ವೃಷಭ ರಾಶಿ ಜನವರಿ ಮಾಸ ಭವಿಷ್ಯ

0

ನಾವು ಈ ಲೇಖನದಲ್ಲಿ ವೃಷಭ ರಾಶಿಯವರಿಗೆ ಜನವರಿಯಲ್ಲಿ ಮಾಸ ಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ . ಜನವರಿ ತಿಂಗಳು ಅಂದ ಕೂಡಲೇ ಹೊಸ ವಿಚಾರಗಳು ಮತ್ತು ಹೊಸ ಘಟನೆಗಳು ನಡೆಯಬೇಕು ಅಂದುಕೊಳ್ಳುವುದು ಸರ್ವೇ ಸಾಮಾನ್ಯವಾಗಿರುತ್ತದೆ . ವೃಷಭ ರಾಶಿಯವರಿಗೆ ಅಂತಹ ಒಳ್ಳೆಯ ವಿಚಾರಗಳು ನಡೆಯುತ್ತದೆಯೇ ಎಂದು ನೋಡೋಣ . ಬೇಡದೇ ಇರುವ ವಿಚಾರಗಳು ಕೇಂದ್ರ ಹಂತವನ್ನು ತೆಗೆದುಕೊಳ್ಳುತ್ತದೆ.

ಬೇಡದೆ ಇರುವ ವಿಚಾರಗಳು ನಿಮಗೆ ತುಂಬಾ ಮುಖ್ಯವಾಗಿರುತ್ತದೆ . ಯೋಚನೆ ಮಾಡುವ ಸಾಕಷ್ಟು ಅಂಶಗಳು ಆ ಸಂಗತಿಯಲ್ಲಿ ಇರುತ್ತದೆ . ನಿಮಗೆ ಆ ವಿಷಯ ಪದೇಪದೇ ಯೋಚನೆ ಮಾಡುವ ಹಾಗೆ ಆಗುತ್ತದೆ . ಅದು ತುಂಬಾ ಗಂಭೀರವಾದ ವಿಷಯ ಆಗಿರುವುದಿಲ್ಲ . ಆದರೂ ಅದರ ಬಗ್ಗೆ ತುಂಬಾ ಯೋಚನೆ ಮಾಡುತ್ತಾರೆ .ಇತ್ತೀಚಿನ ದಿನಗಳಲ್ಲಿ ನಿಮ್ಮ ಶಕ್ತಿ ಬಹಳ ವೃದ್ಧಿಯಾಗುತ್ತಿರುತ್ತದೆ . ವಿಶೇಷವಾಗಿ ವೃಷಭ ರಾಶಿಯವರಿಗೆ ಅದೃಷ್ಟದ ದಿಶೆಯಲ್ಲಿ ಹಲವಾರು ಪರಿವರ್ತನೆಗಳು ಕಾಣುತ್ತವೆ .

ಅದೃಷ್ಟ ಎಂದರೆ ಅಕಸ್ಮಾತಾಗಿ ಬರುವಂತಹದ್ದು, ಅದು ನಿಮ್ಮ ಪ್ರಯತ್ನದಿಂದ ಆಗುವಂತಹದಾಗಿರುತ್ತದೆ .ವೃಷಭ ರಾಶಿಯವರಿಗೆ ಷೇರು ಮಾರುಕಟ್ಟೆಯಲ್ಲಿ ಆಸಕ್ತಿ ಇರುತ್ತದೆ . ಈ ರಾಶಿಯವರು ತುಂಬಾ ಆಲೋಚನೆ ಮಾಡಿ ಹಣವನ್ನು ಕೂಡಿ ಇಡುವಂತವರು ಆಗಿರುತ್ತಾರೆ . ಅದರಲ್ಲಿ ಗರಿಷ್ಠ ಲಾಭವನ್ನು ಗಳಿಸುವಂಥವರಾಗಿ ಇರುತ್ತಾರೆ . ಅಂತವರಿಗೆ ಆಶಾ ಕಿರಣದ ರೂಪದಲ್ಲಿ ಏಕಾ ದಶ ಭಾವದಲ್ಲಿ ರಾಹು ಬಂದು ಕೂತಿರುತ್ತಾನೆ . ಬಹಳ ಧನಾತ್ಮಕವಾದ ಬೆಳವಣಿಗೆಯಾಗಿರುತ್ತದೆ .

