ಒಂದು ಕಪ್ಪು ದಾರದಲ್ಲಿ 9 ಗಂಟುಗಳನ್ನು ಕಟ್ಟಿ ಯಾವತ್ತು ಧರಿಸುವಿರೋ, ನೀವು ಬಯಸುವವರು ನಿಮ್ಮವರಾಗುತ್ತಾರೆ

0

ನಾವು ಈ ಲೇಖನದಲ್ಲಿ ಒಂದು ಕಪ್ಪು ದಾರದಲ್ಲಿ 9 ಗಂಟುಗಳನ್ನು ಕಟ್ಟಿ ಯಾವತ್ತು ನೀವು ಧರಿಸಿವಿರೋ , ನೀವು ಬಯಸುವವರು ನಿಮ್ಮವರಾಗುತ್ತಾರೆ ಎಂಬುವುದನ್ನು ಈ ಲೇಖನದಲ್ಲಿ ನೋಡೋಣ . ಸಂಮೋಹನ ಮತ್ತು ವಶೀಕರಣ ಯಾವ ರೀತಿ ವಿದ್ಯೆ ಆಗಿದೆ ಎಂದರೆ , ಯಾವ ವ್ಯಕ್ತಿಗಳನ್ನು ಬೇಕಾದರೂ ತಮ್ಮ ವಶದಲ್ಲಿ ಇಟ್ಟುಕೊಳ್ಳಬಹುದು .

ತಮ್ಮ ಸಂಮೋಹನ ಪಾಶದಲ್ಲಿ ಬಂಧಿಸಬಹುದು .ಇದರ ಬಳಕೆ ತುಂಬಾ ಸಮಯದಿಂದ ನಡೆದುಕೊಂಡು ಬಂದಿದೆ . ಈ ಲೇಖನದಲ್ಲಿ ಯಾವ ರೀತಿಯ ಪ್ರಯೋಗ ಮತ್ತು ಯಾವ ರೀತಿಯ ಕ್ರಿಯೆ ಎಂಬುದರ ಬಗ್ಗೆ ಹೇಳಲಾಗುತ್ತದೆ . ಒಂದು ವೇಳೆ ನೀವು ಇದನ್ನು ಮಾಡಿದರೆ ಈ ಕ್ರಿಯೆಯ ಮಾಧ್ಯಮದ ಮೂಲಕ ಮತ್ತು ನೀವು ಏನನ್ನು ಬಯಸುತ್ತೀರಾ ಮತ್ತು ಯಾವ ವಿಷಯಗಳನ್ನು ಬಯಸುತ್ತೀರಾ ಅದು ಯಾವುದಾದರು ವ್ಯಕ್ತಿ ಇರಲಿ , ಅಥವಾ ಯಾವುದಾದರೂ ವಸ್ತು ಇರಲಿ ,

ಏಕೆಂದರೆ ತುಂಬಾ ಜನರಲ್ಲಿ ಯಾವ ರೀತಿಯ ಸಮಸ್ಯೆ ಇರುತ್ತದೆ ಎಂದರೆ , ಹೇಗೆ ಅವರಿಗೆ ಮದುವೆ ಯಾಗುತ್ತದೆ . ಮದುವೆ ಆದ ನಂತರ ಅವರ ಸಂಗಾತಿ ಅವರತ್ತ ಗಮನ ಹರಿಸುವುದಿಲ್ಲ .ಅವರ ಮಾತುಗಳನ್ನು ಸಹ ಕೇಳುವುದಿಲ್ಲ .ಇಂತಹ ಸ್ಥಿತಿಯಲ್ಲಿ ಜೀವನ ನರಕದಂತೆ ಆಗಿರುತ್ತದೆ . ನೀವು ತುಂಬಾ ಪ್ರೀತಿಸುತ್ತಿರುವವರು ನಿಮ್ಮ ಮಾತುಗಳನ್ನು ಕೇಳಲಿಲ್ಲ ಅಂದಾಗ ಅರ್ಥ ಮಾಡಿಕೊಳ್ಳದೆ ಇದ್ದಾಗ ಇಂಥ ಸ್ಥಿತಿಯಲ್ಲಿ ಈ ದಿನ ಅಂದರೆ 24 ಗಂಟೆ ಅವರ ಯೋಚನೆ ಇವರ ತಲೆಯಲ್ಲಿ ನಡೆಯುತ್ತಲೇ ಇರುತ್ತದೆ .

