ನಿಮ್ಮ ಜನ್ಮ ದಿನಾಂಕ 7-16-25 ಆಗಿದ್ದರೆ 2024ರ ವರ್ಷ ನಿಮಗೆ ಯಾವ ಫಲಗಳನ್ನು ಕೊಡುತ್ತದೆ ತಿಳಿಯಿರಿ

0

ನಾವು ಈ ಲೇಖನದಲ್ಲಿ ನಿಮ್ಮ ಜನ್ಮ ದಿನಾಂಕ 7 – 16 – 25 ಆಗಿದ್ದರೆ , 2024ರ ವರ್ಷ ನಿಮಗೆ ಯಾವ ರೀತಿಯ ಫಲಗಳನ್ನು ಕೊಡುತ್ತದೆ. ಎಂದು ತಿಳಿದುಕೊಳ್ಳೋಣ . 7 , 16 , 25 ,ಈ ದಿನಾಂಕದಲ್ಲಿ ನೀವು ಹುಟ್ಟಿದ್ದರೆ , ವಿಶೇಷವಾಗಿ ನಿಮ್ಮ ಮೂಲಾಂಕ ಏಳು ಆಗುತ್ತದೆ . ಇಲ್ಲಿ ಏಳರ ದಿನ ಹುಟ್ಟಿದರೆ , ಮೂಲಾಂಕ 7 ಆಗುತ್ತದೆ. 16 ಕೂಡ 7 ಏಕೆ ಆಗುತ್ತದೆ ಎಂದರೆ , 1 + 6 = 7 ಆಗುತ್ತದೆ. ಇದರ ಜೊತೆಗೆ 25 , 2 + 5 = 7 ಇದು ಕೂಡ ಮೂಲಾಂಕ 7 ಆಗುತ್ತದೆ. ಈ ಒಂದು ಕಾರಣದಿಂದ ನೀವು 7 , 16 , 25 ರಲ್ಲಿ ಹುಟ್ಟಿದ್ದರೆ , ವಿಶೇಷವಾಗಿ 2024ರಲ್ಲಿ ನಿಮಗೆ ಯಾವೆಲ್ಲಾ ಫಲಗಳು ಇರುತ್ತದೆ. ಮತ್ತು ಯಾವೆಲ್ಲ ಕೆಟ್ಟ ಫಲಗಳು ಇರುತ್ತದೆ . ಈ ಲೇಖನದಲ್ಲಿ ತಿಳಿಯಬಹುದು .ವಿಶೇಷವಾಗಿ ಮೊದಲು ನಂಬರ್ 7 ಎಂದು ಬಂದಾಗ ,

ಇದು ಕೇತುವಿನ ಪ್ರತಿನಿಧಿಯಲ್ಲಿ ಬರುವ ಒಂದು ನಂಬರ್ ಆಗುತ್ತದೆ. ಹಾಗೆಯೇ 2024 ಎಂದು ಬಂದಾಗ ಇದು ಶನಿಯ ಒಂದು ನಂಬರ್ ಹಾಗೂ ಶನಿಯ ಪ್ರತಿನಿಧಿಯಲ್ಲಿ ಬರುವ ವರ್ಷ ಕೂಡ ಆಗುತ್ತದೆ . ಈ ಒಂದು ವರ್ಷ ಯಾವ ರೀತಿ ಇರುತ್ತದೆ ಎಂದು ತಿಳಿಯಬೇಕಾದರೆ , ಈ ಎರಡೂ ನಂಬರ್ 7 ಮತ್ತು 8 ಶನಿ ಮತ್ತು ಕೇತುವಿನ ಸಂಬಂಧ ಹೇಗಿರುತ್ತದೆ ಎಂಬುದನ್ನು ತಿಳಿಯಬೇಕಾಗುತ್ತದೆ . ಎರಡು ನಂಬರ್ ನ ಸಂಬಂಧ ನೋಡುವುದಾದರೆ , ಅತ್ತೆ ಸೊಸೆಯರ ಸಂಬಂಧ ಇರುವ ಹಾಗೆ ಇರುತ್ತದೆ .

