ಸದಾ ಆರೋಗ್ಯವಾಗಿರಲು ಹಿರಿಯರು ಹೇಳಿ ಕೊಟ್ಟಿರುವ ಸರಳ ಮನೆ ಮದ್ದುಗಳು

ಸದಾ ಆರೋಗ್ಯವಾಗಿರಲು ನಮ್ಮ ಹಿರಿಯರು ಹೇಳಿಕೊಟ್ಟಿರುವ ಸರಳ ಮನೆ ಮದ್ದುಗಳು
ಪ್ರತಿದಿನ ಒಂದೆರಡು ಕಾಳು ಏಲಕ್ಕಿಯನ್ನು ತಿನ್ನುವುದರಿಂದ ರಕ್ತದಲ್ಲಿ ಇರುವಂತಹ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಗಂಗಳ ಅನ್ನದ ಜೊತೆ ಮೊಸರನ್ನು ಸೇರಿಸಿ ತಿಂದರೆ ಬೇಗನೆ ತೂಕ ಹೆಚ್ಚಿಸಿಕೊಳ್ಳಬಹುದು.
ಅಜೀರ್ಣತೆಯ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಮೊಳಕೆ ಕಾಳು ತಿನ್ನುವುದು ಒಳ್ಳೆಯದು. ಇದರಲ್ಲಿರುವ

ಜೀವಸತ್ವಗಳು ಆಹಾರವನ್ನು ಸರಿಯಾಗಿ ಜೀರ್ಣವಾಗಲು ಸಹಕರಿಸುತ್ತದೆ. ಬಾಳೆದಿಂಡಿನ ರಸವನ್ನು ಕುಡಿಯುವುದರಿಂದ ಪಿತ್ತಕೋಶದ ಕಲ್ಲುಗಳು ಕರಗುತ್ತವೆ. ಪುರುಷರಲ್ಲಿ ವೀರ್ಯಾಣುಗಳ ಹೆಚ್ಚಲು ಮೊಳಕೆ ಕಟ್ಟಿದ ಕಾಳುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಪುರುಷರಲ್ಲಿ ವೀರ್ಯಾಣುಗಳ ಉತ್ಪತ್ತಿಯು ಹೆಚ್ಚಳವಾಗುತ್ತದೆ.
ಬೆಳಗಿನ ಸಮಯದಲ್ಲಿ ಜೇನುತುಪ್ಪವನ್ನು ನೆಲ್ಲಿರಸದೊಂದಿಗೆ ಸೇರಿಸಿ ಕುಡಿಯುವುದರಿಂದ ನಿಮ್ಮ ಮುಖಕ್ಕೆ ಹೊಸ ಹೊಳಪನ್ನು ತರುತ್ತದೆ ಮತ್ತು ಚರ್ಮದ ಕಲೆಗಳಿಂದ ಮುಕ್ತಿ ನೀಡುತ್ತದೆ.

ದಾಸವಾಳ ಸೊಪ್ಪನ್ನು ರುಬ್ಬಿ ತಲೆಗೆ ಹಚ್ಚುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.
ಹಸಿ ಶೇಂಗಾವನ್ನು ಬೇಯಿಸದೇ ಹುರಿಯದೇ ತಿನ್ನುವುದರಿಂದ ತಲೆ ತಿರುಗು ಹೆಚ್ಚಾಗುತ್ತದೆ. ಶೇಂಗಾ ಬೀಜವನ್ನು ಹುರಿದು ಅಥವಾ ನೆನೆಸಿ ತಿನ್ನುವುದರಿಂದ ಬಾದಾಮಿ ಅಷ್ಟೇ ಪೋಷಕಾಂಶಗಳು ದೇಹಕ್ಕೆ ದೊರಕುತ್ತದೆ.
ಊಟದ ಜೊತೆ ಉಪ್ಪಿನಕಾಯಿ ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಬಿಸಿಲಿನಲ್ಲಿ ಹೊರಗಡೆ ಸುತ್ತಾಡಿ ಬಂದಾಗ ಸ್ವಲ್ಪ ಬೆಲ್ಲ ತಿಂದು ನೀರು ಕುಡಿಯುವುದರಿಂದ ತಕ್ಷಣ ಪರಿಹಾರವಾಗುತ್ತದೆ.

ಪರಸ್ಪರ ವಿರುದ್ದ ಗುಣಗಳಿರುವ ಆಹಾರವನ್ನು ಒಟ್ಟಿಗೆ ಸೇವಿಸಬಾರದು. ಉದಾಹರಣಗೆ ಮಾಂಸ ತಿಂದ ನಂತರ ಹಾಲು ಕುಡಿಯಬಾರದು. ಹುಳಿ ತಿಂದ ನಂತರ ಸಿಹಿ ತಿನ್ನಬಾರದು. ಕಹಿಬೇವಿನ ಎಲೆಗಳನ್ನು ದಿನವೂ ಯಾವುದಾದರೂ ರೂಪದಲ್ಲಿ ಬಳಸಿದರೇ ಆರೋಗ್ಯ ಸುಧಾರಣೆ ಆಗುತ್ತದೆ. ಚರ್ಮರೋಗ ಹುಳುಕಡ್ಡಿಗೆ ತುಳಸಿ ರಸ ಮತ್ತು ಉಪ್ಪು ಸೇರಿಸಿ ಹಚ್ಚುವುದರಿಂದ ಒಂದೆರಡು ದಿನಗಳಲ್ಲಿ ಹುಳುಕಡ್ಡಿ ಮಾಯವಾಗುತ್ತದೆ.

ಪಪ್ಪಾಯ ಬೀಜಗಳನ್ನು ಒಣಗಿಸಿ ಜೇನುತುಪ್ಪದೊಂದಿಗೆ ಸೇರಿಸಿ ಖಾಲಿ ಹೊಟ್ಟೆಗೆ ತೆಗೆದುಕೊಳ್ಳುವುದರಿಂದ ಹೊಟ್ಟೆ ಹುಳುವಿನ ಸಮಸ್ಯೆ ಕಡಿಮೆಯಾಗುವುದು. ಈರುಳ್ಳಿ ರಸದೊಂದಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರ್ನಾಲ್ಕು ಬಾರಿ ಸೇವಿಸುವುದರಿಂದ ಗಂಟಲು ಕೆರೆತ ಧ್ವನಿ ಕಟ್ಟುವಿಕೆ ಶೀತ ನೆಗಡಿ ಕೆಮ್ಮು ಇತ್ಯಾದಿಗೆ ಶೀಘ್ರದಲ್ಲಿ ಗುಣಮುಖವಾಗುತ್ತದೆ.

ಪ್ರತಿದಿನ ಮಧ್ಯಾಹ್ನ ಅಥವಾ ರಾತ್ರಿ ಊಟದ ನಂತರ ಎಲೆ ಅಡಿಕೆ ಸುಣ್ಣ ತಿನ್ನುವುದರಿಂದ ಕ್ಯಾಲ್ಸಿಯಂ ಜೊತೆಗೆ ಹಲ್ಲಿನ ಆರೋಗ್ಯ ಕೂಡ ಚೆನ್ನಾಗಿರುವುದು. ಬಾಯಿ ಹುಣ್ಣಿಗೆ ಒಣಕೊಬ್ಬರಿಯ ಜೊತೆ ಸ್ವಲ್ಪ ಗಸಗಸೆ ಸೇರಿಸಿ ತಿನ್ನುವುದರಿಂದ ಬೇಗನೆ ಗುಣಮುಖವಾಗುವುದು. ಶುಂಠಿ ಮತ್ತು ಅರಿಶಿಣ ಬೆರೆಸಿ ಹಾಲು ಕುಡಿಯುವುದರಿಂದ ಕೆಮ್ಮು ಬೇಗನೆ ಗುಣಮುಖವಾಗಬಹುದು. ಗಂಟಲು ನೋವಿಗೆ ತುಂಬೆ ರಸವನ್ನು ಸುಣ್ಣದಲ್ಲಿ ಬೆರೆಸಿ ಗಂಟಲಿಗೆ ಹಚ್ಚುವುದರಿಂದ ಒಂದೇ ದಿನದಲ್ಲಿ ನೋವು ಮಾಯವಾಗುವುದು.ಸಿಹಿ ಪದಾರ್ಥಗಳನ್ನು ತಿಂದ ತಕ್ಷಣ ಅಥವಾ ಊಟ ಮಾಡಿದ ತಕ್ಷಣ ಬಾಯಿ ಮುಕ್ಕಳಿಸುವುದನ್ನು ಮರೆಯಬಾರದು.

Leave a Comment