ಯಾವುದೇ ಒಂದು ವಿಚಾರದ ಬಗ್ಗೆ ನೀವು ಗಮನಹರಿಸುತ್ತೀರಾ . ನೀವು ಗಮನ ಹರಿಸಿದ ವಿಚಾರದಲ್ಲಿ ನಿಮಗೆ ಲಾಭವನ್ನು ಕೋಟಿ ರೂಪದಲ್ಲಿ ತಂದುಕೊಡಬಹುದು . ಅಂದರೆ ನೀವು ಸಾವಿರದಲ್ಲಿ ಸಂಪಾದಿಸುತ್ತಿದ್ದರೆ ಸಾವಿರದ ಹಣ ಸಿಗುತ್ತದೆ . ಮತ್ತು ಲಕ್ಷಗಳಲ್ಲಿ ಸಂಪಾದಿಸುತ್ತಿದ್ದರೆ ಲಕ್ಷಾಂತರ ಹಣ ಸಿಗುತ್ತದೆ . ಮತ್ತು ಕೋಟಿಗಳಲ್ಲಿ ಸಂಪಾದಿಸುತ್ತಿದ್ದರೆ ಕೋಟಿ ಹಣ ಸಿಗುತ್ತದೆ ಎಂದು ಹೇಳಲಾಗಿದೆ . ಆದಾಯದಲ್ಲಿ ವೃದ್ಧಿಯಾಗುತ್ತದೆ .ಅವರವರ ವ್ಯಾಪಾರಕ್ಕೆ ತಕ್ಕಂತೆ ಲಾಭ ಬರುತ್ತದೆ ಎಂದು ಹೇಳಲಾಗಿದೆ .

ಇವೆಲ್ಲ ರಾಹುವಿನಿಂದ ನಡೆಯುವಂತದ್ದಾಗಿರುತ್ತದೆ . ನಿಮಗೆ ತೀಕ್ಷ್ಣವಾದ ಗಮನ ಆಗುತ್ತದೆ . ಒಂದು ವಿಚಾರದಲ್ಲಿ ನೂರಕ್ಕೆ ನೂರರಷ್ಟು ಗಮನಹರಿಸಲು ಸಾಧ್ಯವಾಗುತ್ತದೆ . ಶೇರು ಮಾರುಕಟ್ಟೆಯಲ್ಲಿ ಒಳ್ಳೆಯ ಲಾಭವನ್ನು ತಂದುಕೊಡುತ್ತದೆ . ವ್ಯಾಪಾರದ ಒಳ ಮರ್ಮ ಈ ದಿನದಲ್ಲಿ ನಿಮಗೆ ಅರ್ಥವಾಗುತ್ತದೆ . ಗಮನಹರಿಸುವ ಬುದ್ಧಿ ನಿಮಗೆ ಬಂದಾಗ ವಿಚಾರಗಳು ಹೊಳೆಯುವುದಕ್ಕೆ ಶುರುವಾಗುತ್ತದೆ . ಅರ್ಥಮಾಡಿಕೊಳ್ಳುವ ವಿಷಯ ನಿಮಗೆ ಬಹಳ ಸುಲಭವಾಗಿ ಆಗುತ್ತದೆ .

ಸುಲಭವಾಗಿ ಮಾಡುವ ವಿಧಾನವನ್ನು ನೀವು ಕಂಡುಕೊಳ್ಳುತ್ತೀರಿ . ಬೇರೆಯವರು ಕೂಡ ನಿಮ್ಮ ಸಹಾಯವನ್ನು ತೆಗೆದುಕೊಳ್ಳುತ್ತಾರೆ . ಮೇಲಾಧಿಕಾರಿಯ ಮೇಲೆ ನಿಮ್ಮ ಪ್ರಭಾವ ಬೀರುತ್ತದೆ . ಎಲ್ಲಾ ಕೆಲಸಗಳನ್ನು ಲೀಲಾಜಾಲವಾಗಿ ಮಾಡುವ ಹಾಗೆ ನೀವು ತೋರಿಸಿ ಕೊಡುತ್ತೀರಾ . ಒಂದಲ್ಲ 10 ದಾರಿಗಳು ನಿಮಗೆ ರಾಹುವಿನಿಂದ ಸಿಗುತ್ತಾ ಹೋಗುತ್ತದೆ . ನೀವು ಗಡಿಬಿಡಿ ಮಾಡದೆ ಸ್ವಲ್ಪ ಕೆಲಸದ ಬಗ್ಗೆ ಗಮನ ವಹಿಸಿದರೆ ಅದರಲ್ಲಿ ಬಹಳ ಯಶಸ್ಸು ದೊರೆಯುತ್ತದೆ .

