ಕಷ್ಟಗಳು ನಿಮ್ಮನ್ನು ಕಾಡುತ್ತಲಿದೆಯೇ? ಹಾಗಿದ್ದರೆ ಮನೆಯಲ್ಲಿ ಅಲಕ್ಷ್ಮಿಯು ನೆಲೆಸಿರುತ್ತಾಳೆ ಎಂದು ತಿಳಿಯಬಹುದು. ಅಲಕ್ಷ್ಮಿಯು ಇರುವ ಸ್ಥಳಗಳು ಮನೆಯಲ್ಲಿ ಜಗಳಗಳು ಸದಾ ನಡೆಯುತ್ತಿದ್ದರೆ, ಅಲಕ್ಷ್ಮಿಯು ಅಲ್ಲಿ ನೆಲೆಸಿರುತ್ತಾಳೆ.
ಕ್ರೂರಿಗಳು ಮತ್ತು ಸುಳ್ಳು ಮಾತುಗಳನ್ನು ಆಡುವವರ ಜೊತೆಯಲ್ಲಿ ನೆಲೆಸಿರುತ್ತಾಳೆ. ಹೊತ್ತು ಮುಳುಗುವ ಹೊತ್ತಲ್ಲಿ ಮನೆಯಲ್ಲಿ ಯಾರು ಆಹಾರವನ್ನು ತಿನ್ನುತ್ತಾರೋ ಅಲ್ಲಿ ನೆಲೆಸುತ್ತಾಳೆ. ಮನೆಯಲ್ಲಿ ಸದಾ ಕತ್ತಲೆ ತುಂಬಿರುವ ಜಾಗ, ಕೊಳಕಾದ ಜಾಗ, ಧೂಳು ತುಂಬಿರುವ ಜಾಗದಲ್ಲಿ ಇರುತ್ತಾಳೆ.
ಮನೆಯಲ್ಲಿ ಅರಚುವ, ಕಿರುಚುವ ಹಾಗೂ ಜಗಳವಾಡುವ ಜಾಗದಲ್ಲಿ ಅಲಕ್ಷ್ಮಿಯು ನೆಲೆಸಿರುತ್ತಾಳೆ. ಮನೆಯಲ್ಲಿ ಮತ್ತು ದೇವರ ಫೊಟೊ ವಿಗ್ರಹಗಳ ಮೇಲೆ ಧೂಳು ತುಂಬಿರುವುದರಲ್ಲಿ ಇರುತ್ತಾಳೆ. ತಲೆಬುರುಡೆ, ಕೂದಲು, ಬೂದಿ, ಎಲುಬುಗಳು ಮತ್ತು ದವಡೆಯ ಬೆಂಕಿ ಇರುವಲ್ಲಿ ಲಕ್ಷ್ಮಿಯು ಅಲ್ಲಿ ಖಚಿತವಾಗಿ ಇರುತ್ತಾಳೆ.
ಮನೆಯಲ್ಲಿ ಶುಚಿತ್ವ ಇಲ್ಲದ ಜಾಗದಲ್ಲಿ, ಮನೆಯಲ್ಲಿ ಯಾವಾಗಲೂ ಮುಗ್ಗು ವಾಸನೆ ಸೀದಾ ವಾಸನೆ, ಬರುತ್ತಿದ್ದರೆ ಅಲ್ಲಿ ಅಲಕ್ಷ್ಮೀಯು ಇರುತ್ತಾಳೆ.
ಪುರುಷರು ಪಾದಗಳನ್ನು ಸರಿಯಾಗಿ ತೊಳೆಯದೆ ಊಟ ಮಾಡುವವರ ಮನೆಯಲ್ಲಿ ಲಕ್ಷ್ಮಿಯು ಇದ್ದು, ದುಃಖ ಮತ್ತು ಬಡತನವನ್ನು ಉಂಟುಮಾಡುತ್ತಾಳೆ
ಯಾರ ಮನೆಯಲ್ಲಿ ಮರಳು, ಇದ್ದಿಲು ಹಾಗೂ ಉಪ್ಪಿನಿಂದ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತಿರುತ್ತಾರೆ ಅಂತವರ ಮನೆಯಲ್ಲಿ ಅಲಕ್ಷ್ಮಿಯು ದುಃಖವನ್ನು ನೀಡುತ್ತಾ ಭಿನ್ನಾ ಅಭಿಪ್ರಾಯವನ್ನು ಉಂಟುಮಾಡುತ್ತಾಳೆ.
