ನಿಮಗೆ ದೇಹದ ಈ ಭಾಗದಲ್ಲಿ ಮಚ್ಚೆ ಇದ್ದರೆ ಅದೃಷ್ಟ ಗ್ಯಾರಂಟಿ

0

ನಿಮಗೆ ದೇಹದ ಈ ಭಾಗದಲ್ಲಿ ಮಚ್ಚೆ ಇದ್ದರೆ ಅದೃಷ್ಟ ಗ್ಯಾರಂಟಿ. ಸಾಮುದ್ರಿಕ ಶಾಸ್ತ್ರದ ಪ್ರಕಾರ ಶರೀರದ ಹಲವು ಭಾಗಗಳಲ್ಲಿ ಇರುವ ಮಚ್ಚೆಗಳು ಆ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಸುತ್ತವೆಯಂತೆ. ಆದರೆ ಕೆಲವರಿಗೆ ಅವರ ಮುಖದ ಮೇಲಿರುವ ಕೆಲವು ಮಚ್ಚೆಗಳು ಅವರ ಅದೃಷ್ಟದ ಬಗ್ಗೆ ತಿಳಿಸುತ್ತವೆ. ಹಾಗಾಗಿ ಯಾವ ಮಚ್ಚೆಗಳಿಂದ ಯಾವ ರೀತಿಯ ಅದೃಷ್ಟ ಅನ್ನೋದನ್ನ ಇಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಕೆಲವರ ಶರೀರದಲ್ಲಿ ಹುಟ್ಟಿನಿಂದಲೇ ಕೆಲವು ಗುರುತುಗಳು ಇರುತ್ತವೆ.

ಈ ಗುರುತುಗಳನ್ನು ಜನ್ಮ ಗುರುತುಗಳು ಅಂತ ಹೇಳಲಾಗುತ್ತೆ. ಶರೀರದ ಮೇಲಿರುವ ಈ ಮಚ್ಚೆಗಳು ವ್ಯಕ್ತಿಯ ಬಗ್ಗೆ ಅನೇಕ ವಿಚಾರಗಳನ್ನ ತೆರೆದಿಡತ್ತೆ. ಮಚ್ಚೆ ಯಾವ ಭಾಗದಲ್ಲಿದೆ ಅನ್ನೋದರ ಮೇಲೆ ಶುಭ ಅಶುಭ ಅನ್ನೋದನ್ನು ತಿಳಿಯಬಹುದು. ಸಾಮುದ್ರಿಕ ಶಾಸ್ತ್ರದ ಪ್ರಕಾರ ವ್ಯಕ್ತಿಯ ಭವಿಷ್ಯ ಮತ್ತು ವರ್ತಮಾನಗಳ ವಿಷಯಗಳನ್ನು ತಿಳಿಯಬಹುದು. ಅದಾಗಿಯೂ ಪ್ರತಿಯೊಂದು ಗುರುತು ನಿಮ್ಮ ಅದೃಷ್ಟ ಮತ್ತು ದುರಾದೃಷ್ಟವನ್ನು ಪ್ರತಿನಿಧಿಸುವುದಿಲ್ಲ.

ಪ್ರತಿಯೊಂದು ಗುರುತು ತನ್ನದೇ ಆದ ಮಹತ್ವವನ್ನು ಹೊಂದಿರುತ್ತದೆ. ಹಾಗಾಗಿ ನಿಮ್ಮ ಮುಖದ ಮೇಲಿರುವ ಮಚ್ಚೆ ಏನನ್ನು ಸೂಚಿಸುತ್ತದೆ ಎನ್ನುವ ಮಾಹಿತಿಯನ್ನ ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ. ವ್ಯಕ್ತಿಯ ಮುಖದ ಮೇಲೆ ಹುಟ್ಟಿನಿಂದಲೇ ಮಚ್ಚೆ ಇದ್ದರೆ ವ್ಯಕ್ತಿಯು ತುಂಬಾ ಭಾವುಕನಾಗಿರುತ್ತಾನೆ ಅಂತ ಅರ್ಥ. ಅದೇ ಸಮಯದಲ್ಲಿ ಅಂತಹ ಜನರು ತುಂಬಾ ಮಾತನಾಡ್ತಾರೆ.

