ನೋಡಲು ಬಹಳ ಸುಂದರವಾಗಿರುತ್ತಾರೆ ಮಕರ ರಾಶಿಯವರು

0

ನಾವು ಈ ಮಕರ ರಾಶಿಯವರು ನೋಡಲು ಬಹಳ ಸುಂದರವಾಗಿ ಇರುತ್ತಾರೆ. ಎಂಬುದರ ಬಗ್ಗೆ ತಿಳಿಯೋಣ . ದ್ವಾದಶ ರಾಶಿ ಫಲದಲ್ಲಿ ಮಕರ ರಾಶಿಯಲ್ಲಿ ಜನನವಾದ ವ್ಯಕ್ತಿಗಳ ಗುಣ , ನಡತೆ , ಸ್ವಭಾವ ಹೇಗೆ ಇರುತ್ತದೆ. ಎಂದು ತಿಳಿದುಕೊಳ್ಳೋಣ . ಮಕರ ರಾಶಿಯು ಭೂ ತತ್ವವನ್ನು ಸೂಚಿಸುವ ರಾಶಿ ಆಗಿರುತ್ತದೆ. ಹಾಗೆಯೇ ಈ ರಾಶಿಯಲ್ಲಿ ಜನನ ಆದವರಿಗೆ ಶನಿಗ್ರಹ ಅಧಿಪತಿ ಸ್ಥಾನದಲ್ಲಿ ಇರುತ್ತದೆ. ಈ ರಾಶಿಯಲ್ಲಿ ಜನನ ಆದವರ ಮುಖ ಲಕ್ಷಣ ಬಹಳ ರೂಪವಂತರು ಆಗಿರುತ್ತಾರೆ.

ಮತ್ತು ಎತ್ತರದ ಹಣೆ ಇರುತ್ತದೆ. ಕೆಂಪು ಛಾಯೆ , ತೀಕ್ಷ್ಣವಾದ ದೃಷ್ಟಿ, ಬಹಳ ಉದ್ದನೆಯ ಮೂಗು ಇವರು ಬಹಳ ಆಕರ್ಷಿತವಾಗಿ ಇರುತ್ತಾರೆ. ಈ ರಾಶಿಯಲ್ಲಿ ಜನನ ಆದವರು ಬಹಳ ಸಂಯಮ ಮತ್ತು ಸಹನಾ ಮೂರ್ತಿ ಆಗಿರುತ್ತಾರೆ. ಇವರಲ್ಲಿ ಇರುವ ಒಳ್ಳೆಯ ಗುಣ ಇವರು ಶ್ರೀಮಂತರು ಬಡವರು ಎಂದು ಭೇದ ಭಾವ ಮಾಡುವುದಿಲ್ಲ. ತಾರತಮ್ಯ ಇಲ್ಲದೆ ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡಿ ಹೊಂದಾಣಿಕೆ ಯಿಂದ ಹೋಗುವ ಗುಣ ಈ ರಾಶಿಯವರಿಗೆ ಇರುತ್ತದೆ. ಹಾಗೆಯೇ

ಈ ರಾಶಿಯವರು ಸ್ವಲ್ಪ ಸ್ವಾರ್ಥಿಗಳು ಆಗಿದ್ದು, ಸ್ವಲ್ಪ ಅಹಂಕಾರಿಗಳು ಆಗಿರುತ್ತಾರೆ. ನಾನು ನನ್ನದು ಎಂಬ ಕ್ರೋಧದ ಮನಃಸ್ಥಿತಿಯನ್ನು ಈ ರಾಶಿಯವರು ಇಟ್ಟುಕೊಂಡಿರುತ್ತಾರೆ. ಎಂತಹ ಸಮಸ್ಯೆಗಳು ಅಥವಾ ಪರಿಸ್ಥಿತಿಗಳು ಬಂದರೂ ಈ ರಾಶಿಯವರು ಧೃತಿಗೆಡುವುದಿಲ್ಲ . ಈ ರಾಶಿಯವರಿಗೆ ಶನಿ ತುಂಬಾ ಪ್ರಬಲವಾಗಿ ಇರುತ್ತಾನೆ. ವಿಶೇಷವಾಗಿ ಶನಿ ಅಧಿಪತಿಯಾಗಿ ಇರುವುದರಿಂದ ಛಲವಾದಿಗಳು ಆಗಿದ್ದು, ಯಾರಿಂದಲಾದರೂ ಮೋಸ ಆದರೆ, ಅಂತಹವರ ಮೇಲೆ ಇವರು ಸೇಡು ತೀರಿಸಿಕೊಳ್ಳುವ ಮನೋಭಾವನೆಯನ್ನು ಹೊಂದಿರುತ್ತಾರೆ.

