ಈ ಒಂದು ಬೇರನ್ನು ನಿಮ್ಮಬಳಿ ಇಟ್ಟಕೊಂಡ್ರೆ ದುಡ್ಡಿನ ಕೊರತೆ ಆಗಲ್ಲ| ಲಕ್ಷ್ಮೀಯನ್ನ ಮನೆಯಲ್ಲಿ ಉಳಿಸಿಕೊಳ್ಳಲು ಸೂತ್ರಗಳು

0

ಸಸ್ಯಗಳು ಜೀವಿಗಳಲ್ಲಿ ಒಂದು ಪ್ರಮುಖ ವಿಂಗಡಣೆ. ಸುಮಾರು 3,50,000 ಸಸ್ಯ ಪ್ರಬೇಧಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಸಸ್ಯಗಳು ಪ್ರಾಣಿಗಳಂತೆ ಚಲಿಸುವುದಿಲ್ಲ. ಆದರೇ ಹಲವಾರು ವಿಶೇಷತೆಗಳ ಆಗರವಾಗಿರುತ್ತದೆ. ಸಸ್ಯಗಳು ಕೆಲವೊಂದು ಚಮತ್ಕಾರಿ ಶಕ್ತಿಯನ್ನು ಹೊಂದಿರುತ್ತವೆ. ಕೆಲವು ಮರಗಳು ಧನಪ್ರಾಪ್ತಿಗೆ ಅತ್ಯಂತ ವಿಶೇಷವಾಗಿರುತ್ತದೆ.

ಅಂತಹ ಮರಗಳಲ್ಲಿ ದೇವಿ ಲಕ್ಷ್ಮಿ ನೆಲೆಸಿರುತ್ತಾಳೆಂಬ ನಂಬಿಕೆ ಇದೆ . ಕೆಲವು ಗಿಡಮರಗಳು ಜೀವನದಲ್ಲಿನ ಸಮಸ್ಯೆಗಳನ್ನು ದೂರಮಾಡುತ್ತವೆ. ಇನ್ನು ಕೆಲವು ಗಿಡಮರಗಳು ಮನೋಕಾಮನೆಗಳನ್ನು ಈಡೇರಿಸುವಲ್ಲಿ ರಾಮಬಾಣವಾಗಿವೆ ಎಂದು ನಂಬಿಕೆಯು ಇದೆ. ಮನಸ್ಸಿನ ಕೋರಿಕೆಗಳನ್ನು ಈಡೇರಿಸಬಲ್ಲ ಅನೇಕ ವಿಶೇಷತೆಗಳನ್ನು ಹೊಂದಿರುವ ಗಿಡಮರಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ನಕಾರಾತ್ಮಕ ಶಕ್ತಿಗಳ ಪ್ರಭಾವಕ್ಕೆ ಒಳಗಾದ ವ್ಯಕ್ತಿಗಳು ಯಾವಾಗಲೂ ಚಿಂತೆಯಲ್ಲಿರುತ್ತಾರೆ. ಭಯಗ್ರಸ್ಥರಾಗಿರುತ್ತಾರೆ. ಇಂತಹ ಭಯದಿಂದ ಹೇಗೆ ಹೊರಬರುವುದು ಎಂದು ತಿಳಿಯದೇ ಇನ್ನಷ್ಟು ಗೊಂದಲಕ್ಕೆ ಒಳಗಾಗಿರುತ್ತಾರೆ. ಆಪ್ತರು, ಹಿತೈಷಿಗಳ ಸಲಹೆ ಪಡೆದರೇ ಸಮಾಧಾನ ಮಾಡುತ್ತಾರೆ. ಆದರೇ ಆ ವ್ಯಕ್ತಿ ಪಡುತ್ತಿರುವ ಹಿಂಸೆ ಅವರಿಗೆ ಮಾತ್ರ ಗೊತ್ತಿರುತ್ತದೆ.

