ಪ್ರತಿದಿನ ಮಲಗುವ ಮುನ್ನ ಶ್ರೀಕೃಷ್ಣನ ಈ ಮಾತುಗಳನ್ನು ಕೇಳಿದರೇ ನಿಮ್ಮ ಜೀವನವೇ ಬದಲಾಗುತ್ತದೆ.
ನಿನ್ನ ಭಾಗ್ಯದಲ್ಲಿ ಏನು ಇದೆಯೋ ಅದು ನಿನ್ನ ಪಾಲಿಗೆ ಸಿಕ್ಕೇ ಸಿಗುತ್ತದೆ. ನಿನ್ನದಲ್ಲದ ಯಾವ ಒಂದು ವಿಚಾರವು ಕೂಡ ನೀನು ಎಷ್ಟೇ ಪ್ರಯತ್ನ ಪಟ್ಟರು ನಿನಗೆ ಸಿಗುವುದಿಲ್ಲ. ಚಿಂತೆ ಮಾಡುವುದನ್ನು ಬಿಟ್ಟು ಈ ಜೀವನದಲ್ಲಿ ಬರುವುದೆಲ್ಲವನ್ನು ಬರುವ ರೀತಿಯಲ್ಲೇ ಸ್ವೀಕರಿಸು. ಮನುಷ್ಯರು ತಾನು ಮಾಡಿರುವ ಕರ್ಮದ ಫಲವನ್ನು ಈ ಜನ್ಮದಲ್ಲಿ ಅಥವಾ ಮುಂದಿನ ಜನ್ಮದಲ್ಲಿ ಅನುಭವಿಸುವುದು ಶತಸಿದ್ಧ ಎನ್ನುವ ಜ್ಞಾನವನ್ನು ಯಾವಾಗ ಅರ್ಥ ಮಾಡಿಕೊಳ್ಳುತ್ತಾರೋ ಆಗ
ಈ ಪ್ರಪಂಚ ಬದಲಾವಣೆಯ ದಾರಿಯಲ್ಲಿ ಸಾಗುತ್ತದೆ. ಹಿಂದಿರುಗಿ ಚರಿತ್ರೆಯನ್ನು ನೋಡಿದರೇ ಅದರಲ್ಲಿ ಗೆದ್ದವರಿಗೆ ಗೆಲುವಿನ ಸ್ಥಾನವಿದೆ. ಸೋತವರಿಗೆ ಇಂತಹ ವೀರನ ಜೊತೆಗೆ ಯುದ್ಧ ಮಾಡಿ ಸೋತ ಎನ್ನುವ ಸ್ಥಾನವಿರುತ್ತದೆ. ಆದರೇ ನಿಂತು ನೋಡುವವರಿಗೆ, ಟೀಕೆ ಮಾಡುವವರಿಗೆ ಚರಿತ್ರೆಯಲ್ಲಿ ಯಾವುದೇ ಸ್ಥಾನವಿಲ್ಲ. ಸಿಟ್ಟಿನಲ್ಲಿ ಮಾತನಾಡಿದರೆ ನಮ್ಮ ಗುಣವನ್ನು ಕಳೆದುಕೊಳ್ಳುತ್ತೇವೆ. ಅಗತ್ಯಕ್ಕಿಂತ ಹೆಚ್ಚಾಗಿ ಮಾತನಾಡುವುದರಿಂದ ಶಾಂತಿಯನ್ನು ಕಳೆದುಕೊಳ್ಳುತ್ತೇವೆ.