ಒಂದು ಸಮಯದಲ್ಲಿ ಅವರ ಮೇಲೆ ಅವರಿಗೆ ನಂಬಿಕೆ ಇರುವುದಿಲ್ಲ. ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಈ ರಾಶಿಯಲ್ಲಿ ಜನನ ಆದವರಿಗೆ ಶನಿಯ ಸ್ಥಾನ ಉಚ್ಛ ಸ್ಥಾನ , ನೀಚ ಸ್ಥಾನ ಅಂತ ಬರುತ್ತದೆ. ಶನಿ ಗ್ರಹವು ಕರ್ಮ ಸ್ಥಾನ ಅಂದರೆ ಇದು 10 ನೇ ರಾಶಿ ಆಗಿರುವುದರಿಂದ ದ್ವಾದಶ ಪುರದಲ್ಲಿ ಕರ್ಮ ಸ್ಥಾನ ಎನ್ನುವುದು ಶನಿಯನ್ನೇ, ಶನಿ ಕರ್ಮ ಸ್ಥಾನದಲ್ಲಿ ಬಂದಿದ್ದರೆ. ಇವರಿಗೆ ಮಾನಸಿಕ ಹಿಂಸೆ ಕೊಡುತ್ತಾನೆ . ಹಣಕಾಸಿನ ಕೊರತೆ , ವ್ಯಾಪಾರದಲ್ಲಿ ಧನ ನಷ್ಟ, ದಾಂಪತ್ಯದಲ್ಲಿ ಕಲಹ,

ಸಾಂಸಾರಿಕ ಸುಖವನ್ನು ಆಳು ಮಾಡುವ ಸಂದರ್ಭಗಳು ಇರುತ್ತವೆ. ಈ ರಾಶಿಯವರು ಇದರ ಬಗ್ಗೆ ಜಾಗೃತಿಯಿಂದ ಇರಬೇಕಾಗುತ್ತದೆ. ಈ ರಾಶಿಯವರು ಯಾರನ್ನು ಕೂಡ ನಂಬಲು ಹೋಗುವುದಿಲ್ಲ . ನಂಬಿದರೆ ಆ ವ್ಯಕ್ತಿಯಿಂದ ತೊಂದರೆಯನ್ನು ಅನುಭವಿಸುತ್ತಾರೆ . ಯಾರನ್ನಾದರೂ ನಂಬುತ್ತೀರಾ ಅಂದರೆ ಬಹಳ ಎಚ್ಚರಿಕೆಯಿಂದ ಇರಬೇಕು . ಅಂತಹ ವ್ಯಕ್ತಿಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ . ಹಾಗೆ ಇವರು ಸ್ನೇಹ ಜೀವಿಗಳು ಅಲ್ಲ . ಎಲ್ಲರೊಂದಿಗೆ ಸ್ನೇಹ ಜೀವಿಯಾಗಿ ನಡೆದುಕೊಳ್ಳುವ ಮನೋಧರ್ಮ ಇರುವುದಿಲ್ಲ .

ನ್ಯಾಯವಾಗಿ ಇರುತ್ತಾರೆ ಮತ್ತು ಪ್ರಾಮಾಣಿಕವಾಗಿ ಜೀವನ ಮಾಡುತ್ತಾರೆ . ಈ ರಾಶಿಯವರು ವಂಶ, ಇತಿಹಾಸ , ಜಾತಿ , ಧರ್ಮ, ಪರಂಪರೆ, ಇದರ ಬಗ್ಗೆ ಬಹಳ ಹೆಮ್ಮೆ ಇರುತ್ತದೆ. ನಮ್ಮತನ ಎನ್ನುವುದು ಹೆಚ್ಚಾಗಿರುತ್ತದೆ . ದಾನ ಧರ್ಮಗಳಲ್ಲಿ ಉದಾರಿಯಾಗಿ ಇರುತ್ತಾರೆ . ದಾನ ಧರ್ಮ ಮಾಡುವುದರಲ್ಲಿ ಬಹಳ ಆಸಕ್ತಿಯನ್ನು ಹೊಂದಿರುತ್ತಾರೆ . ಈ ರಾಶಿ ಅವರು ಕುಟುಂಬ, ಹೆಂಡತಿ , ಮಕ್ಕಳು , ಬಂಧು , ಬಳಗ ಎಲ್ಲರನ್ನು ತುಂಬಾ ಪ್ರೀತಿ ವಿಶ್ವಾಸದಲ್ಲಿ ನೋಡಿಕೊಳ್ಳುತ್ತಾರೆ.

ಆದರೆ ಈ ರಾಶಿಯವರಿಗೆ ಬಳಗದಿಂದ ಸ್ವಲ್ಪ ಶತ್ರು ಕಾಟ ಇರುತ್ತದೆ . ಇವರ ಏಳಿಗೆ ಮತ್ತು ಪ್ರಗತಿಯನ್ನು ಕೆಲವು ಒಳ್ಳೆಯ ಸ್ಥಾನದಲ್ಲಿ ಇರುವ ದೃಷ್ಟಿ ಯೋಗ ಅಥವಾ ಶತ್ರು ಭಾದೆ ಇದರಿಂದ ಎಚ್ಚರಿಕೆಯಿಂದ ಇರಬೇಕು . ಇವರು ಶ್ರಮಜೀವಿಗಳು ಆಗಿದ್ದು ಇಂತಹ ಕೆಲಸ ಮಾಡುತ್ತಾರೆ . ಅಂದರೆ ಹಿಂದೆ ಸರಿಯುವ ಮನಸ್ಥಿತಿ ಇವರಿಗೆ ಇರುವುದಿಲ್ಲ . ಇವರು ಜೀವನದಲ್ಲಿ ಇವರದೇ ಆದ ಸಿದ್ಧಾಂತಗಳನ್ನು ಹೊಂದಿರುತ್ತಾರೆ . ಒಂದು ಚೌಕಟ್ಟಿನಲ್ಲಿ ಜೀವನ ಮಾಡುವ ಮನ ಸ್ಥಿತಿ ಇರುತ್ತದೆ .ಯಾರ ಮಾತಿಗೂ ಬೆಲೆ ಕೊಡುವುದಿಲ್ಲ .

ಮತ್ತು ಯಾರ ಮೇಲೂ ಅವಲಂಬನೆ ಆಗುವುದಿಲ್ಲ . ಸ್ವತಂತ್ರವಾಗಿ ಜೀವನ ಮಾಡುವ ಮನಸ್ಥಿತಿ ಇರುತ್ತದೆ . ಹಾಗೆ ಈ ರಾಶಿಯವರಿಗೆ ಪ್ರೀತಿ, ಪ್ರೇಮ , ಪ್ರಣಯ ಈ ವಿಷಯದಲ್ಲಿ ಆಸಕ್ತಿ ಜಾಸ್ತಿ ಇರುತ್ತದೆ . ಹಾಗೆ ಭಗ್ನ ಪ್ರೇಮಿಗಳು ಆಗುವ ಸಾಧ್ಯತೆ ಇದೆ . ಈ ರಾಶಿ 10ನೇ ಸ್ಥಾನದಲ್ಲಿ ಇರುವುದರಿಂದ , 10ನೇ ಸ್ಥಾನವನ್ನು ಕರ್ಮ ಎಂದು ಹೇಳಲಾಗುತ್ತದೆ. ಕರ್ಮಕ್ಕೆ ಕರ್ಮ ಗ್ರಹ ಶನಿ ಅಧಿಪತಿ ಆಗಿರುವುದರಿಂದ , ಈ ರಾಶಿಯವರಿಗೆ ಆಗುವಂತಹ ಕೆಲಸಗಳು ಲೋಹದ ಕೆಲಸ , ಆಟೋಮೊಬೈಲ್ ,