ಜೊತೆಗೆ ಇದ್ದರೂ ಕೂಡ ಜಗಳವಾಗುತ್ತದೆ . ಜೊತೆಗೆ ಇಲ್ಲ ಅಂದರೂ ಕೂಡ ಆಗುವುದಿಲ್ಲ . ಈ ತರಹದ ಒಂದು ಸಂಬಂಧ ಆಗಿರುತ್ತದೆ . ವಿಶೇಷವಾಗಿ ನಂಬರ್ 7 ಅಂತ ಬಂದಾಗ ತುಂಬಾ ಬುದ್ಧಿವಂತಿಕೆಯನ್ನು ಉಪಯೋಗಿಸುವ ಒಂದು ನಂಬರ್ ಆಗಿರುತ್ತದೆ .ಯಾವುದಾದರೂ ಒಂದು ವಿಷಯ ಅಂತ ಸಿಕ್ಕಿದಾಗ ಅದರ ಬಗ್ಗೆ ತುಂಬಾ ಆಳವಾಗಿ ವಿಚಾರವನ್ನು ಮಾಡುತ್ತಾರೆ .ಆದರೆ 8 ಅಂತ ಬಂದಾಗ ಕರ್ಮಗಳನ್ನು ಮಾಡಿದಾಗ ಆ ಕರ್ಮಗಳಿಗೆ ಫಲವನ್ನು ಕೊಡಲಾಗುತ್ತದೆ .

ಎಂದು ಹೇಳುವ ಆ ನಂಬರ್ 8 ಆಗಿರುತ್ತದೆ .ಅಥವಾ ಶನಿ ಆಗಿರುತ್ತದೆ .ಶನಿಯನ್ನು ಕರ್ಮಫಲ ದಾತ ಎಂದು ಕರೆಯಲಾಗುತ್ತದೆ . ನೀವು ಮಾಡುವ ಕರ್ಮಫಲಕ್ಕೆ ತಕ್ಕಂತೆ ನೀವು ಒಳ್ಳೆಯದನ್ನ ಮಾಡಿದರೆ , ಒಳ್ಳೆಯ ಫಲವೇ ದೊರೆಯುತ್ತದೆ .ಇದು ನಿಮಗೆ 7 ಅಥವಾ 8ರ ವ್ಯತ್ಯಾಸವಾಗಿ ಇರುತ್ತದೆ. .2024ರಲ್ಲಿ ನಿಮಗೆ ಯಾವ ರೀತಿ ಅನುಭವವಾಗುತ್ತದೆ ಎಂದರೆ , ಕೆಲಸವನ್ನು ನೀವು ತುಂಬಾ ಒತ್ತಡದಿಂದ ಮಾಡುತ್ತೀರಾ .ಅಂದರೆ ನಿಮಗೆ ಹಣ ಬೇಕು ಎನ್ನುವ ದೃಷ್ಟಿಯಿಂದ ಕೆಲಸ ಮಾಡುತ್ತೀರಾ .

ಇದನ್ನು ನಿಮ್ಮ ತಲೆಯಿಂದ ಕಿತ್ತು ಹಾಕಬೇಕು .ನೀವು ಜವಾಬ್ದಾರಿಯನ್ನು ನಿರ್ವಹಿಸಬೇಕು ಅನ್ನೋ ಲೆಕ್ಕದಲ್ಲಿ ಕೆಲಸ ಮಾಡಬೇಕು . ಆಸಕ್ತಿಯಿಂದ ನೀವು ಕೆಲಸವನ್ನು ಮಾಡಬೇಕು . ನೀವು ಕೆಲಸ ಮಾಡಬೇಕು ಎಂದು ಮಾಡಿದರೆ , ನಿಮಗೆ ತೊಂದರೆ ಆಗುತ್ತದೆ . ನೀವು ಯಾವುದೇ ಕೆಲಸವನ್ನು ಮಾಡಬೇಕು ಎಂದರೆ , ನಾನು ಸೇವೆಯನ್ನು ಮಾಡುತ್ತಿದ್ದೇನೆ ಅಂತ ಮಾಡಬೇಕಾಗುತ್ತದೆ . ಈ ರೀತಿಯಾಗಿ ಮಾಡುವುದರಿಂದ ನಿಮಗೆ ಈ ವರ್ಷದಲ್ಲಿ ಒಳ್ಳೆಯದಾಗುತ್ತದೆ ಎಂದು ಹೇಳಬಹುದು .