ಟೆನ್ಶನ್ ಮತ್ತು ಡಿಪ್ರೆಶನ್ ಇವರನ್ನು ತುಂಬಾ ಆವರಿಸಿ ಕೊಂಡಿರುತ್ತದೆ .ಜೀವನ ನರಕದಂತೆ ಕಾಣುತ್ತದೆ . ನಾವು ಹೇಳುವ ಹಾಗೆ ತುಂಬಾ ಸರಳವಾಗಿ ಈ ಕ್ರಿಯೆಯನ್ನು ಮಾಡಿಕೊಂಡು ಯಾವುದೇ ವ್ಯಕ್ತಿಯನ್ನು ನಿಮ್ಮ ವಶದಲ್ಲಾಗಲಿ ಸಂಯೋಹನದಲ್ಲಾಗಲಿ ಬಂಧಿಸಬಹುದು . ಇಲ್ಲಿ ವಿಷಯ ಯಾವುದೇ ಇರಬಹುದು ಅಂದರೆ ಹಣ ಇರಬಹುದು ಯಾವುದಾದರೂ ವಸ್ತು ಇರಬಹುದು .ಅವುಗಳನ್ನು ನೀವು ನಿಮ್ಮ ಜೀವನದಲ್ಲಿ ಆಕರ್ಷಣೆ ಮಾಡಲು ಇಷ್ಟ ಪಡುತ್ತಿದ್ದರೆ ,

ಎಲ್ಲಾ ವಿಷಯಗಳಿಗಾಗಿ ನೀವು ಪ್ರಯೋಗವನ್ನು ಸರಳವಾಗಿ ಮಾಡಬಹುದು . ಒಂದು ಕಪ್ಪು ಬಣ್ಣದ ದಾರವನ್ನು ತೆಗೆದುಕೊಂಡು , ಅಂದರೆ ನೀವು ಎಷ್ಟು ಎತ್ತರ ಇರುತ್ತೀರಾ ಅಷ್ಟು ಎತ್ತರದ ಕಪ್ಪು ಬಣ್ಣದ ದಾರವನ್ನು ತೆಗೆದುಕೊಳ್ಳಬೇಕು . ಈ ಪ್ರಯೋಗವನ್ನು ಅದೇ ವ್ಯಕ್ತಿ ಮಾಡಬೇಕು . ಅದು ತಮಗೋಸ್ಕರ ಮುಂದೆ ಇರುವಂತಹ ವ್ಯಕ್ತಿಯನ್ನು ವಶ ಮಾಡಿಕೊಳ್ಳಲು ಅಥವಾ ಸಂಮೋಹನದಲ್ಲಿ ಬಂಧಿಸಲು ಇಷ್ಟ ಪಡುತ್ತಿರುತ್ತಾರೆ .ಇಂತಹ ವ್ಯಕ್ತಿಗಳು ಮಾತ್ರ ಈ ಪ್ರಯೋಗವನ್ನು ಮಾಡಬಹುದು . ಬೇರೆ ವ್ಯಕ್ತಿಯಿಂದ ನಿಮಗೋಸ್ಕರ ಈ ಪ್ರಯೋಗವನ್ನು ಮಾಡಿಸಬಾರದು .

ಎರಡನೇಯ ವಿಷಯ ಮಲ್ಲಿಗೆ ಹೂವಿನ ಎಣ್ಣೆಯನ್ನು ತೆಗೆದುಕೊಂಡು , ಆಂಜನೇಯ ಸ್ವಾಮಿಯ ಮೂರ್ತಿಗೆ ಹಚ್ಚುವ ಸಿಂಧೂರವನ್ನು ತೆಗೆದುಕೊಳ್ಳಬೇಕು. ಆಂಜನೇಯ ಸ್ವಾಮಿಗೆ ಬಳಸುವ ಸಿಂಧೂರದಲ್ಲಿ ಅದ್ಭುತವಾದ ಸಂಮೋಹನ ಆಕರ್ಷಣೆ ಶಕ್ತಿಗಳು ಇರುತ್ತದೆ . ಸದಾ ಆಂಜನೇಯ ಸ್ವಾಮಿಯವರು ಭಗವಂತನಾದ ಶ್ರೀ ರಾಮನನ್ನ ತಮ್ಮ ಸಂಮೋಹನದಲ್ಲಿ ಬಂಧಿಸಲು ಈ ಸಿಂಧೂರದ ಪ್ರಯೋಗವನ್ನು ಮಾಡಿದ್ದರು . ಹಾಗಾಗಿ ಅವರು ಭಗವಂತನಾದ ಶ್ರೀ ರಾಮನ ಹತ್ತಿರ ಇರುತ್ತಾರೆ .

