ಅಕ್ಟೋಬರ್ 14 ಸೂರ್ಯಗ್ರಹಣ ಇರುತ್ತದೆ. ಸೂರ್ಯ ಗ್ರಹಣ ಯಾವಾಗ ಆರಂಭವಾಗುತ್ತದೆ ಯಾವೆಲ್ಲ ದೇಶಗಳಲ್ಲಿ ಗೋಚರವಾಗುತ್ತದೆ ಎಂದು ಈಗ ತಿಳಿದುಕೊಳ್ಳೋಣ. ಈ ಬಾರಿಯ ಸೂರ್ಯಗ್ರಹಣದಲ್ಲಿ ಹಲವು ಗ್ರಹಗಳು ವಕ್ರ ಸ್ಥಿತಿಯಲ್ಲಿ ಇರುತ್ತದೆ. ಇದು ವರ್ಷದ ಎರಡನೇ ಸೂರ್ಯ ಗ್ರಹಣ ವಾಗಿರುತ್ತದೆ. ಭಾರತೀಯ ಕಾಲಮಾನದ ಪ್ರಕಾರ ಎಂಟು ಗಂಟೆ 15 ನಿಮಿಷಕ್ಕೆ ಪ್ರಾರಂಭವಾಗಿ ರಾತ್ರಿ ಒಂದು ಗಂಟೆ 25 ನಿಮಿಷಕ್ಕೆ ಮುಗಿಯುತ್ತದೆ.
ಗ್ರಹಣದ ಕಾಲಾವಧಿ 5:00 ಆಗಿದ್ದು ದೊಡ್ಡ ಗ್ರಹಣವಾಗಿದೆ. ಗ್ರಹಣ ಸಮಯದಲ್ಲಿ ಯಾರು ನಿದ್ರಿಸಬಾರದು ಇದರಿಂದ ಸಮಸ್ಯೆಗಳನ್ನು ಎದುರಿಸಬಹುದು. ಇವರಲ್ಲಿ ಆಧ್ಯಾತ್ಮಿಕ ಉನ್ನತಿಯಾಗುವುದಿಲ್ಲ. ರೋಗಗಳು ಸಹ ಅವರನ್ನು ಆವರಿಸಬಹುದು. ವಿಶೇಷವಾಗಿ ಗರ್ಭಿಣಿ ಮಹಿಳೆಯರು ಒಂದೇ ಸ್ಥಳದಲ್ಲಿ ಇರಬೇಕು. ಅಲ್ಲಿ ಇಲ್ಲಿ ತಿರುಗಾಡಬಾರದು.
ಯಾರೆಲ್ಲ ಗ್ರಹಣದ ಕೆಟ್ಟ ಪರಿಣಾಮ ತಮ್ಮ ಮೇಲೆ ಬೀಳಬಾರದು ಎಂದು ಅಂದುಕೊಂಡರು ಹನುಮಾನ್ ಚಾಲೀಸನ್ನು ಓದಿಕೊಳ್ಳಬಹುದು. ಸೂರ್ಯ ದೇವರ ಮಂತ್ರವನ್ನು ಜಪ ಮಾಡಬಹುದು. ಇದರಿಂದ ಗ್ರಹಣದ ಕೆಟ್ಟ ಪರಿಣಾಮ ನಿಮ್ಮ ಮೇಲೆ ಬೀಳುವುದಿಲ್ಲ. ಗ್ರಹಣ ಆರಂಭವಾಗುವುದು ಮೊದಲು ಆಹಾರದಲ್ಲಿ ತುಳಸಿಯನ್ನು ಹಾಕುವುದು ಒಳ್ಳೆಯದು.
ಸಾಧ್ಯವಾದರೆ ಪವಿತ್ರವಾದ ಗಂಗಾಜಲವನ್ನು ಸಿಂಪಡಿಸಿ. ಪ್ರಾಣ ಮುಗಿದ ನಂತರ ಅನ್ನ ಉಳಿದರೆ ಅದನ್ನು ನೀರಿನಲ್ಲಿ ವಿಸರ್ಜನೆ ಮಾಡಿ. ಯಾರೆಲ್ಲ ಮಂತ್ರ ಸಾಧನೆ ತಂತ್ರಸಾದನೆ ಮಾಡುತ್ತಿರುತ್ತಾರೋ ಈ ಗ್ರಹಣ ಕಾಲ ಅವರಿಗೆಲ್ಲ ಅದ್ಭುತವನ್ನು ಕಾಲ ಎಂದು ಹೇಳಬಹುದು. ಗ್ರಹಣ ಕಾಲದಲ್ಲಿ ಇಂತವರು ತಮ್ಮ ಗುರುಗಳಿಂದ ಪಡೆದ ಮಂತ್ರ ಸಾಧನೆ ಮಾಡಬೇಕು.
