ಕುಂಭರಾಶಿಯವರು ಯಾರ ಮಾತು ಕೇಳೋದಿಲ್ಲ!

ದ್ವಾದಶ ರಾಶಿಗಳ ಪಟ್ಟಿಯಲ್ಲಿ 11ನೇ ರಾಶಿ ಕುಂಭ ರಾಶಿ.ಎಲ್ಲಾ ವಿಷಯಗಳನ್ನು ವಿಶೇಷವಾಗಿರುವುದು ಈ ಕುಂಭ ರಾಶಿಯವರ ಲಕ್ಷಣವಾಗಿದೆ. ಮಾನವೀಯತೆಯ ನಿಜವಾದ ಅರ್ಥವನ್ನು ಪ್ರತಿಬಿಂಬಿಸುವುದೇ ಈ ರಾಶಿ. ಇವರು ಆಧುನಿಕತೆ ಮತ್ತು ಸ್ವಾತಂತ್ರ್ಯವನ್ನು ಪ್ರೀತಿಸುತ್ತಾರೆ. ಒಳ್ಳೆಯ ಹಾಸ್ಯಗಾರರು ಹಾಗೂ ಸ್ವಭಾವತಹ ಸಂತೋಷ ಚಿತ್ತರಾದ ಇವರು ನಿಮ್ಮನ್ನು ಮೋಡಿ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಕುಂಭ ರಾಶಿಯ ಅಂಶ ಗಾಳಿ ಆಳುವ ಗ್ರಹ ಶನಿ ಹಾಗೂ ಯುರೇನಸ್.

ಬಣ್ಣ ತಿಳಿ ನೀಲಿ ಹಾಗೂ ಬೆಳ್ಳಿಯ ಬಣ್ಣ. ಗುಣ ಸ್ಥಿರ, ದಿನ ಶನಿವಾರ. ಅತ್ಯುತ್ತಮವಾಗಿ ಹೊಂದಿಕೆಯಾಗುವ ರಾಶಿಗಳು ಎಂದರೆ ಧನು ಮತ್ತು ಸಿಂಹ ರಾಶಿ. ಅದೃಷ್ಟ ಸಂಖ್ಯೆ 8 4 7 11 22 29. ಈ ರಾಶಿಯ ಚಿನ್ಹೆ ಬುದ್ದಿವಂತಿಕೆ ಮತ್ತು ಸ್ವಾತಂತ್ರ್ಯವನ್ನು ಸೂಚಿಸುತ್ತದೆ. ಇವರು ಬಂಡಾಯಗಾರರು ಮಾತ್ರವಲ್ಲದೆ ಸೃಜನ ಶೀಲರು ಕೂಡ ಆಗಿರುತ್ತಾರೆ. ಇವರು ಭಾವುಕರು ಕೂಡ ಆಗಿರುತ್ತಾರೆ. ಹಾಗೆಯೇ ಭಾವನೆಗಳನ್ನು ಕೂಡ ಹಿಡಿತದಲ್ಲಿ ಇಟ್ಟುಕೊಳ್ಳುವವರು.

ಇವರ ಮನಸ್ಸು ಇತರರಿಗೆ ಅರ್ಥವಾಗದ ರೀತಿಯಲ್ಲಿ ಇರುತ್ತದೆ. ಇವರು ತಮ್ಮ ನಿಜವಾದ ಭಾವನೆಗಳನ್ನು ತೋರ್ಪಡಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಗಂಭೀರವಾಗಿರುವ ಇವರು ಚಿಂತನಾಶೀಲರಾಗಿರುತ್ತಾರೆ. ಬುದ್ಧಿವಂತರಾದ ಇವರು ಆರ್ಥಿಕವಾಗಿ ಮತ್ತು ಪ್ರಾಯೋಗಿಕವಾಗಿ ಇರುತ್ತಾರೆ. ಇವರು ತಮ್ಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವಾಗ ತುಂಬಾ ಆಲೋಚನೆಯನ್ನು ಮಾಡುತ್ತಾರೆ.

