ಭರಣಿ ಸ್ತ್ರೀ ನಕ್ಷತ್ರ ರಹಸ್ಯ

0

ಭರಣಿ ಸ್ತ್ರೀ ನಕ್ಷತ್ರದ ರಹಸ್ಯ ಆತ್ಮೀಯ ವೀಕ್ಷಕರೇ, ಭರಣಿ ಮಳೆ ಬಂದ್ರೆ ಧರಣಿ ಎಲ್ಲ ಬೆಳೆ ಅಂತಾರೆ. ಮುಂಗಾರು ಮಳೆ ಆರಂಭವಾಗೋಕು ಮುಂಚೆ ಬರೋ ಈ ಭರಣಿ ಮಳೆಗೆ ತುಂಬಾ ಜನ ರೈತರು ಕಾಯ್ತಾರೆ. ಸೂರ್ಯನ ಬಿಸಿಗೆ ಸುಟ್ಟು ಹೋಗಿರುವ ಭೂಮಿಗೆ ಅಮೃತ ಸಿಂಚನದ ಹಾಗೆ ಈ ಮಳೆ. ಹುಳ ಹೊಪ್ಪಟ್ಟೆ, ಕೀಟ ಇವಕ್ಕೆ ಜೀವ ಬರೋದು ಕೂಡ ಈ ಭರಣಿ ಮಳೆಯ ನಂತರಾನೇ ಅಂತ ಹೇಳಲಾಗತ್ತೆ. ಇದೊಂತರ ವಿಸ್ಮಯ ಅಲ್ವಾ… ಭರಣಿ ಮಳೆ ಇಲ್ಲಿ ತಾಯಿಯ ಹಾಗೆ.

ಸೋ ಇವತ್ತು ನಾವು ಮಾತೃ ಸ್ವರೂಪಿಗಳಾದ ಭರಣಿ ನಕ್ಷತ್ರದ ಸ್ತ್ರೀಯರು ಹೇಗೆ? ಸೈಲೆಂಟಾ ಅಥವಾ ಏನಾದರು ಸೀಕ್ರೆಟ್ ಮಾಡ್ತಾರಾ ಅಂತ ತಿಳಿಸ್ಕೊಡೋಕೆ ಬಂದಿದ್ದೇನೆ. ಸ್ವಭಾವತ ತುಂಬಾನೇ ಒಳ್ಳೆಯವರು ಎರಡು ಮಾತಿಲ್ಲ. ಕಾಮಿಡಿ ಮಾಡ್ತಾ, ಜನರನ್ನ ನಗಸ್ತಾ, ನಗ್ತಾ ಇರ್ತಾರೆ. ಸಿಚುವೇಶನ್ ನೋಡಿ ಅಲ್ಪಭಾಷಿನೋ ಅಥವಾ ಜಾಸ್ತಿ ಮಾತಾಡ್ತಾರಾ ಅಂತ ಗೊತ್ತಾಗುತ್ತೆ.

ಇವರನ್ನ ಪ್ರೀತ್ಸೋ ಜನಕ್ಕಂತೂ ಬರನೇ ಇಲ್ಲ. ಇಷ್ಟೆಲ್ಲ ಇದ್ರೂ ಇವರ ಅದೊಂದು ಗುಣ ನೋಡಿದರೆ ನೀವೆಲ್ಲ ಹತ್ರ ಹೋಗೋಕು ಹೆದ್ರತೀರ. ಅಯ್ಯೋ ಯಾಕಪ್ಪ ಬೇಕು ಇವರ ಸಹವಾಸ, ಸುಮ್ಮನೆ ಮನೆಗೆ ಹೋಗಿ ಗುಬ್ರ ಹಾಕೊಂಡು ಮಲಗಿದ್ರೆ ಅದ್ರಲ್ಲಾದ್ರೂ ಲಾಭ ಇದೆ ಅಂತ ಹೇಳ್ತೀರಾ. ಹೆದ್ರಸ್ತಾ ಇಲ್ಲ, ನಿಮಗೆ ಗೈಡ್ ಮಾಡ್ತಾ ಇದ್ದೀನಿ. ಇವರನ್ನ ನೋಡಿ ಹೆದರೋದ್ ಯಾಕೆ ಅಂತ ತಿಳ್ಕೊಳೋದಾದ್ರೆ

ನೋಡಿ, ಭರಣಿ ನಕ್ಷತ್ರವನ್ನ ಜೀವನ ಮತ್ತೆ ಮರಣದ ಪ್ರತಿನಿಧಿ ಅಂತ ಕೂಡ ಕರೀತಾರೆ. ಯಾಕಂದ್ರೆ ಈ ನಕ್ಷತ್ರಕ್ಕೆ ಅದಿ ದೇವತೆ ಯಮ. ಹೇಗೆ ಭರಣಿ ಮಳೆಯಿಂದ ಹೊಸ ಹುಟ್ಟು ಆರಂಭವಾಗತ್ತೋ ಹಾಗೇನೆ ಎಲ್ಲ ಕಲ್ಮಶ ತೊಲಗಿಸೋದು ಕೂಡ ಇದೇ ನಕ್ಷತ್ರ. ಉಗ್ರ ನಕ್ಷತ್ರ ಅಂತ ಕೂಡ ಹೆಸರಿದೆ. ಸೋ ಈ ನಕ್ಷತ್ರದಲ್ಲಿ ಹುಟ್ಟಿರೋ ಸ್ತ್ರೀಯರು ಯಾವಾಗ್ಲೂ ಸ್ವಲ್ಪ ಗರಂ ಆಗಿನೇ ಇರ್ತಾರೆ ಅಂತ ಹೇಳ್ಬಹುದು.