ನಿಮಗೆ ತುಂಬಾ ತಾಳ್ಮೆ ಇರಬೇಕು . ರಾಹು ಇಂದ ಮೋಸ ಆಗುವ ಸಾಧ್ಯತೆ ನಿಮಗೆ ಇರುತ್ತದೆ . ವ್ಯಾಪಾರಿಗಳಿಗೆ ಏಕಾದಶದಲ್ಲಿ ಇರುವ ರಾಹು ಅಭಿವೃದ್ಧಿಯನ್ನು ತಂದುಕೊಡುತ್ತದೆ . ಗುರು ಗ್ರಹ ಅನ್ನುವುದು ವೇಗದಲ್ಲಿ ಇದೆ. ಒಳ್ಳೆಯ ಉದ್ದೇಶ ಇಟ್ಟುಕೊಂಡು ಹೂಡಿಕೆಯನ್ನು ಮಾಡುವಾಗ ಅದು ಒಳ್ಳೆಯ ಭವಿಷ್ಯವನ್ನು ತಂದು ಕೊಡುತ್ತದೆ. ಈ ಸಮಯದಲ್ಲಿ ನೀವು ಯಾವುದೇ ಕ್ಷೇತ್ರದಲ್ಲಿ ಹೂಡಿಕೆಯನ್ನು ಮಾಡಿದರೆ ನಿಮಗೆ ಒಳ್ಳೆಯ ರೀತಿ ಯಶಸ್ಸನ್ನು ತಂದುಕೊಡುತ್ತದೆ .

ಮಕ್ಕಳ ವಿಚಾರದಲ್ಲಿ ಸ್ವಲ್ಪ ಸಮಸ್ಯೆಗಳು ಇದೆ . ಎಂದರೆ ನಿಮ್ಮ ಮಾತು ಕೇಳದೆ ಇರುವುದು . ಹಠ ಮಾಡುವುದು ಹೀಗೆ ಅನೇಕ ಸಮಸ್ಯೆಗಳು ಇರುತ್ತವೆ . ಕೇತು ಗ್ರಹ ಇರುವವರೆಗೆ ಇದು ನಡೆಯುತ್ತಲೇ ಇರುತ್ತದೆ . ನೀವು ಎಚ್ಚರಿಕೆಯಿಂದ ಇರಬೇಕು . ನೀವು ಮಕ್ಕಳನ್ನು ನೋಡಿಕೊಳ್ಳುವ ವಿಚಾರದಲ್ಲಿ ಎಚ್ಚರ ವಹಿಸಬೇಕಾಗಿರುವುದು ಅನಿವಾರ್ಯವಾಗಿರುತ್ತದೆ . ಉದ್ಯೋಗದ ವಿಚಾರದಲ್ಲಿ ನಿಧಾನವಾಗುತ್ತದೆ . ದಶಮದಲ್ಲಿ ಶನಿ ಇರುವುದರಿಂದ ಕೆಲಸಗಳು ನಿಧಾನವಾಗಿ ಆಗುತ್ತದೆ.

