ತಪ್ಪದೇ ಹೊಸ ವರ್ಷ 2024 ಬರುವ ಮುನ್ನ ಈ ವಸ್ತುಗಳನ್ನು ಮನೆಯಿಂದ ಆಚೆ ಹಾಕಿರಿ

0

ನಾವು ಈ ಲೇಖನದಲ್ಲಿ ಹೊಸ ವರ್ಷ 2024 ಬರುವ ಮುನ್ನ ನಾವು ಹೇಳುವ ಈ ವಸ್ತುಗಳನ್ನು ಮನೆಯಿಂದ ಆಚೆ ಹಾಕಬೇಕು ಎಂಬುದನ್ನು ಇಲ್ಲಿ ನೋಡೋಣ. ಹೊಸ ವರ್ಷ ಶುರುವಾಗುವ ಮುನ್ನ ಈ ಐದು ವಸ್ತುಗಳನ್ನು ತಕ್ಷಣವೇ ಮನೆಯಿಂದ ತೆಗೆದು ಆಚೆ ಹಾಕಬೇಕು . ಇವು ದುಃಖ ಮತ್ತು ಬಡತನಕ್ಕೆ ದೊಡ್ಡದಾದ ಕಾರಣವಾಗುತ್ತದೆ . ವರ್ಷವಿಡೀ ಹಣದ ಸಮಸ್ಯೆ ಉಳಿಯುತ್ತದೆ .ಅಂದರೆ 2024 ನೇ ವರ್ಷ ಬರುವುದಕ್ಕೆ ಕೆಲವೇ ದಿನಗಳು ಇವೆ . ಅಂದರೆ ಮುಂದೆ ಬರುವ ವರ್ಷ ಜನರಿಗೆ ಸುಖ ಶಾಂತಿ ನೆಮ್ಮದಿಯನ್ನು ತರಲಿ ಎಂದು ಹಲವಾರು ಪ್ರಕಾರದ ಪ್ರಯೋಗಗಳನ್ನು ಮಾಡುತ್ತಾರೆ .

ಒಳ್ಳೆಯ ಕೆಲಸ ಕಾರ್ಯಗಳಿ ಗೋಸ್ಕರ ಸಂಕಲ್ಪವನ್ನು ಕೂಡ ಕೈಗೊಳ್ಳುತ್ತಾರೆ . ಹಳೆ ವರ್ಷದಲ್ಲಿ ನಡೆದಿರುವ ಕೆಟ್ಟ ಸಂದರ್ಭಗಳನ್ನು ಸಮಸ್ಯೆಗಳನ್ನು ಮತ್ತು ದುಃಖ ದಾರಿದ್ರಗಳನ್ನು ಎಲ್ಲವನ್ನು ಮರೆತು ಹೊಸ ವರ್ಷದಲ್ಲಿ ಸುಖ – ಶಾಂತಿ ತುಂಬಿರಲು ನೀವು ಯಾವ ರೀತಿಯ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದರೆ , ವಾಸ್ತು ಶಾಸ್ತ್ರದ ಅನುಸಾರವಾಗಿ ವರ್ಷ 2024 ಆಗುವ ಮುನ್ನ ಇಂಥಹ ಕೆಲವು ವಸ್ತುಗಳನ್ನ ನಿಮ್ಮ ಮನೆಯಿಂದ ತೆಗೆದು ಆಚೆಗೆ ಹಾಕುವುದು ಒಳ್ಳೆಯದು .

ನಿಮ್ಮ ಮನೆಯಲ್ಲಿ ಇಂತಹ ವಸ್ತುಗಳು ಇದ್ದರೆ , ಅದು ಅಶುಭ ಪ್ರಭಾವವನ್ನು ಬೀರುತ್ತದೆ . ಒಂದು ವೇಳೆ ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಧನ ಸಂಪತ್ತು ಕೂಡ ಕಡಿಮೆಯಾಗುತ್ತದೆ . ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಆಗಮನ ಕೂಡ ಆಗಬಹುದು . ಕಷ್ಟ ತೊಂದರೆಗಳು ಕಡಿಮೆಯಾಗುವುದಿಲ್ಲ . ಇಂತಹ ಸ್ಥಿತಿಯಲ್ಲಿ ತಾಯಿ ಲಕ್ಷ್ಮಿ ದೇವಿಯ ಆಗಮನ ಕೂಡ ಆಗುವುದಿಲ್ಲ . ಹೊಸ ವರ್ಷದ ಸಮಯದಲ್ಲಿ ತಾಯಿ ಲಕ್ಷ್ಮಿ ದೇವಿಯನ್ನು ನಿಮ್ಮ ಮನೆಗೆ ಆಮಂತ್ರಿಸಲು ಮಂಗಳ ಕಾರಿಯಾದ ಹೊಸ ವರ್ಷವನ್ನು ಶುರು ಮಾಡಬೇಕು ಎಂದರೆ ,

