ಮುಖ್ಯಬಾಗಿಲು ಮುಂದೆ ಕುಳಿತುಕೊಂಡು ಒಂದು ಮಂತ್ರವನ್ನು ಪಠಿಸಿ ನೋಡಿ ಎಲ್ಲಾ ಕಷ್ಟಗಳು ದೂರವಾಗುತ್ತವೆ..!

0

ಮುಖ್ಯಬಾಗಿಲು ಬಾಗಿಲ ಮುಂದೆ ಕುಳಿತುಕೊಂಡು ಒಂದು ಮಂತ್ರವನ್ನು ಪಠಿಸಿ ನೋಡಿ ಎಲ್ಲಾ ಕಷ್ಟಗಳು ದೂರವಾಗುತ್ತವೆ..! ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳು ಇದ್ದೇ ಇರುತ್ತದೆ, ಅದರಲ್ಲಿ ಮುಖ್ಯವಾಗಿ ಮನೆಯಲ್ಲಿ ಹಲವಾರು ಸಮಸ್ಯೆಗಳು ಕಾಡುತ್ತಿರುತ್ತವೆ, ಇಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಹೆಂಗಸರು ಮನೆಯ ಮುಂಭಾಗದಲ್ಲಿ ಕುಳಿತುಕೊಂಡು 9 ಬಾರಿ

ಈ ಒಂದು ವಿಶೇಷವಾದ ಮಂತ್ರವನ್ನು ಜಪಿಸುತ್ತಾ ಬರಬೇಕು, ಹೀಗೆ ಮಾಡುವುದರಿಂದ ಮನೆಯಲ್ಲಿರುವ ದಾರಿದ್ರ್ಯ, ನಕಾರಾತ್ಮಕ ಶಕ್ತಿ ,ಕಷ್ಟ ದುಃಖಗಳು ಕಳೆದು ಹೋಗುತ್ತದೆ. ಪ್ರತಿಯೊಬ್ಬರ ಕಷ್ಟಗಳನ್ನು ಕಳೆಯಲು ವ್ರತ ಪೂಜೆಯನ್ನು ಮಾಡುತ್ತೀರ ಆದರೆ ಲಕ್ಷ್ಮಿ ಕೃಪೆ ಸಿಗಬೇಕು ಎಂದರೆ ಮನೆಯಿಂದ ಮೊದಲು ದಾರಿದ್ರ್ಯ ದೇವತೆ ಹೊರಗೆ ಹೋಗಬೇಕು.

ದಾರಿದ್ರ್ಯ ದೇವತೆಯನ್ನು ಜೇಷ್ಠದೇವಿ ಎಂದು ಕರೆಯಲಾಗುತ್ತದೆ. ಎಲ್ಲಿ ಯಜ್ಞಯಾದಿಗಳು ಪೂಜೆಗಳು ನಡೆಯುತ್ತವೆಯೋ ಅಲ್ಲಿ ದಾರಿದ್ರ್ಯ ದೇವತೆ ನೆಲೆಸಿವುದಿಲ್ಲ.ತಂದೆ ತಾಯಿಗೆ ಗೌರವ ಕೊಡುತ್ತಾರೋ ಮತ್ತು ವೃದ್ಧರಿಗೆ ಸೇವೆ ಮಾಡುತ್ತಾರೆ ಅಂತಹ ಸ್ಥಳದಲ್ಲಿ ದಾರಿದ್ರ್ಯ ಬರೋದಿಲ್ಲ .ಗಂಡ ಹೆಂಡತಿ ಕಲಹ ಇದ್ದರೆ ದಾರಿದ್ರ್ಯ ಉಂಟಾಗುತ್ತದೆ ಮನೆ ಸ್ವಚ್ಛ ಇಲ್ಲದ ಇರುವ ಕಡೆ ದಾರಿದ್ರ್ಯ ಉಂಟಾಗುತ್ತದೆ

ಆದ್ದರಿಂದ ಮನೆ ಶುಚಿಯಾಗಿರಬೇಕು. ಹಾಗಾದರೆ ಎಲ್ಲಾ ರೀತಿಯ ಕಷ್ಟಗಳು ದೂರವಾಗಬೇಕು, ಮಹಾಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗಬೇಕು, ದಾರಿದ್ರ್ಯ ಲಕ್ಷ್ಮಿ ಮನೆಯಿಂದ ಹೊರಗೆ ಹೋಗಬೇಕು ಎಂದರೆ ಯಾವ ಒಂದು ಮಂತ್ರವನ್ನು ಯಾವ ಸಮಯದಲ್ಲಿ ಹೇಗೆ ಪಠಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು

ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ದಾರಿದ್ರ್ಯ ದೇವತೆ ಮನೆಯೊಳಗೆ ಪ್ರವೇಶ ಮಾಡಬಾರದು ಎಂದರೆ ನಿಮ್ಮ ಮನೆಯ ಬಾಗಿಲಿಗೆ ಎರಡು ವಸ್ತುಗಳನ್ನು ಒಟ್ಟಿಗೆ ಸೇರಿಸಿ ಕಟ್ಟಬೇಕು.ಈ ಒಂದು ವಸ್ತುವನ್ನು ಬಾಗಿಲಿಗೆ ನೇತು ಹಾಕಿದರೆ ದಾರಿದ್ರ್ಯ ದೇವತೆಯು ಮನೆಗೆ ಬರೋದಿಲ್ಲ, ದಾರಿದ್ರ್ಯ ದೇವತೆಗೆ ಹುಳಿ, ಕಾರು, ಒಗರು ಎಂದರೆ ಬಲು ಪ್ರೀತಿ ಆದ್ದರಿಂದ ಮನೆಯ ಮುಂಭಾಗದಲ್ಲಿ

ನಿಂಬೆಹಣ್ಣು ಮೆಣಸಿನ ಕಾಯಿ ಎರಡನ್ನು ಜೊತೆ ಮಾಡಿ ಅದನ್ನು ಮನೆಯ ಮುಂಭಾಗದಲ್ಲಿ ಕಟ್ಟಬೇಕು, ಹೀಗೆ ಮಾಡಿದರೆ ಮಾತ್ರ ದಾರಿದ್ರ್ಯ ದೇವತೆಯು ಮನೆಗೆ ಪ್ರವೇಶ ಮಾಡುವುದಿಲ್ಲ , ನಿಂಬೆಹಣ್ಣು ಸ್ವಲ್ಪ ಹೊಗರು ಮತ್ತು ಹುಳಿಯಾಗಿರುತ್ತದೆ, ಮೆಣಸಿನಕಾಯಿ ನೋಡಿ ದಾರಿದ್ರ್ಯಲಕ್ಷ್ಮಿ ಮನೆಗೆ ಪ್ರವೇಶ ಮಾಡುವುದಿಲ್ಲ ಆದ್ದರಿಂದ ಮನೆಯ ಬಾಗಿಲಿಗೆ ಇದನ್ನು ಕಟ್ಟಬೇಕು,

ಅದರಲ್ಲೂ ಕೂಡ ಮಂಗಳವಾರದ ದಿನ ನಿಂಬೆಹಣ್ಣು ಮತ್ತು ಮೆಣಸಿನ ಕಾಯಿ ಜೊತೆ ಮಾಡಿ ಮುಂಭಾಗದಲ್ಲಿ ನೇತು ಹಾಕಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ. ಇನ್ನು ಮನೆಯಲ್ಲಿ ಜಗಳ ನೆಮ್ಮದಿ ಇಲ್ಲ ಎಂದರೆ ನಿತ್ಯವೂ ಒಂದು ಚೊಂಬಿನಷ್ಟು ನೀರಿಗೆ ಅರಿಶಿನ ಹಾಕಿ ಮನೆಯಲ್ಲಿ ಎಲ್ಲಾ ಗೋಡೆಗೆ ಅರಿಶಿನದ ನೀರು ಎರಚಬೇಕು ಈ ರೀತಿ ಮಾಡುತ್ತಾ ಬಂದರೆ ದಾರಿದ್ರ್ಯ ದೇವತೆ ಮನೆಯಿಂದ ಹೊರಟು ಹೋಗುತ್ತಾಳೆ.

