ಮಿಥುನ ರಾಶಿ ರಾಹು ಗೋಚಾರ ಫಲ

0

ಮಿಥುನ ರಾಶಿಯವರನ್ನು ಅದೃಷ್ಟವಂತರು ಎನ್ನಬೇಕೇ? ಅಥವಾ ನೀವೇ ಕಿಂಗ್ ನಿಮ್ಮದೇ ಕಿಂಗ್ಡಮ್ ಎನ್ನಬೇಕೇ? ಎಂಬುದು ಗೊತ್ತಾಗುತ್ತಿಲ್ಲ. ಏಕೆಂದರೆ ರಾಹುವಿನಿಂದ ಬಹಳ ಲಾಭ ಪಡೆಯುತ್ತಿರುವವರಲ್ಲಿ ನೀವೇ ಮುಂಚೂಣಿಯಲ್ಲಿದ್ದೀರ. ಆದರೆ ಈ ವರ್ಷ ಅಕ್ಟೋಬರ್ ಕೊನೆಯಲ್ಲಿ ಮತ್ತೆ ರಾಹು ಪರಿವರ್ತನೆ ಆಗುವುದರಲ್ಲಿದೆ. ನಂತರವೂ ನಿಮ್ಮ ಅದೃಷ್ಟ ಈಗಿನ ಹಾಗೆಯೇ ಮುಂದುವರೆಯುತ್ತದೆಯೇ? ಅಥವಾ ಹೆಚ್ಚಾಗುತ್ತದೆಯೇ? ಎಂದು ಕೇಳಿದರೆ,

ಉತ್ತರಿಸಲು ನನಗೆ ತುಂಬಾ ಖುಷಿ ಆಗುತ್ತಿದೆ. ಏಕೆಂದರೆ ಇಷ್ಟು ದಿನ ಒಂದೇ ಕೈಯಲ್ಲಿ ಲಾಭವನ್ನು ಕೊಡುತ್ತಿದ್ದ ರಾಹು ಈಗ ಎರಡು ಕೈಯಲ್ಲೂ ಮೊಗೆದು ಕೊಡುತ್ತಾನೆ. ಬಹಳ ಅದ್ಭುತವಾದ ಘಟನೆಗಳು ನಿಮ್ಮ ಜೀವನದಲ್ಲಿ ನಡೆಯುವುದಿದೆ. ರಾಹುವಿನ ಕೃಪೆಯಿಂದ ಅಂದುಕೊಂಡಿದ್ದೆಲ್ಲವೂ ಆಗುವುದು ಎಂದೇ ಹೇಳಬಹುದು. ಹಾಗಾದರೆ ಯಾವ ರೀತಿಯ ಶುಭಫಲಗಳು ಇದ್ದಾವೆ?

ಯಾವ ವಿಚಾರವಾಗಿ ಲಾಭವಾಗುವುದು? ಎಂಬುದನ್ನು ಹಾಗೂ ಶುಭಫಲಗಳು ಎಷ್ಟು ದಿನದವರೆಗೂ ಇರುತ್ತದೆ ಎಂಬುದನ್ನು ಹೇಳುತ್ತಿದ್ದೇನೆ. ನಿಮಗೆ ಗೊತ್ತಾಗಿರಬಹುದು ಅಕ್ಟೋಬರ್ 30ಕ್ಕೆ ಮೇಷ ರಾಶಿಯಲ್ಲಿದ್ದ ರಾಹು ಮೀನ ರಾಶಿಗೆ ಹೋಗುವವನಿದ್ದಾನೆ. ಇದು ನಿಮ್ಮಿಂದ 10ನೇ ಮನೆಯಲ್ಲಿ ನಡೆಯುತ್ತದೆ. ಹತ್ತನೇ ಮನೆಗೆ ನಾವು ಕರ್ಮಸ್ಥಾನ ಅಥವಾ ಉದ್ಯೋಗ ಸ್ಥಾನ ಎಂದು ನೀವು ಮಾಡುವ ಉದ್ಯೋಗದಿಂದಲೇ ಭರ್ಜರಿ ಎಂದೇ ಹೇಳಬಹುದು.ಇಷ್ಟು ದಿನ ರಾಹು ನಿಮ್ಮ ಲೈಫ್ ಅಲ್ಲಿ ಸಂತೋಷ ನೆಮ್ಮದಿ ನೆಲೆಸುವ ಹಾಗೆ ಮಾಡಿದ್ದ.