ಇವರಿಗೆ ಹಣದ ಕೊರತೆ ಅಂತೂ ಯಾವತ್ತೂ ಬರಲ್ಲ. ಇದು ನೂರಕ್ಕೆ ನೂರು ಸತ್ಯ. ನಾನು ಸುಮಾರು ಭರಣಿ ನಕ್ಷತ್ರದವರನ್ನೆಲ್ಲಾ ನೋಡ್ಬಿಟ್ಟಿದೀನಿ. ಕೆಲವರು ನೋಡೋಕೆ ದಡ್ಡನಾಗಿ ಕಾಣ್ಬಹುದು ಆದರೆ ಇವರತ್ರ ಇರುವ ಭೂಮಿ, ಸಂಪತ್ತು ಬೇರೆ ಯಾರಲ್ಲೂ ಇಲ್ಲ ಅಂದ್ರೆ ನೀವು ನಂಬ್ಲೇಬೇಕು. ಹುಟ್ತಾನೇ ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡೇ ಹುಟ್ಟಿರೋರು ಅಂತಾನೂ ಹೇಳ್ಬಹುದು.

ಆದ್ರೂ ಕೆಲವರು ಎಷ್ಟೇ ಆಸ್ತಿಪಾಸ್ತಿ ಇರಲಿ, ಎಷ್ಟೇ ಸಂಪತ್ ಇರಲಿ, ಅವಮಾನವನ್ನ ಕೂಡ ಅನುಭವಿಸಬಹುದು. ಒಳಗಿಂದ ಎಷ್ಟೇ ಮೃದುವಾಗಿದ್ದರೂ ಹೊರ ನೋಟಕ್ಕೆ ಕಲ್ಲಿನಷ್ಟು ಕಠಿಣರಾಗಿನೂ ಕಾಣಬಹುದು. ಆದ್ರೆ ಸರಿಯಾಗಿ ಅರ್ಥ ಮಾಡ್ಕೊಂಡ್ರೆ ಇವರಷ್ಟು ಮಸ್ತ್ ಜನ ಮತ್ಯಾರು ಇಲ್ಲ. ನೋಡೋಕು ಅಷ್ಟೇ ಚಂದ. ಬ್ರೈಟ್ ಹಾಗೆ ಕಾಂತಿಯಿಂದ ಹೊಳಿಯೋ ಕಣ್ಣುಗಳು,

ಮುಖದಲ್ಲಿ ತೇಜಸ್ಸು ಯಾವಾಗ್ಲೂ ಇರತ್ತೆ. ಅಗಲ ಹಣೆ, ದಪ್ಪ ಹುಬ್ಬು, ಸ್ವಲ್ಪ ಮೋಟ್ ಆಗಿರೋ ತಲೆ ಕೂದಲು. ಇವರ ನಗು ನೋಡಿದ್ರಂತೂ ಕಳೆದೆ ಹೋಗ್ಬೇಕು. ಹಲ್ಲುಗಳು ದಾಳಿಂಬೆ ಬೀಜದ ಹಾಗೆ ಸಾಲಾಗಿದ್ದು ಸುಂದರವಾಗಿ ಕಾಣತ್ತೆ. ಮೀಡಿಯಂ ಎತ್ತರವಾಗಿರ್ತಾರೆ. ಹಾಗೇನೆ ದೇಹದ ಆಕಾರ ಕೂಡ ಸಾಧಾರಣವಾಗೇ ಇರತ್ತೆ. ಇಷ್ಟೆಲ್ಲ ಇದ್ರು ಒಳ್ಳೆ ಕ್ರಿಯೇಟಿವಿಟಿ ಇರುವ ಜನ. ತಮ್ಮಲ್ಲಿ ಯಾವುದಾದ್ರೂ ಕ್ವಾಲಿಟಿ ಕಮ್ಮಿ ಇದೆ ಅಥವಾ ಚೇಂಜ್ ಆಗ್ಬೇಕು ಅಂತ ಒಂದ್ಸಲ ಮನಸ್ಸಿಗೆ ಬಂದರೆ ಅದನ್ನೆಲ್ಲ ಅಡಾಪ್ಟ್ ಮಾಡ್ಕೊಳ್ಳೋ ಕೆಪಾಸಿಟಿ ಇವರಿಗಿದೆ.