ವಿಶೇಷವಾಗಿ ನೀವು ಯಾವುದೇ ಒಂದು ದಾರಿಯನ್ನು ಹುಡುಕಿಕೊಂಡು ಹೋದರು , ಆ ಪರಿಸ್ಥಿತಿಯಲ್ಲಿ ನಿಮಗೆ ಲಾಭವನ್ನು ಕೊಡಬಹುದು . ನಿಮ್ಮ ಜೀವನದಲ್ಲಿ ನೀವು ಒಳ ದಾರಿಗಳನ್ನು ಹುಡುಕಿಕೊಂಡು ಅದರಿಂದ ಕೆಲಸಗಳನ್ನು ಎಂದಿಗೂ ಮಾಡಬೇಡಿ . ಇದರಿಂದ ಯಾವುದೇ ರೀತಿಯ ಒಳ್ಳೆಯದು ಆಗುವುದಿಲ್ಲ .ಈ ವರ್ಷದಲ್ಲಿ ಯಾವ ಯಾವ ಕ್ಷೇತ್ರದಲ್ಲಿ ಒಳ್ಳೆಯ ಫಲಗಳು ಸಿಗುತ್ತದೆ ಎಂದರೆ , ಅನ್ವೇಷಣೆಯನ್ನು ಮಾಡುವವರಿಗೆ ಒಂದು ಒಳ್ಳೆಯ ವರ್ಷ ಎಂದು ಹೇಳಬಹುದು .

ಶಿಕ್ಷಕ ವೃತ್ತಿಯನ್ನು ಮಾಡುತ್ತಿರುವವರಿಗೆ ಈ ವರ್ಷ ಒಳ್ಳೆಯದು ಎಂದು ಹೇಳಬಹುದು . ಸಿನಿಮಾ ಕ್ಷೇತ್ರದಲ್ಲಿ ಇರುವವರೆಗೂ ಕೂಡ ವರ್ಷದಲ್ಲಿ ತುಂಬಾ ಒಳ್ಳೆಯದು ಆಗುತ್ತದೆ . ಈ ವರ್ಷ ಶನಿಯ ಪ್ರಧಾನತೆಯಲ್ಲಿ ಇರುವ ವರ್ಷ ಆಗಿರುವುದರಿಂದ , ಶನಿ ಒಂದು ಪರೀಕ್ಷೆಯನ್ನು ಮಾಡುತ್ತಾನೆ . ಕೊನೆಯಲ್ಲಿ ಇದರ ಫಲಿತಾಂಶವನ್ನು ನೀಡುತ್ತಾನೆ . ಮೊದಲಿಗೆ ನೀವು ಯಾವ ರೀತಿಯ ಕರ್ಮಗಳನ್ನು ಮಾಡುತ್ತೀರಾ , ಎಂದು ಶನಿ ನೋಡುತ್ತಾನೆ .ಅದಕ್ಕೆ ತಕ್ಕ ಹಾಗೆ ಫಲವನ್ನು ಕೊಡುತ್ತಾನೆ . ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುವುದರಿಂದ ಒಳ್ಳೆಯ ಫಲಗಳು ಸಿಗುತ್ತವೆ ಎಂದು ಹೇಳಬಹುದು .

