ಇಂದಿನ ಲೇಖನದಲ್ಲಿ ಡ್ರೈ ಫ್ರೂಟ್ಸ್ ಗಳನ್ನು ಹೇಗೆ ಸೇವನೆ ಮಾಡಬೇಕು? ಡ್ರೈ ಫ್ರೂಟ್ಸ್ ಗಳನ್ನು ನೆನೆಸಿ ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳ ಬಗ್ಗೆ ತಿಳಿಸಿಕೊಡುತ್ತೇವೆ. ಡ್ರೈ ಫ್ರೂಟ್ಸ್ ಗಳಲ್ಲಿ ವಿಶೇಷವಾದ ಪೋಷಕ ತತ್ವಗಳು ಮತ್ತು ಔಷಧಿಯ ತತ್ವಗಳು ಇವೆ. ಕೆಲವು ಡ್ರೈ ಫ್ರೂಟ್ಸ್ ಗಳು ಉಷ್ಣವೀರ್ಯ ಮತ್ತು ಶೀತವೀರ್ಯ ಗುಣಗಳನ್ನು ಹೊಂದಿರುತ್ತವೆ. ಕ್ಯಾಲ್ಸಿಯಂ, ವಿಟಮಿನ್, ಫೈಬರ್, ಐರನ್, ಮೆಗ್ನೇಷಿಯಂ, ಥಯಾಮಿನ್, ಜಿಂಕ್, ವಿಟಮಿನ್ ಬಿ12 ಅಂಶ ಈ ಎಲ್ಲಾ ಅಂಶಗಳು ಸಮರ್ಪಕವಾಗಿ ಮತ್ತು ಸಮೃದ್ಧವಾಗಿ ಈ ಡ್ರೈ ಫ್ರೂಟ್ಸ್ ಗಳಲ್ಲಿ ಸಿಗುತ್ತವೆ.
ಇಂತಹ ಡ್ರೈ ಫ್ರೂಟ್ಸ್ ಗಳನ್ನ ನಮ್ಮ ಶರೀರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ರೀತಿಯಲ್ಲಿ ಸೇವನೆ ಮಾಡಬೇಕು. ಡ್ರೈ ಫ್ರೂಟ್ಸ್ ಗಳನ್ನು ಹಾಗೆಯೇ ಸೇವನೆ ಮಾಡುವುದರಿಂದ ಆಹಾರವಾಗಿ ಕೆಲಸ ಮಾಡುತ್ತದೆ. ಆದರೇ ನೆನಸಿ ಸೇವನೆ ಮಾಡುವುದರಿಂದ ಔಷಧಿ ಆಹಾರವಾಗಿ ಕೆಲಸ ಮಾಡುತ್ತದೆ. ಆಂಟಿಆಕ್ಸಿಡೆಂಟ್, ನೈಟ್ರಿಕ್ ಆಸಿಡ್, ಉತ್ಪನ್ನಗೊಳ್ಳುತ್ತವೆ. ನೀರಿನಲ್ಲಿ ನಾಲ್ಕು ಮಹಾಭೂತಗಳು ಇರುತ್ತವೆ. ಅಂದರೆ ನೀರಿನಲ್ಲಿ ಅಗ್ನಿತತ್ತ್ವ, ವಾಯುತತ್ತ್ವ, ಜಲತತ್ತ್ವ ಮತ್ತು ಆಕಾಶ ತತ್ತ್ವವು ಇರುತ್ತದೆ.
ನಾಲ್ಕು ಮಹಾಭೂತಗಳನ್ನು ತನ್ನೊಳಗೆ ಅಡಗಿಸಿಕೊಂಡಿರುವ ಜಲತತ್ತ್ವದಲ್ಲಿ ನಾವು ಡ್ರೈ ಫ್ರೂಟ್ಸ್ ಅನ್ನು ನೆನೆಸಿದಾಗ ಆ ನಾಲ್ಕು ಮಹಾಭೂತಗಳ ಶಕ್ತಿ ಅದರೊಳಗೆ ಸೇರಿಕೊಳ್ಳುತ್ತದೆ. ಪಂಚಮಹಾಭೂತಗಳಿಂದ ನಮ್ಮ ಶರೀರ ರಚನೆಯಾಗಿದೆ. ಜೀವಜಲವೆಂದು ಕರೆಯುವ ನೀರಿನಲ್ಲಿ ಯಾವುದೇ ಪದಾರ್ಥವನ್ನು ನೆನೆಸಿದಾಗ ಅದು ಜೀವಸತ್ತ್ವವನ್ನು ಪಡೆದುಕೊಳ್ಳುತ್ತದೆ. ಕೇವಲ ಆಹಾರವನ್ನು ಪೋಷಕಾಂಶಗಳಿಗೆ ಸೇವನೆ ಮಾಡುವುದರಿಂದ ನಮ್ಮ ದೇಹ ವಿಕಾಸವಾಗುತ್ತದೆ ಹೊರತು ಮನಸ್ಸು ವಿಕಾಸವಾಗುವುದಿಲ್ಲ.