ಯಾರ ಜೊತೆಗಾದ್ರೂ ಮಾತಾಡ್ತಾರೆ, ಪರಿಚಯ ಇರಲಿ, ಇಲ್ಲದೆ ಇರಲಿ ಮನಸ್ಸು ಬಿಚ್ಚಿ ಮಾತಾಡೋ ಜನ ಇವರು. ಆದ್ರೆ ಬೇಡ್ವಾ.. ಸತ್ರು ಅವರ ಸುದ್ದಿಗೆ ಹೋಗಲ್ಲ ಅಂತಾರಲ್ಲಾ ಅಂತ ಜನಾನೇ. ಯಾರ್ಗಾದ್ರು ಒಳ್ಳೇದನ್ನ ಮಾಡೋಕೆ, ಒಳ್ಳೇ ಉದ್ದೇಶಕ್ಕೆ ಸ್ವಲ್ಪ ಹೋರಾಟ ಮಾಡೋದು ಜಾಸ್ತಿ. ಹಾಗಂತ ಗಾಸಿಪ್ ಮಾಡಲ್ವಾ ಅಂತ ಕೇಳಿದ್ರೆ ಖಂಡಿತ ಮಾಡ್ತಾರೆ. ಆದರೆ ಲಿಮಿಟ್ ಮೀರಿ ಹೋಗಲ್ಲ.

ನೀವ್ ಹೀಗೆ ಮಾಡ್ಬೇಕು, ಹೀಗೆ ಇರ್ಬೇಕು ಅಂತ ಯಾರಾದ್ರೂ ರಿಸ್ಟ್ರಿಕ್ಶನ್ ಹಾಕೋಕೆ ಬಂದ್ರೆ ಅವರ ಮಾತನ್ನ ಯಾವುದೇ ಕಾರಣಕ್ಕೂ ಕೇಳಲ್ಲ. ಮುಖದ ಮೇಲೆ ಹೊಡೆದ ಹಾಗೆ ಮಾತಾಡ್ತಾರೆ ಈ ಹೆಣ್ಣು ಮಕ್ಕಳು. ಇವರು ಸ್ವಲ್ಪ ಇಂಡಿಪೆಂಡೆಂಟ್ ಆಗಿ ಥಿಂಕ್ ಮಾಡೋದು ಜಾಸ್ತಿ. ಯಾರ ಮುಂದೇನು ಕೈ ಚಾಚಲ್ಲ, ಯಾರತ್ರನು ಬೇಡ್ಕೊಂಡೆಲ್ಲಾ ಗೊತ್ತೇ ಇಲ್ಲ. ತಮಗೆ ಹೇಗ್ ಬೇಕೋ ಹಾಗ್ ಮಾಡೋರು.

ಭರಣಿಯಲ್ಲಿ ಹುಟ್ದೋರು ಧರಣಿ ಆಳ್ತಾರೆ ಅನ್ನೋ ಮಾತು ಈ ಹೆಣ್ಮಕ್ಳಿಗೆ ಕೂಡ ಜಾಸ್ತಿ ಅಪ್ಲೈಯಾಗತ್ತೆ. ಇವರು ಭೂಮಿಯಲ್ಲಿ ಇನ್ವೆಸ್ಟ್ ಮಾಡೋದು ಜಾಸ್ತಿ. ಇಲ್ಲ ರೈತ ಮಹಿಳೆಯಾಗಿ ಗುರ್ತಿಸ್ಕೊಳ್ಳೋಕ್ ಕೂಡ ಇಷ್ಟಪಡ್ತಾರೆ. ಭೂಮಿಯ ಮೇಲೆ ತುಂಬಾ ಪ್ರೀತಿ ಇರತ್ತೆ ಹಾಗೆನೇ ಒಂದ್ ಹಿಡಿ ಮಣ್ಣು ಕೂಡ ಬೇರೆಯವರ ಪಾಲ್ ಆಗೋದು ಇಷ್ಟ ಇರಲ್ಲ.

ಈಗ ಸಫೋಸ್ ಒಂದ್ ಹಿಡಿ ಮಣ್ಣಿಗೋಸ್ಕರ ಅಥವಾ ಒಂದು ಮೆಟ್ಟು ಜಾಗಕ್ಕೋಸ್ಕರ ಕೋರ್ಟಿಗೆ ಹೋಗ್ಬೇಕು, ಕೋರ್ಟು ಕೇಸು ಅಂತ ಅಲೆದಾಡ್ಬೇಕು ಅನ್ನೋ ಪರಿಸ್ಥಿತಿ ಬಂದ್ರು ಓಕೆ ಅಂತಾರೆ ಹೊರತು ಅದನ್ನ ಯಾರ್ಗೂ ಬಿಟ್ಟ್ ಕೊಡೋದಕ್ಕೆ ಇಷ್ಟಪಡಲ್ಲ. ಇನ್ನು ಮನೆ ಸಂಸಾರ ಅಂತ ಬಂದ್ರೆ ತುಂಬಾನೇ ಪ್ರೀತಿ ಇರತ್ತೆ ಮನೆಯವರ ಮೇಲೆ. ತಾಯಿಯೇ ಮೊದಲ ಗುರು ಅಂತೀವಿ.

