ಶುಕ್ರವಾರದ ದಿನ ಹೆಂಗಸರು ಈ 8 ತಪ್ಪನ್ನು ಮಾಡಬಾರದು ಕಷ್ಟ ತಪ್ಪೋದಿಲ್ಲ 80% ಹೀಗೆ ಮಾಡ್ತಾರೆ 

ಶುಕ್ರವಾರದ ದಿನ ಸ್ತ್ರೀಯರು ಮನೆಯಲ್ಲಿ ಯಾವ ಕೆಲಸಗಳನ್ನು ಮಾಡಬೇಕು? ಯಾವ ಕೆಲಸಗಳನ್ನು ಮಾಡಬಾರದು? ಯಾವ ಕೆಲಸಗಳನ್ನು ಮಾಡಿದರೇ ಲಕ್ಷ್ಮಿ ಅನುಗ್ರಹ ಪ್ರಾಪ್ತಿಯಾಗುತ್ತದೆ. ಯಾವ ತಪ್ಪುಗಳನ್ನು ಮಾಡಿದರೇ ದರಿದ್ರ ನಿಮ್ಮ ಮನೆಗೆ ಪ್ರವೇಶ ಮಾಡಿ ಯಾವ ರೀತಿಯ ತೊಂದರೆ ಉಂಟಾಗುತ್ತದೆ. ಶುಕ್ರವಾರದ ನಿಮ್ಮ ಮನೆಯ ಮುಂಭಾಗದಲ್ಲಿ ಯಾವ ಒಂದು ಸಣ್ಣ ಕೆಲಸವನ್ನು ಮಾಡಿದರೇ

ಲಕ್ಷ್ಮಿ ದೇವಿಯು ಗೆಜ್ಜೆ ಸಪ್ಪಳವನ್ನು ಮಾಡುತ್ತಾ ಮನೆಯ ಪ್ರವೇಶ ಮಾಡುತ್ತಾಳೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.ಶುಕ್ರವಾರದ ದಿನ ಹೆಂಗಸರು ಎಂತದ್ದೇ ಪರಿಸ್ಥಿತಿಯಲ್ಲೂ ಈ ಕೆಲಸಗಳನ್ನು ಮಾಡಲೇಬಾರದು. ಅದರಲ್ಲಿ ಅತೀ ಮುಖ್ಯವಾದದ್ದು ಶುಕ್ರವಾರದ ದಿನ ಪ್ಲಾಸ್ಟಿಕ್ ಬಳೆಗಳನ್ನು ಕೈಗೆ ಧರಿಸಿಕೊಳ್ಳಬಾರದು. ಬಂಗಾರದ ಬಳೆಗಳು ಅಥವಾ ಗಾಜಿನ ಬಳೆಗಳನ್ನು ಧರಿಸಿಕೊಳ್ಳಬೇಕು.

ಬಂಗಾರದ ಬಳೆಗಳನ್ನು ಧರಿಸಿಕೊಳ್ಳಲು ಸಾಧ್ಯವಾಗದೇ ಇದ್ದರೆ ಗಾಜಿನ ಬಳೆ ಅಥವಾ ಮಣ್ಣಿನ ಬಳೆಗಳನ್ನು ಧರಿಸಿಕೊಳ್ಳಬೇಕು. ಶುಕ್ರವಾರದ ದಿನ ಯಾರಾದರೂ ನಿಮಗೆ ಹೂವು ಹಾಗೂ ಬಳೆಗಳನ್ನು ನೀಡಿದರೇ ಯಾವುದೇ ಕಾರಣಕ್ಕೂ ಬೇಡ ಎನ್ನಬಾರದು. ಶುಕ್ರವಾರದ ದಿನ ಅರಿದ ವಸ್ತ್ರ ಹಾಗೂ ಮೈಲಿಗೆ ವಸ್ತ್ರವನ್ನು ಯಾವುದೇ ಕಾರಣಕ್ಕೂ ಧರಿಸಬಾರದು.

ಶುಕ್ರವಾರದ ದಿನ ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಸ್ತ್ರೀಯರು ಶುಕ್ರವಾರದ ದಿನ ಮನೆಯಲ್ಲಿ ಕಣ್ಣೀರನ್ನು ಹಾಕಬಾರದು. ಶುಕ್ರವಾರದ ದಿನ ಯಾರ ಮನೆಯಲ್ಲಿ ಹೆಣ್ಣುಮಕ್ಕಳು ಕಣ್ಣೀರನ್ನು ಹಾಕುತ್ತಾರೋ ಅಂತಹವರ ಮನೆಯಲ್ಲಿ ಸ್ತ್ರೀಯರು ಎಂದಿಗೂ ನೆಲೆಸುವುದಿಲ್ಲ. ಜೊತೆಗೆ ಹೆಂಗಸರು ಕೂದಲನ್ನು ಬಿಟ್ಟುಕೊಂಡು ಓಡಾಡಬಾರದು, ಕೂದಲು ಬಿಟ್ಟು ತಿರುಗಾಡಿದರೇ ದರಿದ್ರತೆ ಪ್ರವೇಶ ಆಗುತ್ತದೆ.

