ನೀವು ಸ್ನಾನ ಮಾಡವ ಸಮಯ ನಿಮ್ಮ ಸುಖ, ಸಂತೋಷ,ಆರ್ಥಿಕತೆ, ಆರೋಗ್ಯದ

0

ನಾವು ಈ ಲೇಖನದಲ್ಲಿ ನೀವು ಸ್ನಾನ ಮಾಡುವ ಸಮಯ ನಿಮ್ಮ ಸುಖ , ಸಂತೋಷ , ಆರ್ಥಿಕತೆ, ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ . ಎಂಬುದನ್ನು ತಿಳಿದುಕೊಳ್ಳೋಣ…!

ಮಾನವ ಸ್ನಾನ : – ಮೂರನೇ ಸ್ನಾನವನ್ನು ಮನುಷ್ಯ ಸ್ನಾನ ಎಂದು ಕರೆಯಲಾಗುತ್ತದೆ . ಬೆಳಿಗ್ಗೆ ಆರು ಗಂಟೆಯಿಂದ ಎಂಟು ಗಂಟೆ ಒಳಗೆ ಮಾಡುವ ಸ್ನಾನ ಇದಾಗಿದೆ . ಈ ಸಮಯದಲ್ಲಿ ಸ್ನಾನ ಮಾಡಿದರೆ , ಕೆಲಸದಲ್ಲಿ ಯಶಸ್ಸು ಸಿಗುತ್ತದೆ . ಎಂಬ ನಂಬಿಕೆ ಇದೆ. ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿ ಪ್ರತೀ ಕಾರ್ಯಗಳಿಗೂ ಅದರ ಮಹತ್ವವಿದೆ . ಪ್ರಾತಃ ಕಾಲದಲ್ಲಿ ಎದ್ದು ಹಸ್ತವನ್ನು ನೋಡಿಕೊಂಡು ,

” ಕರಾಗ್ರೇ ವಸತೇ ಲಕ್ಷ್ಮಿ” …. ಪಠಿಸುವುದರಿಂದ ಆರಂಭಿಸಿ ರಾತ್ರಿ ಮಲಗುವ ಸಮಯದಲ್ಲಿ ರಾಮ ಸ್ಕಂದಂ ಹನುಮಂತಂ ಸ್ತೋತ್ರವನ್ನು ಹೇಳುವವರೆಗಿನ ಸರ್ವ ಕಾರ್ಯಗಳಿಗಿರುವ ವಿಶೇಷತೆ . ಮತ್ತು ಲಾಭವನ್ನು ಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ . ಹಾಗೆ ನಿತ್ಯ ಕಾರ್ಯವಾದ ಸ್ನಾನದ ಬಗ್ಗೆ ಹಲವಾರು ಮಹತ್ವದ ವಿಷಯಗಳಿವೆ. ಸ್ನಾನದ ಪ್ರಕಾರಗಳನ್ನು ಸರಿಯಾದ ಸಮಯದಲ್ಲಿ ಸ್ನಾನ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಯೋಣ .

ಬೇಗ ಏಳು :- ಬೇಗ ಮಲಗುವ ಪದ್ಧತಿ ಇಲ್ಲ . ರಾತ್ರಿ 12 ರ ಮೇಲೆ ನಿದ್ರೆ ಮಾಡುವವರ ಸಂಖ್ಯೆಯೇ ಹೆಚ್ಚು .
ಇದರಿಂದಾಗಿ ಬೆಳಗ್ಗೆ ಹೇಳುವುದು ತಡವಾಗುತ್ತದೆ. ಸೂರ್ಯೋದಯಕ್ಕಿಂತ ಮೊದಲ ಸ್ನಾನ ಮಾಡುವವರ ಸಂಖ್ಯೆ ಅತಿ ಕಡಿಮೆ. ಸೂರ್ಯ ನೆತ್ತಿ ಮೇಲೆ ಬಂದರೂ ಕೆಲವರಿಗೆ ಸ್ನಾನ ಆಗಿರುವುದಿಲ್ಲ. ನೀವು ಇಂಥವರಲ್ಲಿ
ಒಬ್ಬರಾಗಿದ್ದರೆ, ಎಚ್ಚರ. ನೀವು ಸ್ನಾನ ಮಾಡುವ ಸಮಯ ನಿಮ್ಮ ಸುಖ , ಸಂತೋಷ , ಆರ್ಥಿಕ, ವ್ಯವಸ್ಥೆ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ .

ಧರ್ಮ ಶಾಸ್ತ್ರದಲ್ಲಿ ನಾಲ್ಕು ರೀತಿಯ ಸ್ನಾನವನ್ನು ಹೇಳಲಾಗಿದೆ . ಸ್ನಾನದಿಂದ ಹಲವು ರೀತಿಯ ಲಾಭಗಳು ಉಂಟು . ಸ್ವಾಸ್ಥ್ಯ ಸಂರಕ್ಷಣೆಗೆ ಶರೀರ ಮತ್ತು ಶರೀರದ ನೆಮ್ಮದಿಗೆ , ಪ್ರತಿನಿತ್ಯ ಸ್ನಾನ ಮಾಡುತ್ತೇವೆ . ಧಾರ್ಮಿಕ ದೃಷ್ಟಿಯಿಂದ ಸಹ ಪ್ರತಿನಿತ್ಯ ಸೂರ್ಯೋದಯದ ಸಮಯದಲ್ಲಿ ಸ್ನಾನ ಮಾಡುವುದು ಹೆಚ್ಚು ಶುಭ ಎಂದು ಹೇಳಲಾಗುತ್ತದೆ . ಹಾಗೆ ನಮ್ಮ ಹಿರಿಯರು ಪುರಾಣದ ಕಾಲದಲ್ಲಿ ಋಷಿ ಮುನಿಗಳು , ವಿದ್ವಾಂಸರು ಪ್ರಾತಃ ಕಾಲದಲ್ಲಿ ಅಂದರೆ , ಸೂರ್ಯೋದಯಕ್ಕೆ ಮುನ್ನ ಅಥವಾ ಸೂರ್ಯೋದಯದ ಸಮಯಕ್ಕೆ ಸ್ನಾನ ಮಾಡುತ್ತಿದ್ದರು ಎಂಬುದನ್ನು ಕೇಳಿರುತ್ತೇವೆ .

ಶಾಸ್ತ್ರಗಳ ಅನುಸಾರ ಸೂರ್ಯೋದಯದ ಸಮಯದಲ್ಲಿ ಸ್ನಾನ ಮಾಡಿ , ಸೂರ್ಯನಿಗೆ ಜಲವನ್ನು ಅರ್ಪಿಸುವುದರಿಂದ ಅನೇಕ ರೀತಿ ಲಾಭಗಳು ಉಂಟಾಗುತ್ತದೆ . ಸಮಾಜದಲ್ಲಿ ಸ್ಥಾನ – ಮಾನ ವೃದ್ಧಿಸುವುದು ಅಲ್ಲದೆ ತ್ವಚೆಯ ಕಾಂತಿಯನ್ನು ಸಹ ಹೆಚ್ಚಿಸುತ್ತದೆ . ಈ ಸಮಯದಲ್ಲಿ ಶುರುವಾದ ನಿತ್ಯದ ಕಾರ್ಯಗಳೆಲ್ಲ ಸುಗಮವಾಗಿ ಸಾಗುವುದು ಅಲ್ಲದೆ ಮಾನಸಿಕ ನೆಮ್ಮದಿ ಲಭಿಸುತ್ತದೆ . ಎಲ್ಲರೂ ಸೂರ್ಯೋದಯದ ಸಮಯದಲ್ಲಿ ಸ್ನಾನ ಮಾಡಿ . ಸೂರ್ಯನಿಗೆ ಅರ್ಘ್ಯ ಕೊಡತಕ್ಕದ್ದಾಗಿ ಶಾಸ್ತ್ರ ಹೇಳುತ್ತದೆ . ನಮ್ಮ ಶಾಸ್ತ್ರಗಳಲ್ಲಿ ಸಮಯಕ್ಕೆ ಅನುಸಾರವಾಗಿ , ಸ್ನಾನದ ಹಲವು ಪ್ರಕಾರಗಳನ್ನು ತಿಳಿಸಲಾಗಿದೆ ಅಷ್ಟೇ.