ಸೋ ಇವರು ತಾಯಿಯ ಕರ್ತವ್ಯದಲ್ಲಿ ಅಥವಾ ತಾಯಿ ಹೇಳಿದ ಮಾತನ್ನ ಕೇಳೋದ್ರಲ್ಲಿ ಯಾವತ್ತು ಹಿಂದೆ ಬಿದ್ದಿಲ್ಲ. ಸಮಾಜ ಸುಧಾರಣೆ ಮಾಡೋದರ ಜೊತೆಗೆ ಮಕ್ಕಳಿಗೂ ಕೂಡ ಸಂಸ್ಕಾರ, ಧರ್ಮ, ದೇವರ ಜ್ಞಾನದ ಬಗ್ಗೆನೂ ಹೇಳ್ಕೊಡೋ ಜನ ಇವ್ರು ಅಂತಾನೂ ಹೇಳಬಹುದು. ಫಿಲಾಸಫರ್ಗಳ ಹಾಗೆನೇ ತಾಯಿಯ ಸ್ಥಾನದಲ್ಲಿದ್ದು ಬುದ್ಧಿ ಹೇಳೋಕೂ ಗೊತ್ತು, ಬಡಿಗಿ ಪೆಟ್ಟು ಕೊಟ್ಟು ತಿದ್ದೋಕು ಗೊತ್ತಿದೆ.

ಸೋ ಹಿರಿಯರು, ಗುರುಗಳನ್ನ ಕಂಡ್ರೆ ಕೈ ಎತ್ತಿ ಮುಗಿಯೋ ಇವ್ರು ತುಂಬಾನೇ ಬೋಲ್ಡ್ ಆಗಿರ್ತಾರೆ ಅಂದ್ರೆ ತಪ್ಪಾಗಲ್ಲ. ತಮಗೆ ಬೇಕಾದ ಹಾಗೆ ಸ್ಟೈಲ್ ಮಾಡ್ತಾರೆ, ತಮಗೆ ಬೇಕಾದ ಕಡೆ ಸ್ವತಂತ್ರವಾಗಿ ತಿರುಗಾಡೋ ಪೈಕಿ. ಇನ್ನು ಚೆನ್ನಾಗಿ ಅಡುಗೆ ಮಾಡೋದ್ರಲ್ಲಂತೂ ಎತ್ತಿದ ಕೈ ಅಂತಾನೆ ಹೇಳ್ಬಹುದು. ಇವೆಲ್ಲ ಕ್ವಾಲಿಟಿ ಬರೋಕೆ ಮೇನ್ ರೀಸನ್ ಅಂದ್ರೆ ಈ ನಕ್ಷತ್ರಕ್ಕೆ ಅಧಿಪತಿಯಾಗಿರೋ ಶುಕ್ರ.

ಸೋ ಇವರಿಗೆ ದಿನ ದಿನ ವೆರೈಟಿ ವೆರೈಟಿಯಾಗಿರೋ ಫುಡ್ ಟ್ರೈ ಮಾಡೋಕೆ ಇಷ್ಟ. ಇಂಡಿಪೆಂಡೆಂಟ್ ಆಗಿ ಹೋಟೆಲ್ ಉದ್ಯಮ ನಡೆಸೋ ಗಟ್ಟಿತನ ಕೂಡ ಇದೆ. ಇನ್ನು ಶುಕ್ರನಿಂದ ಬರೋ ಇನ್ನೊಂದು ಗುಣ ಅಂದ್ರೆ ಇವ್ರು ಕಲಾಭಿಮಾನಿಯಾಗಿರ್ತಾರೆ. ಸಂಗೀತ, ಸಾಹಿತ್ಯದಲ್ಲಿ ಅಭಿರುಚಿ ಇರತ್ತೆ. ಕೆಲವರು ಸಿಂಗರ್ ಗಳಾಗಿನೂ ಫೇಮಸ್ ಆಗ್ಬಹುದು. ಇನ್ನ್ ಕೆಲವರು ಹೇಗೆ ಅಂದ್ರೆ ಯಾವುದೇ ಕ್ಲಾಸ್ಗಳಿಗೆ ಹೋಗಿರಲ್ಲ.

ಅಂದ್ರೆ ಇವಾಗ ಸಂಗೀತ ಕ್ಲಾಸಿಗೆ ಆಗಿರ್ಬಹುದು ಇಲ್ಲಾ ಡ್ಯಾನ್ಸ್ ಕ್ಲಾಸಿಗೆ ಆಗಿರಬಹುದು ಯಾವುದನ್ನು ಕ್ಲಾಸಿಗ್ ಹೋಗಿ ಕಲಿತವರಾಗಿರೋದಿಲ್ಲ. ಆದ್ರೂ ಒಳ್ಳೆ ಕಲಾ ಜ್ಞಾನ ಇರತ್ತೆ. ಅದ್ರಲ್ಲಿ ಪ್ರದರ್ಶನ ಕೊಡುವಂತ ತಾಕತ್ತು ಕೂಡ ಇದೆ ಅಂತ ಹೇಳ್ಬಹುದು. ಹಾ.. ಇನ್ನು ಪ್ರೀತಿ, ಪ್ರೇಮ, ಮದುವೆ ಅಂತ ಬಂದ್ರೆ ಮೊದಲು ಬಾಯ್ ಫ್ರೆಂಡ್ ಇರ್ಬಹುದು, ಕೆಲವರಿಗಂತು ಹಲವಾರು ಕ್ರಷ್ ಗಳಿರ್ತಾರೆ.