ಬೇಕಾದರೆ ಮಹಾ ಮೃತ್ಯುಂಜಯ ಮಂತ್ರವನ್ನು ಜಪ ಮಾಡಬಹುದು. ಗ್ರಹಣ ಸಮಯದಲ್ಲಿ ನೀವು ಯಾವ ಮಂತ್ರವನ್ನು ಜಪ ಮಾಡಿರೋ ಆ ಮಂತ್ರದ ಪ್ರಭಾವ ನಿಮಗೆ ಬಹುಬೇಗ ಸಿಗುತ್ತದೆ. ಈ ಮಂತ್ರಗಳು ನಿಮ್ಮ ಶರೀರದಲ್ಲಿ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಒಂದು ಮಾಹಿತಿಯ ಪ್ರಕಾರ ಗ್ರಹಣ ಕಾಲದಲ್ಲಿ ನೀವು ಒಂದು ಮಂತ್ರವನ್ನು ಒಂದು ಸಲ ಹೇಳಿದರೂ ಅದು ಸಾವಿರ ಪಟ್ಟು ಫಲ ಸಿಗುತ್ತದೆ.
ಮಂತ್ರಗಳನ್ನು ಸಿದ್ಧಿ ಮಾಡಿಕೊಳ್ಳಲು ಇಷ್ಟಪಡುತ್ತಿದ್ದರೆ ಗ್ರಹಣ ಸಮಯದಲ್ಲಿ ಮಂತ್ರ ಪಠಣೆ ಮಾಡಿದರೆ ಒಳ್ಳೆಯದು. ಬೇಕಾದರೆ ನೀವು ಮಹಾಲಕ್ಷ್ಮಿಯ ಬೀಜ ಮಂತ್ರವನ್ನು ಸಹ ಪಠಣೆ ಮಾಡಬಹುದು. ಈ ಸಮಯದಲ್ಲಿ ಗರ್ಭಿಣಿ ಮಹಿಳೆಯರು ಮನೆಯ ಹೊರಗಡೆ ಬರಬಾರದು. ಚಾಕು ಸುಜಿ ಅಂತಹ ವಸ್ತುಗಳನ್ನು ಸಹ ಬಳಸಬಾರದು. ಗ್ರಹಣ ಮುಗಿದ ನಂತರ ಮನೆಯ ಸದಸ್ಯರೆಲ್ಲ ಸ್ನಾನ ಮಾಡಬೇಕು ಸ್ನಾನ ಮಾಡುವಾಗ
ಪವಿತ್ರ ಗಂಗಾಜಲ ಇದ್ದರೆ ಅದಕ್ಕೆ ಬೆರೆಸಿಕೊಂಡು ಮಾಡುವುದು ಒಳ್ಳೆಯದು. ಮಾರನೆಯ ದಿನ ನೀವು ಎಳ್ಳು ಬೆಲ್ಲ ವಸ್ತ್ರದಾನವನ್ನು ಮಾಡಬಹುದು. ಈ ಗ್ರಹಣ ನಮ್ಮ ಭಾರತ ದೇಶದಲ್ಲಿ ರಾತ್ರಿಯ ಸಮಯದಲ್ಲಿ ಇರುತ್ತದೆ. ಯಾವ ದೇಶದಲ್ಲಿ ಗ್ರಹಣ ಗೋಚರವಾಗುತ್ತದೆ ಅಲ್ಲಿ ಇದರ ಪ್ರಭಾವ ಇರುತ್ತದೆ. ಹಿಂದೂ ಮಹಾಸಾಗರ ಅಂಟ್ಲಾಂಟಿಕ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಗ್ರಹಣ ಗೋಚರವಾಗುತ್ತದೆ. ಹಾಗೂ ಆಫ್ರಿಕಾದ ಕೆಲವು ಭಾಗಗಳನ್ನು ಸಹ ಕಾಣುತ್ತದೆ. ಈ ದೇಶಗಳಲ್ಲಿ ಸೂತಕ ಕಾಲಕ್ಕೆ ಮಹತ್ವ ಇರುತ್ತದೆ. ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ.