ರಸ್ತೆಯಲ್ಲಿ ಬಿದ್ದ ಹಣ ಕೊಟ್ಯಾಧೀಶರನ್ನಾಗಿಸುತ್ತಾ? ರಸ್ತೆಯಲ್ಲಿ ಸಿಕ್ಕ ಹಣ ಏನು ಮಾಡಬೇಕು? 

0

ನಾವು ಈ ಲೇಖನದಲ್ಲಿ ರಸ್ತೆಯಲ್ಲಿ ಬಿದ್ದ ಹಣ ಸಿಕ್ಕರೆ ಏನು ಮಾಡಬೇಕು ಎಂಬುದನ್ನು ನಾವು ಇಲ್ಲಿ ತಿಳಿಯೋಣ . ನಿಮ್ಮಲ್ಲಿ 99 ರಷ್ಟು ಜನರಿಗೆ ರಸ್ತೆಯಲ್ಲಿ ಬಿದ್ದಿರುವ ಹಣ ಅಥವಾ ನಾಣ್ಯಗಳು ಖಂಡಿತವಾಗಿ ಸಿಕ್ಕಿರುತ್ತವೆ. ಒಂದು ವೇಳೆ ನಿಮಗೂ ಹಣ ಸಿಕ್ಕಿದ್ದರೆ , ಖಂಡಿತವಾಗಿ ನಿಮ್ಮಲ್ಲಿ ಈ ಒಂದು ಪ್ರಶ್ನೇ ಬಂದೇ ಇರುತ್ತದೆ. ಅದು ರಸ್ತೆಯಲ್ಲಿ ಬಿದ್ದಿರುವ ಹಣವನ್ನು ನಾವು ಏನು ಮಾಡಬೇಕು , ನಿಮಗೆ ಅದೃಷ್ಟ ವಸಾತ್ ನಿಮಗೆ ದಾರಿಯಲ್ಲಿ ಬಿದ್ದಿರುವ ಹಣ ಸಿಕ್ಕರೆ ಇದನ್ನು ಖರ್ಚು ಮಾಡಬೇಕಾ , ಅಥವಾ ಬೇರೆಯವರಿಗೆ ಕೊಡಬೇಕಾ,

ಈ ಹಣವನ್ನು ದೇವರಿಗೆ ಅರ್ಪಿಸಬೇಕಾ, ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯಲು ಇದನ್ನು ಗಮನವಿಟ್ಟು ತಿಳಿಯಿರಿ ಎಂದು ಹೇಳಲಾಗಿದೆ. ರಸ್ತೆಯಲ್ಲಿ ಬಿದ್ದಿರುವ ಹಣ ಮನುಷ್ಯನ ಅದೃಷ್ಟವನ್ನು ಬದಲಾಯಿಸುತ್ತದೆಯೇ , ದಾರಿಯಲ್ಲಿ ಬಿದ್ದಿರುವ ಹಣವನ್ನು ತೆಗೆದುಕೊಂಡು ಜನರು ಬೇಗ ಶ್ರೀಮಂತರಾಗಬಹುದೇ , ಇಂತಹ ಹಲವಾರು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಹುಟ್ಟುತ್ತಿರಬಹುದು . ಹಣ ಎಲ್ಲರಿಗೂ ಸುಲಭವಾಗಿ ಸಿಗುವುದಿಲ್ಲ . ಯಾಕೆಂದರೆ ಹಣವನ್ನು ಮತ್ತು ಧನ ಸಂಪತ್ತನ್ನು ಲಕ್ಷ್ಮಿ ದೇವಿಯ ಪ್ರತೀಕ ಎಂದು ತಿಳಿಯಲಾಗಿದೆ .

