ಒಳ್ಳೆಯ ಸಮಯ ಬರುವುದ್ಕಕಿಂತ ಮುಂಚೆ ದೊರೆಯುವ 6 ಸೂಚನೆಗಳು

ನಮ್ಮ ಜೀವನದಲ್ಲಿ ಒಳ್ಳೆಯ ಸಮಯ ಬರುವ ಮುಂಚಿತವಾಗಿ ಯಾವ ಶುಭ ಶಕುನಗಳು ತಿಳಿದು ಬರುತ್ತದೆ ಪ್ರಕೃತಿಯ ಮೂಲಕ ಭಗವಂತ ಆ ಶುಭ ಸೂಚನೆಗಳನ್ನು ತಿಳಿಯುವಂತೆ ಮಾಡುತ್ತಾನೆಂಬುದನ್ನು ತಿಳಿಸಿಕೊಡುತ್ತೇವೆ. ಹುಟ್ಟು, ಸಾವು, ಸುಖ, ದುಃಖ, ಲಾಭ,ನಷ್ಟ ಇವೆಲ್ಲಾ ನಮ್ಮ ಜೀವನದ ಅವಿಭಾಜ್ಯ ಅಂಗಗಳೇ ಆಗಿವೆ. ನಮ್ಮ ಜೀವನ ಒಂದೇ ರೀತಿ ಇರುವುದಿಲ್ಲ ಸ್ವಲ್ಪ ದಿನ ಖುಷಿ ಇರುತ್ತದೆ, ಇನ್ನೊಂದು ಸ್ವಲ್ಪ ದಿವಸ ದುಃಖ ಇರುತ್ತದೆ. ಪ್ರತೀ ವ್ಯಕ್ತಿಯ ಜೀವನದಲ್ಲಿ ಏರಿಳಿತವಂತೂ ಇದ್ದೇ ಇರುತ್ತದೆ.

ಇದೆಲ್ಲಾ ಕಾಲಚಕ್ರದ ಪ್ರಭಾವ ಎಂದು ಹೇಳಬಹುದು. ಸಮಯದ ಮುಂದೆ ಯಾರು ದೊಡ್ಡವರಲ್ಲ. ಭಿಕ್ಷುಕ ಇದ್ದಕ್ಕಿದ್ದ ಹಾಗೇ ಶ್ರೀಮಂತನಾಗಿಬಿಡುತ್ತಾನೆ ಹಾಗೆಯೇ ಶ್ರೀಮಂತ ವ್ಯಕ್ತಿ ಭಿಕ್ಷುಕನ ಸ್ಥಿತಿಗೆ ಬರುತ್ತಾನೆ. ಇದೆಲ್ಲಾ ಕಾಲಚಕ್ರದ ಮಹಿಳೆ. ಮುಂದೆ ಬರುವ ನಮ್ಮ ಜೀವನದ ಸಮಯ ಉತ್ತಮವಾಗಿದಿಯಾ? ಇಲ್ಲವಾ ಎಂಬುದನ್ನ ಪ್ರಕೃತಿಯ ಮುಖಾಂತರ ದೇವರು ಸೂಚನೆಯನ್ನು ಕೊಡುತ್ತಾನೆ. ಪ್ರಕೃತಿಯ ಮುಖಾಂತರ ದೇವರು ಸೂಚನೆಯನ್ನು ಹೇಗೆ ಕೊಡತ್ತಾನೆ ಎಂಬುದನ್ನು ತಿಳಿದುಕೊಳ್ಳೋಣ.

ಒಮ್ಮೆ ನಾರದ ಮುನಿಗಳು ವೈಕುಂಠಕ್ಕೆ ತೆರಳಿದಾಗ ಶ್ರೀಮನ್ನಾರಾಯಣರ ಹತ್ತಿರ ಒಳ್ಳೆಯ ಸಮಯ ಬರುವುದಕ್ಕಿಂತ ಮುಂಚಿತವಾಗಿ ಮನುಷ್ಯರಿಗೆ ಯಾವ ರೀತಿಯಾಗಿ ಸೂಚನೆಗಳು ದೊರೆಯುತ್ತದೆ ಎಂದು ಕೇಳಿದರು. ಆಗ ಶ್ರೀಮನ್ನಾರಾಯಣರು ಒಳ್ಳೆಯ ಬರುವುದಕ್ಕಿಂತ ಮುಂಚೆ ಪ್ರಕೃತಿಯ ಮುಖಾಂತರ, ಪ್ರಾಣಿ ಪಕ್ಷಗಳ ಮುಖಾಂತರ, ನನ್ನ ಭಕ್ತರ ಮುಖಾಂತರ ಕೆಲವೊಂದು ಸಂದೇಶಗಳನ್ನು ಕೊಡುತ್ತೀನಿ ಎಂದು ಹೇಳಿದ್ದರಂತೆ. ಕುತೂಹಲದಿಂದ ನಾರದ ಮುನಿಗಳು ಭಗವಂತನನ್ನು ಅದನ್ನು ವಿವರಿಸಿ ಹೇಳಿ ಎಂದು ಕೇಳುತ್ತಾರೆ.