ಆದರೆ ಇನ್ನು ಮೇಲೆ ದುಡ್ಡಿನ ಹೊಳೆಯನ್ನೇ ಹರಿಸುವವನಿದ್ದಾನೆ. ಹಾಗಾದರೆ ಯಾವ ತರದ ಲಾಭ ಆಗಬಹುದು? ಒಂದಷ್ಟು ಉದಾಹರಣೆಗಳನ್ನು ಕೊಡುತ್ತೇನೆ. ರಾಹು ಬೃಹಸ್ಪತಿ ಸಂಧಿ ಸಮಯದಲ್ಲಿ ಕಿರಿಕಿರಿ ತಾಳಲಾರದೆ, ಉದ್ಯೋಗ ಬಿಟ್ಟಿರಬಹುದು. ಇಲ್ಲವಾದರೆ ಯಾವುದೋ ಕಾರಣಕ್ಕಾಗಿ ಕೆಲಸದಿಂದ ತೆಗೆದು ಹಾಕಿದ್ದೀರ ಬಹುದು. ಫ್ರೆಶರ್ ಗಳಿಗೆ ಇನ್ನೂ ಕೆಲಸ ಸಿಗದೇ ಇರಬಹುದು.

ರಾಹುವಿನ ಮೂಲಕ ನೀವು ಉದ್ಯೋಗದ ನಿರೀಕ್ಷೆ ಮಾಡಬಹುದು. ಕೆಲವರಿಗೆ ಅಚಾನಕ್ ಆಗಿ ಯಾವುದೇ ಸೂಚನೆಗಳು ಇಲ್ಲದೆ, ಕಂಪನಿಯಿಂದ ಆಫರ್ ಬರುವುದು. ಅಪ್ಲಿಕೇಶನ್ ಹಾಕದೆ ಯಾವ ಕೆಲಸವೂ ಸಿಗದ ಈ ಕಾಲದಲ್ಲಿ, ನೀವು ಕೆಲಸ ಸಿಗುವುದೋ ಇಲ್ಲವೋ ಎಂದು ಅಪ್ಲಿಕೇಶನ್ ಹಾಕಿರುತ್ತೀರಿ. ಸಿಗುವ ನಿರೀಕ್ಷೆ ನಿಮಗಿರುವುದಿಲ್ಲ.

ಅಪ್ಲಿಕೇಶನ್ ಹಾಕಿರುವುದನ್ನೇ ಮರೆತಿರಬಹುದು. ಈ ರೀತಿಯ ವಿಷಯಗಳು ಕ್ಲಿಕ್ ಆಗುವ ಸಾಧ್ಯತೆಗಳಿವೆ. ಮತ್ತೆ ಕೆಲವರು ಬಹಳ ಸಮಯದಿಂದ ಸರ್ಕಾರಿ ನೌಕರಿಗೆ ಪ್ರಯತ್ನ ಪಡುತ್ತಿದ್ದೀರಿ. ಅದು ಅನಿರೀಕ್ಷಿತವಾಗಿ ನಿಮ್ಮ ಪಾಲಾಗಬಹುದು. ಮತ್ತೆ ಕೆಲವರು ಉದ್ಯೋಗ ಸಿಗುವುದು ಎಂದರೆ ಎಷ್ಟು ಹಣ ಕೊಡುವುದಕ್ಕೂ ಸಿದ್ಧರಿರುತ್ತಾರೆ. ಅನಂತರ ಆ ಕೆಲಸದಿಂದ ಲಾಭ ಪಡೆಯಬಹುದು ಎಂಬ ಕಾರಣದಿಂದ.