ಮುಖದಲ್ಲಿ ಗುರುತು ಇರುವವರಿಗೆ ಹಣದ ಕೊರತೆ ಇರೋದಿಲ್ಲ. ಇನ್ನು ಒಬ್ಬ ವ್ಯಕ್ತಿಯ ಹಣೆಯಲ್ಲಿ ಜನ್ಮ ಮಚ್ಚೆ ಇದ್ದರೆ ಆ ವ್ಯಕ್ತಿಯು ತುಂಬಾ ತೀಕ್ಷ್ಣವಾದ ಮನಸ್ಸನ್ನು ಹೊಂದಿರುತ್ತಾನೆ. ಅಂತಹ ಜನರು ವೃತ್ತಿ ಮತ್ತು ವ್ಯವಹಾರ ಎರಡರಲ್ಲೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆ. ಅಂತಹ ಜನರು ಸಾಕಷ್ಟು ಗೌರವವನ್ನು ಗಳಿಸುತ್ತಾರೆ ಮತ್ತು ಅವರ ಜನಪ್ರಿಯತೆ ಕೂಡ ಹೆಚ್ಚಾಗಿರುತ್ತೆ. ಇನ್ನು ಒಬ್ಬ ವ್ಯಕ್ತಿಯ ಹಣೆಯ ಮಧ್ಯದಲ್ಲಿ ಜನ್ಮ ಮಚ್ಚೆ ಇದ್ದರೆ ಅಂದ್ರೆ ಹುಟ್ಟಿನಿಂದಲೇ ಮಚ್ಚೆ ಇದ್ದರೆ ಅಂತಹ ವ್ಯಕ್ತಿಯು ತುಂಬಾ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾನೆ.

ಅಂತಹ ಜನರ ಕಡೆಗೆ ಜನರು ಬೇಗನೆ ಆಕರ್ಷಿತರಾಗುತ್ತಾರೆ. ಆದ್ದರಿಂದ ಇವರು ಅನೇಕ ಸಂಬಂಧಗಳನ್ನು ಹೊಂದಬಹುದು. ಅದಾಗಿಯೂ ಈ ಜನರು ಎಲ್ಲರನ್ನ ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಹಾಗಾಗಿ ಅವರ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ. ಇನ್ನು ಯಾರಿಗಾದರೂ ಕುತ್ತಿಗೆಯ ಮೇಲೆ ಜನ್ಮ ಗುರುತು ಇದ್ದರೆ ನೀವು ಜೀವನದಲ್ಲಿ ದೊಡ್ಡ ಯಶಸ್ಸನ್ನು ಸಾಧಿಸಲಿದ್ದೀರಿ ಅಂತ ಅರ್ಥ. ಅದಾಗಿಯೂ ನೀವು ಸ್ವಲ್ಪ ಕಡಿಮೆ ಭಾವನಾತ್ಮಕವಾಗಿ ಇದ್ದರೆ ಮಾತ್ರ ಇದು ಸಾಧ್ಯ.

ಮತ್ತೊಂದು ಕಡೆ ಒಬ್ಬ ವ್ಯಕ್ತಿಯು ಕತ್ತಿನ ಹಿಂಭಾಗದಲ್ಲಿ ಜನ್ಮ ಗುರುತು ಹೊಂದಿದ್ರೆ ವ್ಯಕ್ತಿಯು ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುತ್ತಾನೆ ಅಂತ ಅರ್ಥ. ಅಂತಹ ಜನರು ಹೆಚ್ಚು ಕೋಪಗೊಳ್ಳುತ್ತಾರೆ, ಮಂಗೋಪಿಗಳಾಗಿರುತ್ತಾರೆ. ಇನ್ನು ನಿಮ್ಮ ಕೆನ್ನೆಯ ಮೇಲೆ ಜನ್ಮ ಗುರುತು ಇದ್ದರೆ ನೀವು ತುಂಬಾ ಉತ್ಸುಕರಾಗಿರುತ್ತೀರಿ ಅಂತ ಅರ್ಥ.

ಅಷ್ಟೇ ಅಲ್ಲದೇ ನಿಮ್ಮ ಗುರಿಗಳನ್ನು ಸಾಧಿಸುವಲ್ಲಿ ನೀವು ತುಂಬಾ ಸಕ್ರಿಯವಾಗಿ ನಿರ್ಬಂಧಿಸಲ್ಪಡ್ತೀರಿ ಅನ್ನುವ ಅರ್ಥವನ್ನು ಹೊಂದಿರತ್ತೆ. ಮನುಷ್ಯನ ಬಲ ಕೆನ್ನೆಯ ಮೇಲೆ ಜನ್ಮ ಗುರುತು ಇದ್ದರೆ ಅಂತಹ ವ್ಯಕ್ತಿಯು ಆರ್ಥಿಕ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಅನ್ನುವ ಅರ್ಥವನ್ನು ಹೊಂದಿರುತ್ತೆ. ಮತ್ತೊಂದು ಕಡೆ ಮಹಿಳೆ ತನ್ನ ಬಲ ಕೆನ್ನೆಯ ಮೇಲೆ ಜನ್ಮ ಗುರುತನ್ನು ಹೊಂದಿದ್ದರೆ ಅಂತಹ ಮಹಿಳೆ ತುಂಬಾ ಗೌರವಾನ್ವಿತ ಗಂಡನನ್ನು ಮದುವೆಯಾಗುತ್ತಾಳೆ ಅನ್ನೋ ಅರ್ಥ. ನೀವು ನಿಮ್ಮ ಪತಿಯೊಂದಿಗೆ ವೈವಾಹಿಕ ಜೀವನವನ್ನು ಆನಂದಿಸುತ್ತೀರಿ ಅನ್ನೋದನ್ನ ಕೂಡ ಈ ಮಚ್ಚೆ ತೋರಿಸುತ್ತದೆ.

Leave A Reply

Your email address will not be published.