ಬ್ರಾಹ್ಮಿ ಮುಹೂರ್ತದಲ್ಲಿ ಒಳ್ಳೆಯ ಕನಸ್ಸುಗಳು ಬೀಳುವುದು ನಮಗೆ ಮುಂದೆ ಒಳ್ಳೆಯ ಸಮಯದ ಆಗಮನದ ಸಂಕೇತ. ಕೆಲವು ಸಮಯದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಕನಸ್ಸು ಬೀಳುತ್ತದೆ ಆ ಕನಸ್ಸಿನಲ್ಲಿ ನಾವು ಒಬ್ಬರೇ ನಡೆದುಕೊಂಡು ಹೋಗುತ್ತಿರುತ್ತೀವಿ ಒಂದು ಗುರಿಯ ಕಡೆಗೆ ಒಬ್ಬರೇ ನಡೆದುಕೊಂಡು ಹೋಗುವುದು ಕೂಡ ಒಳ್ಳೆಯ ದಿನಗಳ ಆಗಮನದ ಸಂಕೇತ ಎಂದು ಹೇಳಬಹುದು. ಇದು ಏನು ತೋರಿಸುತ್ತದೆಂದರೆ ನಾವು ಗುರಿಗಳನ್ನು ತಲುಪುತ್ತೀವಿ ಕಷ್ಟಗಳು ಕಳೆಯುತ್ತವೆ ಎಂದು ತೋರಿಸುತ್ತದೆ.

ಯಾವುದೇ ಕಾರಣವಿಲ್ಲದೇ ನಮ್ಮ ಮನಸ್ಸು ಖುಷಿ ಖುಷಿಯಾಗಿರುತ್ತದೆ ಮತ್ತು ಆ ದಿನದ ಪೂರ್ತಿ ಸಂತಸದಿಂದ ಇರುತ್ತೀವಿ ಕಾರಣ ಹುಡುಕುತ್ತೀವಿ ಕಾರಣ ತಿಳಿಯುವುದಿಲ್ಲ ಈ ರೀತಿ ನಡೆಯುವುದು ಮುಂದೆ ಒಳ್ಳೆಯ ಸಮಯ ಬರಲಿದೆ ಎಂದು ಅರ್ಥ ಸೂಚಿಸುತ್ತದೆ. ಗೋ ಮಾತೆ ನಿಮ್ಮ ಮನೆಯ ಎದುರು ಪದೇ ಪದೇ ಬಂದು ಏನಾನ್ನಾದರೂ ಕೊಡಿ ಎಂದು ನಿಲ್ಲುವುದು ಕೂಡ ಶುಭ ದಿನಗಳ ಆಗಮನದ ಸಂಕೇತವೆಂದು ಹೇಳುತ್ತಾರೆ. ನಿಮ್ಮ ಮನೆಗೆ ಬಂದು ನಿಂತುಕೊಳ್ಳುವುದು ಒಳ್ಳೆಯದ್ದಾಗಿರುತ್ತದೆ ಮನೆಗೆ ಬಂದು ನಿಂತಾಗ ತಿನ್ನಲು ಏನನ್ನಾದರೂ ಕೊಡಿ, ನೀವು ಒಳ್ಳೆಯ ಸುದ್ದಿ ಕೇಳುತ್ತೀರಿ ಮತ್ತು ನಿಮ್ಮ ಮನೆಯಲ್ಲಿ ಶುಭಕಾರ್ಯ ನಡೆಯುತ್ತದೆಂಬ ಸಂಕೇತವಾಗಿದೆ.