ಈ ವರ್ಷದಲ್ಲಿ ವ್ಯಾಪಾರ ವ್ಯವಹಾರಗಳನ್ನು ಹೊಸದಾಗಿ ಆರಂಭಿಸಬೇಕು ಎಂದುಕೊಂಡಿದ್ದರೆ , ಸ್ವಲ್ಪ ನಿಧಾನಿಸುವುದು ಒಳ್ಳೆಯದು . ಈ ವರ್ಷದಲ್ಲಿ ಅಂತ ಫಲಗಳು ಆಗುವ ಸಾಧ್ಯತೆ ಇರುವುದಿಲ್ಲ. ಪಾಲುದಾರಿಕೆಯಲ್ಲಿ ಕೆಲಸ ನಿರ್ವಹಿಸಬೇಕು ಎಂದುಕೊಂಡಿದ್ದರೆ , ಅದರಲ್ಲೂ ಕೂಡ ಈ ವರ್ಷದಲ್ಲಿ ಯಶಸ್ಸು ಸಿಗುವುದಿಲ್ಲ . ನಿಮಗೆ ವೈಯಕ್ತಿಕ ಸಂಬಂಧಗಳು ಇದ್ದರೆ , ಅದರಲ್ಲೂ ಕೂಡ ಎಚ್ಚರಿಕೆಯಿಂದ ಇರಬೇಕಾಗುತ್ತದೆ . ನಿಮಗೆ ಮೋಸ ಆಗಬಹುದು ಅಥವಾ ಯಾವುದಾದರೂ ಸಮಸ್ಯೆಗಳು ಉದ್ಭವವಾಗಬಹುದು .

ಈ ಒಂದು ಕಾರಣದಿಂದ ಸಂಬಂಧಗಳ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕಾಗುತ್ತದೆ . ವಿಶೇಷವಾಗಿ ಇದಕ್ಕೆ ಪರಿಹಾರ ಎಂದರೆ , ಅಮೆತಿಸ್ಟ್ ಅನ್ನೋ ಒಂದು ರತ್ನ ಸಿಗುತ್ತದೆ .ರತ್ನವನ್ನು ತೆಗೆದುಕೊಂಡು ನಿಮ್ಮ ವೈಯಕ್ತಿಕ ಡ್ರಾನಲ್ಲಿ ಇಟ್ಟುಕೊಳ್ಳಬಹುದು .ಅಥವಾ ನೀವು ಮನೆಯಲ್ಲಿ ಇಟ್ಟುಕೊಳ್ಳಬಹುದು ಈ ಕಲ್ಲಿನಲ್ಲಿ ಉಂಗುರ ದೊರೆಯುತ್ತದೆ ಅದನ್ನು ಕೂಡ ಹಾಕಿಕೊಳ್ಳಬಹುದು .

ವಿಶೇಷವಾಗಿ ಶನಿಯ ಒಂದು ವರ್ಷ ಆಗಿರುವುದರಿಂದ , ಅಂದರೆ ಹೆಚ್ಚಾಗಿ ನೀವು ತಿಳಿ ಬಣ್ಣದ ಬಟ್ಟೆಗಳನ್ನೇ ಹಾಕಬೇಕು . ಅಂದರೆ ತಿಳಿ ನೀಲಿ ಹಳದಿ ಈ ಬಣ್ಣದ ಬಟ್ಟೆ ಧರಿಸಿದರೆ ಶನಿಯ ಪ್ರಭಾವ ನಿಮ್ಮ ಮೇಲೆ ಕಡಿಮೆ ಆಗುತ್ತದೆ ಎಂದು ಹೇಳಲಾಗಿದೆ . ಕಪ್ಪು ಅಥವಾ ಗಾಢವಾದ ಬಣ್ಣಗಳ ಬಟ್ಟೆಗಳನ್ನು ಧರಿಸಬಾರದು . ಈ ರೀತಿ ಮಾಡುವುದರಿಂದ ಶನಿಯ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದು .

Leave A Reply

Your email address will not be published.