ಕಠಿಣ ಶ್ರಮ ಜೀವಿಗಳು. ಸಂಘಟನಾ ಸಾಮರ್ಥ್ಯ ಇರುವ ಇವರು ಚಾಣಾಕ್ಷ ರಾಗಿದ್ದು ಸದಾ ಎಚ್ಚರದಿಂದ ಇರುತ್ತಾರೆ. ಸ್ವಂತ ಆಲೋಚನೆಗಳನ್ನ ಮಾಡಿ ಹೊಸದನ್ನ ಮಾಡಲು ಪ್ರಯತ್ನಿಸುತ್ತಾರೆ. ಕುಂಭ ರಾಶಿಯವರು ಬುದ್ಧಿವಂತರಾಗಿರುವುದರಿಂದ ವಿದ್ಯಾವಂತ ಮತ್ತು ತಮ್ಮಷ್ಟೇ ಬುದ್ಧಿವಂತರನ್ನು ಸಂಗಾತಿಯಾಗಿ
ಬಯಸುತ್ತಾರೆ. ಇವರು ಶಾಶ್ವತ ಮತ್ತು ಬಲವಾದ ಸಂಬಂಧಗಳನ್ನು ಮಾತ್ರ ಬಯಸುತ್ತಾರೆ. ಕುಂಭ ರಾಶಿಯವರು ತಮ್ಮ ಸಂಗಾತಿಯ ಮೇಲೆ ಇರುವ ಪ್ರೀತಿಯನ್ನು ಎಂದಿಗೂ ತೋರಿಸಿಕೊಳ್ಳುವುದಿಲ್ಲ.

ಇವರನ್ನು ಪ್ರೀತಿಸುವವರು ಕೂಡ ಉದಾತ್ತಾ ಪ್ರಾಮಾಣಿಕ ಗುಣವನ್ನು ಹೊಂದಿರುತ್ತಾರೆ. ಕುಂಭ ರಾಶಿಯವರನ್ನು ಮದುವೆಯಾಗುವವರು ಅವರಲ್ಲಿ ಮಾನವೀಯತೆ, ಸಹಾನುಭೂತಿ, ಕಾಳಜಿ, ಉದಾತತೆಯನ್ನು ಕಾಣುತ್ತಾರೆ. ಪ್ರತಿದಿನ ಒಂದೇ ರೀತಿ ಇರುವುದಿಲ್ಲ ಜೀವನದಲ್ಲಿ ಸಾಹಸಿಯಾಗಿ ಇರಲು ಬಯಸುತ್ತಾರೆ. ದೃಢ ವಿಶ್ವಾಸದೊಂದಿಗೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಆರೋಗ್ಯ ವಿಷಯಕ್ಕೆ ಬಂದರೆ ಕುಂಭ ರಾಶಿಯವರು ಸೋಂಕು ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಾರೆ.

ಇವರು ಅತಿಯಾಗಿ ಕೆಲಸ ಮಾಡುವುದರಿಂದ ವಿಶ್ರಾಂತಿ ತೆಗೆದುಕೊಳ್ಳುವುದು ಮುಖ್ಯವಾಗಿರುತ್ತದೆ. ಹೃದಯದ ಸಮಸ್ಯೆ ಕಾಣಿಸಿಕೊಳ್ಳಬಹುದು. ಸಂಧಿವಾತ, ರಕ್ತದೊತ್ತಡದಂತಹ ಸಮಸ್ಯೆಗಳು ಇವರನ್ನ ಕಾಡಬಹುದು. ಹಲ್ಲು, ಗಂಟಲು, ಕಾಲುಗಳ ಊತ, ಕಾಲು ನೋವು ಮತ್ತು ಕಿವಿಗೆ ಸಂಬಂಧಪಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. 6ನೇ ಮನೆ ಅಧಿಪತಿ ಆಗಿರುವ ಚಂದ್ರನು ಸಾಮಾನ್ಯ ಕಾಯಿಲೆಗಳಿಗೆ ಕಾರಣನಾಗುತ್ತಾನೆ. ಗ್ರಹಗಳ ಸ್ಥಾನದಿಂದ ಧನಿಷ್ಠ ನಕ್ಷತ್ರದವರಿಗೆ ಜ್ವರ ಮಲೇರಿಯಾ ಅಧಿಕ ರಕ್ತದೊತ್ತಡ,ಮೂಳೆ ಮುರಿತ, ಅಪಾಯಗಳು ಕಾಡಬಹುದು.