ಇಂತಹ ಹಣವನ್ನು ನೀವು ಖರ್ಚು ಕೂಡ ಮಾಡಬಾರದು . ಯಾಕೆಂದರೆ ಇದು ನಿಮ್ಮ ಅದೃಷ್ಟದಲ್ಲಿ ಇರುತ್ತದೆ . ತಾಯಿ ಲಕ್ಷ್ಮಿ ದೇವಿಯು ಈ ಸೂಚನೆಯ ಮೂಲಕ ಹತ್ತಿರದ ಭವಿಷ್ಯದಲ್ಲಿ ಶ್ರೀಮಂತರಾಗುವ ಧನ ಸಂಪತ್ತಿನಿಂದ ಕೂಡಿ ಕೊಳ್ಳುವ ಸಂಕೇತವನ್ನು ಕೊಟ್ಟಿರುತ್ತಾಳೆ .ಹೇಗೆ ನಾವೆಲ್ಲರೂ ಈ ಧನ ಸಂಪತ್ತಿನಿಂದ ಶ್ರೀಮಂತರಾಗಬಹುದೋ , ಇಂತಹ ಸಿಕ್ಕಿರುವಂತಹ ಹಣವನ್ನು ಹೆಂಡತಿ ಮತ್ತು ಮಕ್ಕಳಿಗೆ ಕೊಡಬಹುದಾ, ವಾಸ್ತುವಿನ ಅನುಸಾರವಾಗಿ ಅಂದರೆ ಈ ಹಣವನ್ನು… ಯಾರಿಗೂ ಕೊಡಬಾರದು .

ಹಾಗಾಗಿ ಇಲ್ಲಿ ಕೆಲವು ವಿಷಯಗಳನ್ನು ವಿಸ್ತಾರವಾಗಿ ತಿಳಿಸಲಾಗಿದೆ . ವಾಸ್ತುಶಾಸ್ತ್ರದಲ್ಲಿ ಇದರ ಬಗ್ಗೆ ಹಲವಾರು ಮಾಹಿತಿಗಳು ದೊರೆಯುತ್ತವೆ . ಏಕೆಂದರೆ ಸುಮ್ಮನೆ ಪ್ರತಿಯೊಬ್ಬರಿಗೂ ಬಿದ್ದಿರುವ ಹಣ ಸಿಗುವುದಿಲ್ಲ . ಯಾರ ಅದೃಷ್ಟ ಚೆನ್ನಾಗಿರುತ್ತಯೋ, ಮತ್ತು ಯಾರ ಭಾಗ್ಯ ತೆರೆದಿರುತ್ತದೆಯೋ, ಯಾರ ಮೇಲೆ ತಾಯಿ ಲಕ್ಷ್ಮಿ ದೇವಿಯ ಕೃಪೆ ಇರುತ್ತದೆಯೋ , ಅಂತಹವರಿಗೆ ಸಾಮಾನ್ಯವಾಗಿ ಬಿದ್ದಿರುವ ಹಣ ದೊರೆಯುತ್ತಿರುತ್ತದೆ . ಯಾವ ಸಮಯದಲ್ಲಿ ಬಿದ್ದಿರುವ ಹಣ ಸಿಗುತ್ತದೆಯೋ ತಕ್ಷಣ ,

ಕಳೆದುಹೋದ ಪೂರ್ವ ಸಮಯದಲ್ಲಿ ನೀವು ಮಾಡಿರುವಂತಹ ದಾನ ಧರ್ಮದ ಹಣ ಮರಳಿ ನಿಮಗೆ ಸಿಗುತ್ತಿರುತ್ತದೆ . ಈ ಮಾತಿನ ಅರ್ಥ ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ . ನಾವು ಯಾವ ರೀತಿಯ ಜನರನ್ನು ನೋಡುತ್ತೇವೆ ಎಂದರೆ , ಈ ರೀತಿ ಹಣ ಸಿಕ್ಕ ನಂತರ ಅವುಗಳನ್ನು ಖರ್ಚು ಮಾಡಿ ಬಿಡುತ್ತಾರೆ . ತಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳುತ್ತಾರೆ . ಆದರೆ ಸುಮ್ಮನೆ ಪರ್ಸ್ ನಲ್ಲಿ ಇಟ್ಟುಕೊಂಡರೆ ಲಾಭ ಸಿಗುವುದಿಲ್ಲ . ಇಲ್ಲಿ ಹೆಚ್ಚಿನ ಲಾಭ ಸಿಗಬೇಕು ಎಂದರೆ , ಸಿಕ್ಕಿರುವ ಹಣ ತಾಯಿ ಲಕ್ಷ್ಮಿ ದೇವಿಯ ಕೀಲಿ ಕೈ ಎಂದು ಹೇಳಬಹುದು . ಹಣವನ್ನು ಆಕರ್ಷಣೆ ಮಾಡುವಂತಹ ಈ ಕೀಲಿ ಕೈ ಧನ ಸಂಸತ್ತು ಆಗಿರುತ್ತದೆ.