ನೋಡಿದೋರೆಲ್ಲರ ಮೇಲೂ ಕ್ರಶ್ ಆಗತ್ತೆ. ಆದರೆ ಮದುವೆ ಆದ್ಮೇಲೆ ಈ ಹೆಣ್ಣು ಮಕ್ಕಳು ಏಕ ಪತಿ ವ್ರತಸ್ತೆ ಅಂತಾನೇ ಹೇಳ್ಬಹುದು. ತುಂಬಾ ನಿಷ್ಠೆಯಿಂದ ಇರ್ತಾರೆ. ಗಂಡ, ಮಕ್ಕಳನ್ನ ತುಂಬಾ ಪ್ರೀತಿಯಿಂದ ನೋಡ್ಕೋತಾರೆ. ಅವರ ಪ್ರೀತಿ, ಕಾಳಜಿಯಲ್ಲಿ ಮಿಂದೇಳೋ ಜನ ಅಂತಾ ಹೇಳಬಹುದು. ಇವಿಷ್ಟು ಒಂದ್ ಹಂತ ಆಯ್ತು. ಈಗ ಹೇಳೋ ಸೀಕ್ರೆಟ್ ಕೇಳಿದ್ರೆ ಏನಪ್ಪಾ ಈ ಭರಣಿ ನಕ್ಷತ್ರದ ಸ್ತ್ರೀಯರು ಇಷ್ಟೊಂದು ವಿಚಿತ್ರ ಇದ್ದಾರೆ

ಅಂತ ಅನ್ನಿಸ್ಬಹುದು. ಆದರೆ ಇದೇ ಸತ್ಯ. ಇವರ ಮೆಂಟಾಲಿಟಿನೇ ಹೀಗೆ. ಗಂಡ ದುಡಿತಾನೆ, ದುಡಿದ್ಮೇಲೆ ಅಷ್ಟು ಖರ್ಚು ಮಾಡದೆ ಇದ್ರೆ ಹೇಗೆ? ಸುಮ್ನೆ ಇರೋದ್ಯಾಕೆ? ಇದ್ದಾಗಲೇ ಮಜಾ ಉಡಾಯಿಸ್ಬಿಡಬೇಕು ಅಂತ ಒಳ್ಳೆ ಹೈಫೈ ಲೈಫ್ ಪೊಶ್ ಆಗಿ ಇರ್ತಾರೆ. ಕೈಗೊಬ್ಬ, ಕಾಲಿಗೊಬ್ಬ ಆಳ್ಬೇಕು. ಕೈಯಲ್ಲಿ ಊಟ ಮಾಡಿದರೆ ಬೆರಳು ಸವೆದೇ ಹೋಗತ್ತೇನೋ ಅನ್ನೋ ತರ ಕೆಲವರ ನಡವಳಿಕೆನೂ ಇರ್ಬಹುದು.

ಆದ್ರೆ ಇವೆಲ್ಲ ಒಂದ್ ಹಂತದವರೆಗೆ ಮಾತ್ರ. ಸಾಯೋ ಕಾಲದವರೆಗೂ ಹೀಗೆ ಅರ್ಥ ಇರ್ತಾರೆ ಅಂತ ಹೇಳೋಕಾಗಲ್ಲ. ಯಾಕಂದ್ರೆ ಇವರಿಗೆ ವಯಸ್ಸಾಗ್ತಾ ಹೋದಾಗೇ ಒಂದ್ ರೀತಿ ಆಧ್ಯಾತ್ಮಿಕತೆ ಕಡೆಗೆ ಸೆಳೆತ ಉಂಟಾಗೋದ್ ಹೆಚ್ಚು. ಎಲ್ಲಾ ವ್ಯರ್ಥ, ಯಾರಿಗ್ ಬೇಕು ಇದೆಲ್ಲ, ಹುಟ್ಟಿದವ್ರೆಲ್ಲ ಸಾಯ್ಲೇಬೇಕು ಅಂತ ಅನ್ಸೋಕೆ ಶುರು ಆಗತ್ತೆ. ಎಷ್ಟೇ ಭೂಮಿ ಇದ್ರು ಬೇಡ,

ದುಡ್ಡು ಒಂತರ ಪಾಷಾಣದ್ ಹಾಗೇ ಕಾಣ್ತಾ ಹೋಗತ್ತೆ. ಆಮೇಲೆ ಎಲ್ಲವನ್ನ ಯಾರಿಗಾದ್ರೂ ದಾನ ಮಾಡಿ ಹೋಗೋ ಬುದ್ಧಿ ಹೆಚ್ಚಾಗಿ ಕಾಣ್ಬಹುದು. ಇಷ್ಟಕ್ಕೆ ಸುಸ್ತಾದ್ರೆ ಹೇಗೆ, ಮುಂದೆ ಹಾಕೋದಿದೇ ನೋಡಿ ಅದು ಆಟಂ ಬಾಂಬಂದ್ರೆ. ಹೀಗೆ ಹೇಳಿದ್ದೆಲ್ಲ ಕೇಳಿ ಇವರಿಗೆ ಹತ್ರ ಆಗೋಕೆ ನೋಡ್ಬಹುದು ಕೆಲವರು. ಆದ್ರೆ ಮುಂದೆ ಹೇಳೋ ಅದೊಂದು ಡಾರ್ಕ್ ಸೀಕ್ರೆಟ್ ಕೇಳಿದ್ರೆ ಈ ಹುಡುಗೀರಂದ್ರೆ ಡೇಂಜರಪ್ಪೋ ಅಂತೀರಾ, ಹತ್ರ ಹೋಗೋಕೂ ಹೆದರ್ತೀರಾ. ಯಾಕೆ ಅಂತಾ,