ಅಲ್ಲದೆ ಸ್ನಾನ ಮಾಡುವ ವಿಧಾನದ ಬಗ್ಗೆ ಹೇಳಲಾಗಿದೆ . ಶಾಸ್ತ್ರದ ಈ ನಿಯಮಗಳನ್ನು ಸರಿಯಾಗಿ ಅನುಸರಿಸಿದ್ದಲ್ಲಿ ಶುಭ ಫಲಗಳು ಪ್ರಾಪ್ತವಾಗುತ್ತದೆ. ಶಾಸ್ತ್ರ ಹೇಳುವ ಸ್ನಾನದ ವಿಧಾನ :- ಪುರಾಣಗಳಲ್ಲಿ ಹೇಳಿರುವಂತೆ ನಿತ್ಯದ ಕಾರ್ಯಗಳಲ್ಲಿ ಪ್ರತಿಯೊಂದು ಮಂತ್ರ ಇದೆ . ಆ ಮಂತ್ರಗಳನ್ನು ಹೇಳಿಕೊಂಡು ಕೆಲಸವನ್ನು ಮಾಡಬೇಕು ಎನ್ನಲಾಗುತ್ತದೆ ಶಾಸ್ತ್ರ . ಹಾಗಾಗಿ ಸ್ನಾನ ಮಾಡುವ ಸಮಯದಲ್ಲೂ ಮಂತ್ರಗಳನ್ನು ಪಠಿಸುವುದು ಶುಭದಾಯಕವಾಗಿದೆ .

ಸ್ನಾನದ ಸಮಯದಲ್ಲಿ ಹೇಳಬೇಕಾದ ಮಂತ್ರ ಮತ್ತು ಮಹತ್ವ :- ” ಗಂಗೇ ಚ ಯಮುನೇ ಚ ಕೃಷ್ಣೇ ಗೋದಾವರೀ ಸರಸ್ವತಿ ” ….! ನರ್ಮದೇ ಸಿಂಧು ಕಾವೇರಿ ಜಲೈ ಸ್ಮಿನ್ ಸನ್ನಿಧಿ ಕುರು! ಗಂಗಾ , ಯಮುನಾ , ಕೃಷ್ಣಾ , ಗೋದಾವರಿ , ಸರಸ್ವತಿ , ನರ್ಮದಾ , ಸಿಂಧು , ಕಾವೇರಿ ಪವಿತ್ರವಾದ ನದಿಗಳು . ಈ ನದಿಗಳನ್ನು ಸ್ನಾನದ ನೀರಿಗೆ ಆಹ್ವಾನಿಸುವುದು ಇದರ ಅರ್ಥ . ನಾರದ ಪುರಾಣದಲ್ಲಿ ಇದರ ಉಲ್ಲೇಖವಿದೆ .ಸ್ನಾನ ಮಾಡುವ ಸಂದರ್ಭದಲ್ಲಿ ಮುಖ್ಯವಾಗಿ ಮೊದಲು ಗಮನದಲ್ಲಿ ಇಡಬೇಕಾದ ಅಂಶವೆಂದರೆ ,