ಶುಕ್ರವಾರದ ದಿನ ಹೆಂಗಸರು ಸುಳ್ಳನ್ನು ಕೂಡ ಹೇಳಬಾರದು. ಉಳಿದ ದಿನಗಳಲ್ಲೂ ಹೇಳಬಾರದು ಆದರೇ ಶುಕ್ರವಾರದ ದಿನ ಹೇಳಬಾರದು ಹೇಳಿದರೇ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ. ಶುಕ್ರವಾರದ ದಿನ ಧರಿಸಿದ ಓಲೆ, ಬಳೆಗಳನ್ನು ತೆಗೆದು ನಿದ್ರೆಯನ್ನು ಮಾಡಬಾರದು. ಶುಕ್ರವಾರದ ದಿನ ಮುಖಕ್ಕೆ ಅರಿಶಿನವನ್ನು ಹಚ್ಚಿದರೆ ಬಹಳ ಒಳ್ಳೆಯದು.

ಹೆಂಗಸರು ಕಲ್ಲು ಉಪ್ಪನ್ನು ಚಿಕ್ಕ ಪೊಟ್ಟಣದಲ್ಲಿ ಕಟ್ಟಿ ಮನೆಯ ಪ್ರತೀ ಮೂಲೆಯಲ್ಲೂ ಶುಕ್ರವಾರ ಬೆಳಿಗ್ಗೆ ಯಾರೊಂದಿಗೂ ಮಾತನಾಡದೇ ಆ ಉಪ್ಪಿನ ಪೊಟ್ಟಣಗಳನ್ನು ತೆಗೆದು ಯಾವುದಾದರೂ ಮರದ ಬುಡದ ಕೆಳಗೆ ಇಟ್ಟು ಬರಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿರುವ ಪ್ರತಿಯೊಂದು ನಕಾರಾತ್ಮಕ ಶಕ್ತಿಗಳು ಕರಗಿ ಹೋಗಿ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಉಂಟಾಗುತ್ತದೆ.

ಜೊತೆಗೆ ಮನೆಯಲ್ಲಿ ಶುಕ್ರವಾರದ ದಿನ ಹೊಸ್ತಿಲಿನ ಪೂಜೆಯನ್ನು ಮಾಡುತ್ತಾ ಬರಬೇಕು. ಹೊಸ್ತಿಲನ ಪೂಜೆಯನ್ನು ಯಾರ ಮನೆಯಲ್ಲಿ ಮಾಡುತ್ತಾ ಬರುತ್ತಾರೋ ಅಂತಹವರ ಮನೆಯಲ್ಲಿ ಲಕ್ಷ್ಮಿ ದೇವಿಯು ಆನಂದ ತಾಂಡವವನ್ನು ಆಡುತ್ತಾಳೆ. ಮೊದಲು ಹೊಸ್ತಿಲನ್ನು ಶುದ್ಧವಾಗಿ ಹೊರೆಸಿಕೊಳ್ಳಬೇಕು. ಸ್ವಲ್ಪ ಹಾಲಿನಿಂದ ಹೊಸ್ತಿಲನ್ನು ತೊಳೆದು ಮತ್ತೆ ನೀರಿನಿಂದ ತೊಳೆಯಬೇಕಾಗುತ್ತದೆ.

ನಂತರ ಅರಿಶಿನ ಮತ್ತು ಕುಂಕುಮದ ಬಟ್ಟನ್ನು ಹೊಸ್ತಿಲಿಗೆ ಇಟ್ಟು ದೀಪಾರಾಧನೆಯನ್ನು ಮಾಡಬೇಕು, ಬೆಲ್ಲದ ಚೂರಿನ ನೈವೇದ್ಯ ಮಾಡಬೇಕು. ಹೊಸ್ತಿಲಿನ ಮುಂದೆ ಇಟ್ಟಂತಹ ದೀಪಗಳು ಹಾರೋವರೆಗೂ ಕೂಡ ಸ್ತ್ರೀಯರು ನಿದ್ರೆಯನ್ನು ಮಾಡಬಾರದು. ಶುಕ್ರವಾರದ ದಿನ ಯಾರೂ ಈ ರೀತಿಯಾಗಿ ಪೂಜೆಯನ್ನು ಮಾಡುತ್ತಾ ಬರುತ್ತಾರೋ ಅಂತಹವರ ಮನೆಯಲ್ಲಿ ಲಕ್ಷ್ಮಿ ದೇವಿಯು ಗೆಜ್ಜೆಯ ಶಬ್ಧವನ್ನು ಮಾಡುತ್ತಾ

ಬರುತ್ತಾ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ. ಓಂ ದ್ವಾರಲಕ್ಷ್ಮಿ ನಮೋ ನಮಃ ಎಂಬ ಮಂತ್ರವನ್ನು ಹೊಸ್ತಿಲಿನ ಪೂಜೆಯನ್ನು ಮಾಡುವಾಗ ಪಠಿಸಬೇಕು. ಈ ರೀತಿ ತಪ್ಪದೇ ಮಾಡಿದರೇ ಮನೆಯ ಸದಸ್ಯರಿಗೆ ಏಳಿಗೆ ಉಂಟಾಗುತ್ತದೆ. ದಾರಿದ್ರ್ಯತೆಯೂ ನಿವಾರಣೆಯಾಗಿ ಹಣಕಾಸಿನ ಅಭಿವೃದ್ಧಿಯಾಗುತ್ತದೆ. ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ.

Leave a Comment