ಎಂಡ್ ವರೆಗೂ ನೋಡಿ. ಹೊಸ ಹೊಸ ವಿಚಾರಗಳು ಗೊತ್ತಾಗೋದಿದೆ. ಇದು ವುಮೆನ್ಸ್ ಪವರ್ ತಿಳಿಸೋಕೆ ಅಂತಾನೆ ಸ್ಪೆಷಲ್ ಆಗಿ ಮಾಡಿರೋ ವಿಡಿಯೋ. ಇದೇ ರೀತಿ ಈಗಾಗಲೇ ನಮ್ಮ ಚಾನೆಲ್ ಅಲ್ಲಿ ಬಂದಿರೋ ಮೇಷ ರಾಶಿಯ ಸ್ತ್ರೀ ರಹಸ್ಯದ ವಿಡಿಯೋ ನೋಡಿದ್ರೆ ನೀವು ಖಂಡಿತ ಎಕ್ಸೈಟ್ಮೆಂಟಲ್ಲಿ ಕುಣಿದಾಡ್ಬಿಡ್ತೀರಾ. ಇಂದೇ ನೋಡಿ ಹೊಸ ವಿಚಾರಗಳನ್ನ ತಿಳಿದ್ಕೊಳ್ಳಿ. ವೀಕ್ಷಕರೇ ಇದೊಂದ್ ಮಾತ್ ಕೇಳಿ ಭರಣಿಗಳ ಡಾರ್ಕ್ ಸೀಕ್ರೆಟ್ ಕಡೆಗೆ ಹೋಗೋಣ. ನಾನ್ ಮೊದ್ಲೇ ಹೇಳ್ದೆ, ಇವ್ರು ಸ್ವಲ್ಪ ಇಂಡಿಪೆಂಡೆಂಟ್ ಸ್ವತಂತ್ರರಾಗಿರೋಕೆ ಇಷ್ಟಪಡ್ತಾರೆ,

ಒಬ್ಬೊಬ್ರೆ ತಿರುಗಾಡ್ತಾರೆ ಅಂತೆಲ್ಲಾ. ಸೋ, ಇವ್ರಿಗೆ ಮುಂದೇನ್ ಮಾಡ್ಬೇಕು? ಯಾವ ದಾರೀಲೀ ಹೋದ್ರೆ ಯಾವ ಲಾಭ ಆಗತ್ತೆ ಅಂತ ಕ್ಲಿಯರ್ ಕಟ್ ಐಡಿಯಾ ಇರುತ್ತೆ. ತಮ್ಮ ಡ್ಯೂಟಿ, ರೆಸ್ಪಾನ್ಸಿಬಿಲಿಟಿ ಬಗ್ಗೆ ಚೆನ್ನಾಗಿನೇ ಗೊತ್ತು. ತಮ್ಮ ಕೆಪಾಸಿಟಿ ಮೇಲೆ ಕೂಡ ನಂಬಿಕೆ ಇರತ್ತೆ. ಒಂತರ ನಂಬಿಕೆಯನ್ನೋಕ್ಕಿಂತ ಹೆಚ್ಚು ಕಮ್ಮಿ ಗರ್ವ ಅಂತ ಹೇಳ್ಬಹುದು.

ಸೋ ಇಂತಹ ಭರಣಿಯ ಹೆಣ್ ಮಕ್ಳಿಗೆ ತಮ್ಮ ಅಭಿಪ್ರಾಯದ ಬಗ್ಗೆ ಬೇರೆಯವರು ಏನ್ ತಿಳ್ಕೋತಾರೆ ಅಂತ ಬೇಡ. ಬಾಯಲ್ಲಿ ಏನ್ ಬರತ್ತೋ ಹೇಳಿನೇ ತೀರ್ತಾರೆ. ತಪ್ಪೇ ಆಗ್ಲಿ, ಸರೀನೇ ಆಗ್ಲೀ ಮುಖದ ಮೇಲೆ ಹೊಡೆದು ಮಾತಾಡೋ ಪೈಕಿ. ಬೇರೆಯವರಿಗೆ ಬೆಣ್ಣೆ ಹಚ್ಚೋ ಜಾತಿ ಅಂತೂ ಅಲ್ವೇ ಅಲ್ಲ. ಇದ್ರೆ ಇರಿ, ಹೋಗೋದಾದ್ರೆ ಧಾರಾಳವಾಗಿ ಹೋಗ್ಬಹುದು ಅಂತ ಹೇಳ್ತಾರೆ.

