ಲಿ ಇರಿಸಬಾರದು .

32 .ಮಲಗುವ ಕೋಣೆಯಲ್ಲಿ ಬೀರುವನ್ನು ನೈರುತ್ಯ ಮೂಲೆಯಲ್ಲಿ ಇಟ್ಟರೆ ಒಳ್ಳೆಯದು . 33 . ಪೂಜಾ ಕೋಣೆಯ ಬಾಗಿಲು ಉತ್ತರ ಅಥವಾ ಪೂರ್ವದಲ್ಲಿ ಇರುವಂತೆ ಗಮನ ವಹಿಸಬೇಕು.34 .ದೇವರ ಪೂಜೆಗೆ ತಾಮ್ರದ ಪಾತ್ರೆಗಳನ್ನು ಬಳಸಿ . ತಾಮ್ರದ ಪಾತ್ರೆ ದೇವರ ಕೆಲಸಗಳಿಗೆ ಪವಿತ್ರ .

Leave A Reply

Your email address will not be published.