ಇಂತಹ ಎಲ್ಲ ಬುದ್ಧಿಯನ್ನು ಕೊಡುವುದು ರಾಹುವೇ. ಹೀಗೆ ಅಡ್ಡ ದಾರಿಯಲ್ಲಿ ಉದ್ಯೋಗ ಹಿಡಿಯುವ ಯೋಚನೆ ಇದ್ದರೆ ಅದು ತಪ್ಪು. ಇವತ್ತು ಒಂದು ದಿನ ಖುಷಿ ಪಡಬಹುದು. ಯಾಮರ್ಸಿ ದುಡ್ಡು ಕೊಟ್ಟು ಕೆಲಸವನ್ನು ಪಡೆದೆ ಎಂದು. ಆದರೆ ರಾಹು ಪ್ರಭಾವ ಚೆನ್ನಾಗಿದ್ದಷ್ಟು ದಿನ ಅದರಿಂದ ಯಾವ ಕಷ್ಟವೂ ಬರುವುದಿಲ್ಲ. ಎಲ್ಲವೂ ಸಲೀಸಾಗಿ ನಡೆದುಕೊಂಡು ಹೋಗುತ್ತದೆ.

ಕೊನೆಯಲ್ಲಿ ರಾಹು ಡಿಮ್ ಆದಾಗ ಇದೇ ವಿಚಾರವಾಗಿ ಸಿಕ್ಕಿಹಾಕಿಕೊಳ್ಳಬಹುದು. ಆದ್ದರಿಂದ ಯಾವುದೇ ಕೆಲಸ ಮಾಡುವಾಗಲೂ ನೇರವಾದ ದಾರಿಯಲ್ಲಿ ಮಾಡಿ. ಅಡ್ಡದಾರಿ ಹಿಡಿಯಬೇಡಿ. ನಿಮ್ಮಲ್ಲಿ ಕೆಲವರ ಮೇಲೆ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಯಾವುದೇ ಉದ್ಯೋಗ ಮಾಡುತ್ತಿರಿ, ಕೆಲಸ ಜಾಸ್ತಿ ಆಗಬಹುದು, ಇನ್ನು ಕೆಲವರಿಗೆ ಬಡ್ತಿ ಸಿಗದೇ ಇದ್ದರೂ ಕೆಲಸದ ಪ್ರಮಾಣ ಹೆಚ್ಚಾಗಬಹುದು.

ಈ ಒತ್ತಡದಿಂದ ತಪ್ಪಿಸಿಕೊಳ್ಳಲು ನೀವು ಸುಲಭ ಮಾರ್ಗ ಹುಡುಕುತ್ತೀರ. ಶಾರ್ಟ್ ಕಟ್ ಮೆಥಡ್ ಹುಡುಕುತ್ತೀರ. ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಪಡೆಯುವುದು ಹೇಗೆ? ಕಷ್ಟಪಡದೆ ಲಾಭ ಪಡೆಯಲು ಯಾವ ಉಪಾಯವಿದೆ. ಹೀಗೆ ಕೆಟ್ಟದಾರಿ ಹಿಡಿಯುತ್ತೀರಾ. ರಾಹು ಬಂದಾಗ ಆಗುವುದು ಇಂತದ್ದೆ. ಇನ್ನೂ ಕೆಲವರಿಗೆ ಬಡ್ತೀನೂ ಸಿಗುವುದು. ಸಂಬಳವು ಹೆಚ್ಚಾಗುವುದ