ಆತ್ಮಸಾಕ್ಷಿ ಅಥವಾ ಸ್ವಾಭಿಮಾನಕ್ಕೆ ಧಕ್ಕೆ ಬಂದ್ರೆ ನಿಂತ ಜಾಗ ಯಾವ್ದು, ಎಲ್ಲಿದ್ದೀನೀ, ಯಾರ ಜೊತೆ ಇದ್ದೀನಿ ಅನ್ನೋದನ್ನ ಕೂಡ ನೋಡಲ್ಲ. ಒಂತರ ಉಗ್ರ ಪ್ರತಾಪಿಗಳು ಅಂತಾನೆ ಹೇಳ್ಬಹುದು. ತಮಗೆ ಅವಮಾನ ಆದರೆ ಯಾರಿಗೂ ಕೇರ್ ಮಾಡಲ್ಲ. ಯಾರ್ ಏನ್ ಹೇಳ್ತಾರೆ ಅಂತ ಕೇಳೋ ತಾಳ್ಮೆನೂ ಇರಲ್ಲ. ಇದು ಕೆಲವರಿಗೆ ಅಹಂಕಾರ ಅಂತಾನೂ ಅನ್ಸಬಹುದು. ಆದ್ರೆ ಇವರಿರೋದೆ ಹೀಗೆ ಸ್ವಾಮಿ.

ಹಿಂಗೆಲ್ಲಾ ಹೇಳ್ದೆ ಅಂತ ಬೇಜಾರ್ ಆಗ್ಬೇಡಿ ಮತ್ತೆ. ಇದ್ದಿದ್ದು ಇದ್ದ ಹಾಗೆ ಹೇಳೋ ನಿಮ್ಗೆ, ನಿಮ್ ರೀತೀಲೇ ಡೈರೆಕ್ಟಾಗಿ ಹೇಳ್ಬೇಕು ಅಲ್ವಾ.. ಸೊ ಹಾಗೆ ಹೇಳ್ತಾ ಇದೀನಿ. ಇನ್ನೊಂದು ಅಂದ್ರೆ ಇವರಿಗೆ ಸ್ವಲ್ಪ ವಿಧೇಯತೆ ಅನ್ನೋದು ದೂರದ ಮಾತು. ಹಂಗಂದ್ರೆ ಏನು? ಯಾಕೆ ವಿಧೇಯರಾಗಿರ್ಬೇಕು ಅಂತ ಕೇಳ್ತಾರೆ. ಕೆಲವರನ್ನ ಕಂಡ್ರೆ ಅಂದ್ರೆ ಇವಾಗ ಯಾರನ್ನು

ಕಂಡ್ರೆ ಆಗಿರಲ್ಲ ಅಥವಾ ಅವ್ರ ಜೊತೆ ಯಾವುದೋ ಒಂದ್ ಕಾರಣಕ್ಕೆ ವಾದ ವಿವಾದಗಳು ಆಗಿರುತ್ತೆ. ಅಂಥವರು ಎದುರಿಗೆ ಬಂದ್ರೆ ಅಹಂಕಾರ ಅಥವಾ ನಾನತ್ವ ಅನ್ನೋದು ಎಚ್ಚರ ಆಗತ್ತೆ. ಇದರಿಂದ ಕೆಲವೊಂದು ಸಲ ದುಃಖ ಪಡುವ ಹಾಗೂ ಆಗ್ಬಹುದು. ಮತ್ತೊಂದು ಅಂದ್ರೆ ಇವರು ಯಾರ್ ಉಪದೇಶನೂ ಕೇಳಲ್ಲ. ಯಾರ್ ಮುಂದೆನೂ ತಲೆಬಾಗಲ್ಲ ಅನ್ನೋ ಗುಣ ನೋಡಿನೇ ಜನ ಇವರಿಂದ ದೂರ ಹೋಗ್ತಾರೆ ಅಂದ್ರು ತಪ್ಪಲ್ಲ.

ಭರಣಿ ಹುಡ್ಗೀರ್ ಅಂದ್ರೆ ಡೇಂಜರಪ್ಪ ಅನ್ನೋದು ಇದೇ ಕಾರಣಕ್ಕೆ. ಏನಾದ್ರೂ ಪ್ರಾಫಿಟ್ ಆಯ್ತಾ? ಬೇರೆಯವರಿಗೆ ತೋರಿಸ್ಲೇಬೇಕು, ಹೊಸ ಬಟ್ಟೆ ತಗೊಂಡ್ನ, ಹೊಸ ಜ್ಯುವೆಲರಿ ತಗೊಂಡ್ನ, ಹೋದಲ್ಲೆಲ್ಲ ಮೆರೆದಾಡಿ ಅದನ್ನೆಲ್ಲ ತೋರಿಸಿ ಬರೋ ಬುದ್ಧಿ ಇದೆ ಇವರಿಗೆ. ಎಲ್ಲರೂ ಹೊಗಳ್ಬೇಕು, ವಿರೋಧಿಗಳು ಉರ್ಕೋಬೇಕು ಅನ್ನೋ ಮನಸ್ಥಿತಿ ಜಾಸ್ತಿ. ಇಷ್ಟೇ ಅಲ್ಲ, ಇನ್ನೊಂದು ಸಕ್ಕತ್ ವಿಚಾರ ಹೇಳ್ತಿನಿ ಕೇಳಿ.

