ನೈಟಿ ಧರಿಸುವ ಮಹಿಳೆಯರೇಎಚ್ಚರ

ನೈಟಿ ಧರಿಸುವ ಮಹಿಳೆಯರೇ ಇಲ್ಲಿ ಗಮನಿಸಿ ಯಾವಾಗಲೂ ನೈಟಿ ಧರಿಸುವುದರಿಂದ ಏನಾಗುತ್ತದೆ ಗೊತ್ತಾ?
ಮೊದಲಿನ ಕಾಲದಲ್ಲಿ ಅಂದರೆ ಮದುವೆಯಾದ ನಂತರ ಮಹಿಳೆಯರು ಕಡ್ಡಾಯವಾಗಿ ಸೀರೆಯನ್ನೇ ಧರಿಸಬೇಕಾಗಿತ್ತು. ಭಾರತೀಯ ಸಂಸ್ಕೃತಿಯಲ್ಲಿನ ಕೆಲವು ಆಚರಣೆಗಳು ಕೆಲವರಿಗೆ ಕಿರಿಕಿರಿ ಎನಿಸಿದರೂ ಆ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣ ಹಾಗೂ ಅನುಕೂಲ ಅಥವಾ ಶ್ರೇಯಸ್ಸು ಇರುತ್ತದೆ ಅಂತಹ ಆಚರಣೆಯಲ್ಲಿ ಸೀರೆ ಧರಿಸುವ ಆಚರಣೆಯು ಒಂದು.

ಈಗಿನ ಕಾಲದಲ್ಲಿ ಮಹಿಳೆಯರು ಸೀರೆಯನ್ನು ಕೇವಲ ನಿರ್ದಿಷ್ಟ ಸಮಯವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಧರಿಸುವುದಿಲ್ಲ. ಅದಕ್ಕಾಗಿ ಅಂದಿನ ಕಾಲದ ಮಹಿಳೆಯರಿಗಿಂತ ಈಗಿನ ಮಹಿಳೆಯರು ಬೊಜ್ಜಿನ ಸಮಸ್ಯೆಯನ್ನು ಸಾಮಾನ್ಯವಾಗಿ ಎದುರಿಸುತ್ತಾರೆ. ಅದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡುತ್ತಿರಬಹುದು.
ಸೀರೆಯನ್ನು ಧರಿಸುವುದರಿಂದ ಯಾವ ಪ್ರಯೋಜನವಿದೆ. ಈಗಿನ ಕಾಲದ ಉಡುಪನ್ನು ಧರಿಸುವುದರಿಂದ ಏನೆಲ್ಲಾ ಅಪ್ರಯೋಜನಗಳಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಬಹಳಷ್ಟು ಮಹಿಳೆಯರು ಮದುವೆಯ ನಂತರ ದಿನೆ ದಿನೆ ಕಳೆಯುತ್ತಿದ್ದಂತೆ ಅವರ ಹೊಟ್ಟೆ ಜೋತು ಬಿದ್ದು ಅವರು ದಪ್ಪವಾಗುತ್ತಿರುತ್ತಾರೆ ಇದಕ್ಕೆ ಕಾರಣವೇನೆಂದರೆ ಈಗಿನ ಬಹುತೇಕ ಮಹಿಳೆಯರು ಮದುವೆಯ ನಂತರ ನೈಟಿಯನ್ನು ಧರಿಸುತ್ತಾರೆ. ಮೊದಲೆಲ್ಲಾ ಮಹಿಳೆಯರು ಮದುವೆಯ ನಂತರ ಸೀರೆಯನ್ನು ಧರಿಸಬೇಕಾಗಿತ್ತು.
ಮಹಿಳೆಯರು ಧರಿಸುವ ನೈಟಿಗೂ ದಪ್ಪವಾಗುತ್ತಿರಲು ಸಂಬಂಧವೇನು ಎಂದು ಯೋಚಿಸುತ್ತಿದ್ದೀರಾ ಸಂಬಂಧವಿದೆ. ಹೌದು ಅದೇನೆಂದರೆ

