ವಾಷಿಂಗ್ ಮಷೀನ್ ನಲ್ಲಿ ಬಟ್ಟೆ ತುಂಬಾ ಚೆನ್ನಾಗಿ ಕ್ಲೀನ್ ಆಗಲು ಟಿಪ್ಸ್ ಗಳು.

0

ಈಗ ಪ್ರತಿಯೊಂದು ಮನೆಯಲ್ಲಿಯೂ ವಾಷಿಂಗ್ ಮಷೀನ್ ಇದ್ದೇ ಇರುತ್ತದೆ. ಏಕೆಂದರೆ ಕೆಲವರಿಗೆ ಆರೋಗ್ಯ ಸಮಸ್ಯೆ, ಇನ್ನೂ ಕೆಲವರಿಗೆ ಬಟ್ಟೆ ವಾಶ್ ಮಾಡಲು ಸಮಯವಿಲ್ಲದ ಕಾರಣ ಮಷೀನ್ ಇದ್ದರೆ ಸಮಯ ಉಳಿಯುತ್ತದೆ ಎನ್ನುವ ಕಾರಣದಿಂದ ವಾಷಿಂಗ್ ಮಷೀನ್ ಉಪಯೋಗಿಸುವರು.

ಈ ರೀತಿ ಮಷೀನ್ ಗಳಿಂದ ಬಟ್ಟೆ ವಾಶ್ ಮಾಡುವವರ ಸಾಮಾನ್ಯ ಕಂಪ್ಲೇಂಟ್ ಏನೆಂದರೆ ನಮ್ಮ ಬಟ್ಟೆ ನೀಟಾಗಿ ವಾಶ್ ಆಗುತ್ತಿಲ್ಲ. ಹೊಸ ಬಟ್ಟೆಗಳು ಕೂಡ ಒಂದೆರಡು ವಾಶ್ ಗೆ ಫೇಡಾಗಿ ಹಳೆಯ ಬಟ್ಟೆಯ ರೀತಿ ಕಾಣುತ್ತವೆ. ಮತ್ತು ಬಟ್ಟೆಗಳು ಹಾಳಾದ ರೀತಿ ಎನಿಸುತ್ತದೆ. ಇತ್ಯಾದಿ ದೂರುಗಳು ಇದ್ದೆ ಇರುತ್ತದೆ.

ಯಾವ ರೀತಿ ವಾಷಿಂಗ್ ಮಷೀನ್ ನಲ್ಲಿ ಬಟ್ಟೆ ವಾಶ್ ಮಾಡುವುದರಿಂದ ನೀಟಾಗಿ ಸ್ವಚ್ಛವಾಗಿ ಆಗುತ್ತವೆ ಮತ್ತು ಯಾವೆಲ್ಲ ತಪ್ಪು ಮಾಡುವುದರಿಂದ ಯಾವ ಸಮಸ್ಯೆಗಳು ಆಗುತ್ತವೆ. ಇವುಗಳ ಬಗ್ಗೆ ಮಹಿಳೆಯರಿಗೆ ಅನುಕೂಲವಾಗಲಿ ಎಂದು ಈ ಮಾಹಿತಿ ತಿಳಿಸುತ್ತಿದ್ದೇನೆ.

ನೀವು ವಾಷಿಂಗ್ ಮಷೀನ್ ಗೆ ವಾಷಿಂಗ್ ಪೌಡರ್ ಹಾಕುವ ಬದಲು ಲಿಕ್ವಿಡ್ ಬಳಸಿ. ಒಂದು ವೇಳೆ ಪೌಡರ್ ಬಳಸಬೇಕಾದ ಪರಿಸ್ಥಿತಿ ಇದ್ದರೆ ಅದನ್ನು ನೀರಿಗೆ ಹಾಕಿ ಕರಗಿದ ನಂತರ ಮಷೀನಿಗೆ ಹಾಕಿ, ಇಲ್ಲವಾದರೆ ಅದು ಮಷಿನ್ ಕೆಳಗೆ ಸೇರುತ್ತದೆ ಮತ್ತು ಬಟ್ಟೆಗಳಿಗೆ ಪೌಡರ್ ಹತ್ತದೆ ಬಟ್ಟೆಗಳು ಸ್ವಚ್ಛವಾಗುವುದಿಲ್ಲ. ಮತ್ತು ನಂತರದ ದಿನಗಳಲ್ಲಿ ಮಷೀನ್ ಹಾಳಾಗಬಹುದು.