ಈ ಸಿಂಧೂರದಲ್ಲಿ ಸಂಮೋಹನ ಮತ್ತು ವಶೀಕರಣದ ಶಕ್ತಿ ಇರುತ್ತದೆ . ಮೊದಲೇ ನೀವು ಸಿಂಧೂರ ಮಲ್ಲಿಗೆ ಎಣ್ಣೆ ಮತ್ತು ಕಪ್ಪು ದಾರವನ್ನು ತೆಗೆದುಕೊಂಡು ಬರಬೇಕು . ಎಲ್ಲಕ್ಕಿಂತ ಮೊದಲು ನೀವು ಈ ದಾರಕ್ಕೆ ಯಾವುದಾದರೂ ಒಂದು ಡಿಸೈನ್ ಮಾಡಬೇಕು .ನೀವು ಕೈಯಲ್ಲಿ ಕಟ್ಟುವ ಹಾಗೆ ಅಥವಾ ಕೊರಳಿಗೆ ಕಟ್ಟುವ ಹಾಗೆ ದಾರಕ್ಕೆ ಡಿಸೈನ್ ಮಾಡಬೇಕು . ಆದರೆ ಹೊಟ್ಟೆಗೆ ಎಂದಿಗೂ ಕಟ್ಟಿ ಕೊಳ್ಳಬಾರದು . ಇದಾದ ನಂತರ ಕಪ್ಪು ದಾರವನ್ನು ಬಲಗೈಯಲ್ಲಿ ಹಿಡಿದುಕೊಂಡು ಇದರಲ್ಲಿ ನೀವು 9 ಗಂಟುಗಳನ್ನು ಕಟ್ಟಬೇಕು .

ಒಂದು ವೇಳೆ ದಾರ ಉದ್ದವಾದರೆ ಅದನ್ನ ಡಬಲ್ ಮಾಡಿ ಕಟ್ಟಬಹುದು .ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು 9 ಗಂಟುಗಳನ್ನು ಕಟ್ಟಬೇಕು . ಈಗ ಆ ಗಂಟುಗಳನ್ನು ಯಾವ ರೀತಿ ಕಟ್ಟಬೇಕು ಎಂಬುದನ್ನು ನೋಡೋಣ .ಮೊದಲನೆಯ ಗಂಟು ಕಟ್ಟುವಾಗ , ಪ್ರತಿಯೊಂದು ಗಂಟಿನಲ್ಲಿ ಐದು ಮಾಲೆಯಲ್ಲಿ ಈ ಒಂದು ಮಂತ್ರವನ್ನ ನೀವು ಜಪ ಮಾಡಬೇಕು . ಈ ಮಂತ್ರವು ಈ ಪ್ರಕಾರದಲ್ಲಿ ಇರುತ್ತದೆ . “ಓಂ ಪ್ರೌಂ ಅಂ ಹನುಮಂತೇ ಪ್ರೌಂ ರಾಮದೂತಾಯ ನಮಃ

” ಇಲ್ಲಿ ಪ್ರೌಂ ಅನ್ನುವುದು ಆಂಜನೇಯ ಸ್ವಾಮಿಯ ಬೀಜ ಮಂತ್ರವಾಗಿದ್ದು , ಈ ಮಂತ್ರವನ್ನು ವಿಶೇಷವಾಗಿ ಸಂಮೋಹನಕ್ಕಾಗಿ ಮತ್ತು ವಶೀಕರಣಕ್ಕಾಗಿ ಬಳಸಲಾಗುತ್ತದೆ .ಒಂದು ವೇಳೆ ನಿಮ್ಮ ಜೀವನದಲ್ಲಿ ಯಾರಾದರೂ ಶತ್ರುಗಳು ಇದ್ದರೆ , ಆ ಶತ್ರುಗಳು ನಿಮ್ಮ ಮಾತುಗಳನ್ನು ಕೇಳುತ್ತಿಲ್ಲವೆಂದರೆ ಶತ್ರುಗಳನ್ನು ನಿಮ್ಮ ಸಂಮೋಹನದಲ್ಲಿ ಬಂಧಿಸಲು ಎಲ್ಲಿಯ ತನಕ ಅವರು ನಿಮ್ಮ ವಶದಲ್ಲಿ ಇರುವುದಿಲ್ಲ ಅಲ್ಲಿಯ ತನಕ ನಿಮ್ಮ ಮಾತುಗಳನ್ನು ಕೇಳುವುದಿಲ್ಲ .

ಅವರು ನಿಮಗೆ ಕಷ್ಟಗಳನ್ನು ಕೊಡುತ್ತಿರುತ್ತಾರೆ .ಇಲ್ಲಿ ಇದೇ ಪ್ರಕಾರ ಈ ಮಂತ್ರವನ್ನು ಉಚ್ಚಾರಣೆ ಮಾಡಬೇಕು . ಕೇವಲ ಈ ಮಂತ್ರವನ್ನು ಪ್ರತಿಯೊಂದು ಗಂಟಿನಲ್ಲಿ ಐದು ಮಾಲೆಯಾಗಿ ಜಪ ಮಾಡಬೇಕು .ಜಪ ಮಾಡುವಾಗ ರುದ್ರಾಕ್ಷಿ ಮಾಲೆಯನ್ನು ಕೂಡ ಬಳಸಬಹುದು . ನಿಮಗೆ ಲೆಕ್ಕ ಹಾಕಲು ಸಾಧ್ಯವಾದರೆ ಮಾಲೆಗಳ ಅವಶ್ಯಕತೆ ಇರುವುದಿಲ್ಲ . ಹೀಗೇ ಜಪ ಮಾಡುವುದರ ಮೂಲಕ 9 ಗಂಟುಗಳನ್ನು ಆ ದಾರದಲ್ಲಿ ಕಟ್ಟಬೇಕು . ಆ ನಂತರ ಆಂಜನೇಯ ಸ್ವಾಮಿಯ ಸಿಂಧೂರದಲ್ಲಿ