ಖಂಡಿತವಾಗಿ ಈ ವಸ್ತುಗಳನ್ನು ನಿಮ್ಮ ಮನೆಯಿಂದ ತೆಗೆದು ಬಿಸಾಕಿ . ಹಾಗಾದರೆ ಹೊಸ ವರ್ಷ ಬರುವ ಮುನ್ನ ಯಾವ ವಸ್ತುಗಳನ್ನು ಮನೆಯಿಂದ ಆಚೆಗೆ ಹಾಕಬೇಕು ಎಂಬುದನ್ನು ತಿಳಿಯೋಣ . ಮೊದಲನೆಯದಾಗಿ ತುಂಬಾ ಹಳೆಯದಾಗಿರುವಂತಹ ಅಥವಾ ಸೀಳಿರುವಂತಹ ದೇವರ ಫೋಟೋಗಳು ಅಥವಾ ಮೂರ್ತಿಗಳು . ಅದಕ್ಕಿಂತ ಮೊದಲು ನಿಮ್ಮ ಮನೆಯ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ ಇಟ್ಟುಕೊಳ್ಳಬೇಕು . ನಿಮ್ಮ ದೇವರ ಮನೆಯ ಕೋಣೆಯಲ್ಲಿ ಒಡೆದು ಹೋಗಿರುವ ಫೋಟೋಗಳು ಅಥವಾ ಮೂರ್ತಿಯನ್ನು ಇವುಗಳನ್ನ

ಆಚೆ ತೆಗೆದು ಹರಿಯುತ್ತಿರುವ ನೀರಿನಲ್ಲಿ ವಿಸರ್ಜನೆ ಮಾಡುವುದು ಒಳ್ಳೆಯದು . ಇಂತಹ ಫೋಟೋಗಳು ಅಥವಾ ಮೂರ್ತಿಗಳು ಮನೆಯಲ್ಲಿದ್ದರೆ ಮನೆಯಲ್ಲಿ ವಾಸ್ತು ದೋಷವನ್ನು ಉಂಟು ಮಾಡುತ್ತದೆ . ಇವುಗಳ ಕಾರಣದಿಂದಾಗಿ ತಾಯಿ ಲಕ್ಷ್ಮಿ ದೇವಿಯ ಆಗಮನ ಕೂಡ ಆಗುವುದಿಲ್ಲ . ಒಂದು ವೇಳೆ ಚೆನ್ನಾಗಿರುವ ಫೋಟೋ ಅಥವಾ ಮೂರ್ತಿಗಳು ಇದ್ದರೆ , ಅವುಗಳನ್ನು ಶುದ್ಧವಾದ ನೀರಿನಿಂದ ತೊಳೆಯಬೇಕು . ಹೊಡೆದಿರುವ ಫೋಟೋಗಳನ್ನು ಪೂಜೆ ಮಾಡುವುದರಿಂದ ಅದು ಅಶುಭ ವಾಗುತ್ತದೆ .

ಇಂಥಹ ಫೋಟೋಗಳು ಮನೆಯಲ್ಲಿದ್ದಾಗ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ . ಹಾಗಾಗಿ ಹೊಸ ವರ್ಷ ಶುರುವಾಗುವ ಮುನ್ನ ಇಂಥ ಫೋಟೋಗಳು ಅಥವಾ ಮೂರ್ತಿಗಳನ್ನು ಯಾವುದಾದರೂ ಮರದ ಕೆಳಗೆ ಇಟ್ಟು ಬರಬಹುದು . ಅಥವಾ ಹರಿಯುತ್ತಿರುವ ನೀರಿನಲ್ಲಿ ವಿಸರ್ಜನೆ ಮಾಡಬಹುದು . ಎರಡನೆಯದಾಗಿ ಹಳೆಯದಾಗಿರುವ ಗಡಿಯಾರ . ಗಡಿಯಾರ ಸಮಯದ ಸೂಚಕ ಆಗಿರುತ್ತದೆ .ಅಂದರೆ ಇದು ಹಳೆಯ ಸಮಯದ ಸೂಚನೆಯನ್ನು ನಮಗೆ ಕೊಡುತ್ತದೆ .