ಮನೋವಿಕಾಸವಾಗಬೇಕಾದರೇ ಆಹಾರದಲ್ಲಿ ಜೀವಸತ್ತ್ವಗಳು ಇರಬೇಕು. ಮನೆಯಲ್ಲಿ ಯಾವುದೇ ಧಾನ್ಯಗಳಿಂದ ಪಲ್ಯ ಮಾಡಬೇಕಾದರೇ ಅಂದರೆ ಹೆಸರುಕಾಳು, ಹಲಸಂದೆ ಕಾಳು, ಹುರುಳಿಕಾಳು, ಅವರೆಕಾಳಿನ ಪಲ್ಯವನ್ನು ಮಾಡುವಾಗ ಸ್ವಲ್ಪ ಸಮಯ ನೆನಸಿ ಇಡಬೇಕು.ಅದನ್ನು ಬಟ್ಟೆಯಲ್ಲಿ ಕಟ್ಟಿ ಇದ್ದರೇ ಮೊಳಕೆ ಬರುತ್ತದೆ ಅದರ ಪ್ರಮಾಣವೂ ಹೆಚ್ಚಾಗುತ್ತದೆ, ಶಕ್ತಿಯು ಹೆಚ್ಚಾಗುತ್ತದೆ. ಡ್ರೈ ಫ್ರೂಟ್ಸ್ ಗಳ ಸೇವನೆಯಿಂದ ಎಲ್ಲಾ ಜೀವಸತ್ತ್ವಗಳು ಸಿಗುತ್ತದೆ.
ನೆನೆಸಿದ ಡ್ರೈ ಫ್ರೂಟ್ಸ್ ಗಳನ್ನು ತಿನ್ನುವುದರಿಂದ ಶರೀರದಲ್ಲಿ ಆಕ್ಸಿಜನ್ ಲೆವೆಲ್ ಕ್ರಿಯಾಶೀಲವಾಗುತ್ತದೆ. ಅಕ್ಸಿಜನ್ ಲೆವೆಲ್ ನ ಪ್ರಮಾಣ ಎಲ್ಲಿ ಕಡಿಮೆ ಇರುತ್ತದೆಯೋ ಅಲ್ಲಿ ಬೆಂಕಿ ಉರಿಯಲು ಆಗುವುದಿಲ್ಲ. ಪ್ರಾಣಾಗ್ನಿಯನ್ನು ಕ್ರಿಯಾಶೀಲಗೊಳಿಸುವಂತಹ ಆ ಮೂಲಕ ಕಾಯಿಲೆಗಳನ್ನು ಹೊರಹಾಕುವಂತಹ ಶಕ್ತಿ ಈ ನೆನೆಸಿದ ಡ್ರೈ ಫ್ರೂಟ್ಸ್ ಗಳಲ್ಲಿ ಇದೆ. ನಮ್ಮ ಜಠರಾಗ್ನಿ ಕ್ರಿಯಾಶೀಲವಾಗಲು ಆಕ್ಸಿಜನ್ ಯುಕ್ತ ಆಹಾರಬೇಕು. ಕೆಲವರಿಗೆ ಹಸಿ ಕಾಳುಗಳನ್ನು ತಿಂದರೆ ಗ್ಯಾಸ್ಟ್ರಿಕ್ ಉಂಟಾಗುತ್ತದೆ ಅದಕ್ಕೆ ಕಾರಣ ಮಂದಾಗ್ನಿ ಇರುತ್ತದೆ ಆದ್ದರಿಂದ ನೆನೆಸಿದ ಕಾಳನ್ನು ತಿಂದ ನಂತರ ಆಫ್ ಬಾಯ್ಲ್ ಮಾಡಿ ಕೆಲವು ಕಾಳು ಮತ್ತು ತರಕಾರಿಗಳನ್ನು ತಿನ್ನಬೇಕಾಗುತ್ತದೆ.
ಡ್ರೈ ಫ್ರೂಟ್ಸ್ ಗಳನ್ನು ನೆನೆಸಿ ತಿನ್ನುವುದರಿಂದ ಯಾವುದೇ ತೊಂದರೆಗಳು ಆಗುವುದಿಲ್ಲ. ರಕ್ತಶುದ್ದೀಕರಣವಾಗುತ್ತದೆ ಮತ್ತು ಮಲಬದ್ದತೆ ನಿವಾರಣೆಯಾಗುತ್ತದೆ. ಅಜೀರ್ಣದ ಸಮಸ್ಯೆ ದೂರವಾಗುತ್ತದೆ. ಚರ್ಮ ಮತ್ತು ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ಮೆದುಳು ಕ್ರಿಯಾಶೀಲವಾಗುತ್ತದೆ. ಮಾಂಸಖಂಡಗಳು ಬಲಿಷ್ಠವಾಗುತ್ತದೆ. ಅಸ್ಥಿ ವ್ಯವಸ್ಥೆ ಕ್ರಿಯಾಶೀಲವಾಗುತ್ತದೆ. ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವಾಗುತ್ತದೆ. ಶರೀರದ ಜೀವಕೋಶಗಳು ಜಾಗೃತಿಯಾಗುತ್ತದೆ.