ನಿಮ್ಮನ್ನು ಯಶಸ್ವಿ ವ್ಯಕ್ತಿಯನ್ನಾಗಿಸಲು ಒಂದು ಪ್ರಕಾರದ ಕೀಲಿ ಕೈ ಆಗಿರುತ್ತದೆ . ಒಂದು ವೇಳೆ ರಸ್ತೆಯಲ್ಲಿ ಬಿದ್ದಿರುವ ಹಣ ಸಿಕ್ಕಿದಾಗ ಇವುಗಳನ್ನು ಬಳಸುವ ಒಳ್ಳೆಯ ಪದ್ಧತಿ ಏನಿದೆ ಎಂದರೆ , ಇವುಗಳನ್ನ ವ್ಯಾಪಾರ ವ್ಯವಹಾರದಲ್ಲಿ ಹಾಕಬಹುದು . ಅಥವಾ ಅಂಗಡಿಗಳಲ್ಲಿ ಇಡಬಹುದು . ಅಂಗಡಿಯಲ್ಲಿ ನಿಮ್ಮ ಹಣವ ಜೊತೆ ಸೇರಿಸಬಹುದು . ಹೊಸ ಕೆಲಸಗಳನ್ನು ಪ್ರಾರಂಭ ಮಾಡುತ್ತಿದ್ದರೆ ಅಲ್ಲಿ ಈ ಹಣವನ್ನು ಹಾಕಬಹುದು . ಸಿಕ್ಕಿರುವ ಹಣ ಕೇವಲ ಒಂದು ರೂಪಾಯಿ ಆದರೂ ಸರಿ ನೀವು ಯಾವುದೇ ಹೊಸ ಕಾರ್ಯಗಳನ್ನು ಪ್ರಾರಂಭ ಮಾಡುತ್ತಿದ್ದರು ಸಿಕ್ಕಿರುವ ಹಣವನ್ನು ಹಾಕಬಹುದು .

ಇದರಿಂದ ಖಂಡಿತವಾಗಿ ಯಶಸ್ಸನ್ನು ಕಾಣಬಹುದು . ನೀವು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಅದರಲ್ಲಿ ಖಂಡಿತವಾಗಿ ಲಾಭವನ್ನು ಕಾಣಬಹುದು . ಎರಡನೇ ಉಪಾಯ 5 ಅಕ್ಷತೆಗಳನ್ನು ತೆಗೆದು ಕೊಳ್ಳಬೇಕು .ಶ್ರೀ ಯಂತ್ರವನ್ನು ಖರೀದಿ ಮಾಡಿ ತರಬೇಕು .ಜೊತೆಗೆ ಐದು ಕವಡೆಗಳನ್ನು ತೆಗೆದುಕೊಳ್ಳಬೇಕು .ನಂತರ ಐದು ತುಳಸಿ ಎಲೆಗಳನ್ನು ತೆಗೆದು ಕೊಳ್ಳಬೇಕು . ನಂತರ ನಿಮಗೆ ಸಿಕ್ಕಿರುವ ಹಣವನ್ನು ತೆಗೆದುಕೊಳ್ಳಿ . ಎಲ್ಲಾ ವಸ್ತುಗಳನ್ನು ಸೇರಿಸಿ , ಒಂದು ಕೆಂಪು ಬಣ್ಣದ ಬಟ್ಟೆಯಲ್ಲಿ ಹಾಕಿ ಕಟ್ಟಬೇಕು . ನಂತರ ಐದು ಊದಿನ ಕಡ್ಡಿಯಿಂದ ಅಥವಾ ಧೂಪದಿಂದ ಅದನ್ನು ಬೆಳಗಬೇಕು . ನಂತರ ಹಣ ಇಡುವ ಸ್ಥಾನದಲ್ಲಿ ಅದನ್ನು ಇಟ್ಟುಕೊಳ್ಳಬೇಕು .