ನಿರಂತರವಾಗಿ ನಡೆಯುತ್ತಿರುತ್ತದೆ . ಹಾಗಾಗಿ ಪ್ರಕೃತಿಗೆ ಹೋಲಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಮನೆಯಲ್ಲಿರುವ ಗಡಿಯಾರ ನಿಂತು ಹೋಗಿರಬಾರದು . ಮನೆಯಲ್ಲಿ ಕೆಟ್ಟು ಹೋದ ಗಡಿಯಾರಗಳು ಇದ್ದರೆ , ಅದನ್ನು ರಿಪೇರಿ ಮಾಡಿ ಬಳಸುವುದು ಒಳ್ಳೆಯದು . ಹಾಗೆ ಮಾಡಲಿಲ್ಲ ಎಂದರೆ ಗಡಿಯಾರವನ್ನು ಬಿಸಾಕಿ , ಹೊಸ ಗಡಿಯಾರ ತರುವುದು ಒಳ್ಳೆಯದು . ಮಾಹಿತಿ ಅನುಸಾರವಾಗಿ ಕೆಟ್ಟು ಹೋಗಿರುವ ಗಡಿಯಾರಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಗೆ ಮಾಡುತ್ತವೆ .

ಇದರಿಂದ ಆರ್ಥಿಕ ಸಮಸ್ಯೆಗಳು ಕೂಡ ಉಂಟಾಗುತ್ತದೆ . ಒಂದು ವೇಳೆ ಕೆಟ್ಟು ಹೋಗಿರುವ ಗಡಿಯಾರಗಳು ಮನೆಯಲ್ಲಿದ್ದರೆ , ಇದು ಉನ್ನತಿಯನ್ನು ತಡೆಯುತ್ತದೆ . ಕೆಟ್ಟು ಹೋದ ಕೀಲಿ ಕೈಗಳು ಮನೆಯಲ್ಲಿದ್ದರೆ , ಮನೆಯಲ್ಲಿ ಅದೃಷ್ಟ ಇರುವುದಿಲ್ಲ . ಇವುಗಳನ್ನು ತಕ್ಷಣ ತೆಗೆದು ಆಚೆಗೆ ಹಾಕಿ . ಮೂರನೆಯದಾಗಿ ಕೆಟ್ಟು ಹೋದ ಎಲೆಕ್ಟ್ರಾನಿಕ್ ವಸ್ತುಗಳು . ತುಂಬಾ ಜನರು ಮನೆಗಳಲ್ಲಿ ಕೆಟ್ಟು ಹೋದ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಟ್ಟುಕೊಂಡಿರುತ್ತಾರೆ .ಕೆಟ್ಟು ಹೋದ ಚಾರ್ಜರ್ ಗಳು , ಮೊಬೈಲ್ ,

ಮಿಕ್ಸರ್ ಗ್ರೈಂಡರ್ , ವಾಷಿಂಗ್ ಮಷೀನ್ , ಹೀಗೆ ನಾನಾ ತರಹದ ಎಲೆಕ್ಟ್ರಿಕ್ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ವಿಶೇಷವಾಗಿ ಹಳೆಯದಾಗಿರುವ ವೈರ್ ಗಳನ್ನು ಕೂಡ ಇಟ್ಟುಕೊಂಡಿರುತ್ತಾರೆ .ಇವುಗಳ ಮೇಲೆ ಗಮನ ಹರಿಸುವುದಿಲ್ಲ . ವಾಸ್ತು ಪ್ರಕಾರ ಇಂತಹ ಕೆಟ್ಟು ಹೋಗಿರುವ ಎಲೆಕ್ಟ್ರಾನಿಕ್ ವಸ್ತುಗಳು ಮನೆಯಲ್ಲಿ ಇದ್ದರೆ , ಇವುಗಳ ಮೂಲಕ ನಕಾರಾತ್ಮಕ ಶಕ್ತಿಯ ಸಂಚಾರ ಮನೆಯಲ್ಲಿ ಹೆಚ್ಚಾಗಿ ಆಗುತ್ತದೆ . ಇವುಗಳಿಂದ ದಾಗಿ ಆರ್ಥಿಕ ಸಮಸ್ಯೆಗಳು ಮನುಷ್ಯನಿಗೆ ಕಾಡುತ್ತದೆ .

ಸಾಧ್ಯವಾದಷ್ಟು ತಕ್ಷಣವೇ ಇವುಗಳನ್ನು ಮನೆಯಿಂದ ತೆಗೆದು ಹಾಕಿರಿ . ಒಂದು ವೇಳೆ ನೀವು ಇವುಗಳನ್ನು ತೆಗೆದು ಆಚೆಗೆ ಹಾಕಿದರೆ ತಾಯಿ ಲಕ್ಷ್ಮಿ ದೇವಿಯ ಆಗಮನ ಆಗಿ ಮನೆಯಲ್ಲಿ ಸುಖ – ಶಾಂತಿ ನೆಲೆಸುತ್ತದೆ . ನಂತರದ ವಸ್ತು ಎಂದರೆ ಒಡೆದು ಹೋಗಿರುವ ಗಾಜಿನ ಪದಾರ್ಥಗಳು . ಅಂದರೆ ನಿಮ್ಮ ಕಿಟಕಿಯ ಗಾಜುಗಳು , ಮನೆಯಲ್ಲಿರುವ ಕನ್ನಡಿಗಳು , ಹೊಡೆದು ಹೋಗಿದ್ದರೆ , ಇವುಗಳನ್ನು ತಕ್ಷಣವೇ ಬದಲಾಯಿಸಿ .ಒಡೆದು ಹೋಗಿರುವ ಕನ್ನಡಿಯಲ್ಲಿ ಮುಖವನ್ನು ನೋಡಿ ಕೊಳ್ಳುವುದರಿಂದ ವ್ಯಕ್ತಿಗೆ ದೌರ್ಭಾಗ್ಯ ಸಂಭವಿಸುತ್ತದೆ .