ಇದ್ ಮಾತ್ರ ಅಲ್ಟಿಮೇಟ್ ಸೀಕ್ರೆಟ್. ಯಾಕಂದ್ರೆ ಇದೊಂದು ಕೆಟ್ಟ ಚಾಳಿ ಬಿಡದಿದ್ದರೆ ಭರಣಿ ಸ್ತ್ರೀಯರಿಗೆ ಲಾಸ್. ಆದಷ್ಟು ಬೇಗ ಈ ಮಿಸ್ಟೇಕನ್ನ ಸರಿ ಮಾಡ್ಕೊಂಡ್ರೆ ಒಳ್ಳೆಯದು. ನೋಡಿ ಇವರಿಗೆ ಬೇರೆಯವ್ರ ಸುದ್ದಿ ಹೇಳ್ದೆ ಇದ್ರೆ ಸಮಾಧಾನನೇ ಇಲ್ಲ. ಯಾರು ಎಲ್ಲಿ ಹೋದ್ರು, ಯಾಕ್ ಹೋದ್ರು ಅಂತ ಹುಡುಕ್ತಾನೆ ಇರ್ತಾರೆ. ತಮ್ಮ ಮನೆ ಹೆಂಚಿನಲ್ಲಿ ಎಷ್ಟೇ ತೂತಾಗಿರಲಿ

ಅದನ್ನ ನೋಡಲ್ಲ, ಆದ್ರೆ ಬೇರೆಯವ್ರ ಮನೆ ದೋಸೆಯಲ್ಲಿ ಎಷ್ಟು ತೂತಿದೆ ಅಂತ ಮಾತ್ರ ಹುಡುಕ್ತಾ ಇರೋ ಮನ ಸ್ಥಿತಿ ಇವರದ್ದು. ಯಾರಾದ್ರೂ ಇವರ ಸಂಸಾರದ ಬಗ್ಗೆ ಕೇಳಿದ್ರೆ ಬಿಪಿ ರೈಸ್ ಆಗಿಬಿಡತ್ತೆ. ಏ ನಿಮ್ಮ ಫ್ಯಾಮಿಲಿಯಲ್ಲಿ ಯಾರೋ ಹಾಗ್ ಮಾಡಿದ್ರಂತೆ, ಜಗಳ ಆಯ್ತಂತೆ ಅಂತೆಲ್ಲ ಕೇಳೋಕ್ ಬಂದ್ರೆ ಮಾತ್ರ ಇವರೇ ಜಗಳಕ್ಕೆ ನಿಂತು ಬಿಡ್ತಾರೆ ಹುಷಾರು. ಸೋ ನಾನೀಗ ಹೇಳೋ ಮಾತನ್ನ ಒಂದು ಹಿತೋಪದೇಶವಾಗಿ ತಗೊಳ್ಳಿ. ಈ ಭರಣಿ ಸ್ತ್ರೀಯರು ಎಲ್ಲರನ್ನ ತುಂಬಾ ಚೆನ್ನಾಗ್ ನೋಡ್ಕೋತಾರೆ.

ಆದ್ರೆ ಇವರನ್ನ ನೋಡ್ಕೊಳ್ಳೋಕೆ ಜನ ಮುಂದೆ ಬರಲ್ಲ. ಎಮರ್ಜೆನ್ಸಿ ಟೈಮಲ್ಲೇ ಕೈ ಕೊಡೋದು ಹೆಚ್ಚು. ಇದಕ್ಕೆಲ್ಲ ಕಾರಣ ಏನು ಅಂತ ಇಷ್ಟೊತ್ತ್ ಏನ್ ಹೇಳಿದ್ನಲ್ಲ ಆ ಎಲ್ಲಾ ನೆಗೆಟಿವ್ ಗುಣಗಳೇ. ಸೋ ಅವನ್ನೆಲ್ಲ ಆದಷ್ಟು ಕಂಟ್ರೋಲ್ ನಲ್ಲಿ ಇಟ್ಕೊಳ್ಳಿ. ನೀವ್ ಆಯ್ತು, ನಿಮ್ಮ ಕೆಲಸ ಆಯ್ತು ಅಂತ ಇದ್ಬಿಡಿ. ಬೇರೆ ಯಾರ್ ತಂಟೆಗೂ ಹೋಗ್ದೆ ಇದ್ರೆ ಜನ ನಿಮ್ಮ ಸೈಲೆಂಟ್ ನೇಚರ್ ಗೆ ಮಾರುಹೋಗೋದು ಹೆಚ್ಚು.

ಹಾ.. ಇವತ್ತಿಗೆ 2ನೇ ನಕ್ಷತ್ರ ಆಗಿರೋ ಭರಣಿ ನಕ್ಷತ್ರದ ಸ್ತ್ರೀ ರಹಸ್ಯವನ್ನ ತಿಳ್ಕೊಂಡಾಯ್ತು. ಇನ್ನೊಂದು ನಕ್ಷತ್ರದ ಜೊತೆಗೆ ಮತ್ತೆ ಸಿಗೋಣ. ಅಲ್ಲಿವರೆಗೂ ನಮ್ಮ ಚಾನೆಲ್ ನಲ್ಲಿ ಬಂದಿರೋ ಮಾಸ ಭವಿಷ್ಯ ಆಗಿರ್ಬಹುದು ಅಥವಾ ವರ್ಷ ಭವಿಷ್ಯ, ಶನಿಫಲ, ಗುರುಫಲ ಇಂತಹ ವಿಡಿಯೋಗಳನ್ನು ಮಿಸ್ ಮಾಡದೆ ನೋಡಿ. ಲೋಕ ಸಮಸ್ತ ಸುಖಿನೋ ಭವಂತು ಹರಿ ಓಂ.

Leave A Reply

Your email address will not be published.