ನಿಮ್ಮ ಮನೆಗೆ ಕೋತಿ ಪ್ರವೇಶ ಮಾಡಿ ತನ್ನಿಂದ ತಾನೇ ತಿನ್ನುವ ವಸ್ತುಗಳನ್ನು ಎತ್ತಿಕೊಂಡು ಹೊರಗಡೆ ಹೋಗಿ ಆ ವಸ್ತುವನ್ನು ತಿಂದರೆ ಅಥವಾ ಮನೆಯಲ್ಲಿ ತಿಂದರೇ ಇದು ಕೂಡ ಶುಭ ಸೂಚನೆ ಎಂದು ಹೇಳುತ್ತಾರೆ. ಇನ್ನು ಬೆಕ್ಕು ಮನೆಯಲ್ಲಿ ಮರಿಗಳಿಗೆ ಜನ್ಮ ನೀಡುವುದು ಕೂಡ ಶುಭ ಸಂಕೇತವೆಂದು ಹೇಳುತ್ತಾರೆ. ಪಕ್ಷಿಗಳು ಕೂಡ ಮನೆಯ ಅಂಗಳದಲ್ಲಿ ಗೂಡನ್ನು ಕಟ್ಟಿದರೇ ತುಂಬಾ ಒಳ್ಳೆಯದು ಮುಂದೆ ಶುಭದಿನಗಳು ಆಗಮವಾಗುತ್ತವೆ. ಚಿಕ್ಕ ಮಕ್ಕಳು ದೇವರು ಎಂದು ಹೇಳುತ್ತಾರೆ.

ಅಂತಹ ಮಕ್ಕಳು ನಮ್ಮನ್ನು ನೋಡಿ ಕಾರಣವಿಲ್ಲದೇ ನಕ್ಕರೇ ಅದು ಶುಭ ಸೂಚನೆ ಎಂದು ಹೇಳುತ್ತಾರೆ. ನೆರೆಹೊರೆಯ ಮಕ್ಕಳು ನೀವು ಕರೆಯದೇ ಹೋದರೂ ಅವರು ಬಂದು ನಿಮ್ಮ ಮನೆಯಲ್ಲಿ ಖುಷಿ ಖುಷಿಯಾಗಿ ಆಟವಾಡಿದರೇ ನಿಮ್ಮ ಭಾಗ್ಯದ ಬಾಗಿಲು ತೆರೆಯುವ ಸಂಕೇತವೆಂದು ಹೇಳುತ್ತಾರೆ. ಹೊಸ ಸಂಬಂಧಗಳು ನಿಮ್ಮ ಜೀವನದಲ್ಲಿ ಹುಡುಕಿಕೊಂಡು ಬರುತ್ತವೆ. ತುಂಬಾ ಒಳ್ಳೆಯದಾಗುವ ಸಂಕೇತವೆಂದು ಹೇಳುತ್ತಾರೆ. ದೇವರ ಪೂಜಾ ಸಮಯದಲ್ಲಿ ದೇವರ

ಹೂ ಕೆಳಗೆ ಬೀಳುವುದು ನಿಮ್ಮ ಜೀವನದಲ್ಲಿ ಕಷ್ಟದ ಸಮಯವು ಕಳೆದು ಸಂತೋಷ ಸಿಗುವ ಸಂಕೇತವೆಂದು ಹೇಳುತ್ತಾರೆ. ನಿಮ್ಮ ಮನೆಗೆ ನಿಮಗೆ ಇಷ್ಟವಾಗುವ ಪ್ರಿಯ ಅತಿಥಿ ಬರುತ್ತಾರೆ, ಬೆಳ್ಳಿ ಬಂಗಾರವನ್ನು ಖರೀದಿ ಮಾಡುತ್ತೀರಿ ಇದು ಮುಂದೆ ಒಳ್ಳೆಯ ದಿನಗಳು ಬರುವ ಸೂಚನೆ ಎಂದು ಹೇಳುತ್ತಾರೆ. ಹಾಗೆಯೇ ಪುರುಷರಿಗೆ ಎಡಗಣ್ಣು, ಸ್ತ್ರೀಯರಿಗೆ ಎಡಗಣ್ಣು ಅದಿರಿದರೆ ಒಳ್ಳೆಯ ಸಂಕೇತವೆಂದು ಹೇಳುತ್ತಾರೆ. ನೀವು ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುವಾಗ ಸಾಧು ಸಂತರು ಮತ್ತು ಗೋ ಮಾತೆ ಎದುರಿಗೆ ಕಂಡರೇ ಅವರಿಗೆ ನಮಸ್ಕಾರ ಮಾಡಿ ತೆರಳಿ ಅದು ಶುಭ ಸೂಚಕವಾಗಿದೆ.

Leave a Comment