ಆಯಿಲ್ ಗೆ ಸಂಬಂಧಪಟ್ಟ ಕೆಲಸ , ಮಣ್ಣಿನ ಕೆಲಸ ಈ ರೀತಿಯಾದ ಕೆಲಸಗಳು ಇವರಿಗೆ ಚೆನ್ನಾಗಿ ಆಗಿ ಬರುತ್ತದೆ. ಈ ರಾಶಿಯವರಿಗೆ ಅದೃಷ್ಟ ಸಂಖ್ಯೆ 1, 5, 6 . ಶುಭ ಸಂಖ್ಯೆ ಆಗಿರುತ್ತದೆ. ದುರಾದೃಷ್ಟ ಸಂಖ್ಯೆ 4 ಮತ್ತು 9 ಈ ಸಂಖ್ಯೆಗಳಲ್ಲಿ ಯಾವುದೇ ಕೆಲಸ ಕಾರ್ಯಗಳಿಗೆ ಹೋಗಬೇಡಿ. 1 – 5 – 6 ಅನ್ನು ಒಟ್ಟು ಮಾಡಿದರೆ 11 ಸಂಖ್ಯೆ ಆಗುತ್ತದೆ. 11 ಸಂಖ್ಯೆ ಇವರಿಗೆ ಅದೃಷ್ಟದ ಸಂಖ್ಯೆ ಆಗಿರುತ್ತದೆ. 24 ಕೂಡ ಅದೃಷ್ಟದ ಸಂಖ್ಯೆ ಆಗಿರುತ್ತದೆ. ಈ ರಾಶಿಯವರಿಗೆ ಶುಭ ಬಣ್ಣ ನೀಲಿ . ಇ

ದು ತುಂಬಾ ಹೊಂದಾಣಿಕೆ ಆಗುತ್ತದೆ. ಶನಿಗ್ರಹ ನೀಲಿ ಬಣ್ಣಕ್ಕೆ ಮರುಳಾಗುತ್ತದೆ. ಹಾಗೆಯೇ ಹಸಿರು, ಬಿಳಿ ಶುಭ್ರತೆ ಇರುವ ಬಿಳಿ ಬಣ್ಣ ಕೂಡ ಆಗಿ ಬರುತ್ತದೆ. ಕಪ್ಪು ಮತ್ತು ಕೆಂಪು ಬಣ್ಣ ಇವರಿಗೆ ಆಗುವುದಿಲ್ಲ. ಈ ರೀತಿಯ ಬಣ್ಣದ ಬಟ್ಟೆ ಖರೀದಿ ಮಾಡಬೇಡಿ. ಹಾಗೆಯೇ ಈ ರಾಶಿಯವರು ಸರಸ್ವತಿ ಮತ್ತು ಶಿವನನ್ನು ಆರಾಧನೆ ಮಾಡುವುದರಿಂದ, ಸಣ್ಣ ಪುಟ್ಟ ಸಮಸ್ಯೆಗಳು ಪರಿಹಾರ ಆಗುತ್ತದೆ. ಶಿವನ ಕೃಪೆಗೆ ಶನೇಶ್ವರ ಹೊಲಿಯುತ್ತಾನೆ. ಆರೋಗ್ಯದಲ್ಲಿ ಶೀತ ಭಾದೆ , ಚರ್ಮದ ಸಮಸ್ಯೆ, ಮಂಡಿ ನೋವು ,

ಮೂಳೆ ನೋವು , ನರಗಳಿಗೆ ಸಂಬಂಧಿಸಿದ ಖಾಯಿಲೆಗಳು ಬರುವ ಸಂದರ್ಭ ಇರುತ್ತದೆ. ಹಾಗೆಯೇ ಖಿನ್ನತೆಗಳು , ಕಣ್ಣುಗಳು ಮಂಜಾಗುವುದು, ಶ್ವಾಸಕೋಶಕ್ಕೆ ಸಂಬಂಧಪಟ್ಟ ಇಂತಹ ಕಾಯಿಲೆಗಳ ಲಕ್ಷಣ ಇರುತ್ತದೆ. ತುಂಬಾ ಜಾಗೃತಿಯಿಂದ ಇರಬೇಕು. ಮಾಡುವ ಕೆಲಸದಲ್ಲಿ ತೊಂದರೆಗಳು , ಸಾಲದ ತೊಂದರೆ, ಹಣಕಾಸಿನ ತೊಂದರೆ, ಕುಟುಂಬದ ಕಲಹಗಳು , ಹೀಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಶನಿ ಇರುವುದರಿಂದ ಸಂತಾನದಲ್ಲಿ ಸಮಸ್ಯೆ ಆಗುವ ಸಾಧ್ಯತೆ ಇದೆ. ಇಂತಹವರು ಶನೇಶ್ವರ ದೇವಾಲಯಕ್ಕೆ ಎಳ್ಳು ಮತ್ತು ನೀಲಿ ವಸ್ತುವನ್ನು ದಾನ ಮಾಡಬೇಕು. ಶನಿದೇವರ ಶ್ಲೋಕವನ್ನು ಪಠಣೆ ಮಾಡಿ, ನಿಮಗೆ ಅನುಕೂಲವಾಗುತ್ತದೆ.

Leave A Reply

Your email address will not be published.