ಮನೆಯಲ್ಲಿ ಹಣ ನಿಲ್ಲಲು ಹೀಗೆ ಮಾಡಿ

ನಾವು ಈ ಲೇಖನದಲ್ಲಿ ಮನೆಯಲ್ಲಿ ಹಣ ನಿಲ್ಲಲು ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಯೋಣ . ಮನೆಯಲ್ಲಿ ಹಣ ನಿಲ್ಲಲು ಹೀಗೆ ಮಾಡಿ..!! 1 ಸೂರ್ಯ ಹುಟ್ಟುವ ಮುಂಚೆ ಎದ್ದೇಳಬೇಕು. ದೇವರ ಪೋಟೋ ವಿಗ್ರಹಗಳಿಗೆ ಅಷ್ಟಗಂಧ ಇಟ್ಟು ಪೂಜಿಸಬೇಕು.

ಸಾಯಂಕಾಲ 7 ಗಂಟೆಯವರೆಗೆ ಮನೆಯ ಮುಖ್ಯದ್ವಾರ ತೆರೆದಿಡಬೇಕು. ಮನೆಯಲ್ಲಿ ಶುಚಿಯಾಗಿ ಇರಿಸಿ, ಸಾಯಂಕಾಲ ಧೂಪವನ್ನು ಹಾಕಬೇಕು. ಸಾಯಂಕಾಲ ಹೊಸ್ತಿಲಿಗೆ ಅರಿಶಿಣ ಕುಂಕುಮವನ್ನು ಇಟ್ಟು ಹೂವನ್ನು ಇಡಬೇಕು.

ಬೆಳಕು ಹರಿಯುವ ಮುಂಚೆನೇ ಬಾಗಿಲ ಮುಂದೆ ನೀರು ಹಾಕಿ ರಂಗೋಲಿ ಹಾಕಬೇಕು ಮನೆಯನ್ನು ಒರೆಸುವಾಗ ಸ್ವಲ್ಪ ಕಲ್ಲು ಉಪ್ಪು, ಹಾಗು ಸ್ವಲ್ಪ ಅರಿಶಿಣ ಹಾಕಿ ಮನೆಯನ್ನು ಒರಿಸಬೇಕು. ಮನೆಯ ಒಳಗೆ ಪ್ರ ವೇಶಿಸುವಾಗ ಎದುರಿಗೆ ಪರಿಮಳ ಭರಿತ ಹೂವುಗಳನ್ನು ಇರಿಸಬೇಕು.

ಮನೆಯ ಬಾಗಿಲ ಸುತ್ತ ಮುತ್ತಲು ಮುಳ್ಳಿನ ಗಿಡಗಳು ಹಾಗೂ ಪೊದೆಗಳು ಇರದ ಹಾಗೆ ನೋಡಿಕೊಳ್ಳಬೇಕು. ಮನೆಯಲ್ಲಿ ಉತ್ತರ ಕಡೆಯ ಕಿಟಕಿಗಳನ್ನು ತೆರೆದು ದಕ್ಷಿಣ ಕಡೆಯ ಕಿಟಕಿಗಳನ್ನು ಮುಚ್ಚಬೇಕು. ನಿಮ್ಮ ಪರ್ಸ್, ಲಾಕರ್, ಗಲ್ಲಾ ಪೆಟ್ಟಿಗೆಯಲ್ಲಿ ಸಂಪೂರ್ಣವಾಗಿ ಹಣ ಖಾಲಿ ಹಾಗದ ಹಾಗೆ ನೋಡಿಕೊಳ್ಳಿ.

ಹಣವನ್ನು ಎಲ್ಲೆಂದರೆ ಅಲ್ಲಿ ಇಡದೆ ಬೀರುವಿನಲ್ಲಿ ಅಥವಾ ಲಾಕರ್ ನಲ್ಲಿ ಇಟ್ಟು ಬೀಗವನ್ನು ಹಾಕಬೇಕು. ಮನೆಯಲ್ಲಿ ಹಿಂಬಾಗಿಲು ಏನಾದರೂ ಇದ್ದರೆ , ಅದನ್ನು ತೆರೆದಿಡಬಾರದು. ಹಾಗೂ ಮುಖದ್ವಾರವು ತೆರೆದಿಡಬೇಕು.

ಮನೆಯಲ್ಲಿ ಏನಾದರೂ ನಿಂತ ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಚಿತ್ರಪಟವಿದ್ದಲ್ಲಿ ಇದನ್ನು ಮನೆಯಲ್ಲಿ ಪೂಜಿಸಬಾರದು.ನಿಮ್ಮ ಪರ್ಸ್ , ಲಾಕರ್ ಅಥವಾ ಗಲ್ಲಾ ಪೆಟ್ಟಿಗೆಯಲ್ಲಿ ಎಲ್ಲೂ ಒಡೆಯದ 5 ಏಲಕ್ಕಿಯನ್ನು ಇರಿಸಬೇಕು.

Leave a Comment