ಮನೆಗೆ ಮುಂದಿನ ಬಾಗಿಲು ಹಾಗೂ ಇಂದಿನ ಬಾಗಿಲು ಇದ್ದಲ್ಲಿ ಲಕ್ಷ್ಮಿ ದೇವಿಯು ಮುಂದಿನ ಬಾಗಿಲಲ್ಲಿ ಬಂದರೆ, ಅಲಕ್ಷ್ಮಿಯು ಹಿಂದಿನ ಬಾಗಿಲಲ್ಲಿ ಬರುತ್ತಾಳೆ. ಆದ್ದರಿಂದ ಮುಂದಿನ ಬಾಗಿಲು ತೆರೆದು ಹಿಂದಿನ ಬಾಗಿಲು ಮುಚ್ಚಿರಬೇಕು.
ಎಲ್ಲಿ ಪತಿ ಪತ್ನಿಯರ ನಡುವೆ ಜಗಳ ನಡೆಯುತ್ತದೆಯೋ ಎಲ್ಲಿ ದೇವರ ಪೂಜೆ ನಡೆಯುವುದಿಲ್ಲವೋ, ಎಲ್ಲಿ ಜೂಜಾಟವಿದೆಯೋ ಅಲ್ಲಿ ಇದ್ದು, ಪಾಪಗಳನ್ನು, ಬಡತನವನ್ನು ಉಂಟುಮಾಡುತ್ತಾಳೆ.
ವ್ಯಭಿಚಾರಿಗಳು, ಬೇರೆಯವರ ಸಂಪತ್ತನ್ನು ಕಿತ್ತುಕೊಳ್ಳುವವರು, ಬ್ರಾಹ್ಮಣರನ್ನು, ಸತ್ಪುರುಷರನ್ನು ಹಾಗೂ ವೃದ್ಧರನ್ನು ಗೌರವಿಸದ ಸ್ಥಳಗಳಲ್ಲಿ ಅಲಕ್ಷ್ಮಿಯು ವಾಸಿಸುವ ಸ್ಥಳಗಳಾಗಿದೆ ಎಂದು ಪದ್ಮಾಪುರಾಣದಲ್ಲಿ ತಿಳಿಸಲಾಗಿದೆ.
ತಂದೆ ತಾಯಿಯರ ಮಾತು ಯಾವ ಮಕ್ಕಳು ಕೇಳುವುದಿಲ್ಲವೋ, ತಂದೆ ತಾಯಂದಿರಿಗೆ ಯಾವ ಮಕ್ಕಳು ಬೆಲೆ ಕೊಡುವುದಿಲ್ಲವೋ, ಅಂತಹ ಮನೆಯಲ್ಲಿ ಅಲಕ್ಷ್ಮೀಯು ವಾಸವಿರುತ್ತಾಳೆ.
ನಿಂಬೆ ಹಣ್ಣು ಹಾಗೂ ಮೆಣಸಿನ ಕಾಯಿಗಳು ಲಕ್ಷ್ಮಿಯ ನೆಚ್ಚಿನ ಆಹಾರವಾಗಿರುತ್ತದೆ. ಆದ್ದರಿಂದ ಅನೇಕ ಹಿಂದೂಗಳು ಇದನ್ನು ಮನೆಗೆ ಹಾಗೂ ಅಂಗಡಿಗಳ ಹೊರಗೆ ನೇತು ಹಾಕುತ್ತಾರೆ. ಅಲಕ್ಷ್ಮಿಯು ಅದನ್ನು ತಿನ್ನುತ್ತಾಳೆ ಹಾಗೂ ಮನೆಯ ಒಳಗೆ ಪ್ರವೇಶಿಸುವುದಿಲ್ಲ.