ನೈಟಿ ಎನ್ನುವುದರ ನಿಜವಾದ ಅರ್ಥ ರಾತ್ರಿ ಮಲಗಲು ಆರಾಮ ಆಗುತ್ತದೆ ಎಂದು ರಾತ್ರಿ ಮಾತರ ಧರಿಸುವ ಒಂದು ಉಡುಪಾಗಿತ್ತು ಆದರೆ ಈಗ ಮಹಿಳೆಯರು ನೈಟಿಯನ್ನು ಪ್ರತಿದಿನ ಧರಿಸಲು ಪ್ರಾರಂಭಿಸಿದ್ದಾರೆ.
ಇದು ಗೃಹಿಣಿಯರ ನಿತ್ಯ ಬಳಸುವ ಬಹಳ ಪ್ರಿಯವಾದ ಉಡುಪಾಗಿದೆ ಇದಕ್ಕೂ ಕಾರಣವಿದೆ. ದಿನದ ಬಹುಪಾಲು ಗೃಹಿಣಿಯರಿಗೆ ಮನೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಕೆಲಸ ಮಾಡಲು ನೈಟಿ ಬಹಳ ಅನುಕೂಲಕರವಾಗಿದೆ. ಸೀರೆಯನ್ನು ಧರಿಸಿ ಕೆಲಸ ಮಾಡುವುದು ಸ್ವಲ್ಪ ಕಷ್ಟವಾಗುತ್ತದೆ.

ಆದರೆ ಇದರಿಂದ ಆಕೃತಿಯೂ ಅಗಲವಾಗುತ್ತಾ ಹೋಗುತ್ತದೆ ಎನ್ನುವುದು ತಿಳಿಯುವುದೆ ಇಲ್ಲ ಕೆಲವೊಮ್ಮೆ ಊಟ ತಿಂಡಿ ಸರಿಯಾಗಿ ಮಾಡದೆ ತೆಳುವಾಗಲೂಬಹುದು. ನೈಟಿ ಧರಿಸಿದರೆ ತೆಳುವಾದರೂ ತಿಳಿಯುವುದಿಲ್ಲ ಏಕೆಂದರೆ ನೈಟಿ ನಿರ್ದಿಷ್ಟ ಆಕಾರವನ್ನು ಹೊಂದದೆ ಗಾಳಿಪಟದಂತೆ ಇರುತ್ತದೆ. ಭಾರತೀಯ ಸಂಸ್ಕೃತಿಯ ಉಡುಪಾದ ಸೀರೆಯನ್ನು ಧರಿಸುವುದರಿಂದ ಮಹಿಳೆಯರ ದೇಹದ ಆಕೃತಿ ಚೆನ್ನಾಗಿರುತ್ತದೆ ಕಾರಣ ಸೀರೆಯನ್ನು ಧರಿಸಿದಾಗ ಬೆವರುತ್ತಾರೆ ಜೊತೆಗೆ ಸೀರೆಯನ್ನು ಧರಿಸಬೇಕೆಂದರೆ ಸೊಂಟಕ್ಕೆ ಲಂಗವನ್ನು ಗಟ್ಟಿಯಾಗಿ ಕಟ್ಟಬೇಕಾಗುತ್ತದೆ.

ಬಿಗಿಯಾದ ಬ್ಲೌಸ್ ಅನ್ನು ಧರಿಸಬೇಕು ಹಾಗೂ ಎಳೆದು ಒಪ್ಪವಾಗಿ ಸೆರಗನ್ನು ಮಾಡಬೇಕಾಗುತ್ತದೆ ಇದರಿಂದ ಮಹಿಳೆಯರ ದೇಹದ ಬೊಜ್ಜು ಬರುವ ಭಾಗಗಳನ್ನು ಸೀರೆಯಿಂದ ಬಂಧಿಸಲಾಗುತ್ತದೆ. ಮಹಿಳೆಯರು ತಮ್ಮ ದೇಹವನ್ನು ಕರಗಿಸಬೇಕಾದರೆ ಫಿಟ್ನೆಸ್ ಮೆಂಟೇನ್ ಮಾಡಬೇಕಾದರೆ ಬೆವರುವುದಕ್ಕೆ ಮೊದಲ ಆದ್ಯತೆ ಕೊಡುತ್ತಾರೆ ಅದಕ್ಕಾಗಿ ವ್ಯಾಯಾಮ ಮಾಡಿ ಬೆವರು ಸುರಿಸುತ್ತಾರೆ. ಬೊಜ್ಜು ಕರಗಿಸಲು ಸೊಂಟಕ್ಕೆ ಬೆಲ್ಟ್ ಕಟ್ಟಿಕೊಳ್ಳುತ್ತಾರೆ. ವ್ಯಾಯಾಮ ಶಾಲೆಯಲ್ಲಿ ಮಹಿಳೆಯರು ಮಾಡುವ ಕೆಲಸವನ್ನು ನಮ್ಮ ಸನಾತನ ಸಂಸ್ಕೃತಿಯ