ಅನಗತ್ಯವಾಗಿ ಮಾತನಾಡುವುದರಿಂದ ಕೆಲಸ ಕಳೆದುಕೊಳ್ಳುತ್ತೇವೆ. ಅಹಂಕಾರದಿಂದ ಮಾತನಾಡಿದರೇ ಇರುವ ಪ್ರೀತಿಯನ್ನು ಕಳೆದುಕೊಳ್ಳುತ್ತೇವೆ. ಸುಳ್ಳು ಮಾತನಾಡಿದಾಗ ಹೆಸರನ್ನು ಕಳೆದುಕೊಳ್ಳುತ್ತೇವೆ. ವೇಗವಾಗಿ ಮಾತನಾಡಿದಾಗ ಅರ್ಥವನ್ನು ಕಳೆದುಕೊಳ್ಳುತ್ತೇವೆ. ಆದರೇ ಪ್ರೀತಿಯಿಂದ ಮಾತನಾಡಿದರೇ ನೀವು ಎಲ್ಲವನ್ನು ಗಳಿಸಿಕೊಳ್ಳುತ್ತೀರಿ. ನೀವು ಮಾಡುವ ಕೆಲಸದ ಮೇಲೆ ನಿಷ್ಠೆ ಗೌರವ ಇರಲಿ. ಅದರಿಂದ ಯಾವುದೇ ಪ್ರತಿಫಲವನ್ನು ಎದುರು ನೋಡಬೇಡಿ. ಒಂದು ವೇಳೆ ನೀವು ಮಾಡುತ್ತಿರುವ ಕೆಲಸಗಳಲ್ಲಿ ನಿಮ್ಮ ಗುರಿ ತಲುಪುವಲ್ಲಿ ವಿಫಲವಾದರೇ ಅದಕ್ಕಾಗಿ ನೀವು ಬಳಸುತ್ತಿರುವ ತಂತ್ರವನ್ನು ಬದಲಾಯಿಸಿ ಹೊರತು ನಿಮ್ಮ ಗುರಿಯನ್ನಲ್ಲ.
ನೀವು ಮಾಡುತ್ತಿರುವ ಎಲ್ಲಾ ಕೆಲಸಗಳನ್ನು ತಪ್ಪದೇ ಮಾಡಿ. ಆದರೇ ಅವುಗಳನ್ನು ದುರಾಸೆಯಿಂದ, ಅಸೂಯೆಯಿಂದ, ಕಾಮದಿಂದ, ಅಹಂಕಾರದಿಂದ ಮಾಡಬೇಡಿ. ಇವುಗಳ ಹೊರತಾಗಿ ಪ್ರೀತಿ ಕರುಣೆ, ವಿನಮ್ರತೆ ಹಾಗೂ ಭಕ್ತಿಯಿಂದ ಮಾಡಿ. ಜೀವನದಲ್ಲಿ ನಡೆಯುವುದೆಲ್ಲವೂ ಒಳ್ಳೆಯದಕ್ಕಾಗಿಯೇ ನಡೆಯುತ್ತದೆ. ಪ್ರಸ್ತುತ ನಿಮ್ಮ ಜೀವನದಲ್ಲಿ ಏನು ನಡೆಯುತ್ತಿದೆಯೋ ಅದೆಲ್ಲವೂ ಸಹ ಉತ್ತಮವಾದ ಕಾರಣಕ್ಕೆ ನಡೆಯುತ್ತಿದೆ. ಮುಂದಿನ ಸಮಯದಲ್ಲಿ ನಡೆಯುವುದು ಸಹ ಒಳ್ಳೆಯದಕ್ಕಾಗಿ ನಡೆಯುತ್ತದೆ.
ಭವಿಷ್ಯದ ಬಗ್ಗೆ ಚಿಂತೆ ಮಾಡಬೇಡಿ. ವರ್ತಮಾನಕ್ಕಾಗಿ ಜೀವಿಸಿ. ಒಂದು ಸಾರಿ ಅರ್ಜುನನು ಭಗವಾನ್ ಶ್ರೀಕೃಷ್ಣನ ಬಳಿ ಬಂದು ಒಂದು ಪ್ರಶ್ನೆ ಕೇಳುತ್ತಾನೆ. ಎಲ್ಲವೂ ಹಣೆಬರಹದಲ್ಲಿ ಬರೆದಿದೆ ಎನ್ನುವುದಾದರೇ ಕಷ್ಟಪಟ್ಟು ಕೆಲಸ ಮಾಡುವುದರ ಫಲವೇನು? ಎಂದು ಅದಕ್ಕೆ ಉತ್ತರಿಸುವ ಭಗವಾನ್ ಶ್ರೀಕೃಷ್ಣನು ಒಂದು ವೇಳೆ ಪ್ರಯತ್ನ ಪಟ್ಟರೇ ಸಿಗಬಹುದು ಎಂದು ಹಣೆಬರಹದಲ್ಲಿ ಬರೆದಿದ್ದರೇ ಪ್ರಯತ್ನಂ ಸರ್ವಸಿದ್ಧಿ ಸಾಧನಂ. ಮನುಷ್ಯನು ಖಾಲಿ ಕೈಯಲ್ಲಿ ಬರುತ್ತಾನೆ. ಖಾಲಿ ಕೈಯಲ್ಲಿ ಹೋಗುತ್ತಾನೆ ಎಂದು ಎಲ್ಲರೂ ಹೇಳುತ್ತಾರೆ.
