ಕನಸುಗಳ ಫಲ ಅಥವಾ ಅರ್ಥ

ಕನಸುಗಳ ಫಲ ಅಥವಾ ಅರ್ಥ ಹಣ್ಣುಗಳು- ಸಂತಾನಲಾಭ (ಕಂಡವರಿಗೆ ಅಥವಾ ಹತ್ತಿರದ ಸಂಬಂಧಿಗಳಿಗೆ)
ಹೆಣ- ದೀರ್ಘಾಯುಷ್ಯ ಕನ್ನಡಿ- ಧನಲಾಭ, ಚಿನ್ನಕೊಳ್ಳುವಿಕೆ ಅಲಂಕೃತಳಾದ ಸ್ತ್ರೀ- ಲಕ್ಷ್ಮೀಕಟಾಕ್ಷ
ಪೂಜೆ ಮಾಡುವುದು- ಸಾಲಬಾಧೆಯಿಂದ ಪರಿಹಾರ ಮೊಸರು- ಧನಲಾಭ ತುಪ್ಪ – ಹಿಡಿದ ಕೆಲಸದಲ್ಲಿ ಅಭಿವೃದ್ಧಿ ಯಶಸ್ಸು ಹಾವು ಬಲಗೈಗೆ ಕಚ್ಚಿದರೆ – ಶುಭ

ಹಾವು ಸುಮ್ಮನೆ ಕಾಣಿಸಿದರೆ- ಋಣ ಬಾಧೆ ಎಣ್ಣೆಯ ಪದಾರ್ಥ, ಹಿಂಡಿ, ಕಬ್ಬಿಣದ ವಸ್ತು- ವಿಪರೀತ ತೊಂದರೆ ಊಟ ಮಾಡುವುದನ್ನು ನೋಡಿದರೆ – ಮರಣದ ಸುದ್ದಿ ಬಂಗಾರ ಕಂಡರೆ – ದಾರಿದ್ರ್ಯದ ಸೂಚನೆ ಅಂತರಿಕ್ಷದಲ್ಲಿ ಅಥವಾ ವಿಮಾನದಲ್ಲಿ ಹಾರಾಡುತ್ತಿದ್ದಂತೆ ಕನಸು ಬಿದ್ದರೆ – ಸ್ಥಾನ, ಕೆಲಸ ಕಳೆದು ಹೋಗಬಹುದು.

ಎಣ್ಣೆ ಸ್ನಾನ ಮಾಡುವುದು ನೋಡಿದರೆ – ಮರಣದ ಸೂಚನೆ ಮಳೆ ಸುರಿಯುವುದು ಕಂಡರೆ – ಪ್ರಯಾಣ ಯೋಗ ಹಾಡುವುದು ಕಂಡರೆ – ಸಾಲ ಬಾಧೆ ಯಾರಾದರೂ ಹಾಸ್ಯ ಮಾಡುವುದು ಕಂಡರೆ – ಜಗಳದ ಸೂಚನೆ ವಿಗ್ರಹಗಳು ನಾಶವಾದಂತೆ ಕಂಡರೆ- ಮನೆಯಲ್ಲಿ ಕೆಟ್ಟ ಘಟನೆ ಸಂಭವ ಬಿಳಿ ಬಣ್ಣದ ಎತ್ತು,

ಕಮಲದ ಹೂವು, ಗುರುಗಳು, ಸಾಧುಗಳು – ಸುಖ ವೃದ್ಧಿಯಾಗುವುದು. ಉತ್ತಮ ಬೆಳೆ/ಕಾಳಿನ ರಾಶಿ ಕಂಡರೆ – ಉತ್ತಮ ದಿನಗಳು ಬರುವ ಸೂಚನೆ. ಸೂರ್ಯ ಚಂದ್ರ ಕಂಡರೆ – ರೋಗಿಗಳಿಗೆ ಉತ್ತಮ. ಹಗ್ಗದಿಂದ ಕಟ್ಟಿದ ಹಾಗೆ ಕನಸು ಬಿದ್ದರೆ- ಧನಪ್ರಾಪ್ತಿ ನಕ್ಷತ್ರಗಳು ಕಂಡರೆ – ಸರ್ವಸಿದ್ದಿ

Leave a Comment