ನಿಜವಾದ ಪ್ರೀತಿಯ 5 ಲಕ್ಷಣಗಳು 

0

ನಿಜವಾದ ಪ್ರೀತಿ ಐದು ಲಕ್ಷಣಗಳು ಮೊದಲನೆಯದು ನಿಯಂತ್ರಣ ಸುಳ್ಳು ಪ್ರೀತಿ ಮಾಡುವ ವ್ಯಕ್ತಿ ಯಾವಾಗಲೂ ನಿಮ್ಮನ್ನು ಬದಲಾಯಿಸಲು ನಿಮ್ಮನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುತ್ತಾರೆ. ನಿಮ್ಮ ಮೇಲೆ ಹಕ್ಕು ಚಲಾಯಿಸುತ್ತಿರುತ್ತಾರೆ. ಪ್ರತಿ ವಿಷಯದಲ್ಲೂ ನಿಮ್ಮನ್ನು ನಿಯಂತ್ರಿಸಲು ಪ್ರಯತ್ನ ಪಡುತ್ತಿರುತ್ತಾರೆ. ನಿಜವಾದ ಪ್ರೀತಿ ಮಾಡುವ ವ್ಯಕ್ತಿಯು ನಿಮ್ಮನ್ನು ಬದಲಾಯಿಸಲು ನಿಮ್ಮನ್ನು ನಿಯಂತ್ರಿಸಲು ಎಂದಿಗೂ ಪ್ರಯತ್ನ ಪಡುವುದಿಲ್ಲ.

ಬದಲಾಗಿ ನೀವು ಹೇಗಿದ್ದೀರಾ ಹಾಗೆ ಇಷ್ಟಪಡಲು ಇಚ್ಚಿಸುತ್ತಾರೆ. ಎರಡನೇದಾಗಿ ಹೊಂದಾಣಿಕೆ ಹೌದು ಎಲ್ಲಿ ನಿಜವಾದ ಪ್ರೀತಿ ಇರುತ್ತದೆಯೋ ಅಲ್ಲಿ ಹೊಂದಾಣಿಕೆ ಇರುತ್ತದೆ ಕಾಳಜಿ ಇರುತ್ತದೆ ನಿಜವಾದ ಪ್ರೀತಿ ಮಾಡುವ ವ್ಯಕ್ತಿ ನಿಮ್ಮ ಖುಷಿಯನ್ನು ಬಯಸುತ್ತಾನೆ ಮತ್ತು ಜಗಳವಾದಾಗ ಅಹಂಕಾರ ಇರೋದಿಲ್ಲ ನೀವೇ ಹೋಗಿ ಕ್ಷಮೆ ಕೇಳಲು ಎಂದು ಬಯಸುವುದಿಲ್ಲ

ಆದರೆ ಸುಳ್ಳು ಪ್ರೀತಿ ಮಾಡುವವರು ಬೇಕಾದರೆ ಅವರೇ ಬಂದು ಕ್ಷಮೆ ಕೇಳಲಿ ಎಂದು ಬಯಸುತ್ತಾರೆ. ಅವರು ನಿಮ್ಮ ಪ್ರೀತಿಗಾಗಿ ಸೋಲಲು ತಯಾರಿರುವುದಿಲ್ಲ. ಮೂರನೇದಾಗಿ ಗೌರವ ನಿಜವಾದ ಪ್ರೀತಿ ಮಾಡುವ ವ್ಯಕ್ತಿ ನಿಮ್ಮನ್ನು ಗೌರವಿಸುತ್ತಾರೆ ನಿಮ್ಮ ಮಾತಿಗೆ ಬೆಲೆ ಕೊಡುತ್ತಾರೆ ಅವರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಾರೆ ಒಬ್ಬರನ್ನೊಬ್ಬರು ಗೌರವಿಸುತ್ತಾರೆ

ಆದರೆ ಸುಳ್ಳು ಪ್ರೀತಿ ಮಾಡುವ ವ್ಯಕ್ತಿ ನಿಮ್ಮನ್ನು ಗೌರವಿಸುವುದಿಲ್ಲ ನಿಮ್ಮ ಮಾತಿಗೆ ಬೆಲೆ ಕೊಡುವುದಿಲ್ಲ ಅವರು ಮನಸ್ಸಿನಲ್ಲಿ ನಿಮ್ಮ ಬಗ್ಗೆ ಪ್ರಾಮುಖ್ಯತೆ ಇರುವುದಿಲ್ಲ. ನಾಲ್ಕನೇದಾಗಿ ಸತ್ಯ ಇಲ್ಲಿ ನಿಜವಾದ ಪ್ರೀತಿ ಇರುತ್ತೆ ಅಲ್ಲಿ ಸತ್ಯ ಇರುತ್ತೆ ಎಲ್ಲಿ ಸುಳ್ಳು ಪ್ರೀತಿ ಇರುತ್ತೆ ಅಲ್ಲಿ ಬರಿ ಸುಳ್ಳು ಇರುತ್ತೆ ಎಲ್ಲಿ ನಿಜವಾದ ಪ್ರೀತಿ ಇರುತ್ತದೆಯೋ ಅಲ್ಲಿ ಒಬ್ಬರು ಪರಸ್ಪರ ಏನನ್ನು ಮರೆಮಾಚುವುದಿಲ್ಲ

ಮತ್ತು ಹೆಚ್ಚಿನ ವಿಷಯಗಳಲ್ಲಿ ಸತ್ಯವನ್ನು ಹೇಳುತ್ತಾರೆ. ಐದನೇದಾಗಿ ಕಾಳಜಿ ಹೌದು ಪ್ರೀತಿಯಲ್ಲಿ ಪರಸ್ಪರ ಕಾಳಜಿ ಇರುತ್ತದೆ ತಾನು ಪ್ರೀತಿಸುವ ವ್ಯಕ್ತಿಗೆ ಏನಾದರೂ ತೊಂದರೆ ಆದರೆ ಎಂಬ ಭಯ ಇರುತ್ತದೆ ಎಲ್ಲಾ ವಿಷಯದಲ್ಲಿ ನಿಮ್ಮ ಒಳಿತನ್ನು ಮತ್ತು ಕೆಡುಕು ಎರಡರ ಬಗ್ಗೆ ಯೋಚಿಸುತ್ತಾರೆ ಆದರೆ ಸುಳ್ಳು ಪ್ರೀತಿ ಮಾಡುವ ವ್ಯಕ್ತಿ ನಿಮ್ಮ ವಿಷಯದಲ್ಲಿ ಯಾವುದೇ ಕಾಳಜಿ ಇರುವುದಿಲ್ಲ ಮತ್ತು ನಿಮ್ಮ ಒಳತಿನ ಬಗ್ಗೆ ಯೋಚಿಸುವುದಿಲ್ಲ

ಕೇವಲ ಹಾಸಿಗೆಗಾಗಿ ನಿಮ್ಮ ಜೊತೆ ಇರುತ್ತಾರೆ .ಪ್ರೀತಿ ಎಂಬುದು ಬರೆಯುವ ಚಿಕ್ಕ ಪದವಾಗಿರಬಹುದು ಅದನ್ನು ಪ್ರೀತಿ ಎಂಬುದು ಮಾನಸಿಕ ರೋಗ ಅನ್ನುವುದಕ್ಕಿಂತ ಅದು ಒಂದು ವಿಶಾಲವಾದ ಅನುಭವ ಪ್ರೀತಿಯಲ್ಲಿ ಇದ್ದರೆ ಅವರು ಉಳಿಯುತ್ತಾರೆ. ಸೋತರೆ ಇದ್ದರೆ ಇಲ್ಲದಂತೆ ಬದುಕುತ್ತಾರೆ

ಇನ್ನು ಕೆಲವರು ಪ್ರಾಣ ಕಳೆದುಕೊಳ್ಳುತ್ತಾರೆ ತಂದೆ ತಾಯಿ ಪ್ರೀತಿ ಕೂಡ ಮರೆಯುತ್ತಾರೆ ಎಂದು ಹುಡುಗ ಹುಡುಗಿ ಪ್ರೀತಿ ಮಾಡುತ್ತಾ ಇರುವಾಗ ಇಬ್ಬರಲ್ಲಿ ಒಬ್ಬರು ಬಿಟ್ಟು ಹೋದರೆ ಪ್ರಾಣ ಕಳೆದುಕೊಳ್ಳುವುದು ಮೂರ್ಖತನ ಹೀಗೆ ಮಾಡುವುದರ ಮುಂಚೆ ಒಮ್ಮೆ ನಿಮ್ಮ ತಂದೆ ತಾಯಿಯ ಬಗ್ಗೆ ಯೋಚಿಸಿ ಪ್ರೀತಿಗಾಗಿ ಎಂದಿಗೂ ಭಿಕ್ಷೆ ಬೇಡಬೇಡಿ ಪ್ರೀತಿ ತಾನಾಗಿಯೇ ಆಗುತ್ತದೆ ಅದು ಭಿಕ್ಷೆ ಬೇಡುವ ವಿಷಯವಲ್ಲ..

Leave A Reply

Your email address will not be published.