ನೀರು ಹಾಕಿ ಕೊಳ್ಳುವಾಗ ತಲೆಗೆ ಮೊದಲು ನೀರು ಹಾಕಿಕೊಳ್ಳಬೇಕು . ಆನಂತರ ಪೂರ್ತಿ ಶರೀರವನ್ನು ಒದ್ದೆ ಮಾಡಿಕೊಳ್ಳಬೇಕು . ಹಾಗೆ ಮಾಡದೇ ಇದ್ದರೆ ಅದು ಶಾಸ್ತ್ರ ಸಮ್ಮತವಲ್ಲ ಎಂದು ಹೇಳಲಾಗುತ್ತದೆ . ಇದರ ಹಿಂದೆ ವೈಜ್ಞಾನಿಕ ಕಾರಣವಿದೆ . ಅದೇನೆಂದರೆ , ತಲೆಗೆ ಮೊದಲು ನೀರು ಹಾಕಿಕೊಳ್ಳುವುದರಿಂದ , ದೇಹದ ಉಷ್ಣತೆ ತಲೆಯಿಂದ ಇಳಿದು ಪಾದದಿಂದ ಹೊರ ಹೋಗುತ್ತದೆ . ಇದರಿಂದ ಶರೀರದ ಉಷ್ಣತೆ ಕಡಿಮೆಯಾಗಿ ದೇಹವು ತಂಪಾಗುತ್ತದೆ .

ಸ್ನಾನದ ಪ್ರಕಾರಗಳು ಕೆಳಗಿನಂತಿವೆ: – 1 . ಬ್ರಹ್ಮ ಸ್ನಾನ :- ಪ್ರಾತಃಕಾಲದ ನಾಲ್ಕು ಗಂಟೆಯೊಳಗಿನ ಸಮಯವನ್ನು ಬ್ರಾಹ್ಮಿ ಮುಹೂರ್ತವೆನ್ನುತ್ತಾರೆ . ಈ ಸಮಯದಲ್ಲಿ ಭಗವಂತನನ್ನು ಧ್ಯಾನಿಸುತ್ತಾ ಮಾಡುವ ಸ್ನಾನವೇ ಬ್ರಹ್ಮ ಸ್ನಾನ . ಬ್ರಾಹ್ಮಿ ಮುಹೂರ್ತದಲ್ಲಿ ಮಾಡುವ ಸ್ನಾನದಿಂದ ಇಷ್ಟ ದೇವರ ವಿಶೇಷವಾದ ಕೃಪೆ ಪ್ರಾಪ್ತಿ ಯ ಆಗುವುದು ಅಲ್ಲದೆ ಕಷ್ಟಗಳೆಲ್ಲ ನಿವಾರಣೆ ಆಗುತ್ತದೆ .

2 . ಖುಷಿ ಸ್ನಾನ : – ಬೆಳಗಿನ ಜಾವ ನಾಲ್ಕು ಗಂಟೆಯಿಂದ ಐದು ಗಂಟೆ ಒಳಗೆ ಮಾಡುವ ಸ್ನಾನವನ್ನು ಮುನಿ ಸ್ನಾನ ಎಂದು ಕರೆಯಲಾಗುತ್ತದೆ . ಇದು ಸ್ನಾನ ಮಾಡಲು ಅತ್ಯುತ್ತಮವಾದ ಸಮಯ . ಮುನಿ ಸ್ನಾನ ಮಾಡುವುದರಿಂದ ಮನೆಯಲ್ಲಿ ಸುಖ , ಶಾಂತಿ , ಸಮೃದ್ಧಿ ನೆಲೆಸುತ್ತದೆ. ಎಂದು ನಂಬಲಾಗಿದೆ.

3 . ದೈವ ಸ್ನಾನ :- ಬೆಳಗ್ಗೆ 5 ಗಂಟೆಯಿಂದ 6 ಗಂಟೆಯ ಒಳಗೆ ಸ್ನಾನ ಮಾಡಿದರೆ , ಆಯಸ್ಸು , ಕೀರ್ತಿ , ಧನ , ಮತ್ತು ಸಂತೋಷ ಲಭಿಸುತ್ತದೆ . ಇದನ್ನು ದೈವ ಸ್ನಾನ ಎಂದು ಕರೆಯಲಾಗುತ್ತದೆ . ಶಾಸ್ತ್ರಗಳ ಪ್ರಕಾರ ಈ ಸ್ನಾನ ಕೂಡ ಉತ್ತಮವಾದದ್ದು .