ಕೆಲಸ ಮಾಡದಿದ್ದರೂ ತಿಂಗಳಿಗೆ ಸರಿಯಾಗಿ ಸಂಬಳ ಬರುತ್ತಿರುತ್ತದೆ. ಅಧಿಕಾರದಲ್ಲಿ ಉನ್ನತ ಹುದ್ದೆ ಸಿಗುವ ಸಾಧ್ಯತೆ ಇರುತ್ತದೆ. ಶ್ರಮಪಟ್ಟು ಆ ಉನ್ನತ ಸ್ಥಾನವನ್ನು ಪಡೆದುಕೊಳ್ಳುವಿರಿ ಎಂದೇನಲ್ಲ. ನೀವು ಒಂದು ಫ್ಯಾಕ್ಟರಿಯಲ್ಲಿ ಸಾಮಾನ್ಯ ನೌಕರರಾಗಿದ್ದೀರಾ, ತಿಂಗಳ ಸಂಬಳ ಬಂದರೆನೇ ಜೀವನ ಎನ್ನುವಂತಿದ್ದೀರಾ ಎಂದುಕೊಳ್ಳಿ. ಅಕ್ಟೋಬರ್ 30ಕ್ಕೆ ರಾಹು ಪರಿವರ್ತನೆ ಆದಮೇಲೆ, ಪರಿಸ್ಥಿತಿ ಸ್ವಲ್ಪ ಸ್ವಲ್ಪ ವೇ ಬದಲಾಗುತ್ತಾ ಹೋಗುತ್ತದೆ. ಒಂದು ದಿನ ಅಕಸ್ಮಾತಾಗಿ

ರಾಕ್ಮೇಲಿರುವ ವಸ್ತುವನ್ನು ಬೀಳಿಸಿ ಬಿಡುತ್ತೀರಾ. ಇದರ ಜೊತೆಗೆ ಆಡಿಯೋ ರೆಕಾರ್ಡರ್, ಸಣ್ಣ ಕ್ಯಾಮೆರಾ, ವಿರೋಧಿಗಳು ಇಟ್ಟಿರುವ ಎಲೆಕ್ಟ್ರಾನಿಕ್ ವಸ್ತು ಸಿಗುವುದು. ಈ ರೀತಿಯ ಘಟನೆಗಳು ಹೆಚ್ಚಿನ ಜನಕ್ಕೆ ವರವಾಗಿ ಪರಿಣಮಿಸುತ್ತದೆ. ಈ ರೀತಿಯ ಎಡವಟ್ಟಿನಿಂದ ನಿಮ್ಮ ಬಾಸ್ ನಿಮ್ಮನ್ನು ಪ್ರಶಂಶಿಸುತ್ತಾರೆ. ಕದ್ದು ಮಾಹಿತಿ ಕೇಳಿ ಆಗುತ್ತಿದ್ದ ನಷ್ಟವನ್ನು ತಪ್ಪಿಸಿದಕ್ಕೆ, ಒಂದಷ್ಟು ಹಣಕಾಸಿನ ಸಹಾಯ, ಬಡ್ತಿ ಕೊಡಬಹುದು. ಒಟ್ಟಾರೆಯಾಗಿ ನಿಮ್ಮ ಮೇಲಿನ ಗೌರವ ಹೆಚ್ಚಾಗುತ್ತದೆ.

ಅದೇ ರೀತಿಯಲ್ಲಿ ನೀವು ಈಗಾಗಲೇ ಸಾಕಷ್ಟು ಶ್ರೀಮಂತರಾಗಿದ್ದರೆ, ಆ ಶ್ರೀಮಂತಿಕೆ ಅಂತಸ್ತು ಮತ್ತಷ್ಟು ಹೆಚ್ಚಾಗುವುದರಲ್ಲಿದೆ. ಸಾಮಾಜಿಕವಾಗಿ ಏನಾದರೂ ಸೇವೆ ಮಾಡುತ್ತಿದ್ದರೆ, ಎನ್‌ಜಿಓ, ಟ್ರಸ್ಟ್ ಗಳಿಗೆ ಸಹಾಯ ಮಾಡಿದರೆ, ಇದರಿಂದ ಜನರಿಂದ ಪ್ರಶಂಸೆ ಪಡೆದುಕೊಳ್ಳುತ್ತೀರ. ರಾಜಕೀಯ ಕ್ಷೇತ್ರದಲ್ಲಿ ಇದ್ದವರಿಗೆ ರಾಹು ಬೆಂಬಲ ತುಂಬಾ ಮುಖ್ಯವಾಗಿರುತ್ತದೆ.