ನಕಾರಾತ್ಮಕ ಶಕ್ತಿಗಳಿಗೆ ಒಳಗಾದ ವ್ಯಕ್ತಿಗಳನ್ನು ಗಮನಿಸಿದರೇ ಅವರಿಗೆ ರಾತ್ರಿ ನೆಮ್ಮದಿಯಾಗಿ ನಿದ್ದೆ ಬರುತ್ತಿರುವುದಿಲ್ಲ. ಬೆಳಿಗ್ಗೆ ಎದ್ದಾಗ ಅವರ ಮನಸ್ಸು ಶಾಂತವಾಗಿರುವುದಿಲ್ಲ ಮತ್ತು ಗೊಂದಲಕ್ಕೆ ಒಳಗಾಗಿರುತ್ತಾರೆ. ಕೆಲಸ ಕಾರ್ಯಗಳನ್ನು ಮಾಡಲು ಆಗುವುದಿಲ್ಲ, ಮಾಡಿದರೂ ಯಶಸ್ಸು ಸಿಗುವುದಿಲ್ಲ. ಇಂತಹ ಸಮಸ್ಯೆಗಳು ಇದ್ದಾಗ ಕೆಲವು ಗಿಡಗಳಿಂದ ನೆಮ್ಮದಿ ಪಡೆಯಬಹುದು.

ಮೊದಲನೆಯದಾಗಿ ತುಳಸಿ ಸಸ್ಯ ಹಿಂದೂಗಳ ಮನೆಗಳು ಮತ್ತು ಮನಸ್ಸುಗಳನ್ನ ದೈವೀಗುಣವನ್ನು ಪಡೆದುಕೊಂಡಿದೆ. ತುಳಸಿ ಗಿಡ ಇದ್ದ ಜಾಗದಲ್ಲಿ ಶ್ರೀಹರಿಯು ಸದಾ ವಾಸ ಮಾಡುತ್ತಾನೆ. ಎಲ್ಲಾ ಪಂಥದ ಆಸ್ತಿಕ ಹಿಂದೂಗಳು ತಮ್ಮ ಮನೆ ಅಂಗಳದಲ್ಲಿ ತುಳಸಿ ಬೃಂದಾವನವನ್ನು ನಿರ್ಮಿಸಿ ತುಳಸಿಯನ್ನು ನೆಟ್ಟು ಪೂಜಿಸುತ್ತಾರೆ. ನಿಮ್ಮ ಮನಸ್ಸಿಗೆ ಶಾಂತಿ ನೆಲೆಸಬೇಕಾದರೇ

ತುಳಸಿ ಗಿಡದ ಬೇರನ್ನು ತೆಗೆದುಕೊಂಡು ಅದನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ನಿಮ್ಮ ಕೈ ಮಣಿಕಟ್ಟಿಗೆ ಕಟ್ಟಿಕೊಳ್ಳಿ, 24 ಗಂಟೆಗಳ ನಂತರ ಗಮನಿಸಿ ಅಶಾಂತಿಗೊಳಗಾದ ಮನಸ್ಸಿಗೆ ಶಾಂತಿ ದೊರಕುತ್ತದೆ. ಹಾಗೂ ಪರಿಹಾರವೇ ಇಲ್ಲ ಎನ್ನುವ ಸಮಸ್ಯೆಗಳಿಗೆ ಒಂದಲ್ಲ ಒಂದು ರೀತಿ ಪರಿಹಾರದ ದಾರಿ ಕಾಣುತ್ತದೆ. ನೀವು ಸಹ ಶಾಂತಿ ಇಲ್ಲದೇ ತೊಂದರೆಯನ್ನು ಅನುಭವಿಸುತ್ತಿದ್ದರೇ ಈ ಪರಿಹಾರವನ್ನು ಮಾಡಿನೋಡಿ.