ಆದರೇ ಮನುಷ್ಯನು ಬರುವಾಗ ಭಾಗ್ಯದ ಜೊತೆಗೆ ಬರುತ್ತಾನೆ ಮತ್ತು ಹೋಗುವಾಗ ಕರ್ಮದ ಫಲವನ್ನು ಕೊಂಡು ಹೋಗುತ್ತಾನೆ. ಒಂದು ಸಾರಿ ನಾರದ ಮುನಿಗಳು, ಭಗವಾನ್ ಶ್ರೀಕೃಷ್ಣನ ಬಳಿ ಈ ಪ್ರಪಂಚದಲ್ಲಿ ಎಲ್ಲರೂ ಯಾಕೆ ದುಃಖದಿಂದ ಇರುತ್ತಾರೆ? ಎನ್ನುವ ಪ್ರಶ್ನೆ ಕೇಳಿದರು ಅದಕ್ಕೆ ಭಗವಾನ್ ಶ್ರೀಕೃಷ್ಣ ಮುಗುಳು ನಗುತ್ತಾ ನೀಡಿದ ಉತ್ತರ ಹೀಗಿತ್ತು. ಸುಖ ಎನ್ನುವುದು ಎಲ್ಲರಲ್ಲಿಯೂ ಇದೆ. ಆದರೆ ಮತ್ತೊಬ್ಬರ ಸಂತೋಷ ನೋಡಿ ಎಲ್ಲರೂ ದುಃಖ ಪಡುತ್ತಿದ್ದಾರೆ.
ಈ ಪ್ರಪಂಚದಲ್ಲಿ ಯಾವುದು ಸಹ ಶಾಶ್ವತವಲ್ಲ. ಇಲ್ಲಿ ಎಲ್ಲವೂ ನಶ್ವರ. ಪ್ರತಿಯೊಬ್ಬರ ದೇಹಕ್ಕೂ ಒಂದು ಆಯಸ್ಸು ಇರುತ್ತದೆ. ಹಾಗಾಗಿ, ನಿಮ್ಮ ಗುರುತಿಗಾಗಿ ದೇಹವನ್ನು ಬಳಸಿಕೊಳ್ಳುವುದರಿಂದ ಯಾವುದೇ ಪ್ರಯೋಜನ ಇಲ್ಲ. ಆತ್ಮವನ್ನು ಬಿಟ್ಟು ಎಲ್ಲವೂ ನಶ್ವರ. ದೇಹ ಅಂತ್ಯವಾದ ನಂತರ ನಾವು ಏನನ್ನೂ ತೆಗೆದುಕೊಂಡು ಹೋಗಲು ಆಗುವುದಿಲ್ಲ. ಯಾರನ್ನು ಜೊತೆಗೆ ಕರೆದುಕೊಂಡು ಹೋಗುವುದು ಸಾಧ್ಯವಿಲ್ಲ. ಒಂದು ಒಳ್ಳೆಯ ಕೆಲಸಕ್ಕಾಗಿ ಪ್ರಯತ್ನ ಎನ್ನುವುದು ಹೆಚ್ಚಾದಷ್ಟು ಹಣೆಯ ಬರಹ ಸಹ ಅದರ ಎದುರು ತಲೆಬಾಗಿ ನಿಲ್ಲುತ್ತದೆ. ಇದು ನಿಶ್ಚಿತವಾದದ್ದು.