ಇನ್ನೂ ನಿತ್ಯ ಮಹಿಳೆಯರು ಸಂಜೆ ಸಮಯದಲ್ಲಿ ಕೈಕಾಲು ತೊಳೆದುಕೊಂಡು ದೀಪಾರಾಧನೆಯನ್ನು ಮಾಡಿ ಮನೆಯ ಬಾಗಿಲಿಗೆ ದೀಪವನ್ನು ಬೆಳಗಿಸಬೇಕು, ಅಂದರೆ ಸಂಧ್ಯಾ ದೀಪ ಬೆಳಗಿಸಬೇಕು, ಬಾಗಿಲಿಗೆ ಅರಿಶಿನ ಕುಂಕುಮ ಇಟ್ಟು ಹಣಗೆ ಕುಂಕುಮ ಇಟ್ಟುಕೊಳ್ಳಬೇಕು,ಈ ರೀತಿ ಮಾಡಿದರೆ ಮನೆಯಿಂದ ದಾರಿದ್ರ್ಯ ಲಕ್ಷ್ಮಿ ಹೋಗುತ್ತಾಳೆ. ಇದರ ಜೊತೆಗೆ ಮನೆಯ ಹೊರ ಭಾಗದಲ್ಲಿ ಕುಳಿತುಕೊಂಡು 9 ಬಾರಿ

ಈ ಒಂದು ಮಂತ್ರವನ್ನು ಪಠಿಸುತ್ತಾ ಬಂದರೆ ಮನೆಯಲ್ಲಿರುವ ಕಷ್ಟಗಳು ಕಳೆಯುತ್ತದೆ ,ಆ ವಿಶೇಷವಾದ ಮಂತ್ರ ಯಾವುದು ಎಂದರೆ ಈ ಮಂತ್ರ ಹೀಗಿದೆ ಐಂ ಹೀಂ ಶ್ರೀಂ ಜೇಷ್ಠ ಲಕ್ಷ್ಮಿ ಸ್ವಯಂ ಭವೇ ಹೀಂ ಜೇಷ್ಠಾಯೈ ನಮಃ ಈ ವಿಶೇಷವಾದ ಮಂತ್ರವನ್ನು ಮನೆಯ ಮುಂಭಾಗದಲ್ಲಿ ಕುಳಿತು ಪ್ರತಿನಿತ್ಯ ಪಠಿಸುತ್ತಾ ಬಂದರೆ ಮನೆಯಲ್ಲಿರುವ ದಾರಿದ್ರ್ಯ ಕಳೆದು ಹೋಗುತ್ತದೆ,

ಇದನ್ನು ಸಂಜೆ ಐದರಿಂದ ಆರು ಗಂಟೆ ಒಳಗಾಗಿ ಈ ಮಂತ್ರವನ್ನು ಪ್ರತಿನಿತ್ಯ ಮನೆಯಲ್ಲಿ ಹೆಂಗಸರು 9 ಸಾರಿ ಪಠಿಸುತ್ತಾ ಬಂದರೆ ಕಷ್ಟಗಳು ಕಳೆದು ಹೋಗುತ್ತದೆ. ಈ ರೀತಿ ನಿಯಮಗಳನ್ನು ಪಾಲಿಸುತ್ತಾ ಬಂದರೆ ಲಕ್ಷ್ಮೀದೇವಿಯು ಮನೆಯಲ್ಲಿ ನೆಲೆಸುತ್ತಾಳೆ. ಹಾಗಾಗಿ ಯಾರಿಗೆ ಮನೆಯಲ್ಲಿ ದಾರಿದ್ರ್ಯತೆ ಹೆಚ್ಚಾಗಿ ಕಾಡುತ್ತಿದೆಯೋ, ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿದೆಯೋ

,ಅಂತವರು ತಪ್ಪದೆ ಈ ರೀತಿಯಾದ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಸಮಸ್ಯೆಯಿಂದ ಹೊರಬರುವುದು ದಾರಿದ್ರ್ಯತೆಯು ಮನೆಯಿಂದ ತೊಲಗುತ್ತದೆ. ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ದಯವಿಟ್ಟು ಒಂದು ಲೈಕ್ ಮಾಡಿ, ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿ. ಇದೇ ರೀತಿಯ ಉಪಯುಕ್ತವಾದ ಮಾಹಿತಿಗಳೊಂದಿಗೆ ಮತ್ತೆ ಭೇಟಿಯಾಗೋಣ. ಧನ್ಯವಾದಗಳು.

Leave A Reply

Your email address will not be published.