ಆಗ ಇದರ ಶುಭಫಲ ಸಿಗಲು ಶುರುವಾಗುತ್ತದೆ . ಹಗಲು ರಾತ್ರಿ ಎನ್ನದೆ ಧನ ಸಂಪತ್ತಿನ ಆಗಮನ ಆಗಲು ಶುರುವಾಗುತ್ತದೆ . ಈ ಪ್ರಯೋಗಗಳನ್ನು ನಂಬಿಕೆ ಇಟ್ಟು ಮಾಡಿದರೆ ಶುಭ ಫಲಗಳು ದೊರೆಯುತ್ತವೆ . ಮಾಡಿದರೆ ಖಂಡಿತವಾಗಿ ಲಾಭಗಳು ಸಿಗುತ್ತವೆ . ಶುಭ ಫಲಗಳನ್ನು ಪಡೆಯಲು ತುಂಬಾ ಹಣ ಖರ್ಚು ಮಾಡಬೇಕಾಗಿಲ್ಲ . ಇವುಗಳನ್ನು ಮಾಡಿದ ಮೇಲೆ ಒಂದು ವಾರದಲ್ಲಿ ಹೆಚ್ಚಿನ ಲಾಭವನ್ನು ಕೊಡುತ್ತವೆ . ನಿಮ್ಮ ಜೀವನದಲ್ಲಿ 15 ದಿನಗಳ ಒಳಗಡೆ ವೇಗವಾಗಿ ಪರಿವರ್ತನೆ ಆಗಲು ತೊಡಗುತ್ತದೆ .

ಬಿದ್ದಿರುವ ಹಣ ಎಲ್ಲರಿಗೂ ದೊರೆಯುವುದಿಲ್ಲ . ಯಾರ ಅದೃಷ್ಟ ಮತ್ತು ಭಾಗ್ಯವು ಚೆನ್ನಾಗಿರುತ್ತದೆಯೋ , ಯಾರ ಮೇಲೆ ತಾಯಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಇರುತ್ತದೆಯೋ , ಯಾರ ಮೇಲೆ ಪೂರ್ವಜರ ಆಶೀರ್ವಾದ ಇರುತ್ತದೆಯೋ , ಅಥವಾ ಪೂರ್ವ ಸಮಯದಲ್ಲಿ ನೀವು ಯಾರಿಗಾದರೂ ಗುಪ್ತವಾಗಿ ದಾನ ಮಾಡಿದರೆ , ಆ ದಾನವೂ ಈಗಿನ ಸಮಯದಲ್ಲಿ ನಿಮಗೆ ಸಿಗುತ್ತಿರುತ್ತವೆ . ಯಾರ ಮೇಲೆ ಯಾವ ಸಮಯದಲ್ಲಿ ಲಕ್ಷ್ಮಿ ದೇವಿಯ ಕೃಪೆ ಇರುತ್ತದೆಯೋ ,