ಸೀರೆ ಸುಲಭವಾಗಿ ಮಾಡುತ್ತದೆ. ಅಂದಿನ ಕಾಲದಲ್ಲಿ ಮಹಿಳೆಯರು ಎಂಥದ್ದೇ ಕೆಲಸವಿದ್ದರು ಸೇರಿ ಉಟ್ಟು ಮಾಡುತ್ತಿದ್ದರು. ಆದರೆ ಈಗ ನಾವುಗಳು ನಮ್ಮಲ್ಲೇ ಇರುವ ಸೀರೆಯನ್ನು ಬಿಟ್ಟು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ಅಚ್ಚರಿಯ ಸಂಗತಿ. ಮನೆಯಲ್ಲಿ ಪೂಜೆ ಮಾಡುವಾಗ ದೇವಸ್ಥಾನಕ್ಕೆ ಹೋಗುವಾಗ ಅಥವಾ ಇನ್ಯಾವುದೇ ಶುಭಕಾರ್ಯಗಳಿಗೆ ನೈಟಿ ಧರಿಸಿಕೊಂಡು ಪೂಜೆ ಮಾಡುವುದು ಅಥವಾ ಪೂಜೆಯಲ್ಲಿ ಭಾಗಿಯಾಗುವುದು ಶುಭಕರವಲ್ಲ ಎಂಬುದನ್ನು ಶಾಸ್ತ್ರ ತಿಳಿಸುತ್ತದೆ.

ಗೃಹಲಕ್ಷ್ಮಿಯಾದವಳು ಕಳೆಕಳೆಯಾಗಿ ಇರಬೇಕು. ಮನೆಯಲ್ಲಿ ಇರುವ ಮಹಿಳೆಗೆ ಅವಳದೇ ಆದ ಸ್ಥಾನವಿದೆ. ಅವಳಿಂದ ಮನೆ ಉದ್ಧಾರವಾಗಬೇಕು ಎಂದು ಹಿರಿಯರು ಬಯಸುತ್ತಾರೆ. ಮಹಿಳೆ ನೈಟಿ ಧರಿಸಿಕೊಂಡಾಗ ಗೃಹಲಕ್ಷ್ಮಿಯಾಗಿ ಮನೆಗೆ ಶೋಭಿಸುವುದಿಲ್ಲ. ನಾವು ಮನೆಯಲ್ಲಿ ಇರುತ್ತೇವೆ. ಹೊರಗಡೆ ಎಲ್ಲಿಯೂ ಹೋಗುವುದಿಲ್ಲ ಹೀಗಾಗಿ ಮನೆಯಲ್ಲಿ ನೈಟಿ ಧರಿಸುವುದು ನಮಗೆ ಅನುಕೂಲಕರ ಎನ್ನುವುದು ಹಲವು ಗೃಹಿಣಿಯರ ಅಭಿಪ್ರಾಯವಾಗಿದೆ. ಆದರೆ ಮನೆಯಲ್ಲಿರುವ ಹಿರಿಯರು ಹಾಗೂ ಮಕ್ಕಳ ಮುಂದೆ ನೈಟಿ ಧರಿಸುವುದು ನಮ್ಮ ಸನಾತನ ಸಂಸ್ಕೃತಿಯಲ್ಲಿ ಶೋಭೆಯಲ್ಲ.