ಎರಡನೇಯದಾಗಿ ಕೆಲವರಿಗೆ ಆರ್ಥಿಕ ಸಮಸ್ಯೆ ತುಂಬಾ ದೊಡ್ಡ ತಲೆನೋವಾಗಿರುತ್ತದೆ. ಅದೇ ರೀತಿ ಮದುವೆಯ ವಿಷಯದಲ್ಲಿ ಸಮಸ್ಯೆಯಾಗಿರುತ್ತದೆ. ಮದುವೆ ಬೇಗ ಸೆಟ್ ಆಗುವುದಿಲ್ಲ, ಕೆಲವರು ಮದುವೆಯಾಗಿ ತೊಂದರೆ ಅನುಭವಿಸುತ್ತಿರುತ್ತಾರೆ. ಇಂತಹ ಸಮಸ್ಯೆಗಳಿಗೆ ಬಾಳೇ ಮರದ ಬೇರನ್ನು ತೆಗೆದುಕೊಂಡು ಅದನ್ನು ಒಣಗಿಸಿ ಹಳದಿಬಟ್ಟೆಯಲ್ಲಿ ಸುತ್ತಿ ನಿಮ್ಮ ಕೈಮಣಿ ಕಟ್ಟಿಗೆ ಕಟ್ಟಿಕೊಳ್ಳಿ.

ಇದರಿಂದ ಗುರುಗ್ರಹ ಬಲಿಷ್ಠವಾಗಿ ನಿಮ್ಮ ಜೀವನದಲ್ಲಿ ಅದೃಷ್ಟ ಬರುತ್ತದೆ. ಕೆಲವರಿಗೆ ಹಣದ ಸಮಸ್ಯೆಯೇ ಇರುವುದಿಲ್ಲ ಅದಕ್ಕೆ ಕಾರಣ ಅವರ ಜಾತಕದಲ್ಲಿ ಗುರುಗ್ರಹವು ಬಲಿಷ್ಠನಾಗಿರುತ್ತಾನೆ. ನೀವು ನಿಮ್ಮ ಜಾತಕದಲ್ಲಿ ಗುರುವನ್ನು ಬಲಿಷ್ಠನಾಗಿ ಮಾಡಬೇಕಾದರೇ ಒಂದು ಅರಿಶಿನದ ಬೇರನ್ನು ನೀವು ಮಲಗುವ ಹಾಸಿಗೆಯಲ್ಲಿ ತಲೆಯ ಕಡೆ ಇಟ್ಟುಕೊಂಡು ಮಲಗಬೇಕು. ತಲೆ ದಿಂಬಿನ ಕೆಳಗೆ ಅಥವಾ ಹಾಸಿಗೆಯ ಕೆಳಗೆ ಇಟ್ಟುಕೊಂಡು ಮಲಗಬಹುದು. ಅದು ಯಾರಿಗೂ ಕಾಣಿಸಬಾರದು.

ರಾತ್ರಿಯ ಸಮಯದಲ್ಲಿ ಸಕ್ರಿಯವಾಗಿರುವ ನಕಾರಾತ್ಮಕ ಶಕ್ತಿಗಳ ಕೆಟ್ಟ ಪರಿಣಾಮ ನಿಮ್ಮ ಮೇಲೆ ಆಗುವುದಿಲ್ಲ. ನಿಮಗೆ ನೆಮ್ಮದಿಯ ನಿದ್ರೆಯು ದೊರಕುತ್ತದೆ. ನಿದ್ರೆ ಚೆನ್ನಾಗಿದ್ದರೇ ಆರೋಗ್ಯವೂ ಚೆನ್ನಾಗಿರುತ್ತದೆ. ಕೆಲವರಿಗೆ ನಿದ್ರೆಯ ಸಮಯದಲ್ಲಿ ಕೆಟ್ಟ ಕನಸುಗಳು ಬೀಳುತ್ತವೆ. ಕೆಲವು ಬಾರಿ ಕೆಟ್ಟ ಶಕ್ತಿಗಳು ಕೂಡ ವ್ಯಕ್ತಿಯ ಮೇಲೆ ಪ್ರಭಾವವನ್ನ ಬೀರುತ್ತವೆ. ಇಂತಹ ಸಮಸ್ಯೆಗಳಿಗೆ ಅರಿಶಿನದ ಕೊಂಬನ್ನು ಪಕ್ಕದಲ್ಲೇ ಇಟ್ಟುಕೊಂಡು ಮಲಗುವುದರಿಂದ ನಕಾರಾತ್ಮಕತೆ ಹೋಗುತ್ತದೆ.