4 . ಮಾನವ ಸ್ನಾನ : – ಮೂರನೇ ಸ್ನಾನವನ್ನು ಮನುಷ್ಯ ಸ್ನಾನ ಎಂದು ಕರೆಯಲಾಗುತ್ತದೆ . ಬೆಳಿಗ್ಗೆ 6 ಗಂಟೆಯಿಂದ ಎಂಟು ಗಂಟೆಯ ಒಳಗೆ ಮಾಡುವ ಸ್ನಾನ ಇದಾಗಿದೆ. ಈ ಸಮಯದಲ್ಲಿ ಸ್ನಾನ ಮಾಡಿದರೆ , ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ .

5 . ರಾಕ್ಷಸ ಸ್ನಾನ :- ಕೊನೆಯ ಸ್ನಾನ ರಾಕ್ಷಸ ಸ್ನಾನ. ಇದೀಗ ಸಾಮಾನ್ಯವಾಗಿದೆ. ಎಂಟು ಗಂಟೆ ನಂತರ ಮಾಡುವ ಸ್ನಾನ . ಈ ಶ್ರೇಣಿಯಲ್ಲಿ ಬರುತ್ತದೆ . ಇದನ್ನು ಧರ್ಮ ನಿಷೇಧ ಎಂದು ಪರಿಗಣಿಸಲಾಗಿದೆ . ಈ ಸ್ನಾನ ಮಾಡುವುದರಿಂದ , ಮನೆಯಲ್ಲಿ ಬಡತನ , ಕಲಹ , ಅಶಾಂತಿ , ಅನಾರೋಗ್ಯ ಕಾಡುತ್ತದೆ .

6 . ದಾನವ ಸ್ನಾನ : – ಸೂರ್ಯೋದಯದ ನಂತರ ಆಹಾರವನ್ನು ಸೇವಿಸಿದ ನಂತರ , ಮಾಡುವ ಸ್ನಾನವೇ ದಾನವ ಸ್ನಾನ . ಶಾಸ್ತ್ರದ ಪ್ರಕಾರ ಈ ಸಮಯದಲ್ಲಿ ಸ್ನಾನ ಮಾಡುವುದು ಒಳ್ಳೆಯದಲ್ಲ. ಯಾವುದೇ ಆಹಾರ ಅಥವಾ ಪಾನೀಯಗಳನ್ನು ಸೇವಿಸುವುದಕ್ಕಿಂತ ಮೊದಲು , ಸ್ನಾನ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ .

ದೇವ ಸ್ನಾನ , ಋಷಿ ಸ್ನಾನ , ಅಥವಾ ಬ್ರಹ್ಮ ಸ್ನಾನಗಳನ್ನು ಮಾಡುವುದು ಉತ್ತಮ . ಮತ್ತು ಸರ್ವ ಶ್ರೇಷ್ಠವೆಂದು ಶಾಸ್ತ್ರ ಹೇಳುತ್ತದೆ . ಮುಖ್ಯವಾಗಿ ಸಂಜೆ ಮತ್ತು ರಾತ್ರಿ ಸಮಯದಲ್ಲಿ ಸ್ನಾನ ಮಾಡುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ . ಗ್ರಹಣಗಳು ಮತ್ತು ಇತರೆ ಅಶೌಚ ಸಂದರ್ಭಗಳನ್ನು ಹೊರತುಪಡಿಸಿ , ಉಳಿದ ದಿನ ಸಂಜೆ ಮತ್ತು ರಾತ್ರಿ ಸ್ನಾನವು ನಿಷಿದ್ಧವಾಗಿದೆ . ಕೆಳಗೆ ಸೂಚಿಸಿರುವ ಕೆಲವು ವಸ್ತುಗಳನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ , ನಿಮ್ಮ ದೇಹಕ್ಕೆ ಹಾಗೂ ನಿಮ್ಮ ಭವಿಷ್ಯಕ್ಕೆ ತುಂಬಾ ಒಳ್ಳೆಯದು .

1 . ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ಏಲಕ್ಕಿ ಹಾಗೂ ಕೇಸರಿಯನ್ನು ಬೆರೆಸಿ ಸ್ನಾನ ಮಾಡಿದರೆ , ನಿಮ್ಮ ಜೀವನದಲ್ಲಿ ಬರುವಂತಹ ಕಷ್ಟಗಳು ದೂರವಾಗುತ್ತದೆ . ನಿಧಾನವಾಗಿ ನಿಮ್ಮ ಜೀವನದಲ್ಲಿ ಬದಲಾವಣೆ ಕಂಡು ಬರುತ್ತದೆ . ಹಾಗೂ ನೀವು ಸಂತೋಷವಾಗಿ ಇರಬಹುದು .

2 . ನೀವು ಸ್ನಾನ ಮಾಡುವ ನೀರಿನಲ್ಲಿ ಒಂದು ಚಮಚ ಅಥವಾ ಎರಡು ಚಮಚ ಹಾಲನ್ನು ಸೇರಿಸಿ , ಸ್ನಾನ ಮಾಡುವುದರಿಂದ , ನಿಮ್ಮ ತ್ವಚೆ ಕಾಂತಿಯುತವಾಗಿ ಇರುತ್ತದೆ . ಹಾಗೆ ನೀವು ಚೆನ್ನಾಗಿ ಕಾಣಬಹುದು . ಹಾಲನ್ನು ಸೇರಿಸಿ ಸ್ನಾನ ಮಾಡುವುದರಿಂದ , ನಿಮ್ಮ ಆಯುಷ್ಯ ವೃದ್ಧಿಯಾಗುತ್ತದೆ . ಇದಕ್ಕೆ ಉದಾಹರಣೆ ಎಂದರೆ , ಮಹಾರಾಜರ ಕಾಲದಲ್ಲಿ ರಾಣಿಯರು ಸ್ನಾನ ಮಾಡುವಾಗ , ಸ್ವಲ್ಪ ಹಾಲಿನ ಅಂಶವನ್ನು ಹಾಕಿ ಸ್ನಾನ ಮಾಡುತ್ತಿದ್ದರು .

3 . ಹಾಗೆ ನೀವು ಸ್ನಾನ ಮಾಡುವಾಗ ನೀರಿನಲ್ಲಿ ಸ್ವಲ್ಪ ಎಳ್ಳು ಬೆರೆಸಿ , ಸ್ನಾನ ಮಾಡಿದರೆ , ನಿಮ್ಮ ಮನೆಯಲ್ಲಿ ಆಯಸ್ಸು , ಆರೋಗ್ಯ , ಹಾಗೆ ಧನ ಪ್ರಾಪ್ತಿ ಆಗುತ್ತದೆ .

4 . ನೀವು ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ತುಪ್ಪದ ಅಂಶವನ್ನು ಹಾಕಿ ಸ್ನಾನ ಮಾಡಿದರೆ , ನಿಮ್ಮ ದೇಹ ಕಾಂತಿಯಿಂದ ಹೊಳೆಯುತ್ತದೆ . ಹಾಗೆ ಆರೋಗ್ಯಕರವಾಗಿರುತ್ತದೆ . ಇದಕ್ಕೆ ವೈಜ್ಞಾನಿಕ ಕಾರಣವೇನೆಂದರೆ , ನಿಮ್ಮ ಚರ್ಮವನ್ನು ಯಾವಾಗಲೂ ತುಪ್ಪವು ಮೃದುವಾಗಿ ಇರುವ ಹಾಗೆ ನೋಡಿಕೊಳ್ಳುತ್ತದೆ . ಇದರಿಂದ ನಿಮ್ಮ ಚರ್ಮ ಬಿರುಕು ಬಿಡುವುದಿಲ್ಲ .

5 . ನೀವು ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ಶ್ರೀಗಂಧವನ್ನು ಸೇರಿಸಿ ಸ್ನಾನ ಮಾಡುವುದರಿಂದ , ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟ – ದುಃಖಗಳು ನಿವಾರಣೆಯಾಗುತ್ತದೆ .
ಹೀಗೆ ಸ್ನಾನಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಲಾಗಿದೆ ಎಂದು ಹೇಳಲಾಗಿದೆ .

Leave A Reply

Your email address will not be published.