ಎಂದು ಹೇಳಲಾಗಿದೆ. ಜನವರಿ ಮಾಸದಂದು ರವಿ ಬುಧ ಮತ್ತು ಕುಜಾ ಮೂರು ಗ್ರಹಗಳು ನಿಮ್ಮ ಅಷ್ಟಮ ಸ್ಥಾನದಲ್ಲಿ ಇರುವಂತದ್ದು, ಆದ್ದರಿಂದ ಬೇಡದ ವಿಚಾರಗಳ ಬಗ್ಗೆ ನಿಮಗೆ ಯೋಚನೆಗಳು ಶುರುವಾಗುತ್ತದೆ . ನಕಾರಾತ್ಮಕ ಶಕ್ತಿಗಳ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು .ನೀವು ನಕಾರಾತ್ಮಕ ಚಿಂತನೆ ಮತ್ತು ಧನಾತ್ಮಕ ಚಿಂತನೆ ಯಾವುದು ಎಂದು ಮೊದಲು ನಿರ್ಧರಿಸಿ ನಂತರ ಧನಾತ್ಮಕ ಚಿಂತನೆಯ ಕಡೆಗೆ ಹೆಚ್ಚು ಒಲವು ತೋರಬೇಕು .

ಒಳ್ಳೆಯ ವಿಚಾರಗಳನ್ನು ಕೈಗೆತ್ತಿಕೊಂಡು ಮನನ ಮಾಡುವುದು ಒಳ್ಳೆಯದು . ಅಷ್ಟಮದಲ್ಲಿ ಇರುವ ಗ್ರಹಗಳು ಮೃತ್ಯು ಭಯವನ್ನು ಹೆಚ್ಚಿಸುತ್ತದೆ. ಅನಾರೋಗ್ಯದಲ್ಲಿ ಇರುವವರು ವಯಸ್ಸಾಗಿರುವವರು ಇವರಿಗೆ ಮೃತ್ಯು ಭಯ ಕಾಡುತ್ತದೆ . ಮುಂದೇನು ಎಂದು ಯೋಚನೆ ಮಾಡುತ್ತಿರುವವರಿಗೆ ಮೃತ್ಯುಂಜಯ ಜಪವನ್ನು ಮಾಡುವುದು ಒಳ್ಳೆಯದು . ಭಯವನ್ನು ತಪ್ಪಿಸಲು ದೇವರನ್ನು ಸ್ಮರಣೆ ಮಾಡುವುದು ಒಳ್ಳೆಯದು. ಅಂದರೆ ಸಂಕಟ ಬಂದಾಗ ವೆಂಕಟರಮಣ ಅನ್ನೋ ಹಾಗೆ ಮಾಡಬೇಕಾಗುತ್ತದೆ .

ಇವೆಲ್ಲ ನಕಾರಾತ್ಮಕ ಶಕ್ತಿಗಳಾಗಿರುತ್ತದೆ . ಇದೆಲ್ಲ ಬಾಧಿಸದ ಹಾಗೆ ನೀವು ನೋಡಿಕೊಳ್ಳಬೇಕು .ಪದೇ ಪದೇ ನಕಾರಾತ್ಮಕ ಯೋಚನೆಗಳು ಬರುತ್ತಿರುವಾಗ ಭಯ ಜಾಸ್ತಿ ಆದಾಗ ಮಾನಸಿಕ ಒತ್ತಡ ಹೆಚ್ಚಾದಾಗ ಗಾಬರಿ ಬಿಡುವುದು .ಹೀಗೆ ಅನೇಕ ಸಮಸ್ಯೆಗಳು ಕಾಣುತ್ತಿರುತ್ತದೆ .ವರ್ಷದ ಮೊದಲ ಮಾಸದಲ್ಲೇ ಈ ರೀತಿಯ ತೊಂದರೆಗಳು ಕಾಣಿಸುತ್ತಿರುತ್ತದೆ .ಮೊದಲನೇ ತಿಂಗಳಲ್ಲಿ ಮನೆಯವರಿಗೂ ನಿಮಗೂ ವೈ ಮನಸ್ಸು ಉಂಟಾಗುತ್ತದೆ ಎಂದು ಹೇಳಲಾಗಿದೆ . ಇದು ತುಂಬಾ ಗಂಭೀರವಾಗಿ ಇರುವುದಿಲ್ಲ .ಸಣ್ಣ ಪುಟ್ಟ ಮನಸ್ತಾಪಗಳು ಉಂಟಾಗುತ್ತದೆ .

Leave A Reply

Your email address will not be published.