ಹೆಚ್ಚು ಕೊಳೆ ಇರುವ ಬಟ್ಟೆಗಳ ಭಾಗಗಳನ್ನು ಅಂದರೆ ಶರ್ಟ್ ನ ಕಾಲರ್, ಕೈಕಪ್ ಇತ್ಯಾದಿಗಳನ್ನು ಮೊದಲೇ ಕೈಯಿಂದ ಉಜ್ಜಿ ನಂತರ ಸ್ವಲ್ಪ ಒಣಗಿದ ಮೇಲೆ ಮಷೀನ್ ಗೆ ಹಾಕಿ. ತೀರ ತೊಯ್ದಿರುವ ಬಟ್ಟೆಗಳನ್ನು ಮಷೀನ್ ಗೆ ಹಾಕಬೇಡಿ. ಹೀಗೆ ಮಾಡುವುದರಿಂದ ಬಟ್ಟೆಗಳ ತೂಕ ಹೆಚ್ಚಾಗಿ ಮಷೀನ್ ಕೆಡುವ ಸಂಭವವಿರುತ್ತದೆ.

ಬಿಳಿ ಬಟ್ಟೆಗಳನ್ನು ಬೇರೆ ಬಟ್ಟೆಗಳ ಜೊತೆ ವಾಶ್ ಮಾಡಲು ಹಾಕಬೇಡಿ. ಏಕೆಂದರೆ ಅವುಗಳ ಕಲರ್ ಬಿಳಿ ಬಟ್ಟೆಗೆ ಹತ್ತಲುಬಹುದು. ಅದಕ್ಕೆ ಬಿಳಿ ಬಟ್ಟೆಗಳನ್ನು ಸಪರೇಟ್ ವಾಷ್ ಮಾಡಿ. ಆ ಸಮಯದಲ್ಲಿ ಸ್ವಲ್ಪ ಅಡುಗೆ ಸೋಡಾ ಕೂಡ ಹಾಕಿದರೆ ನೀಟಾಗಿ ವಾಷ್ ಆಗುತ್ತದೆ.

ಬಟ್ಟೆಗಳು ಬೆಳ್ಳ ಬೆಳಗ್ಗೆ ಪೌಡರ್ ಹಾಗೆ ಕಾಣಬಾರದು, ಎಂಬ್ರಾಯಿಡರಿ ಕೀಳಬಾರದು, ಜಿಪ್ ಮತ್ತು ಬಟನ್ ಹಾಳಾಗಬಾರದು ಎಂದರೆ ಯಾವಾಗಲೂ ಬಟ್ಟೆಯನ್ನು ಉಲ್ಟಾ ಮಾಡಿ ವಾಶ್ ಮಾಡಲು ಹಾಕಬೇಕು. ಇದರಿಂದ ಮಷಿನ್ ಸದ್ದು ಕಡಿಮೆಯಾಗುತ್ತದೆ.

ಕಾಟನ್ ಬಟ್ಟೆಗಳಿಗೆ ಡಾರ್ಕ್ ವಾಶ್, ಕ್ಲಿಕ್ ವಾಶ್, ಬ್ಲಾಂಕೆಟ್, ಬೆಡ್ ಶೀಟ್ ಗಳಿಗೆ ಸಪರೇಟ್ ಆಪ್ಷನ್ ಇರುತ್ತದೆ. ಆ ಪ್ರಕಾರವಾಗಿ ಸೆಟ್ ಮಾಡಿಕೊಂಡು ವಾಶ್ ಮಾಡಿದರೆ ಚೆನ್ನಾಗಿ ವಾಶ್ ಆಗುತ್ತದೆ ಮತ್ತು ಮಷೀನ್ ತುಂಬಾ ದಿನ ಬಾಳಿಕೆ ಬರುತ್ತದೆ.

ಒಂದೇ ಬಾರಿಗೆ ಲೋಡ್ ಫುಲ್ ಬಟ್ಟೆಗಳನ್ನು ಹಾಕುವುದರಿಂದ ಬಟ್ಟೆ ಸ್ವಚ್ಛ ಆಗುವುದಿಲ್ಲ. ಅಂದಾಜು 6-6.5 ಕೆಜಿ ಮಷೀನ್ ಗೆ 70% ರಷ್ಟು ಅಂದರೆ ಆರು ಜೊತೆ ಬಟ್ಟೆ ಹಾಕಿ ಅದು ಚೆನ್ನಾಗಿ ತಿರುಗಲು (ರೋಟೆಟ್) ಸ್ಪೇಸ್ ಕೊಡಬೇಕು. ಆಗ ಬಟ್ಟೆ ನೀಟಾಗಿ ವಾಶ್ ಆಗುತ್ತದೆ.

ಮೊದಲೇ ಲಿಕ್ವಿಡ್ ಹಾಕಿ ಬಟ್ಟೆ ಹಾಕಿ ವಾಶ್ ಮಾಡುವುದಕ್ಕಿಂತ, ಮೊದಲು ಬಟ್ಟೆ ಹಾಕಿ ನಂತರ ಮಷೀನ್ ಸ್ಟಾರ್ಟ್ ಮಾಡಿ ನೀರು ಬರಲು ಸ್ಟಾರ್ಟ್ ಆದ ನಂತರ ಲಿಕ್ವಿಡ್ ಹಾಕುವುದರಿಂದ ಲಿಕ್ವಿಡ್ ಚೆನ್ನಾಗಿ ಬಟ್ಟೆಗಳ ಜೊತೆ ಸೇರಿಕೊಂಡು ನೀಟಾಗಿ ವಾಶ್ ಆಗುತ್ತದೆ.

ಕರ್ಟನ್ ಗಳನ್ನು ವಾಶ್ ಮಾಡುವಾಗ ಅವುಗಳ ರಿಂಗ್ ತೆಗೆದು ಹಾಕಿ. ಇಲ್ಲದಿದ್ದರೆ ರಿಂಗ್ ಇರುವ ಕಡೆ ಪ್ಲಾಸ್ಟಿಕ್ ಇದ್ದರೆ ಕಟ್ಟಾಗುತ್ತದೆ. ಇಲ್ಲವಾದರೆ ರಿಂಗುಗಳನ್ನೆಲ್ಲ ಸೇರಿಸಿ ದಾರವನ್ನು ಕಟ್ಟಿ ವಾಷ್ ಮಾಡಲು ಹಾಕಿ.

ಹೊಸ ಬಟ್ಟೆಗಳನ್ನು ಒಂದೇ ಬಾರಿಗೆ ಮಷೀನಿಗೆ ಹಾಕುವುದು ತಪ್ಪು. ಮೊದಲು ಅದನ್ನು ಕೈಯಲ್ಲಿ ಒಮ್ಮೆ ವಾಶ್ ಮಾಡಿ ನೋಡಿ. ಬಣ್ಣ ಹೋಗಲಿಲ್ಲ ಎಂದರೆ ನೆಕ್ಸ್ಟ್ ಟೈಮ್ ವಾಷಿಂಗ್ ಮಷೀನಿಗೆ ಹಾಕಿ. ಇಲ್ಲವಾದಲ್ಲಿ ಅದು ಬಣ್ಣ ಹೋಗುವ ಬಟ್ಟೆಯಾಗಿದ್ದರೆ ಮಷೀನ್ ಗೆ ಹಾಕಿರುವ ಎಲ್ಲಾ ಬಟ್ಟೆಗಳಿಗೂ ಬಣ್ಣ ಅಂಟಿಕೊಳ್ಳುತ್ತದೆ.

ಬಟ್ಟೆಗಳಲ್ಲಿ ವಾಶ್ ಕೇರ್ ಲೇಬಲ್ ಇರುತ್ತದೆ. ಅದರಲ್ಲಿ ಸೂಚಿಸಿರುವ ಡೀಟೇಲ್ಸ್ ಅನ್ನು ತಿಳಿದುಕೊಂಡು ಬಟ್ಟೆಯನ್ನು ವಾಶ್ ಮಾಡಲು ಹಾಕಿದರೆ ಬಟ್ಟೆ ಹಾಳಾಗುವುದಿಲ್ಲ.

Leave A Reply

Your email address will not be published.