ಸಾಧ್ಯವಾದಷ್ಟು ಒಳ್ಳೆಯ ಕಾರ್ಯವನ್ನು ಮಾಡಬೇಕು ಆಗ ಮಾತ್ರ ಯಶಸ್ಸು ಸಿಗುತ್ತದೆ. ಇಲ್ಲಿ ಪ್ರತಿಯೊಬ್ಬರೂ ಸ್ವಲ್ಪ ಆದರೂ ಕಷ್ಟ ಪಡಬೇಕು . ಹಗಲು ರಾತ್ರಿ ತುಂಬಾ ಕಷ್ಟಪಟ್ಟು ದುಡಿದಾಗ ಯಾವ ಫಲ ಸಿಗುತ್ತದೆಯೋ , ಅದು ನಿಮಗೆ ಸರಿಯಾಗಿ ಸಿಗುತ್ತಿರುವುದಿಲ್ಲ. ಇಂತಹ ಚಿಕ್ಕ ಪುಟ್ಟ ಉಪಾಯಗಳನ್ನು ಚಿಕ್ಕ ಶ್ರಮಪಟ್ಟು ಮಾಡಿದರೆ , ಇವುಗಳ ಲಾಭ ನಿಮಗೆ ಸಿಗುವುದರ ಜೊತೆಗೆ ಇದರ ಸಾವಿರ ಪಟ್ಟು ಲಾಭ ಕೂಡ ನಿಮಗೆ ದೊರೆಯುತ್ತದೆ .
ಮೂರನೇ ಉಪಾಯ ಬಿದ್ದಿರುವ ಹಣದಿಂದ ನಿಮಗೆ ತಕ್ಷಣ ಲಾಭ ಸಿಗುವುದಿಲ್ಲ . ಎಲ್ಲಿಯ ತನಕ ನೀವು ಅದನ್ನು ಸಿದ್ಧಿ ಮಾಡುವುದಿಲ್ಲವೋ ಅಲ್ಲಿಯ ತನಕ ಇದರ ಲಾಭ ಸಿಗುವುದಿಲ್ಲ .

ಉದಾಹರಣೆಗೆ :- ಒಂದು ರೂಪಾಯಿ ನಾಣ್ಯ ಸಿಕ್ಕರೆ , ಅದನ್ನು ಅರಿಶಿಣದಲ್ಲಿ ಮುಳುಗಿಸಬೇಕು . ಅರಿಶಿಣ ಇಲ್ಲ ಎಂದರೆ, ಪಂಚಾಮೃತದಲ್ಲಿ ಸ್ನಾನ ಮಾಡಿಸಬಹುದು .ಪಂಚಾಮೃತ ಎಂದರೆ , ಹಾಲು, ಮೊಸರು, ತುಪ್ಪ, ಗಂಗಾಜಲ , ಅಥವಾ ಪವಿತ್ರವಾದ ನದಿಯ ನೀರು ಇರಬಹುದು . ಜೊತೆಗೆ ಶ್ರೀಗಂಧ ಜೇನುತುಪ್ಪವನ್ನು ತೆಗೆದುಕೊಳ್ಳಿ .ಇದನ್ನು ನಾವು ಪಂಚಾಮೃತ ಎಂದು ಕರೆಯುತ್ತೇವೆ . ಇದರಲ್ಲಿ ನಾಣ್ಯವನ್ನು ಮುಳುಗಿಸಬೇಕು . ಕಡಿಮೆ ಎಂದರು ಹದಿನಾರು ಗಂಟೆಗಳ ಕಾಲ ಅದರಲ್ಲಿ ಮುಳುಗಿಸಿ ಇಡಬೇಕು .

ಸ್ನಾನ ಆದ ನಂತರ ಈ ನಾಣ್ಯವು ಇದು ಅಭಿಷೇಕ ಆದ ನಂತರ ಸಿದ್ಧಿಗೊಳ್ಳುತ್ತದೆ . ಆನಂತರ ಇದಕ್ಕೆ ಐದು ಊದಿನ ಕಡ್ಡಿ ಅಥವಾ ಧೂಪವನ್ನು ತೋರಿಸಬೇಕು . ನಂತರ ಇದು ಸಿದ್ಧಿಯಾಗುತ್ತದೆ . ಆನಂತರ ಇದನ್ನು ನಿಮ್ಮ ಪರ್ಸ್ ನಲ್ಲಿ ಅಥವಾ ಹಣ ಇರುವ ಪೆಟ್ಟಿಗೆಯಲ್ಲಿ ಇಡಬಹುದು . ಸ್ನೇಹಿತನ ರೀತಿ ಇದು ಇಡೀ ಜೀವನ ನಿಮಗೆ ಸಹಾಯ ಮಾಡುತ್ತದೆ . ಈ ಮಾತಿನ ಅರ್ಥ ನೀವು ಯಾವುದೇ ಕ್ಷೇತ್ರದಲ್ಲಿ ಹೋದರು ವ್ಯವಹಾರ ಮಾಡಿದರು ಅಲ್ಲಿ ನಿಮಗೆ ಇದು ಲಾಭವನ್ನು ತಂದುಕೊಡುತ್ತದೆ .