ನೀವು ಹೆಸರು, ಖ್ಯಾತಿ, ಜನಬೆಂಬಲ ಪಡೆಯಲು, ರಾಹು ಸಹಾಯ ಮಾಡುತ್ತಾನೆ. ನಿಮಗೆ ಬೆಂಬಲ ನೀಡುವ ಶಕ್ತಿ ಹೆಚ್ಚಾಗುತ್ತದೆ. ಕೆಲವೊಮ್ಮೆ ರಾಜಕೀಯ ವಿರೋಧಿಗಳು ತಾವಾಗಿಯೇ ನಿಮ್ಮ ದಾರಿಯಿಂದ ದೂರ ಸರಿಯಬಹುದು. ಅಥವಾ ಅವರನ್ನು ಚಾಣಾಕ್ಷತನದಿಂದ ದೂರಸರಿಸುವ ಕೆಲಸವನ್ನು ರಾಹು ನಿಮಗೆ ಮಾಡಿಕೊಡುತ್ತಾನೆ. ಷಡ್ಯಂತ್ರ, ಕುತಂತ್ರ ಮಾಡಿ ಸಹ ಆ ವಿರೋಧಿಗಳು ನಿಮ್ಮ ತಂಟೆಗೆ ಬರದ ಹಾಗೆ ಮಾಡುವ ತಾಕತ್ತು ರಾಹುವಿಗಿದೆ. ಹೀಗೆಲ್ಲ ಮಾಡಿದರೂ

ನಿಮ್ಮ ಘನತೆ ಪ್ರತಿಷ್ಠೆಗೆ ಯಾವುದೇ ಭಂಗ ಬಾರದ ಹಾಗೆ ಕೆಲಸ ಮುಗಿಸುತ್ತಾನೆ ಚಿಂತೆ ಬೇಡ. ಇನ್ನು ಸೂಪರ್ ಆದ ಫಲಗಳನ್ನು ಹೇಳುವುದಿದೆ. ನಿಮ್ಮಲ್ಲಿ ಕೆಲವರಿಗೆ ಸರ್ಕಾರದಿಂದಲೂ ಸಹಾಯ ಸಿಗಬಹುದು. ಅoದರೆ ಸರ್ಕಾರದ ಯಾವುದೋ ಒಂದು ಪ್ರಾಜೆಕ್ಟ್ ಅಲ್ಲಿ ಕೆಲಸ ಮಾಡಿದ್ದಕ್ಕೆ ಲಾಭ ಆಗಬಹುದು. ಸರ್ಕಾರಿ ಯೋಜನೆಗಳ ಫಲಾನುಭವಿಗಳಾಗಬಹುದು.

ಅಥವಾ ವಿದ್ಯಾರ್ಥಿ ವೇತನ ಸಿಗಬಹುದು. ತರಕಾರಿ ಕೆಲಸ ಕಾರ್ಯಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಮುಗಿಸಬಹುದು. ಅಡ್ಡ ದಾರಿಯಲ್ಲೂ ಸಹ ರಾಹು ಲಾಭವನ್ನು ತಂದು ಕೊಡುತ್ತಾನೆ. ರಾಹು ಬಂದರೆ ದುಷ್ಟ ಬುದ್ಧಿ ಬರುವುದು. ಸ್ವಲ್ಪ ಅಡ್ಡ ದಾರಿ ಹಿಡಿದು ದುಡ್ಡು ಮಾಡಲು ಅಕ್ರಮವಾಗಿ ಹಣ ಸಂಪಾದನೆ, ಲಂಚ ಅಥವಾ ಇತರೆ ಆಮೀಷ ಒಡ್ಡಿ ಜನರಿಂದ ದುಡ್ಡು ಪಡೆಯುವುದು ಹೀಗೆ.

ಒಟ್ಟಾರೆಯಾಗಿ, ನೇರವಾಗಿಯೇ ಹಣ ಬರುವುದು ಎಂದು ಹೇಳಲಾಗುವುದಿಲ್ಲ. ಏಕೆಂದರೆ ರಾಹು ಎಂತಹ ಮಾಯಾವಿ ಮತ್ತು ಚಾಲಾಕಿ. ಅಮೃತಮಥನದ ಸಮಯದಲ್ಲಿ ಕದ್ದು ಅಮೃತವನ್ನು ಕುಡಿಯುವಾಗ ಸತ್ತರು ಸರಿ ಎಂಬ ಯೋಚನೆಯಲ್ಲಿ ರಾಹು 10ನೆಯ ಮನೆಯಲ್ಲಿದ್ದಾಗ ಕೆಲವರಿಗೆ ಕೆಟ್ಟ ಬುದ್ಧಿ ಬರುವುದು ಸಹಜ. ಹಣ ಬಂದಾಗ ಚಟಗಳು ಬೇಡದ ವಿಚಾರಗಳಿಗೆ ಆಸಕ್ತಿ ಹೆಚ್ಚಾಗಬಹುದು.

ಕೆಟ್ಟವರ ಸಹವಾಸ ಮಾಡಿ ದರೋಡೆ ಮಾಡುವುದು, ಅಮಲೇರಿಸುವ ವಸ್ತುಗಳನ್ನು ಬಳಸಲು ಪ್ರಾರಂಭಿಸುವುದು, ಅಥವಾ ಅವುಗಳನ್ನು ಪೂರೈಕೆ ಮಾಡುವುದು ಅಥವಾ ಮೋಜು ಮಸ್ತಿಯಲ್ಲಿ ಹೆಚ್ಚಾಗಿ ಹೀಗೆ ಅಡ್ಡ ದಾರಿಯಲ್ಲಿ ಹೋಗಲು ಶುರು ಮಾಡಬಹುದು. ಮನೆಯಲ್ಲಿ ತಂದೆ ತಾಯಿಯರು, ಮಕ್ಕಳಿಗೆ ಸಮಯ ಕೊಡಲು ಬ್ಯುಸಿ ಆದರೆ ಕಾಲಕಾಲಕ್ಕೆ ಪಾಕೆಟ್ ಮನಿಕೊಟ್ಟುದರಿಂದಲೇ ಇಂತಹ ಅನಾಹುತಗಳು ಆಗುವ ಸಾಧ್ಯತೆ ಇರುತ್ತದೆ.

ದುಡ್ಡಿದ್ದರೆ ಏನನ್ನಾದರೂ ಮಾಡಬಹುದು ಎಂಬ ಮನಸ್ಥಿತಿ ರಾಹು ನಿನ್ನ ಬರುವ ಹಣದ ಪ್ರಮಾಣ ಹೆಚ್ಚಾದಂತೆ ಮಿಥುನ ರಾಶಿಯಲ್ಲಿರುವ 30% ಜನರ ಮನಸ್ಥಿತಿ ಈ ರೀತಿಯಲ್ಲಿ ಬದಲಾಗುವ ಸಾಧ್ಯತೆ ಆದ್ದರಿಂದ ನಿಮಗೆ ನೀಡುವ ಸಣ್ಣ ಎಚ್ಚರಿಕೆ ಏನೆಂದರೆ, ಹಣ ಇಂದು ಬರುತ್ತದೆ, ನಾಳೆ ಹೋಗುತ್ತದೆ. ಅದಕ್ಕೋಸ್ಕರ ಯಾರನ್ನು ದೂರ ಮಾಡಿಕೊಳ್ಳಬೇಡಿ.