ನೆಮ್ಮದಿ ಎನ್ನುವುದು ಹಣ ಅಥವಾ ವಸ್ತುಗಳಲ್ಲಿ ಇರುವುದಿಲ್ಲ. ಬದಲಾಗಿ ನಮ್ಮ ಮನಸ್ಸು ಮತ್ತು ಯೋಚನೆಯಲ್ಲಿ ಇರುತ್ತದೆ. ಕಷ್ಟವೇ ಪಡದೆ ಸಿಗುವ ಸುಖ ಸಂತೋಷ ತರುವುದಿಲ್ಲ. ಹಾಗಾಗಿ ಸಂತೋಷವನ್ನು ಕಷ್ಟದಲ್ಲಿ ಹುಡುಕಿ. ಬದುಕೆನ್ನುವ ಈ ಹೋರಾಟದಲ್ಲಿ ನಾವು ಮಾಡುವ ಎಲ್ಲಾ ಕೆಲಸಗಳನ್ನು ಪ್ರಾಮಾಣಿಕತೆಯಿಂದ ಮಾಡಬೇಕು. ಏನಾಗಬೇಕೋ ಅದು ಆಗೇ ಆಗುತ್ತದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸ್ನಾನ ದೇಹವನ್ನು, ದಾನ ಧನವನ್ನು, ಯೋಗ ಜೀವನವನ್ನು, ಪ್ರಾರ್ಥನೆ ಆತ್ಮವನ್ನು, ವ್ರತ ಆರೋಗ್ಯವನ್ನು, ಕ್ಷಮೆ ಸಂಬಂಧವನ್ನು, ಪರೋಪಕಾರ ಅದೃಷ್ಟವನ್ನು ಪವಿತ್ರ ಮಾಡುತ್ತದೆ. ದೇವರಿಗೆ ಪೂಜೆ ಮಾಡುವುದರಿಂದ ಪುಣ್ಯ ಬರುವುದಿಲ್ಲ. ಒಳ್ಳೆಯ ಬುದ್ಧಿ,
ಒಳ್ಳೆಯ ಯೋಚನೆ, ಒಳ್ಳೆಯ ಕೆಲಸಗಳು, ಒಳ್ಳೆಯ ಮಾತುಗಳು, ಒಳ್ಳೆಯ ವರ್ತನೆ, ಕರುಣೆ ಹಾಗೂ ಅಹಿಂಸೆಯಿಂದ ಪುಣ್ಯಪ್ರಾಪ್ತಿಯಾಗುತ್ತದೆ. ಮುಂದಿನ ಜನ್ಮಕ್ಕೆ ಈ ಜನ್ಮ ಬುನಾದಿ ಆಗಿರುತ್ತದೆ ಎನ್ನುವುದು ಸತ್ಯ. ಮನಸ್ಸಿಗೆ ಮದ ಹೆಚ್ಚಾದಾಗ, ಸ್ಮಶಾನದಲ್ಲಿ ತಿರುಗಾಡಿ ಬರಬೇಕು ಎಂದು ಹೇಳುತ್ತಾರೆ. ಯಾಕೆಂದರೆ ನಾನು ನನ್ನದು ಎಂದು ಹೇಳಿ ಮೆರೆದು ಮಣ್ಣಾದ ಅದೆಷ್ಟೋ ಜನರನ್ನು ಅಲ್ಲಿ ನೋಡಬಹುದು. ಸತ್ಯದ ದಾರಿಯಲ್ಲೇ ಚಲಿಸಿ, ಆ ದಾರಿಯಲ್ಲಿ ನಡೆಯುವಾಗ ನೀನು ಪಾತಾಳಕ್ಕೆ ಬಿದ್ದರು ಸಹ ನಿನ್ನನ್ನು ಮೇಲಕ್ಕೆ ಎತ್ತಲು ನಾನು ಬರುತ್ತೇನೆ. ಸ್ವರ್ಗದಲ್ಲಿ ಸಾವು ಹೊರತುಪಡಿಸಿ ಇನ್ನೆಲ್ಲವು ಇದೆ. ಭಗವದ್ಗೀತೆಯಲ್ಲಿ ಸುಳ್ಳನ್ನು ಹೊರತುಪಡಿಸಿ ಇನ್ನೆಲ್ಲವು ಇದೆ. ಈ ಪ್ರಪಂಚದಲ್ಲಿ ಬೇರೆ ಎಲ್ಲವೂ ಇದೆ. ಆದರೇ ನೆಮ್ಮದಿ ಇಲ್ಲ. ಇಂದು ಎಲ್ಲಾ ಮನುಷ್ಯರ ಬಳಿ ಎಲ್ಲವೂ ಇದೆ ಆದರೇ ಶಾಂತಿ ಇಲ್ಲ.