ಇದು ಧನ ಸಂಪತ್ತನ್ನು ಆಕರ್ಷಣೆ ಮಾಡುವ ಕಾರ್ಯವನ್ನು ಮಾಡುತ್ತದೆ . ಒಂದು ವೇಳೆ ನಿಮಗೆ ನೋಟು ಸಿಕ್ಕರೆ ಅದು 10, 20, 50 ರೂ ಯಾವುದೇ ಆಗಿರಲಿ , ನೋಟಿನ ಮೇಲೆ ಅರಿಶಿಣದಿಂದ ಸ್ವಸ್ತಿಕವನ್ನು ಬರೆಯಬೇಕು . ಸ್ವಸ್ತಿಕವನ್ನು ಭಗವಂತನಾದ ಶ್ರೀ ಗಣೇಶನ ಮಂಗಳ ಸ್ವರೂಪ ಎಂದು ತಿಳಿಯಲಾಗಿದೆ . ಒಂದು ಕಡೆ ಓಂ ಎಂದು ಬರೆಯಿರಿ . ಶ್ರೀ ಯಂತ್ರವನ್ನು ಅರಿಶಿಣದಿಂದ ಬರೆಯಬಹುದು . ಆ ನಂತರ ಇದನ್ನು ಬಿಸಿಲಿನಲ್ಲಿ ಒಣಗಿಸಿರಿ .ಇದನ್ನು ಮಡಿಚದೆ ಪರ್ಸ್ ನಲ್ಲಿ ಇಟ್ಟುಕೊಳ್ಳಬಹುದು .

ಅಥವಾ ಹಣ ಇಡುವ ಸ್ಥಾನದಲ್ಲಿ ಇಡಬೇಕು . ಎಲ್ಲಿಯ ತನಕ ಈ ನೋಟು ನಿಮ್ಮ ಬಳಿಯೇ ಇರುತ್ತದೆಯೋ, ಅಲ್ಲಿಯತನಕ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಬರುವುದಿಲ್ಲ . ಸಮಸ್ಯೆ ಬರುವುದಕ್ಕೂ ಕೂಡ ಇದು ಬಿಡುವುದಿಲ್ಲ . ಯಾವತ್ತಿಗೂ ಬಿದ್ದಿರುವ ಹಣ ಸಿಕ್ಕಾಗ ವ್ಯಕ್ತಿಯ ಅದೃಷ್ಟವನ್ನು ಬದಲಾಯಿಸುತ್ತದೆ .ಹಾಗಾಗಿ ಬಿದ್ದಿರುವ ಹಣವನ್ನು ಖರ್ಚು ಮಾಡಬಾರದು . ಯಾವುದಾದರೂ ವ್ಯಕ್ತಿಯ ಜೇಬಿನಿಂದ ಹಣ ಬಿದ್ದಿರುವುದು ಕಂಡು ಬಂದರೆ ಮರಳಿ ಅದನ್ನು ಅವರಿಗೆ ಕೊಡಬೇಕು . ಯಾರು ಇಲ್ಲದ ಸ್ಥಳದಲ್ಲಿ ಹಣ ಸಿಕ್ಕಿದಾಗ ಮಾತ್ರ ಇಂತಹ ಉಪಾಯಗಳನ್ನು ಮಾಡಬೇಕು .

Leave A Reply

Your email address will not be published.