ಈ ತರಹದ ನೆಗೆಟಿವಿಟಿ ಕಡೆ ಹೋಗದ ಹಾಗೆ ಎಚ್ಚರವಹಿಸಿ. ಇನ್ನು ಧಾರ್ಮಿಕ ಸಮಾರಂಭಗಳನ್ನ ,ಪೂಜೆ ಪುನಸ್ಕಾರಗಳನ್ನು ನಡೆಸಬಹುದು. ಅಥವಾ ಇಂತಹ ವಿಚಾರದಲ್ಲಿ ಹೆಚ್ಚಾಗಿ ಭಾಗವಹಿಸಬಹುದು. ಅವರು ತಮ್ಮ ಆಸ್ತಿ ಅಂತಸ್ತುನ್ನು ತೋರಿಸಿಕೊಳ್ಳಲು, ಪ್ರತಿಷ್ಠೆ ತೋರಿಸಿಕೊಳ್ಳಲು ಧಾರ್ಮಿಕ ಕಾರ್ಯಕ್ರಮಗಳಿಗೆ ಹೋಗಬಹುದು ಅಥವಾ ತಾನೇ ದೊಡ್ಡ ಭಕ್ತ ಅಥವಾ ಭಕ್ತೆ ಎಂದು ಬಿಂಬಿಸಿಕೊಳ್ಳಲು ಹೋಗಬಹುದು. ಒಟ್ಟಾರೆಯಾಗಿ ದೇವತಾ ಕಾರ್ಯದಲ್ಲಿ ಹೆಚ್ಚಾಗಿ ಭಾಗಿಯಾಗುತ್ತಾರೆ.

ಇನ್ನೂ ಕೆಲವರಿಗೆ ನಿಜವಾಗಿಯೂ ದೇವರ ಕಾರ್ಯದಲ್ಲಿ ಆಸಕ್ತಿ ಬರುವುದಿದೆ. ತೀರ್ಥಯಾತ್ರೆ ಮಾಡಲು ಸಮಯ ಕೂಡಿ ಬರುವುದು. ಮಿಥುನ ರಾಶಿಯವರು ಈ ಅವಧಿಯಲ್ಲಿ ಕಾಶಿ ರಾಮೇಶ್ವರಕ್ಕೂ ಹೋಗುವ ಸಾಧ್ಯತೆ ಇದೆ. ಅಥವಾ ಐತಿಹಾಸಿಕವಾಗಿ ಹಾಗೂ ಪೌರಾಣಿಕವಾಗಿ ಮಹತ್ವ ಹೊಂದಿರುವ ಕ್ಷೇತ್ರಗಳಿಗೂ ಹೋಗಬಹುದು. ಕೆಲವರಿಗೆ ನಿಜವಾಗಿಯೂ ದೇವರ ಧ್ಯಾನ ಪೂಜೆಯಲ್ಲಿ ಆಸಕ್ತಿ ಬರುವುದು. ಅನಿರೀಕ್ಷಿತವಾಗಿ ಒಂದಷ್ಟು ಮೂಲದಿಂದ ಹಣ ಹರಿದು ಬಂದಾಗ, ಹೀಗಾದಾಗ ಅದನ್ನು ದೇವರ ವರಪ್ರಸಾದ ಎಂದು ತಿಳಿದು, ದೇವರ ಮೇಲೆ ನಂಬಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ನಿಮ್ಮ ಜೀವನದಲ್ಲಿ ಶುಭಫಲವೇ ಇದೆ. ಇದರ ಮೇಲೆ 18 2025 ರ ವರೆಗೆ.

Leave A Reply

Your email address will not be published.