ಈ ಕಪ್ಪು ದಾರವನ್ನು ಮುಳುಗಿಸಿ ಇಡಬೇಕು . ಮೇಲಿನಿಂದ ಮಲ್ಲಿಗೆ ಹೂವಿನ ಎಣ್ಣೆಯನ್ನು ಈ ದಾರದ ಮೇಲೆ ಹಾಕಬೇಕು . ಈ ರೀತಿಯಾಗಿ ಆ ದಾರವೂ ನಿರಂತರವಾಗಿ ಅದೇ ಡಬ್ಬಿಯಲ್ಲಿ ಎಣ್ಣೆಯಲ್ಲಿ ಇರಲು ಬಿಡಬೇಕು . ಯಾವುದಾದರೂ ಮಣ್ಣಿನ ದೀಪದಲ್ಲಿ ಸಿಂಧೂರ ಮತ್ತು ಎಣ್ಣೆಯನ್ನು ಆ ದಾರವನ್ನು ಹಾಕಿ ಇಟ್ಟು ಎಂಟು ದಿನಗಳ ಕಾಲ ಅಲ್ಲಿಯೇ ಇರಲು ಬಿಡಬೇಕು . ಆದರೆ ಯಾವುದೇ ಕವರ್ ಇಂದ ಮುಚ್ಚಿಡಬಹುದು . ಇದನ್ನು ಮುಚ್ಚಿದ ನಂತರ ಅರಳಿ ಮರದ ಹತ್ತಿರ ಮಣ್ಣಿನಲ್ಲಿ ಹೂತಾಕಿ ಬರಬಹುದು .

ಎಂಟು ದಿನಗಳ ಕಾಲ ಆ ಮಣ್ಣಿನ ಒಳಗೆ ಇರಲು ಬಿಡಬೇಕು . ನಂತರ 9ನೇ ದಿನ ಅಲ್ಲಿಗೆ ಹೋಗಿ ಆ ಕಪ್ಪು ದಾರವನ್ನು ತೆಗೆದುಕೊಂಡು ಬರಬೇಕು .ಯಾವುದಾದರೂ ಮಂಗಳವಾರದ ದಿನ ಇದನ್ನು ಕಟ್ಟಿಕೊಳ್ಳಬೇಕು .ಕೇವಲ ಇಷ್ಟು ಕೆಲಸ ಮಾಡುವುದರಿಂದ ನಿಮ್ಮ ಮನಸ್ಥಿತಿಗೆ ಅನುಸಾರವಾಗಿ ಆಸೆಗಳು ನಿಮ್ಮ ಜೀವನದಲ್ಲಿ ಈಡೇರಲು ಶುರುವಾಗುತ್ತದೆ .

ನೀವು ಬಯಸುವುದೆಲ್ಲ ನಿಮ್ಮ ಬಳಿ ಬರಲು ಶುರುವಾಗುತ್ತದೆ . ನೀವು ಯಾವ ವ್ಯಕ್ತಿಯನ್ನು ಇಷ್ಟ ಪಡುತ್ತೀರಾ ಆ ವ್ಯಕ್ತಿಗೆ ಈ ದಾರವನ್ನು ಕಟ್ಟಬಹುದು ಅಥವಾ ಇಲ್ಲವೇ ನೀವೇ ಕಟ್ಟಿಕೊಳ್ಳಬಹುದು. ಅವರು ನಿಮ್ಮ ವಶದಲ್ಲಿ ಬಂಧಿತರಾಗುತ್ತಾರೆ . ಬೇರೆಯವರು ನಿಮಗೆ ಮಾಟ ಮಂತ್ರ ಮಾಡಿಸಿದ್ದಾರೆ ಎಂಬ ಅನುಮಾನ ನಿಮಗೆ ಬಂದಾಗ , ಈ ರೀತಿ ದಾರ ಮಾಡಿ ಕಟ್ಟಿ ಕೊಳ್ಳುವುದರಿಂದ ನಿಮಗೆ ಆ ಮಾಟ ಮಂತ್ರದಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ .

Leave A Reply

Your email address will not be published.