ಇನ್ನೊಂದು ಪ್ರಭಾವಿ ಸಸ್ಯ ಎಂದರೆ ಎಕ್ಕೆ ಗಿಡ. ಈ ಗಿಡದ ಬೇರನ್ನು ಪ್ರತಿದಿನ ನಿಮ್ಮ ಸ್ನಾನದ ನೀರಿಗೆ ಹಾಕಿ ಸ್ನಾನ ಮಾಡುವುದರಿಂದ ಆ ವ್ಯಕ್ತಿಯ ಆಕರ್ಷಣೆ ಹೆಚ್ಚಾಗಿ ಆಗುತ್ತದೆ ಮತ್ತು ಅವರು ಯಾವ ವಸ್ತುವನ್ನು ಬಯಸಿದರೂ ಅದು ಅವರಿಗೆ ಸಿಗುತ್ತದೆ. ಸೋಮವಾರ, ಶುಕ್ರವಾರ, ಗುರುವಾರ ಎಕ್ಕೇ ಗಿಡದ ಬೇರನ್ನು ತೆಗೆದುಕೊಂಡು ಪ್ರತಿದಿನ ಸ್ನಾನದ ನೀರಿಗೆ ಹಾಕಿ ಸ್ವಲ್ಪ ಸಮಯದ ನಂತರ ಸ್ನಾನಮಾಡಬೇಕು. ಆದರೇ ಈ ಪ್ರಯೋಗವನ್ನು ಮಾಡುವಾಗ ಮಾಂಸಹಾರ ಸೇವನೆ ಮತ್ತು ಮದ್ಯ ಸೇವನೆ ನಿಷಿದ್ಧ.

ಈ ಗಿಡವು ಮಹಾಕಾಳಿಯ ಗಿಡವಾಗಿದ್ದು, ಈ ಗಿಡದ ಅಕ್ಕಪಕ್ಕದಲ್ಲಿ ಅದೃಶ್ಯ ಶಕ್ತಿಗಳು ಇರುತ್ತವೆ. ಆದ್ದರಿಂದ ನೀವು ಎಕ್ಕೆ ಗಿಡದ ಬೇರನ್ನು ತೆಗೆಯುವಾಗ ನಿಮ್ಮ ಮನಸ್ಸಿನ ಇಚ್ಚೇಯನ್ನ ಹೇಳಿಕೊಳ್ಳಿ. ನಂತರ ಬೇರನ್ನು ತೆಗೆದು ಒಣಗಿಸಿ ಪ್ರತಿದಿನ ಪ್ರಯೋಗವನ್ನು ಮಾಡಿ ನೋಡಿ. ಸ್ನಾನದ ನಂತರ ಆ ಬೇರನ್ನು ತೆಗೆದು ಒಣಗಿಸಿ ಮತ್ತೆ ಉಪಯೋಗಿಸಿ. ಒಂದು ತಿಂಗಳ ನಂತರ ಮತ್ತೆ ಹೊಸ ಎಕ್ಕೆ ಗಿಡದ ಬೇರನ್ನು ತೆಗೆದುಕೊಂಡು ಬನ್ನಿ. ಹಳೇ ಬೇರನ್ನು ಅದೇ ಗಿಡದ ಪಕ್ಕದಲ್ಲಿ ಇಟ್ಟು ಬನ್ನಿ. ಈ ಪ್ರಯೋಗ ಮಾಡಿದ ನಂತರ ನೀವು ಬಯಸಿದ ವಸ್ತುವು ಆಕರ್ಷಕವಾಗಿ ನಿಮ್ಮ ಬಳಿ ಬರುತ್ತದೆ.

Leave A Reply

Your email address will not be published.