ಸೀರೆಯಲ್ಲೂ ಕೂಡ ವಿವಿಧ ಬಗೆಯ ಬಟ್ಟೆ ಬಳಸುತ್ತಾರೆ. ರೇಷ್ಮೆ, ಕಾಟನ್, ಪಾಲಿಸ್ಟರ್, ನೈಲಾನ್, ಸಿಲ್ಕ್ ನೀವು ಮನೆಯಲ್ಲಿ ಇದ್ದಾಗ ಲೈಟ್ ವೇಟ್ ಸೀರೆ ಧರಿಸಬಹುದು. ರೇಷ್ಮೆ ಅಥವಾ ಗ್ರಾಂಡ್ ಸೀರೇನೆ ಧರಿಸಬೇಕೆಂತೇನು ಇಲ್ಲ ಅದೆಷ್ಟು ವರ್ಷಗಳಿಂದ ನಮ್ಮ ಭಾರತದಲ್ಲಿ ಮಹಿಳೆಯರು ಉಡುವ ಸೀರೆಗೆ ಪ್ರಥಮ ಸ್ಥಾನವಿತ್ತು. ಆದರೆ ಈಗ ಅದೆಲ್ಲ ಮಾಯವಾಗಿದೆ. ನೈಟಿಯನ್ನು ಧರಿಸಿಕೊಂಡು ಹೊರಗಡೆ ಹೋಗುವುದು ದೇವಸ್ಥಾನಕ್ಕೆ ಹೋಗುವುದು, ಇನ್ನೊಬ್ಬರ ಮನೆಯ ಶುಭಕಾರ್ಯಗಳಲ್ಲಿ ಭಾಗಿಯಾಗಲು ಹೋಗುವುದು ಶುಭಕರವಲ್ಲ ಆದ್ದರಿಂದ ಇನ್ನಾದರೂ ಮಹಿಳೆಯರೆ ರಾತ್ರಿ ಮಲಗುವಾಗ ಹಾಗೂ ಮುಟ್ಟಿನ ಸಮಯದಲ್ಲಿ ಮಾತ್ರ ನೈಟಿ ಧರಿಸಿ

ಉಳಿದ ಸಮಯದಲ್ಲಿ ಸೀರೆ ಧರಿಸುವುದರಿದ ಮಹಿಳೆಯು ಮನೆಯಲ್ಲಿ ಹಿರಿಯರಿಂದ ಮಕ್ಕಳಿಂದ ಗೌರವಕ್ಕೆ ಒಳಗಾಗುತ್ತಾಳೆ ಹಾಗೂ ಗೃಹಲಕ್ಷ್ಮಿಯಾಗಿ ಮನೆ ತುಂಬಾ ಸಂತಸದ ವಾತಾವರಣಕ್ಕೆ ಕಾರಣವಾಗುತ್ತಾಳೆ. ಗಂಡನಿಗೆ ಆಕರ್ಷಕಳಾಗಿ ಕಾಣುತ್ತಾಳೆ. ಇದೆಲ್ಲಕ್ಕಿಂತ ಮುಖ್ಯವಾಗಿ ಸೀರೆ ಧರಿಸುವುದರಿಂದ ಮಹಿಳೆಯರ ದೇಹದ ಆಕೃತಿ ಸುಂದರವಾಗಿರುತ್ತದೆ ಅವರು ಸುಸಂಸ್ಕೃತರಾಗಿ ಕಾಣುತ್ತಾರೆ. ಬೊಜ್ಜಿನ ಸಮಸ್ಯೆ ಮಹಿಳೆಯ ಹತ್ತಿರ ಸುಳಿಯುವುದಿಲ್ಲ. ಸೀರೆ ಧರಿಸುವುದರಿಂದ ಮಹಿಳೆಯರಿಗೆ ಇಷ್ಟೊಂದು ಲಾಭವಿದೆ ಎಂದು ಹಾಗಾದರೆ ನೈಟಿ ಧರಿಸುವ ಮಹಿಳೆಯರೆ ಇನ್ನಾದರೂ ಇದರ ಬಗ್ಗೆ ಯೋಚಿಸಿ ನೈಟಿಯನ್ನು ಕೇವಲ ರಾತ್ರಿ ಹಾಗೂ ಕೆಲವು ಅನಿವಾರ್ಯ ಸಂದರ್ಭವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಧರಿಸದೆ ಸೀರೆಯನ್ನು ನಿಮ್ಮ ಉಡುಪಾಗಿ ಆಯ್ಕೆ ಮಾಡಿಕೊಳ್ಳಿ.

Leave a Comment