ಶತಭಿಷ ನಕ್ಷತ್ರದವರಿಗೆ ಜೀರ್ಣಕ್ರಿಯೆ ಸಮಸ್ಯೆ ರಕ್ತದೊತ್ತಡ, ನಿದ್ರಾ ಹೀನತೆ ಮತ್ತು ಮಲಬದ್ಧತೆ ಎದುರಾಗಬಹುದು. ಪೂರ್ವ ಭಾದ್ರ ನಕ್ಷತ್ರದವರಾಗಿದ್ದಲ್ಲಿ ರಕ್ತ ಪರಿಚಲನೆಯ ಸಮಸ್ಯೆ, ಚರ್ಮದ ಸಮಸ್ಯೆ ಮತ್ತು ಬಾಯಲ್ಲಿ ಅಲ್ಸರ್ ನಂತಹ ಸಮಸ್ಯೆಗಳು ಕಾಡಬಹುದು. ಶುಕ್ರನು ಭಾದಕ ಸ್ಥಾನದಲ್ಲಿದ್ದು ಎರಡನೆಯ ಮತ್ತು 7ನೇ ಸ್ಥಾನದಲ್ಲಿ ಮಾರಕನಾಗಿ ಗುರು ಮತ್ತು ಸೂರ್ಯನ ಅಧಿಪತ್ಯವೂ ದೀರ್ಘಾಯುಷ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಕುಂಭ ರಾಶಿಯವರಿಗೆ 8 ಉತ್ತಮವಾದ ಸಂಖ್ಯೆ.

ಕುಂಭ ರಾಶಿಯವರಿಗೆ ಸಮಶೀತೋಷ್ಣ ವಾದ ವಾತಾವರಣ ಸೂಕ್ತವಾಗಿರುತ್ತದೆ. ಕುಂಭ ರಾಶಿಯವರಿಗೆ ತೊಂದರೆ ಮಾಡುವ ಜಾಗಗಳು ಎಂದರೆ ಕಾಲು ಮತ್ತು ಕಿವಿ. ಕುಂಭ ರಾಶಿಯವರು ಹುಟ್ಟಿನಿಂದಲೇ ಬುದ್ಧಿವಂತರು, ಸಿಡುಕು ಸ್ವಭಾವದವರು. ಕುಂಭ ರಾಶಿಯವರಿಗೆ ಆಸೆ ಮತ್ತು ಊಟ ಹೆಚ್ಚು ಪ್ರಿಯವಾಗಿರುತ್ತದೆ. ಕುಂಭ ರಾಶಿಯವರಿಗೆ ಇಷ್ಟವಾದ ಉದ್ಯೋಗಗಳು ಪೈಲೆಟ್ ಚಾಲಕ ವೃತ್ತಿ ಮತ್ತು ಟ್ರಾನ್ಸ್ಪೋರ್ಟ್ ಬ್ಯುಸಿನೆಸ್. ಇವರು ಇಷ್ಟಪಡುವ ರುಚಿ ಉಪ್ಪು ಮತ್ತು ಖಾರ.

ಎರಡನೇ ಮನೆಯ ಅಧಿಪತಿ ಗುರುವಿನಿಂದಾಗಿ ರಾಶಿಯವರು ವಿಜ್ಞಾನಿಗಳು, ಉತ್ತಮ ಕಾರ್ಯನಿರ್ವಾಹಕರು ಮತ್ತು ದೊಡ್ಡ ಕಂಪನಿಯಲ್ಲಿ ಸ್ಥಾನವನ್ನು ಪಡೆಯುವವರಾಗಿರುತ್ತಾರೆ. ಕೆಲವರು ಉಪನ್ಯಾಸಕರು, ಜ್ಯೋತಿಷಿಗಳು, ಕಾನೂನು, ಹಣಕಾಸು,ಶಿಕ್ಷಣ ಸಲಹೆಗಾರರು ಆಗಬಹುದು. 6ನೇ ಮನೆ ಅಧಿಪತಿ ಚಂದ್ರನ ಸ್ಥಾನದಿಂದಾಗಿ ಔಷಧ ವಲಯ, ಸಾಮಾಜಿಕ ಸೇವೆ, ಅಡಗಿನಲ್ಲಿ ಸಾಗಾಣೆ ಮತ್ತು ರಫ್ತು ವ್ಯವಹಾರ ನಾವಿಕರು, ದ್ರವಗಳ ರಫ್ತು,ಆಮದು ಮಾಡುವ ಸಾಧ್ಯತೆ ಇರುತ್ತದೆ.

ಅಧಿಪತಿ ಮಂಗಳ ನಿಂದಾಗಿ ಇವರು ನಿರ್ಮಾಣ ಕಾರ್ಯ ರಾಸಾಯನಿಕ ಕಂಪನಿ ಕೆಲಸ, ಮೆಕಾನಿಕಲ್ ಇಂಜಿನಿಯರ್,ಇಟ್ಟಿಗೆ ಗೂಡು ಮಾಲೀಕರು, ಶಸ್ತ್ರ ಚಿಕಿತ್ಸಕರು,ಉಕ್ಕಿನ ವ್ಯಾಪಾರ ಅಥವಾ ಸಿಐಡಿ ಅಧಿಕಾರಿಯೂ ಆಗಿರಬಹುದು. ಬುದ್ಧಿವಂತಿಕೆಯಲ್ಲಿ ಇತರರನ್ನ ಆಶ್ಚರ್ಯ ಚಕಿತರನ್ನಾಗಿ ಮಾಡುತ್ತಾರೆ. ಇವರು ನೀವು ನಂಬಲಾಗದಷ್ಟು ವಿಶಾಲ ಮನಸ್ಸಿನವರು ಹಾಗೂ ಮುಕ್ತ ಸ್ವಭಾವದವರು. ಇವರು ಇತರರ ಮಾತನ್ನು ಕೇಳುವುದಿಲ್ಲ.

ಬೇರೆಯವರನ್ನು ನಂಬುವುದಿಲ್ಲ, ಇವರು ದುಃಖ ಖಿನ್ನತೆ ಆಕ್ರೋಶ ಎಲ್ಲವನ್ನು ಒಂದೇ ಬಾರಿ ಹೊರ ಹಾಕುತ್ತಾರೆ. ವಿಶಾಲ ಮನೋಭಾವನೆ ಉಳ್ಳವರು ಆಗಿದ್ದರು ಕೂಡ ತಮ್ಮ ಸ್ವಭಾವದಲ್ಲಿ ಹಠಮಾರಿಯಾಗಿರುತ್ತಾರೆ. ತಮ್ಮ ಅಭಿಪ್ರಾಯಗಳ ಬಗ್ಗೆ ತುಂಬಾ ಹಠಮಾರಿಯಾಗಿರುತ್ತಾರೆ. ಕುಂಭ ಲಗ್ನದಲ್ಲಿ ಹುಟ್ಟಿರುವವರು ತೆಳ್ಳಗಿನ ಶರೀರ ಮತ್ತು ಸುಂದರವಾದ ಮುಖವನ್ನು ಹೊಂದಿರುತ್ತಾರೆ. ತುಂಬಾ ಬಲಶಾಲಿಗಳು, ಇನ್ನೊಬ್ಬರ ಮನಸ್ಸನ್ನು ಅರ್ಥ ಮಾಡಿಕೊಳ್ಳುವವರು ಆಗಿರುತ್ತಾರೆ.

ಹೊಸ ಹೊಸ ವಿಷಯಗಳನ್ನು ಕಂಡುಹಿಡಿಯುತ್ತಾರೆ. ಕುಂಭ ಲಗ್ನದಲ್ಲಿ ಹುಟ್ಟಿರುವವರು ಇಂಜಿನಿಯರ್ ಗಳು ಮತ್ತು ಹೆಚ್ಚು ಆಸ್ತಿಯನ್ನು ಹೊಂದಿರುತ್ತಾರೆ. ಆಡಳಿತ ತಜ್ಞರು ಮತ್ತು ಉನ್ನತ ವ್ಯಾಸಂಗದಲ್ಲಿ ತಲ್ಲಿನರಾಗಿರುತ್ತಾರೆ. ಈ ಲಗ್ನದವರಿಗೆ ವಜ್ರ, ರೂಬಿ, ಪುಷ್ಯ ರಾಗ ಒಳ್ಳೆಯದು. ಮಂಗಳವಾರ ಗುರುವಾರ ಶುಕ್ರವಾರ ಮತ್ತು ಶನಿವಾರ ಒಳ್ಳೆಯ ದಿನಗಳು ಆಗಿರುತ್ತದೆ. ಕುಂಭ ರಾಶಿಯವರ ಜೊತೆ ಉತ್ತಮವಾಗಿ ಹೊಂದಿಕೊಳ್ಳುವ ರಾಶಿಯವರು ಎಂದರೆ ಮಿಥುನ ರಾಶಿ ಮತ್ತು ಧನುರ್ ರಾಶಿ. ಕುಂಭ ರಾಶಿಯವರ ಜೊತೆ ಹೊಂದಿಕೊಳ್ಳದ ರಾಶಿಗಳು ಎಂದರೆ ಮೀನಾ ಮತ್ತು ಕನ್ಯಾ ರಾಶಿ ಗಳಾಗಿವೆ.

Leave a Comment