ಹಾಗಾಗಿ ಒಡೆದು ಹೋದ ಕನ್ನಡಿಯನ್ನು ತಕ್ಷಣವೇ ಆಚೆಗೆ ಹಾಕಿ . ಮತ್ತು ಮನೆಯಲ್ಲಿ ಬಳಸುವ ಗಾಜಿನ ಕಪ್ಪು ಗಳು ಇಂತಹ ವಸ್ತುಗಳು ಇದ್ದರೆ , ಅವುಗಳನ್ನು ಕೂಡ ತಕ್ಷಣವೇ ಆಚೆಗೆ ಹಾಕಿ . ಇಂತಹ ವಸ್ತುಗಳು ಮನೆಯಲ್ಲಿದ್ದರೆ ರಾಹು ಕೇತುವಿನ ಪ್ರಭಾವ ಹೆಚ್ಚಾಗುತ್ತದೆ . ನಂತರದ ವಸ್ತು ಯಾವುದೆಂದರೆ ಹಳೆಯದಾಗಿರುವ ಬಟ್ಟೆ ಮತ್ತು ಹಳೆಯದಾದ ಚಪ್ಪಲಿಗಳು .ಇಂತಹ ವಸ್ತುಗಳು ಮನೆಯಲ್ಲಿದ್ದರೆ ಆಚೆಗೆ ಹಾಕಿದಾಗ ನಿಮಗೆ ಯಾವುದೇ ರೀತಿ ಹಣಕಾಸಿನ ಸಮಸ್ಯೆ ಕಾಣುವುದಿಲ್ಲ .

ಹಳೆಯದಾದ ಪೊರಕೆ ಗಳು ಮನೆಯಲ್ಲಿದ್ದರೆ , ಅದನ್ನು ಕೂಡ ಹೊರಗೆ ಹಾಕಿ .ಹಳೆಯ ಪೊರಕೆ ಮನೆಯಲ್ಲಿ ಇಟ್ಟುಕೊಂಡರೆ ದರಿದ್ರತೆಯ ಆಗಮನ ಆಗುತ್ತದೆ . ಇದರಿಂದ ಮನೆಯಲ್ಲಿ ಕಲಹಗಳು ಮತ್ತು ಜಗಳಗಳು ಹೆಚ್ಚಾಗುತ್ತವೆ . ಮನೆಯಲ್ಲಿ ಸುಖ , ಶಾಂತಿ , ನೆಮ್ಮದಿ ಕೂಡ ಹಾಳಾಗುತ್ತದೆ .ಗಂಡ ಹೆಂಡತಿಯ ನಡುವೆ ಪ್ರೀತಿ ಕೂಡ ಕಡಿಮೆಯಾಗುತ್ತದೆ .

ಅನೇಕ ಪ್ರಕಾರದ ದೌರ್ಭಾಗ್ಯಗಳು ಮನೆಯನ್ನು ಪ್ರವೇಶ ಮಾಡುತ್ತವೆ . ಹಾಗಾಗಿ ತುಂಬಾ ಹಳೆಯದಾಗಿರುವ ಮತ್ತು ಮುರಿದು ಹೋಗಿರುವ ಪೊರಕೆಗಳನ್ನು ಮನೆಯಲ್ಲಿ ಬಳಸಬೇಡಿ .ಇನ್ನು ಕೆಲವರು ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ .ಕಸವನ್ನು ಕೂಡಿ ಹಾಕಿ ಮನೆಯ ಮಹಡಿ ಮೇಲೆ ಇಟ್ಟಿರುತ್ತಾರೆ . ಇಂತಹ ತಪ್ಪು ಎಂದಿಗೂ ಮಾಡಬಾರದು . ಹೀಗೆ ನಾವು ಮೇಲೆ ಹೇಳಿರುವ ವಸ್ತುಗಳನ್ನು ಹೊಸ ವರ್ಷ ಬರುವ ಮುನ್ನ ಮನೆಯಿಂದ ಹೊರಗಡೆ ಹಾಕಿ ಎಂದು ಹೇಳಲಾಗಿದೆ .

Leave A Reply

Your email address will not be published.